ತಲ್ಲೂರು(ಜ.24): ಅರ್ಭಕ್ಕ ದಾರಕ ನಂದಿಕೇಶ್ವರ ಸಹಪರಿವಾರ ಧೈವಸ್ಥಾನ ತಾಯ್ಕಲ್ ಬೆಟ್ಟ್, ಹಟ್ಟಿಯಂಗಡಿ ಇದರ ಪ್ರಥಮ ವರ್ಷದ ವಾರ್ಷಿಕ ಗೆಂಡಸೇವೆಯು ಇದೇ ಜನವರಿ 25 ಹಾಗೂ 26 ರಂದು ನಡೆಯಲಿದ್ದು ,ಆ ಪ್ರಯುಕ್ತ ವಿಶೇಷ ಪೂಜೆ, ಹಾಲುಹಬ್ಬ ಮತ್ತು ಅನ್ನ ಸಂತರ್ಪಣೆ ನೆಡಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಗೋಪಾಡಿ: ಜ.25 ,26 ರಂದು ಶ್ರೀ ಮಲಸಾವರಿ ಪಂಜುರ್ಲಿ ಪರಿವಾರ ದೈವಸ್ಥಾನದ ವಾರ್ಷಿಕ ವರ್ಧಂತ್ಯುತ್ಸವ
ಗೋಪಾಡಿ(ಜ.23): ಕುಂದಾಪುರ ತಾಲೂಕು ಗೋಪಾಡಿ (ಪಡು) ಗ್ರಾಮದ ಶ್ರೀ ಮಲಸಾವರಿ ಪಂಜುರ್ಲಿ ಹಾಗೂ ಪರಿವಾರ ದೈವಸ್ಥಾನದ 8ನೇ ವರ್ಷದ ವರ್ಧಂತ್ಯುತ್ಸವ ಜನವರಿ 25ರ ಮಂಗಳವಾರ ಹಾಗೂ 26 ರ ಬುಧವಾರದಂದು ನಡೆಯಲಿದೆ. ಕೋಟ ವೇದಮೂರ್ತಿ ಶ್ರೀಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣೆ ನಡೆಯಲಿದ್ದು ,ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮ ಹಾಗೂ ಸವಿನಯ ಚಂಡೆ ಬಳಗ ಗೋಪಾಡಿ (ಪಡು) ಇವರಿಂದ 2 […]
ಶ್ರೀ ವನದುರ್ಗಾದೇವಿ ದೇವಸ್ಥಾನ ಕಾಳಾವರ: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶ್ರೀ ಉದಯ ಕುಮಾರ ಶೆಟ್ಟಿ ಆಯ್ಕೆ
ಕೋಟೇಶ್ವರ (ಜ.20): ಶ್ರೀ ವನದುರ್ಗಾದೇವಿ ದೇವಸ್ಥಾನ ಕಾಳಾವರ ಕ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶ್ರೀ ಉದಯ ಕುಮಾರ ಶೆಟ್ಟಿ ಕಾಳಾವರ ಇವರನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾಯ ದತ್ತಿಗಳ ಇಲಾಖೆ ಆಯ್ಕೆ ಮಾಡಿ ಆದೇಶಿಸಿದೆ. ಪ್ರಧಾನ ಅರ್ಚಕರಾಗಿ ಶ್ರೀ ಸತೀಶ ಜೋಗಿ, ಸಮಿತಿ ಸದಸ್ಯರಾಗಿ ಶ್ರೀ ಎ. ರೋಶನ್ ಶೆಟ್ಟಿ ಸಲ್ವಾಡಿ, ಶ್ರೀ ಕಾಳಿಂಗ ಶೆಟ್ಟಿ ಬೀಡಿನಮನೆ, ಶ್ರೀ ಚಂದ್ರಶೇಖರ ನಾಯ್ಕ ಕಾಳಾವರ, ಶ್ರೀ ವಸಂತ ಶೆಟ್ಟಿ […]
ಕಂಬದಕೋಣೆ: ಲಿವರ್ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಜಯಶ್ರೀ ಮೊಗವೀರಗೆ ಬೇಕಿದೆ ಸಹಾಯ ಹಸ್ತ
ಕಂಬದಕೋಣೆ(ಜ.18): ಕಂಬದಕೋಣೆ ನಿವಾಸಿಯಾದ ನಾಗರಾಜರವರ ಪತ್ನಿ ಜಯಶ್ರೀ ಮೊಗವೀರ ರವರು ದೀರ್ಘಕಾಲದಿಂದ ಲಿವರ್ ಕ್ಯಾನ್ಸರ್” ಸಮಸ್ಯೆಯಿಂದ ಬಳಲುತ್ತಿದ್ದು , ಪ್ರಸ್ತುತ ಇವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಚಿಕಿತ್ಸೆಗೆ ಸುಮಾರು 10 ಲಕ್ಷದವರಿಗೆ ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗೆ 8ಲಕ್ಷ ಖರ್ಚಾಗಬಹುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ . ಇಷ್ಟು ಖರ್ಚನ್ನು ಬರಿಸಲು ಈ ಬಡ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ ಹಾಗಾಗಿ ಸಹ್ರದಯಿ ದಾನಿಗಳು ಚಿಕಿತ್ಸೆಗೆ ನೆರವು ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ.ಧನ ಸಹಾಯ ಮಾಡುವವರು ಈ […]
ಮುಂಬೈ: ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಅಧ್ಯಕ್ಷರಾಗಿ ರಾಜು ಮೆಂಡನ್ ಆಯ್ಕೆ
ಕುಂದಾಪುರ (ಜ.17 ): ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ರಾಜು ಮೆಂಡನ್ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ನಡೆದ ಸಂಘದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿಶ್ರೀ ರಾಜು ಮೆಂಡನ್ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉದ್ಯಮಿ ರಮೇಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ್ ಎನ್ ನಾಯ್ಕ್, ಮೊಗವೀರ ಮುಖಂಡರುಗಳಾದ ಸುರೇಶ್ ಆರ್ ಕಾಂಚನ್, ಮಹಾಬಲ ಕುಂದರ್, ಎನ್ ಎಚ್ ಬಗ್ವಾಡಿ, ಸಂತೋಷ್ […]
ನರೇಂದ್ರ ಎಸ್ ಗಂಗೊಳ್ಳಿಗೆ ಸನ್ಮಾನ
ಗಂಗೊಳ್ಳಿ(ಜ.15 ): ಯುವ ಲೇಖಕ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ತಲ್ಲೂರಿನ ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ದೇವಾಡಿಗ ಉಪ್ಪಿನಕುದ್ರು ಇವರು ವೈಯಕ್ತಿಕ ನೆಲೆಯಲ್ಲಿ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಸನ್ಮಾನಿಸಿದರು. ಸನ್ಮಾನಿಸಿ ಮಾತನಾಡಿದ ಅವರು ನಮ್ಮ ನಡುವಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸುವ ಕಾರ್ಯ ನಿರಂತರವಾಗಿ ಆಗಬೇಕಿದೆ. ಆ ಮೂಲಕ ಇಂತಹ ಕಾರ್ಯಗಳು ಮತ್ತಷ್ಟು ಪ್ರತಿಭೆಗಳ ಬೆಳವಣಿಗೆಗೆ […]
ಕಂದಾವರದ ಕೆಂದಾವರೆಗೆ ಕಿರೀಟ ಪ್ರಶಸ್ತಿ ಪ್ರದಾನ ( ಮಾರಣಕಟ್ಟೆ ಹಬ್ಬದಲ್ಲಿ ನೈಕಂಬ್ಳಿ ಸಂಯೋಜನೆಯ ಯಕ್ಷಸಂಕ್ರಾಂತಿ ಯಕ್ಷಗಾನ)
ಕುಂದಾಪುರ (ಜ.15): ಮಕರ ಸಂಕ್ರಾಂತಿಯಂದು ಮಾರಣಕಟ್ಟೆ ಹಬ್ಬದಲ್ಲಿ ಜರುಗಿದ ಪಾವಂಜೆ ಮೇಳದ ಯಕ್ಷಗಾನ ಬಯಲಾಟದಲ್ಲಿ ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ನಾಗರಾಜ್ ಶೆಟ್ಟಿ ನೈಕಂಬ್ಳಿ ನೇತೃತ್ವದ ಯಕ್ಷ ಸಂಕ್ರಾಂತಿಯ ‘ಕಿರೀಟ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂದಾವರ ರಘುರಾಮ ಶೆಟ್ಟಿಯವರು, ಯಕ್ಷಗಾನ ಅಮೋಘವಾದ ಕಲೆ. ದೀರ್ಘವಾಗಿ ಸಾಗಿ ಬಂದ ಈ ಕಲೆ ವಿಚಾರಶೀಲರು, ಜಿಜ್ಞಾಸುಗಳು, ಸಾಮಾನ್ಯ ಹಳ್ಳಿಯ ಜನರನ್ನೂ ತಲುಪುವ ಸಾಮರ್ಥ್ಯ ಹೊಂದಿದ ಪ್ರಭಾವಿ ಕಲೆಯಾಗಿದೆ. ಯಕ್ಷಗಾನಕ್ಕೆ […]
ಜ.14 ಮತ್ತು 15 ರಂದು ಶ್ರೀ ಹಾಡಿಗರಡಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ
ನಾಡ(ಜ.12): ಶ್ರೀ ಕ್ಷೇತ್ರ ಹಾಡಿಗರಡಿ ದೈವಸ್ಥಾನ ನಾಡ ಇದರ ಪರಿವಾರ ದೈವಗಳ ವಾರ್ಷಿಕ ಹಾಲುಹಬ್ಬ, ಗೆಂಡಸೇವೆ, ಮಹಾಪೂಜೆ, ದೈವದರ್ಶನ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಇದೇ ಜ.14 ಮತ್ತು 15 ರಂದು ನಡೆಯಲಿದೆ. ಜ.14 ರ ಶುಕ್ರವಾರ ಸಂಜೆ 6 ಗಂಟೆಗೆ ದೈವದರ್ಶನ ಹಾಗೂ ಗೆಂಡಸೇವೆ, 7 ಗಂಟೆಗೆ ಮಹಾ ಅನ್ನಸಂತರ್ಪಣೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿವೇತನ ವಿತರಣೆಇನ್ನಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ಜ.15ರ ಶನಿವಾರಬೆಳಿಗ್ಗೆ ಗಂಟೆ 10-00ಕ್ಕೆ […]
ಆಶ್ರಯದಾತನ ಆಸರೆ: ಬಡ ಮಹಿಳೆಗೆ ಮನೆ ನಿರ್ಮಿಸಿ ಕೊಟ್ಟ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ
ಮುಳ್ಳಿಕಟ್ಟೆ(ಜ.8): ಮುಳ್ಳಿಕಟ್ಟೆ ಸಮೀಪ ಹೊಸಾಡು ಗ್ರಾಮದ ನಿವಾಸಿಯಾದ ಸುಶೀಲಾ ಪೂಜಾರ್ತಿಯವರಿಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ಉಪ್ಪುಂದ ವತಿಯಿಂದ ನೂತನ ಮನೆಯನ್ನು ಆಶ್ರಯದಾತ,ಯುವ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿಯವರು ಜ.7ರಂದು ಹಸ್ತಾಂತರಿಸಿದರು. ಡಾ .ಗೋವಿಂದಬಾಬು ಪೂಜಾರಿಯವರ ಪೂರ್ಣ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಆರನೇ ಮನೆ ಇದಾಗಿದ್ದು, ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೂತನ ಮನೆ ಗೃಹಪ್ರವೇಶ ಉದ್ಘಾಟನೆ ನೆರವೇರಿಸಿ ಆಶೀರ್ವಚಿಸಿದರು. ಸುಶೀಲಾ ಪೂಜಾರ್ತಿಯವರ ಪತಿ ಕೆಲ […]
ಡಾ.ಗೋವಿಂದ ಬಾಬು ಪೂಜಾರಿಯವರಿಗೆ ಕನ್ನಡ ಚೇತನ ರಾಜ್ಯ ಪ್ರಶಸ್ತಿ
ಬೆಂಗಳೂರು(ಜ.3): ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಪುನೀತ್ ರವರ ಸೇವೆಯನ್ನು ಆದರ್ಶವಾಗಿಟ್ಟುಕೊಂಡು ಅವರ ಸವಿ ನೆನೆಪಿನಲ್ಲಿ ನೀಡುತ್ತಿರುವ ಕನ್ನಡ ಚೇತನ” ರಾಜ್ಯ ಪ್ರಶಸ್ತಿಯನ್ನು ಪ್ರಸಿದ್ದ ಉದ್ಯಮಿ ,ಕೊಡುಗೈದಾನಿ ಡಾ.ಗೋವಿಂದ ಬಾಬು ಪೂಜಾರಿಯವರಿಗೆ ನೀಡಿ ಗೌರವಿಸಲಾಯಿತು.ಎ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.










