ಬೈಂದೂರು (ಫೆ.26): ಭಾರತೀಯ ಸೇನೆಯನ್ನು ಸ್ವಾವಲಂಬಿ ಮತ್ತು ಶಕ್ತಿಶಾಲಿಯಾಗಿಸಲು ಸೇವಾಕಾಲದುದ್ದಕ್ಕೂ ಶ್ರಮಿಸುತ್ತಾ, ಕಳೆದ ವರ್ಷ ಡಿ.8 ರಂದು ಹೆಲಿಕಾಪ್ಟರ್ ದುರ್ಘಟನೆಯಲ್ಲಿ ವಿಧಿವಶರಾದ ಪದ್ಮವಿಭೂಷಣ CDS ಜ. ಬಿಪಿನ್ ರಾವತ್ ಅವರ ಪ್ರೇರಣಾದಾಯಿ ವ್ಯಕ್ತಿತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ದೃಷ್ಟಿಯಿಂದ ಮಾಜಿ ಸೈನಿಕ, ಲೇಖಕ ಬೈಂದೂರು ಚಂದ್ರಶೇಖರ ನಾವಡರು `ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್` ಕೃತಿ ರಚಿಸಿರುತ್ತಾರೆ. ಮಂಗಳೂರಿನ ಅವನಿ ಪ್ರಕಾಶನ ಕೃತಿಯನ್ನು ಹೊರತಂದಿದೆ.ಕೃತಿ ಲೋಕಾರ್ಪಣೆ ಸಮಾರಂಭವು ಭಾನುವಾರ ಮಾ. 6 […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಪಡುಗಡಲಿನಿಂದ ಕೃತಿ ಲೋಕಾರ್ಪಣೆ
ಕುಂದಾಪುರ (ಫೆ. 13) : ಪಡುಗಡಲಿನಿಂದ ಕೃತಿಯಲ್ಲಿ ಕಡಲಿಗೆ ಸಂಬಂಧಿಸಿದಂತೆ ಜನಪದೀಯ ವಿಚಾರ, ವೈಚಾರಿಕ ಚಿಂತನೆ, ಸಂಸ್ಕೃತಿ-ಸಂಪ್ರದಾಯದ ವಿವರಣೆಗಳಿವೆ. ಖಾರ್ವಿಯವರು ಮೀನುಗಾರಿಕೆಯಲ್ಲಿ ಪಡೆದ ನೈಜ ಅನುಭವಗಳ ಮಿಶ್ರಣ ಈ ಕೃತಿಯಲ್ಲಿದೆ. ಮೀನುಗಾರಿಕೆ ಮತ್ತು ಕಡಲಿನ ಕುರಿತು ಇಷ್ಟು ಸಂಖ್ಯೆಯಲ್ಲಿ ಅಂಕಣಗಳನ್ನು ಬರೆದಿದ್ದು ಇದೇ ಮೊದಲು. ಮೀನುಗಾರಿಕಾ ಪದವಿಯಲ್ಲಿ ಪಠ್ಯವಾಗುವಷ್ಟು ಪ್ರಬುದ್ಧ ಮತ್ತು ಸಮೃದ್ಧ ಸಾಹಿತ್ಯ ಇದರಲ್ಲಿದೆ ಎಂದು ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ಹೆಚ್ ನಾಯ್ಕ್ ಅವರು ಹೇಳಿದರು. […]
ಫೆಬ್ರವರಿ 12ಕ್ಕೆ “ಪಡುಗಡಲಿನಿಂದ” ಕೃತಿ ಅನಾವರಣ
ಗಂಗೊಳ್ಳಿ(ಫೆ.10): ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಾಗರಾಜ ಖಾರ್ವಿಯವರು ಕಡಲು, ಕರಾವಳಿ ಜೀವನ, ಮೀನುಗಾರಿಕೆ, ಮತ್ಸ್ಯ ಸಂಪತ್ತಿನ ಕುರಿತು ಜಯಕಿರಣದಲ್ಲಿ ಬರೆಯುತ್ತಿರುವ ಸರಣಿ ಅಂಕಣಗಳ ಸಂಕಲನ ಪಡುಗಡಲಿನಿಂದ ಕೃತಿ ಇದೇ ಫೆಬ್ರವರಿ 12 ರಂದು, ಮುಲ್ಕಿ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ದಶಕಗಳ ಕಾಲ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ನಾಗರಾಜ ಖಾರ್ವಿಯವರ ನೈಜ ಅನುಭವಗಳು, ರೋಚಕ ವಿಚಾರಗಳು ಈ ಕೃತಿಯಲ್ಲಿ ಅನಾವರಣಗೊಂಡಿದೆ. ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ನಾಯ್ಕ್ರವರ ಮುನ್ನುಡಿ, ಸಿದ್ಧಾಪುರ […]
ಗಂಗೊಳ್ಳಿ: ಶವ ಸ್ನಾನದ ಟೇಬಲ್ ಕೊಡುಗೆ
ಗಂಗೊಳ್ಳಿ(ಫೆ.10): ಇಲ್ಲಿನ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ಗಂಗೊಳ್ಳಿಯ ಸಾರ್ವಜನಿಕರ ಉಪಯೋಗಕ್ಕಾಗಿ ಶವ ಸ್ನಾನಕ್ಕಾಗಿ ಬಳಸುವ ಟೇಬಲನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ. ಗೋಪಾಲ ಪೂಜಾರಿ, ಗೌರವಾಧ್ಯಕ್ಷರಾದ ಲಕ್ಷ್ಮಣ ಬಿಲ್ಲವ ಮತ್ತು ಶ್ರೀನಿವಾಸ ಜತ್ತನ್, ಉಪಾಧ್ಯಕ್ಷ ಜಿ. ಕೆ.ವೆಂಕಟೇಶ ಕೊಡೇರಿ ಮನೆ, ಕಾರ್ಯದರ್ಶಿ ಜಿ. ಆರ್ .ಲಕ್ಷ್ಮಣ ಬಿಲ್ಲವ, ಕೋಶಾಧಿಕಾರಿ ಮಂಜುರಾಜ್ ಗಂಗೊಳ್ಳಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಗಂಗೊಳ್ಳಿ: ಬಿಲ್ಲವರ ಹಿತರಕ್ಷಣಾ ವೇದಿಕೆ ವತಿಯಿಂದ ನೆರವು
ಗಂಗೊಳ್ಳಿ(ಫೆ.9) : ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ಇತ್ತೀಚೆಗೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಗಂಗೊಳ್ಳಿಯ ಹುಣಸೆ ಹಿತ್ತಲುವಿನ ನಿವಾಸಿಯೊಬ್ಬರಿಗೆ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವೀರೇಶ್ವರ ದೇವಸ್ಥಾನದ ಬಳಿಯಲ್ಲಿನ ಮಹಿಳೆಯೊಬ್ಬರಿಗೆ ಆರ್ಥಿಕ ನೆರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ. ಗೋಪಾಲ ಪೂಜಾರಿ, ಉಪಾಧ್ಯಕ್ಷ ಜಿ. ಕೆ.ವೆಂಕಟೇಶ ಕೊಡೇರಿ ಮನೆ, ಕಾರ್ಯದರ್ಶಿ ಜಿ. ಆರ್ .ಲಕ್ಷ್ಮಣ ಬಿಲ್ಲವ, ಕೋಶಾಧಿಕಾರಿ ಮಂಜುರಾಜ್ ಗಂಗೊಳ್ಳಿ ಉಪಸ್ಥಿತರಿದ್ದರು ವರದಿ : […]
ಬಸ್ರೂರು: ಕೋಟೆ ಆಂಜನೇಯ ದೇವಸ್ಥಾನ ಕ್ಕೆ ಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕರು ಭೇಟಿ
ಬಸ್ರೂರು(ಫೆ.6): ಖ್ಯಾತ ಸ್ಯಾಂಡಲ್ ವುಡ್ ನಟ ಯಶ್ ಹಾಗೂ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಕೋಟೆ ಆಂಜನೇಯ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ಕೆರೆಕಟ್ಟೆ, ಸುಬ್ರಹ್ಮಣ್ಯ ಭಟ್,ಸದಾನಂದ ಮಾರ್ಗೋಳಿ, ಕೃಷ್ಣ ಪೈಂಟರ್, ಸಂಜೀವ ಮೇಸ್ತ್ರಿ, ಸುಬ್ರಹ್ಮಣ್ಯಕಾಂತ್ ಕೆರೆಕಟ್ಟೆ, ಬಾಲಕೃಷ್ಣ ಶೇರೆಗಾರ್,ಪ್ರದೀಪ ಕುಮಾರ್ ಬಸ್ರೂರು,ಗುರುಪ್ರಸಾದ್ ದೇವಾಡಿಗ,ಶಿವಪ್ರಸಾದ್ ಭಟ್,ಮಹೇಶ್ ಕಿಣಿ ಹಾಗೂ ಸಂತೋಷ್ ಬಳ್ಕೂರು ಉಪಸ್ಥಿತರಿದ್ದರು.
ಬಗ್ವಾಡಿ: ರಸ್ತೆ ದುರಸ್ತಿಗೆ ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿಯವರಿಗೆ ಮನವಿ
ವಂಡ್ಸೆ(ಫೆ.6): ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸೇತುವೆ ನಂತರದ ಸುಮಾರು 600 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು , ರಸ್ತೆ ದುರಸ್ತಿ ಮಾಡಲು ಶಾಸಕ ಶ್ರ್ರೀ ಸುಕುಮಾರ್ ಶೆಟ್ಟಿ ಯವರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಶಾಸಕರ ಗ್ರಹ ಕಛೇರಿಯಲ್ಲಿ ಮನವಿ ನೀಡಲಾಯಿತು. ದೇವಸ್ಥಾನದ ಜಾತ್ರೆಯೊಳಗೆ ರಸ್ತೆ ನಿರ್ಮಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ಮೊಗವೀರ ಮಹಾಜನ ಸಂಘ(ರಿ). ಬಗ್ವಾಡಿ ಹೋಬಳಿಯ ಕುಂದಾಪುರ ಶಾಖೆಯ […]
ಸೈಬ್ರಕಟ್ಟೆ: ಆರೋಗ್ಯ ಅರಿವು ಕಾರ್ಯಕ್ರಮ
ಸೈಬ್ರಕಟ್ಟೆ(ಫೆ.6): ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೈಬ್ರಕಟ್ಟೆ ಹಾಗೂ ರೋಟರಿ ಕ್ಲಬ್ ಸೈಬ್ರಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಜ್ರಹಳ್ಳಿ ಶ್ರೀ ವಿಘ್ನೇಶ್ವರ ಗೇರುಬೀಜ ಕಾರ್ಖಾನೆಯ ವಠಾರದಲ್ಲಿ ಕಲಾವಿದರಾದ ಡಾ.ಗಣೇಶ್ ಗಂಗೊಳ್ಳಿ ಮತ್ತು ಬಳಗದವರಿಂದ ಜಾನಪದ ಕಲಾ ಪ್ರದರ್ಶನ ,ಬೀದಿನಾಟಕದ ಮೂಲಕ ತಾಯಿ ಮಕ್ಕಳ ಆರೋಗ್ಯ ಹಾಗೂ ಕರೋನ / ಸಾಂಕ್ರಾಮಿಕ ರೋಗಗಳ ಕುರಿತು […]
ಅನಾರೋಗ್ಯ ಪೀಡಿತ ಮಗುವಿನ ಬಾಳಲ್ಲಿ ಬೆಳಕಾದ ಡಾ. ಗೋವಿಂದ ಬಾಬು ಪೂಜಾರಿ
ಡಾ. ಗೋವಿಂದ ಬಾಬು ಪೂಜಾರಿ ಇವರ ಹೆಸರು ಕೇಳದೆ ಇರುವವರು ಅತೀ ವಿರಳ. ಕನಾರ್ಟಕದ ಕರಾವಳಿ ಭಾಗದಿಂದ ಹಿಡಿದು ವಿವಿದ ರಾಜ್ಯಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತಾರ ಮಾಡಿದ ಉದ್ಯಮ ಸಾಹಸಿ .ಕಡು ಬಡತನದಲ್ಲಿ ಜನಿಸಿದ ಇವರು ತಮ್ಮ ಸ್ವ ಪರಿಶ್ರಮದಿಂದನೆ ದುಡಿದು ಬಹುದೊಡ್ಡ ಯುವ ಉದ್ಯಮಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಡಾ.ಗೋವಿಂದ ಪೂಜಾರಿಯವರು ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿರಿಸಿ ಕಡುಬಡವರು, ಅನಾರೋಗ್ಯ ಪೀಡಿತರು, ನಿರ್ಗತಿಕರು, ವಸತಿರಹಿತರ ಪಾಲಿಗೆ […]
ಆರೂರು: ಆರೋಗ್ಯ ಮಾಹಿತಿ-ನಾಟಕ ಕಾರ್ಯಕ್ರಮ
ಕೋಟ(ಫೆ.1): ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಗಣೇಶ ಗಂಗೊಳ್ಳಿ ಹಾಗೂ ಬಳಗದವರ ಸಹಯೋಗದೊಂದಿಗೆ ಜಾನಪದ ಹಾಡು ಹಾಗೂ ನಾಟಕದ ಮೂಲಕ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶ್ರೀ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಆರೂರಿನಲ್ಲಿ ಫೆ.1 ರಂದು ಹಮ್ಮಿಕೊಳ್ಳಲಾಯಿತು. ಈ […]










