ಬೈಂದೂರು (ಅ, 12) :ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯ ಜೊತೆಗೆ ಉತ್ತಮ ಆದರಾತಿಥ್ಯಕ್ಕೆ ಹೆಸರುವಾಸಿಯಾದ ಡಾ. ಗೋವಿಂದ ಬಾಬು ಪೂಜಾರಿಯವರ ಮಾಲೀಕತ್ವದ ಶೆಫ್ಟಾಕ್ ಸಂಸ್ಥೆಗೆ ಆಲ್ ಇಂಡಿಯಾ ಬಿಸಿನೆಸ್ ಡೆವೆಲಪ್ಮೆಂಟ್ ಅಸೋಸಿಯೇಷನ್ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ -2021 ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ.ಗೋವಿಂದ ಬಾಬು ಪೂಜಾರಿಯವರು ಪ್ರಶಸ್ತಿಯನ್ನು ಸ್ವೀಕರಿಸಿದರು.
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ: 28 ನೇ ವರ್ಷದ ಶ್ರೀ ಶಾರದೋತ್ಸವ ಸಂಭ್ರಮ
ಬೈಂದೂರು (ಅ,10): ಬೈಂದೂರಿನ ಕಳವಾಡಿಶ್ರೀ ಈಶ್ವರ ಮಾರಿಕಾಂಬಾ ದೇವರ ಸನ್ನಿಧಿಯಲ್ಲಿ 28 ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮ ವಿಜ್ರಂಭಣೆಯಲ್ಲಿ ನಡೆಯಲಿದೆ. ಅಕ್ಟೋಬರ್ 12 ರ ಮಂಗಳವಾರ ಬೆಳಿಗ್ಗೆ 10 -00 ಗಂಟೆಗೆ ಶಾರದಾ ಪ್ರತಿಷ್ಠಾಪನೆ,12-00 ಗಂಟೆಗೆ ಮಧ್ಯಾಹ್ನ ಪೂಜೆ ,ಸಂಜೆ 6.30 ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ರಾತ್ರಿ 8:00 ಗಂಟೆಗೆ ಶ್ರೀ ಈಶ್ವರ ಮಾರಿಕಾಂಬ ಪರಿವಾರ ದೇವರುಗಳಿಗೆ ನವರಾತ್ರಿ ಪೂಜೆ ಮತ್ತು ಶ್ರೀ ಶಾರದಾಂಬೆಗೆ ರಾತ್ರಿ […]
ಮೊಗವೀರ ಯುವ ಸಂಘಟನೆ ,ಬೈಂದೂರು- ಶಿರೂರು ಘಟಕ: ನಾಡೋಜ ಜಿ.ಶಂಕರ್ ರವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಬೈಂದೂರು (ಅ,10): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಬೈಂದೂರು- ಶಿರೂರು ಘಟಕದ ವತಿಯಿಂದ ನಾಡೋಜ ಡಾ. ಜಿ ಶಂಕರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಸಲಹೆಗಾರರಾದ ಶ್ರೀ ಎನ್. ಡಿ.ಚಂದನ್, ಶ್ರೀ ಜಗನ್ನಾಥ. ಎಮ್. ಉಪ್ಪುಂದ, ಬೈಂದೂರು-ಶಿರೂರು ಘಟಕದ ಅಧ್ಯಕ್ಷರಾದ ಶ್ರೀ ರವಿರಾಜ್ ಚಂದನ್ ಕಳವಾಡಿ, ಮಾಜಿ ಅಧ್ಯಕ್ಷರುಗಳಾದ […]
ಕುಂದಾಪುರ:ವಿಶ್ವ ಅಂಚೆ ದಿನಾಚರಣೆ
ಕುಂದಾಪುರ (ಅ,9): ಭಾರತೀಯ ಅಂಚೆ ಇಲಾಖೆಯ ಕುಂದಾಪುರ ಪ್ರಧಾನ ಅಂಚೆ ಕಛೇರಿಯಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಚೆ ಇಲಾಖೆಯ 167 ವರ್ಷ ಚರಣೆಯ ಸಂಭ್ರಮವನ್ನುಅಕ್ಟೋಬರ್ 9 ರಿಂದ 15 ರ ವರೆಗೆ “ಅಂಚೆ ಸಪ್ತಾಹ”ದ ಮೂಲಕ ಆಚರಿಸಲಾಗುತ್ತಿದೆ. ಅಂಚೆ ಉಪ ಅಧೀಕ್ಷಕರಾದ ಪಿ ಏನ್ ಸತೀಶ, ಅಂಚೆ ನಿರೀಕ್ಷಿಕರಾದ ಡಿ ಎಮ್ ರಾಮಚಂದ್ರ, ಅಂಚೆಪಾಲಕರಾದ ಮಂಜುನಾಥ್ ಎಚ್ ಹಾಗೂ ಅಂಚೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಐದನೇ ಮನೆ ಹಸ್ತಾಂತರ
ಕೋಟೇಶ್ವರ-(ಅ,8): ಕೋಟೇಶ್ವರ ಸಮೀಪದ ಕಾಳಾವರದಲ್ಲಿ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್( ರಿ ) ಉಪ್ಪುಂದ ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಗೋವಿಂದ ಬಾಬು ಪೂಜಾರಿ ಯವರು ಪೂರ್ಣ ಜವಾಬ್ದಾರಿಯನ್ನು ಹೊತ್ತು ನಿರ್ಮಿಸಿಕೊಟ್ಟ 5ನೇ ಮನೆ ಗೃಹಪ್ರವೇಶ ಇಂದು ಸಂತಸದಿಂದ ನಡೆಯಿತು. ಕಾಳಾವರದ ನರಿಕೋಡ್ಲು ಮನೆ ಸತೀಶ್ ಪೂಜಾರಿ ಯವರ ಮನೆ ನಿರ್ಮಾಣದ ಕನಸನ್ನು ಆಶ್ರಯದಾತ ಡಾ.ಗೋವಿಂದ ಬಾಬು ಪೂಜಾರಿಯವರು ನನಸು ಮಾಡಿದ್ದಾರೆ.ರಿಕ್ಷಾ ಡ್ರೈವರ್ ಒಬ್ಬರ ಮನೆ ನಿರ್ಮಾಣಕ್ಕೆ ಎದುರಾದ ಕಷ್ಟವನ್ನು ಗಮನಿಸಿದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ […]
ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳಿಂದ ಚೈತನ್ಯ ವೃದ್ಧಾಶ್ರಮಕ್ಕೆ ವಾಟರ್ ಪ್ಯೂರಿಫೈರ್ ಕೊಡುಗೆ
ಕುಂದಾಪುರ (ಅ,7): ಇಂದಿನ ವಿದ್ಯಮಾನದಲ್ಲಿ ಇದ್ದ ಹಣವನ್ನು ಸದುಪಯೋಗ ಮಾಡಿಕೊಳ್ಳುದಕ್ಕಿಂತ ದುರುಪಯೋಗ ಮಾಡುವುದೇ ಹೆಚ್ಚು. ದಿನದಿಂದ ದಿನಕ್ಕೆ ವೃದ್ಧಾಶ್ರಮಗಳೂ ಹೆಚ್ಚುತ್ತಲೇ ಇವೆ.ಇದರಿಂದಾಗಿ ಅಲ್ಲಿನ ಚಿಕ್ಕ ಚಿಕ್ಕ ಸಮಸ್ಯೆಗೆ ಪರಿಹಾರಗಳು ದೊರಕುತ್ತಿಲ್ಲ.ಇದನ್ನರಿತ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳು ಚೈತನ್ಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ತಮ್ಮ ಕೈಲಾದ ಸಹಾಯವನ್ನು ಮಾಡಿದರು. ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ದಿನ ಹಾಗೂ ಎತ್ನಿಕ್ ಡೇಯಲ್ಲಿ ವಿಜೇತರಾಗಿ ಪಡೆದ ಹಣದಿಂದ ಚೈತನ್ಯ ವೃದ್ಧಾಶ್ರಮಕ್ಕೆ ಸುಮಾರು ಐದು […]
ನಾಡೋಜ ಡಾ. ಜಿ. ಶಂಕರ್ ರವರ 66ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕುಂದಾಪುರ (ಅ, 06) : ಸಮಾಜ ಸೇವಕ, ಉದ್ಯಮಿ ನಾಡೋಜ ಡಾ. ಜಿ. ಶಂಕರ್ ರವರ 66ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊಗವೀರ ಯುವ ಸಂಘಟನೆ(ರಿ) ಉಡುಪಿಯ ವಿವಿಧ ಫಟಕದ ಸದಸ್ಯರು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರಾಬರ್ಟ್, ಮೊಗವೀರ ಯುವ ಸಂಘಟನೆ ಉಡುಪಿ, ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷರಾದ ಸತೀಶ್ ಎಂ ನಾಯ್ಕ, ಸದಾನಂದ ಬಳ್ಕೂರು,ಗುತ್ತಿಗೆದಾರ […]
ಕುಂದಾಪುರ : ನೇತ್ರ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ
ಕುಂದಾಪುರ (ಅ, 05) : ಭಾರತೀಯ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಕುಂದಾಪುರ ಮಹಿಳಾ ಮೋರ್ಚಾ ವತಿಯಿಂದ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್ಸಿಲರ್ ವಿಷನ್ ಪೌಂಡೇಷನ್ ಇವರ ಸಹಯೋಗದಲ್ಲಿ ನೇತ್ರ ತಪಾಸಣಾ ಶಿಬಿರ ಹಾಗೂ ಆಯ್ದ 293 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಇಕೋಟ ಮಾಂಗಲ್ಯ […]
ಫೀನಿಕ್ಸ್ ಅಕಾಡೆಮಿ ಇಂಡಿಯಾ ಸಂಸ್ಥೆಯ ಕ್ರೀಡಾ ಪಟುಗಳಿಂದ ಮಹತ್ತರ ಸಾಧನೆ – ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ
ಕುಂದಾಪುರ (ಅ, 05) : ಇತ್ತೀಚೆಗೆ ಗದಗ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಫೀನಿಕ್ಸ್ ಅಕಾಡೆಮಿ ಇಂಡಿಯಾ ಸಂಸ್ಥೆಯ ಕ್ರೀಡಾಪಟುಗಳಾದ ಲಕ್ಷ್ಮೀಕಾಂತ್ ಎನ್ ಆರ್ (ಸೀನಿಯರ್ -75 ಕೆ.ಜಿ ಕುಮಿಟೆ) ಸ್ವರ್ಣ ಪದಕ, ಅಜಯ್ ಎ ದೇವಾಡಿಗ (-21 ವರ್ಷ -75 ಕೆ.ಜಿ ಕುಮಿಟೆ) ಸ್ವರ್ಣಪದಕ, ಭರತ್ ಬಾಬು ದೇವಾಡಿಗ (-21 ವರ್ಷ -84 ಕೆ.ಜಿ ಕುಮಿಟೆ) ಸ್ವರ್ಣಪದಕ ಹಾಗೂ ಪವನ್ ಎನ್ ಪೂಜಾರಿ (-21 […]
ಮೂಡಬಿದ್ರೆ : ಗಾಂಧಿ ವಿಚಾರದ ಪ್ರಸ್ತುತತೆಯ ವಿಚಾರದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ
ಮೂಡಬಿದ್ರೆ (ಅ, 04) : ಜೆ ಸಿ ಐ ಮೂಡಬಿದ್ರೆ ತ್ರಿಭುವನ್ ರೋಟರಿ ಕ್ಲಬ್ ಮೂಡಬಿದ್ರಿ ಟೆಂಪಲ್ ಟೌನ್ ಹಾಗೂ ಗಾಂಧಿ ವಿಚಾರ ವೇದಿಕೆ ಮೂಡಬಿದ್ರಿ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 2.10.2021 ರಂದು “ಗಾಂಧಿ ವಿಚಾರದ ಪ್ರಸ್ತುತತೆ” ಎನ್ನುವ ವಿಚಾರದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕವಿಗಳು, ವಿಶ್ಲೇಷಕರು, ಚಿಂತಕರು ಆಗಿರುವ ಶ್ರೀ ಅರವಿಂದ ಚೊಕ್ಕಾಡಿ, ಸಹಶಿಕ್ಷಕರು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ […]










