ಅಂಪಾರು(ಆ,09): ಇಲ್ಲಿನ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಅರಿವು ಕೇಂದ್ರದ ನಾಮ ಫಲಕವನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಯುತ ಕೆ. ಗೋಪಾಲಕೃಷ್ಣ ಕಿಣಿ ಇವರು ಅನಾವರಣಗೈದರು. ಈ ಸಂದರ್ಭದಲ್ಲಿ ಪಂಚಾಯತ್ ಸದ್ಯಸರಾದ ನವೀನ ಶೆಟ್ಟಿ ಮತ್ತು ಭಾರತಿ ಶೇಟ್ ,.ಅಭಿವೃದ್ದಿ ಅಧಿಕಾರಿ ಮಧುಸೂಧನ್ ಪ್ರಸಾದ್ ಹಾಗೂ ಪಂಚಾಯತ್ ಸಿಬ್ಬಂದಿಯವರು ಹಾಜರಿದ್ದರು.
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಕುಂದಾಪುರ ತಾಲೂಕು ಯುವ ಬಂಟರ ಸಂಘ: 25 ಲಕ್ಷ ರೂ. ಪ್ರೊತ್ಸಾಹ ಧನ ವಿತರಣೆ
ಕುಂದಾಪುರ(ಜು.27): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಬಂಟ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಮತ್ತು ಅವಕಾಶಗಳಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳಡಿ ಪ್ರೋತ್ಸಾಹಧನ ವಿತರಣಾ ಸಮಾರಂಭವು ಆಗಷ್ಟ್ 18 ರಂದು ಭಾನುವಾರ ಪೂರ್ವಾಹ್ನ 9.30 ಕ್ಕೆ ಕೋಟೇಶ್ವರದ ಯುವ ಮೆರಿಡಿಯನ್ ಸಭಾಭವನದಲ್ಲಿ ನಡೆಯಲಿದೆ. 2024 ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 95% ಕ್ಕಿಂತ ಅಧಿಕ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ […]
ಲಯನ್ಸ್ ಕ್ಲಬ್ ಕುಂದಾಪುರ ಇಂಜಿನೀಯರ್ಸ್ ವತಿಯಿಂದ ಕುಂದಾಪುರ ಕಾಲೇಜಿಗೆ ವ್ಹೀಲ್ ಚೇರ್ ಕೊಡುಗೆ
ಕುಂದಾಪುರ (ಜು,27): ಲಯನ್ಸ್ ಕ್ಲಬ್ ಕುಂದಾಪುರ ಇಂಜಿನೀಯರ್ಸ್ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದ ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅತೀ ಅಗತ್ಯವಾದ ವ್ಹೀಲ್ ಚೇರ್ನ್ನು ಲಯನ್ಸ್ ಕ್ಲಬ್ ಕುಂದಾಪುರ ಇಂಜಿನೀಯರ್ಸ್ ಇದರ ಅಧ್ಯಕ್ಷರಾದ ಶ್ರೀ ದಿನೇಶ ಹೆಗ್ಡೆಯವರು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ ಜಿ ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಈ ಕೊಡುಗೆ ಪ್ರಾಯೋಜಕರಾದ ಲಯನ್ ಆರ್ಕಿಟೆಕ್ಟ್ ಇಕ್ಬಾಲ್ ಅಧ್ಯಕ್ಷರು ಇಂಜಿನೀಯರ್ಸ್ ì ಅಸೋಸಿಯೇಶನ್ ಹಾಗೂ ಲಯನ್ […]
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕೋಟೇಶ್ವರ(ಜು,22): ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆ ಹಾಗೂ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಉಡುಪಿ ,ರೋಟರಿ ಕ್ಲಬ್ ಕೋಟೇಶ್ವರ, ರಕ್ತನಿಧಿ ಕೆ.ಎಂ.ಸಿ ಮಣಿಪಾಲ ,ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕೋಟೇಶ್ವರದ ಶಾರದಾ ಕಲ್ಯಾಣ ಮಂಟಪದಲ್ಲಿ ಜುಲೈ 21 ರಂದು ನಡೆಯಿತು . ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷರಾದ ನಾಗರಾಜ […]
ಮೊಗವೀರ ಯುವ ಸಂಘಟನೆ, ಹೆಮ್ಮಾಡಿ ಘಟಕ : ವನ ಮಹೋತ್ಸವ ಹಾಗೂ ಗಿಡ ವಿತರಣೆ
ಹೆಮ್ಮಾಡಿ (ಜು, 19): ಮೊಗವೀರ ಯುವ ಸಂಘಟನೆ( ರಿ. ),ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ ),ಅಂಬಲಪಾಡಿ ಉಡುಪಿ, ಗೀತಾನಂದ ಫೌಂಡೇಶನ್ ಮಣೂರು ಕೋಟ, ಮೊಗವೀರ ಮಹಾಜನ ಸೇವಾ ಸಂಘ (ರಿ. ),ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ )ಹೆಮ್ಮಾಡಿ, ಮಹಿಷಾಸುರ ಮರ್ದಿನಿ ಸ್ತ್ರೀಶಕ್ತಿ ಬಗ್ವಾಡಿ ಇವರ ಸಹಕಾರದೊಂದಿಗೆ ವನ ಮಹೋತ್ಸವ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಬಗ್ವಾಡಿ […]
ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ: Rtn ಸತೀಶ್ ಎಂ. ನಾಯ್ಕ್ ರವರಿಗೆ ಸನ್ಮಾನ
ಉಡುಪಿ (ಜು,14): ರೋಟರಿ ಕ್ಲಬ್ ಕೋಟೇಶ್ವರ ಇದರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ Rtn ಸತೀಶ್ ಎಂ. ನಾಯ್ಕ್ ರವರನ್ನು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಇದರ ಸಾಮಾನ್ಯ ಸಭೆಯಲ್ಲಿ ಗುರುತಿಸಿ ಗೌರವಿಸಲಾಯಿತು. ಸತೀಶ್ ಎಂ. ನಾಯ್ಕ್ ರವರು ಮೊಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷರಾಗಿ ಹಾಗೂ ಕೋಟೇಶ್ವರ ಘಟಕದ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಜಿಲ್ಲಾ ಸಂಘಟನೆಯ ಅಧ್ಯಕ್ಷರಾದ ಶ್ರೀ ಜಯಂತ್ ಅಮಿನ್ ಕೋಡಿ ,ನಿಕಟಪೂರ್ವ ಅಧ್ಯಕ್ಷ […]
ಏಷ್ಯಾನ್ ಪೆಷಿಫಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್:ವಿಜಯ ಕಾಂಚನ್ ಬೈಕಂಪಾಡಿಯವರಿಗೆ ಚಿನ್ನದ ಪದಕ
ಉಡುಪಿ (ಜು,10): ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಜರಗಿದ ಏಷ್ಯಾನ್ ಪೆಷಿಫಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ -2024ನಲ್ಲಿ 105ಕೆಜಿ ವಿಭಾಗದ M2 ನಲ್ಲಿ 2 ಚಿನ್ನದ ಪದಕ ಪಡೆದು ಬೆಸ್ಟ್ ಲಿಫ್ಟಿರ್ ಪ್ರಶಸ್ತಿಯನ್ನು ವಿಜಯ ಕಾಂಚನ್ ಬೈಕಂಪಾಡಿ ಪಡೆದು ಸಾಧನೆಗೈದಿದ್ದಾರೆ. ಇವರು ಏಕಲವ್ಯ ಪಶಸ್ತಿ ವಿಜೇತ ಸತೀಶಕುಮಾರ್ ಕುದ್ರೋಳಿಯವರ ಶಿಷ್ಯ, ಸೆನ್ ಕ್ರೈಂ ಮಂಗಳೂರು ಸಿಟಿ ಯಲ್ಲಿ ಉದ್ಯೋಗ ಹಾಗೂ ಮಂಗಳೂರು ಬಾಲಾoಜನೇಯ,ರಾಮಾಂಜನೇಯ,ಪವರ್ ಜೋನ್,ಬ್ಲಾಕ್ ರಾಕ್, ಮೈ ಫಿಟ್ನೆಸ್ ಜಿಮ್ […]
ಕುಂದಾಪುರ: ಜು. 12 ರಿಂದ 14 ರ ತನಕ ಹಲಸು ಮತ್ತು ಕೃಷಿ ಮೇಳ
ಕುಂದಾಪುರ (ಜು. 12): ಕುಂದಾಪುರ ಪರಿಸರದ ಜನರಿಗೆ ಹಾಗೂ ಕೃಷಿಕರಿಗೆ ಉಪಯೋಗವಾಗುವ ಉದ್ದೇಶದಿಂದ ಹಲಸು ಮತ್ತು ಕೃಷಿ ಉತ್ಪನ್ನಗಳ ವಿಶೇಷ ಆಹಾರ ಹಾಗೂ ಕೃಷಿ ಯಂತ್ರೋಪಕರಣ ಮತ್ತು ಸಾವಯವ ಉತ್ಪನ್ನ ಗಳ ಮಾರಾಟ ಹಾಗೂ ಪ್ರದರ್ಶನವನ್ನು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಜುಲೈ 12 ರಿಂದ 14 ರ ತನಕ ನಗರದ ನೆಹರು ಮೈದಾನದಲ್ಲಿ ಯೋಜಿಸಲಾಗಿದೆ. ಇದರ ಉಪಯೋಗವನ್ನು ಕುಂದಾಪುರ ಪರಿಸರದ […]
ಸರ್ಕಾರಿ ಬಸ್ಸು .. ಈಡೇರುವುದೇ ಭರವಸೆಗಳು ..?
ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಸಾರಿಗೆ ಸಮಸ್ಯೆಗಳ ಕುರಿತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈಗಾಗಲೇ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು, ಮೀನಾಮಿಷ ಎನ್ನುತಿದ್ದು,ಸತತ ಮೂರು ವರ್ಷಗಳಿಂದ ಎಲ್ಲಾ ಗ್ರಾಮಗಳಿಗೂ ಸಾರಿಗೆ ಕಲ್ಪಿಸುವ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳಲ್ಲಿ ಕೇಳಿದರೆ ಆರ್. ಟಿ.ಓ ಅಧಿಕಾರಿಗಳು ಪರವಾನಗಿ ನೀಡುತ್ತಿಲ್ಲ ಎಂದು ಹೇಳುತ್ತಾರೆ. ಆರ್. ಟಿ.ಓ ಅಧಿಕಾರಿಗಳಲ್ಲಿ ಕೇಳಿದರೆ ಸಾರಿಗೆ […]
ಯುವ ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು
ಕುಂದಾಪುರ(ಜು 02): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯಡಿ ಬ್ರಹ್ಮಾವರ ತಾಲೂಕಿನ ಶಿರೂರು ಮಂದಾರ್ತಿ ನಿವಾಸಿಯಾದ ಶ್ರೀ ನಿತೇಶ್ ಶೆಟ್ಟಿ ಅವರ ಅನಾರೋಗ್ಯ ನಿಮಿತ್ತ ವೈದ್ಯಕೀಯ ಚಿಕಿತ್ಸೆಗಾಗಿ ಸಂಘದ ವತಿಯಿಂದ 10000 ರೂಪಾಯಿಯನ್ನು ಹಾಗೂ ಶಿವಮೊಗ್ಗದ ದಿನೇಶ್ ಶೆಟ್ಟಿ ಅವರ ಚಿಕಿತ್ಸೆಗೆ 10000 ರೂಪಾಯಿಯನ್ನು ಸಂಘದ ಆಡಳಿತ ಕಚೇರಿಯಲ್ಲಿ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಚಕ್ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ […]










