ಉಡುಪಿ (ಜು,10): ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಜರಗಿದ ಏಷ್ಯಾನ್ ಪೆಷಿಫಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ -2024ನಲ್ಲಿ 105ಕೆಜಿ ವಿಭಾಗದ M2 ನಲ್ಲಿ 2 ಚಿನ್ನದ ಪದಕ ಪಡೆದು ಬೆಸ್ಟ್ ಲಿಫ್ಟಿರ್ ಪ್ರಶಸ್ತಿಯನ್ನು ವಿಜಯ ಕಾಂಚನ್ ಬೈಕಂಪಾಡಿ ಪಡೆದು ಸಾಧನೆಗೈದಿದ್ದಾರೆ. ಇವರು ಏಕಲವ್ಯ ಪಶಸ್ತಿ ವಿಜೇತ ಸತೀಶಕುಮಾರ್ ಕುದ್ರೋಳಿಯವರ ಶಿಷ್ಯ, ಸೆನ್ ಕ್ರೈಂ ಮಂಗಳೂರು ಸಿಟಿ ಯಲ್ಲಿ ಉದ್ಯೋಗ ಹಾಗೂ ಮಂಗಳೂರು ಬಾಲಾoಜನೇಯ,ರಾಮಾಂಜನೇಯ,ಪವರ್ ಜೋನ್,ಬ್ಲಾಕ್ ರಾಕ್, ಮೈ ಫಿಟ್ನೆಸ್ ಜಿಮ್ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಕುಂದಾಪುರ: ಜು. 12 ರಿಂದ 14 ರ ತನಕ ಹಲಸು ಮತ್ತು ಕೃಷಿ ಮೇಳ
ಕುಂದಾಪುರ (ಜು. 12): ಕುಂದಾಪುರ ಪರಿಸರದ ಜನರಿಗೆ ಹಾಗೂ ಕೃಷಿಕರಿಗೆ ಉಪಯೋಗವಾಗುವ ಉದ್ದೇಶದಿಂದ ಹಲಸು ಮತ್ತು ಕೃಷಿ ಉತ್ಪನ್ನಗಳ ವಿಶೇಷ ಆಹಾರ ಹಾಗೂ ಕೃಷಿ ಯಂತ್ರೋಪಕರಣ ಮತ್ತು ಸಾವಯವ ಉತ್ಪನ್ನ ಗಳ ಮಾರಾಟ ಹಾಗೂ ಪ್ರದರ್ಶನವನ್ನು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಜುಲೈ 12 ರಿಂದ 14 ರ ತನಕ ನಗರದ ನೆಹರು ಮೈದಾನದಲ್ಲಿ ಯೋಜಿಸಲಾಗಿದೆ. ಇದರ ಉಪಯೋಗವನ್ನು ಕುಂದಾಪುರ ಪರಿಸರದ […]
ಸರ್ಕಾರಿ ಬಸ್ಸು .. ಈಡೇರುವುದೇ ಭರವಸೆಗಳು ..?
ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಸಾರಿಗೆ ಸಮಸ್ಯೆಗಳ ಕುರಿತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈಗಾಗಲೇ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು, ಮೀನಾಮಿಷ ಎನ್ನುತಿದ್ದು,ಸತತ ಮೂರು ವರ್ಷಗಳಿಂದ ಎಲ್ಲಾ ಗ್ರಾಮಗಳಿಗೂ ಸಾರಿಗೆ ಕಲ್ಪಿಸುವ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳಲ್ಲಿ ಕೇಳಿದರೆ ಆರ್. ಟಿ.ಓ ಅಧಿಕಾರಿಗಳು ಪರವಾನಗಿ ನೀಡುತ್ತಿಲ್ಲ ಎಂದು ಹೇಳುತ್ತಾರೆ. ಆರ್. ಟಿ.ಓ ಅಧಿಕಾರಿಗಳಲ್ಲಿ ಕೇಳಿದರೆ ಸಾರಿಗೆ […]
ಯುವ ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು
ಕುಂದಾಪುರ(ಜು 02): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯಡಿ ಬ್ರಹ್ಮಾವರ ತಾಲೂಕಿನ ಶಿರೂರು ಮಂದಾರ್ತಿ ನಿವಾಸಿಯಾದ ಶ್ರೀ ನಿತೇಶ್ ಶೆಟ್ಟಿ ಅವರ ಅನಾರೋಗ್ಯ ನಿಮಿತ್ತ ವೈದ್ಯಕೀಯ ಚಿಕಿತ್ಸೆಗಾಗಿ ಸಂಘದ ವತಿಯಿಂದ 10000 ರೂಪಾಯಿಯನ್ನು ಹಾಗೂ ಶಿವಮೊಗ್ಗದ ದಿನೇಶ್ ಶೆಟ್ಟಿ ಅವರ ಚಿಕಿತ್ಸೆಗೆ 10000 ರೂಪಾಯಿಯನ್ನು ಸಂಘದ ಆಡಳಿತ ಕಚೇರಿಯಲ್ಲಿ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಚಕ್ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ […]
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ
ಕುಂದಾಪುರ(ಜು 01): ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ಅಮಾಸೆಬೈಲು ಪರಿಸರದಲ್ಲಿ ತೇಜಸ್ವಿನಿ ಕ್ಲಿನಿಕ್ ಮೂಲಕ ರಸ್ತೆ, ವಾಹನ, ಪೋನ್ ಸೌಲಭ್ಯಗಳಿಲ್ಲದ ಕಾಲದಲ್ಲಿ ರಾತ್ರಿ-ಹಗಲು ಎನ್ನದೆ ಸಾವಿರಾರು ಬಾಣಂತಿಯರ, ಮಕ್ಕಳ, ರೋಗಿಗಳ ಪ್ರಾಣ ಉಳಿಸಿ ಇಂದಿಗೂ ಅದೇ ಪರಿಸರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಾದ ಡಾ. ಮಂದಾರ ಶೆಟ್ಟಿಯವರನ್ನು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮಂದಾರ ಶೆಟ್ಟಿಯವರು ಕಷ್ಟವಾದರೂ […]
ಮೊಗವೀರ ಯುವ ಸಂಘಟನೆ(ರಿ.), ಕುಂದಾಪುರ ಘಟಕ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣೆ
ಕುಂದಾಪುರ(ಜು,02): ಇಲ್ಲಿನ ಸಂಗಮ ಬಳಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 45 ವಿದ್ಯಾರ್ಥಿಗಳಿಗೆ ಉಚಿತ ಐಡಿ ಕಾರ್ಡ್ ನ್ನು ಮೊಗವೀರ ಯುವ ಸಂಘಟನೆ (ರಿ,), ಉಡುಪಿ ಜಿಲ್ಲೆ ಕುಂದಾಪುರ ಘಟಕದ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಘಟಕ ಅಧ್ಯಕ್ಷರಾದ ಚಂದ್ರಹಾಸ್ ಕೋಣಿ,ಮಾಜಿ ಅಧ್ಯಕ್ಷರಾದ. ರಮೇಶ್ ಟಿ ಟಿ. ,ಘಟಕದ ಹಾಲಿ ಕೋಶಾಧಿಕಾರಿ ಹಾಗೂ ನಿಯೋಜಿತ ಕಾರ್ಯದರ್ಶಿ ಮಾಧವ ಕುಂದಾಪುರ.,ನಿಯೋಜಿತ ಕೋಶಾಧಿಕಾರಿ.ವಿಜಯ ವಿಠ್ಠಲವಾಡಿ.,ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ಸುರೇಂದ್ರ ಬರೆಕಟ್ಟು […]
ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೇಟ್ ಲಿಮಿಟೆಡ್ :ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನೆ
ಬೈಂದೂರು(ಜೂ, 29): ಉದ್ಯಮಿ ಗೋವಿಂದ ಬಾಬು ಪೂಜಾರಿ ನೇತ್ರತ್ವದ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನೂತನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ ಜೂನ್, 29 ರಂದು ಬೈಂದೂರು ಸಮೀಪದ ಹೇರಂಜಾಲುವಿನಲ್ಲಿ ಜರುಗಿತು. ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘಟಕವನ್ನು ಉದ್ಘಾಟಿಸಿ ಗೋವಿಂದ ಪೂಜಾರಿ ಅವರ ಸಾಧನೆಯನ್ನು ಶ್ಲಾಘಸಿದರು. ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ […]
ಓಂ ಶ್ರೀ ಯೋಗ ಕೇಂದ್ರ ಬಸ್ರೂರು:ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ
ಬಸ್ರೂರು(ಜು,23): ಇಲ್ಲಿನ ಓಂ ಶ್ರೀ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೆ .ರಾಧಾಕೃಷ್ಣಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಿತ್ಯದ ಜೀವನದಲ್ಲಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು.2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90 ಪ್ರತಿಶತ ಹಾಗೂ ಅಧಿಕ ಅಂಕವನ್ನು ಗಳಿಸಿದಂತಹ ಸ್ಥಳೀಯ ಬಸ್ರೂರು ಗ್ರಾಮದ ಸಾಧಕ ವಿದ್ಯಾರ್ಥಿಗಳಾದ […]
ವಿಶ್ವ ರಕ್ತದಾನಿಗಳ ದಿನಾಚರಣೆ: ಸತೀಶ್ ಸಾಲಿಯನ್ ಮಣಿಪಾಲರಿಗೆ ಸನ್ಮಾನ
ಮಣಿಪಾಲ (ಜು ,14): ವಿಶ್ವ ರಕ್ತದಾನಿಗಳ ದಿನದಂದು ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಅವರು ರಕ್ತದಾನ ಅಭಿಯಾನದ ಸಮರ್ಪಣಾ ಕಾರ್ಯಕ್ಕಾಗಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ .), ಇದರ ಅಧ್ಯಕ್ಷರಾದ ಸತೀಶ್ ಸಾಲಿಯನ್ ಮಣಿಪಾಲ್ ರವರನ್ನು ಕೆಎಂಸಿ ಮಣಿಪಾಲ ಡೀನ್ ಡಾIಪದ್ಮರಾಜ್ ಹೆಗ್ಡೆ ಯವರು ಗೌರವಿಸಿದರು. ಕುಂದಾಪುರದ ಸಹಾಯಕ ಕಮಿಷನರ್ ಶ್ರೀಮತಿ ರಶ್ಮಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ವೈದ್ಯಕೀಯ ಅಧೀಕ್ಷಕರಾದ ಡಾIಅವಿನಾಶ್ ಶೆಟ್ಟಿ,,ಬ್ಲಡ್ ಸೆಂಟರ್ ಕೆಎಂಸಿ ಮಣಿಪಾಲ […]
ಗಂಗೊಳ್ಳಿ: ರಕ್ತದಾನ ಶಿಬಿರ
ಗಂಗೊಳ್ಳಿ (ಜು,14): ಇಲ್ಲಿನ ಯಕ್ಷಭಿಮಾನಿ ರಕ್ತದಾನಿ ಬಳಗ ಗಂಗೊಳ್ಳಿ, ಮೀನುಗಾರರ ಸಂಘ ರಿ. ಗಂಗೊಳ್ಳಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಿ. ಕುಂದಾಪುರ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜೂನ್ .11 ರಂದು ವಿಜಯ ವಿಠಲ ಸಭಾಭವನದಲ್ಲಿ ನಡೆಯಿತು. ಶಿಬಿರದಲ್ಲಿ 69 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.










