ಬೆಂಗಳೂರು (ಡಿ.27): ನ್ಯೂಸ್ ಪೇಪರ್ ಆಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಡಿ.26 ರಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ಸಮಾಜ ಸೇವಕರು,ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ಉಪ್ಪುಂದ ಇದರ ಅಧ್ಯಕ್ಷರು ,ಉದ್ಯಮಿ ಗೋವಿಂದ ಬಾಬು ಪೂಜಾರಿರವರಿಗೆ ನೀಡಿ ಗೌರವಿಸಲಾಯಿತು. ವಿದ್ಯಾವಾಚಸ್ಪತಿ ಸಂತೋಷ ಭಾರತಿ ಶ್ರೀಗಳು ,ಸಭಾಪತಿಗಳಾದ ಬಸವರಾಜ್ ಹೊರಟ್ಟಿರವರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಮತ್ತು […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಕಳಸ: ನದಿಯಲ್ಲಿ ಮುಳುಗಿ ಯುವಕರ ಸಾವು -ಮ್ರತ ದೇಹ ಶೋಧಿಸಿ ಕುಟುಂಬಕ್ಕೆ ಹಸ್ತಾಂತರಿಸಿದ ಈಶ್ವರ್ ಮಲ್ಪೆ
ಕಳಸ (ಡಿ,25): ಭದ್ರ ನದಿಯ ನೀರಿನಲ್ಲಿ ಮುಳುಗಿ ಮ್ರತರಾದ ಇಬ್ಬರು ಯುವಕರ ಮೃತ ದೇಹ ಶೋಧಕಾರ್ಯ ಯಶಸ್ವಿಯಾಗದ ಕಾರಣ ಉಡುಪಿ ಜಿಲ್ಲೆಯ ಈಶ್ವರ್ ಮಲ್ಪೆ ಯವರಿಗೆ ಮೃತದೇಹವನ್ನು ಶೋಧಿಸಿ ಕೊಡುವುದರ ಬಗ್ಗೆ ಕರೆ ಬಂದಿತ್ತು. ಕರೆಗೆ ಓಗೊಟ್ಟ ಮುಳುಗು ತಜ್ಞ ಜೀವರಕ್ಷಕ ಈಶ್ವರ್ ಮಲ್ಪೆ ತಕ್ಷಣ ಕಾರ್ಯಪ್ರವೃತ್ತರಾಗಿ ಡಿ,25 ರ ಬೆಳಿಗ್ಗೆ 4 ಗಂಟೆಯಿಂದಲೇ ಸ್ಥಳೀಯ ಯುವಕರ ಸಹಾಯದಿಂದ ಶೋಧನೆಗೆ ಇಳಿದಿದ್ದು ಮ್ರತದೃಹವನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಮೃತದೇಹವನ್ನು ಪಡೆದ ವಾರಸುದಾರರು […]
ಯುವಕರು ಸೇನೆಗೆ ಸೇರಿ ದೇಶಸೇವೆಯಲ್ಲಿ ತೊಡಗಿಕೊಳ್ಳಬೇಕು- ಡಾ. ಗೋವಿಂದ ಬಾಬು ಪೂಜಾರಿ
ಬೈಂದೂರು(ಡಿ,25):ಯುವಜನತೆಯಲ್ಲಿ ರಾಷ್ಟ್ರ ಪ್ರೇಮ, ರಾಷ್ಟ್ರೀಯತೆ ಹಾಗೂ ರಾಷ್ಟ್ರ ಸೇವಾ ಮನೋಭಾವ ಹೆಚ್ಚಬೇಕು. ಕುಂದಾಪುರ ಹಾಗೂ ಬೈಂದೂರು ಭಾಗದ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗುವುದ ಜೊತೆಗೆ ಸೈನ್ಯದಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾರ್ಗದರ್ಶನ ನೀಡಿ ಹಾಗೂ ತರಬೇತುಗೊಳಿಸುವುದು ಅಗತ್ಯವಾಗಿದೆ ಎಂದು ಖ್ಯಾತ ಉದ್ಯಮಿ, ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಅವರು ಹೇಳಿದರು. ಅವರು ನೇಷನ್ಸ್ ಲವರ್ಸ್ ಬೈಂದೂರು ಸಂಸ್ಥೆಯ ಆಯೋಜನೆಯಲ್ಲಿ ಬೈಂದೂರಿನ ರೋಟರಿ […]
ವಿಶಿಷ್ಟ ಚೇತನರೊಂದಿಗೆ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರವಿರಾಜ ಕಳವಾಡಿ
ಅಂಪಾರು (ಡಿ,22) :ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ ,ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ ಹಾಗೂ ಬೈಂದೂರು – ಶಿರೂರು ಘಟಕದ ಸಹಕಾರದೊಂದಿಗೆ ,ಘಟಕದ ಅಧ್ಯಕ್ಷರಾದ ರವಿರಾಜ್ ಚಂದನ್ ಕಳವಾಡಿ ಯವರು ತಮ್ಮ ಹುಟ್ಟುಹಬ್ಬವನ್ನು ಡಿ,20 ರಂದು ವಾಗ್ಜ್ಯೋತಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಅಂಪಾರು ಇಲ್ಲಿನ ವಿಶಿಷ್ಟ ಚೇತನ ಮಕ್ಕಳೊಂದಿಗೆ ಬೆರೆತು ಅವರ ಜೊತೆ ಸಹಭೋಜನ ಹಾಗೂ ಸಿಹಿತಿಂಡಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಮೊಗವೀರ ಯುವಸಂಘಟನೆ ಉಡುಪಿ […]
ಶ್ರೀ ಕುಮಾರ್ ಕಾಂಚನ್ ರವರಿಗೆ ಗೋವತ್ಸಪ್ರಿಯ ಪ್ರಶಸ್ತಿ
ಕೋಟೇಶ್ವರ(ಡಿ.19): ದೇಶಿಯ ಗೋತಳಿಗಳ ರಕ್ಷಣೆ ಮತ್ತು ಪಂಚಗವ್ಯ ಉತ್ಪನ್ನಗಳು ಕುರಿತು ಜನ ಜಾಗೃತಿ ಮೂಡಿಸುತ್ತಿರುವ ಕೋಟೇಶ್ವರ ಸಮೀಪದಬೀಜಾಡಿಯ ಕಪಿಲೆ ಗೋ ಸಮೃದ್ಧಿ ಟ್ರಸ್ಟ್(ರಿ) ಇದರ ಪ್ರವರ್ತಕರಾದ ಶ್ರೀಕುಮಾರ್ ಕಾಂಚನ ರವರಿಗೆ ಗೋವತ್ಸಪ್ರಿಯ ಪ್ರಶಸ್ತಿ ಲಭಿಸಿದೆ. ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಡಿ. 14ರಂದು ನಡೆದ ರಾಜ್ಯಮಟ್ಟದ ದೇಶಿ ಗೋಪಾಲಕ, ಕೃಷಿಕ ಹಾಗೂ ಗೋ-ಉತ್ಪನ್ನ ತಯಾರಕ ಸಮ್ಮೇಳನದಲ್ಲಿ ಶ್ರೀಕುಮಾರ್ ಕಾಂಚನ ರವರಿಗೆ ಗೋವತ್ಸ ಪ್ರಿಯ’ […]
ಕುಂದಾಪುರ ರೋಟರಿ ಕ್ಲಬ್ ಗೆ ಹಿರಿಯ ಚಲನಚಿತ್ರ ನಟ ಶ್ರೀ ರಮೇಶ್ ಭಟ್ ಭೇಟಿ
ಕುಂದಾಪುರ (ಡಿ.18): ಕನ್ನಡ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ಶ್ರೀ ರಮೇಶ್ ಭಟ್ ರವರು ರೋಟರಿ ಕ್ಲಬ್ ಕುಂದಾಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಸೇರಿ ಅವರನ್ನು ಸನ್ಮಾನಿಸಲಾಯಿತು ಸದಸ್ಯರಾದ ಮಾಜಿ ಸಹಾಯಕ ಗೌರ್ನರ್ ಶ್ರೀ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ರೋಟೇರಿಯನ್ ಮುತ್ತಯ್ಯ ಶೆಟ್ಟಿ ಹಾಗೂ ನಾಗರಾಜಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತಾಡಿದ ಶ್ರೀ ರಮೇಶ್ ಭಟ್ ರೋಟರಿ ಕ್ಲಬ್ ಸದಸ್ಯರ […]
ಗಂಗೊಳ್ಳಿ: ಡಾ. ಬಿ.ಆರ್ ಅಂಬೇಡ್ಕರ್ ರ ವರ ಪರಿನಿರ್ವಾಣ ದಿನಾಚರಣೆ
ಗಂಗೊಳ್ಳಿ(ಡಿ.13) : ಡಾ. ಅಂಬೇಡ್ಕರ್ ಯುವಕ ಮಂಡಲ (ರಿ) ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಳಿ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಮೇಲ್ ಗಂಗೊಳ್ಳಿಯ ಅಂಬೇಡ್ಕರ್ ಭವನದಲ್ಲಿ ಬಿ.ಆರ್ ಅಂಬೇಡ್ಕರ್ ರ ವರ 65ನೇ ವರುಷದ ಪರಿನಿರ್ವಾಣ ದಿನಾಚರಣೆ ನಡೆಯಿತು. ಯುವಕ ಮಂಡಲದ ಉಪಾಧ್ಯಕ್ಷ ಕಿರಣ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಭಾಸ್ಕರ್ ಹೆಚ್. ಜಿ ಮಾತನಾಡಿ ಅಂಬೇಡ್ಕರ್ ಅವರ ಜೀವನ ಶೈಲಿ […]
ವಕ್ವಾಡಿ: ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮ ಫಲಕ ಅಳವಡಿಕೆ
ಕುಂದಾಪುರ(ಡಿ, 12): ಕುಂಭಾಶಿ ಸಮೀಪದ ವಕ್ವಾಡಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೃಷ್ಣ ಐತಾಳ್ ರವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎಂಬ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಸ್ವರಾಜ್ಯ 75 ತಂಡ ಹಾಗೂ ವಿವಿಧ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಯಿತು. ಶ್ರೀ ಪ್ರೇಮಾನಂದ ಶೆಟ್ಟಿ ಕಟ್ಕೇರಿ ಯವರು ನಾಮಫಲಕ ಅನಾವರಣಗೊಳಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ದೇಶಪ್ರೇಮ ನಾವು ಪ್ರತಿದಿನ ಸ್ಮರಿಸಬೇಕು ಹಾಗೂ ಸರಕಾರ ಸ್ವಾತಂತ್ರ್ಯ ಹೋರಾಟಗಾರರ ಮನೆಯ ಬಗ್ಗೆ ಕಳಕಳಿಯನ್ನು […]
ಸಮುದಾಯ ಆರೋಗ್ಯ ಕೇಂದ್ರ ಬೈಂದೂರು:ಅಂಬ್ಯುಲೆನ್ಸ್ ಸೇವೆಗೆ ಸಹಾಯ ಹಸ್ತ ಚಾಚಿದ ಡಾ. ಗೋವಿಂದ ಬಾಬು ಪೂಜಾರಿ
ಬೈಂದೂರು(ಡಿ.11); ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಯವರು ಬಹುಬಗೆಯ ಸಮಾಜಸೇವೆ ಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು , ಅದಕ್ಕೆ ಪೂರಕವಾಗಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ವಾಹನ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸರಕಾರದಿಂದ ಸಿಬ್ಬಂದಿ ನೇಮಕವಾಗುವ ತನಕ ತಾತ್ಕಾಲಿಕವಾಗಿ ಅಂಬ್ಯುಲೆನ್ಸ್ ನ ಓರ್ವ ಚಾಲಕನಿಗೆ ಮಾಸಿಕ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಡೀಸೆಲ್ ವೆಚ್ಚವನ್ನು ಭರಿಸಿಕೊಡುವುದರ ಮೂಲಕ ಮಾನವೀಯ ನೆಲೆಯ […]
ಆಶಾ ಕಾರ್ಯಕರ್ತೆ ಕಲ್ಪನಾ ಜಿ. ಯವರಿಗೆ ಸನ್ಮಾನ
ಗಂಗೊಳ್ಳಿ (ಡಿ.6): ಕಳೆದ 12 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಮತ್ತು ಕೋವಿಡ್ ಸಮಯದಲ್ಲಿ ನಿರಂತರವಾಗಿ ಸೇವಾ ಮನೋಭಾವನೆಯೊಂದಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಉತ್ತಮವಾದ ನಿರ್ವಹಣೆಯನ್ನು ತೋರಿದ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಸುಗಮಕಾರರಾದ ಕಲ್ಪನಾ ಜಿ ಆರ್. ಪ್ರಭಾಕರ್ ಅವರನ್ನು ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಕಾರ್ಟೂನು ಹಬ್ಬದಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ, ಮನೋವೈದ್ಯ ಡಾ. ಪಿ ವಿ […]










