ಕುಂದಾಪುರ(ಜು,3): ಇಲ್ಲಿನ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಕುಮಾರಿ ಪೂರ್ವಿಕಾ ಇವರು ಪ್ರಭಾತ್ ಕಲಾವಿದರ ತಂಡ ಗೋಪಿನಾಥ್ ನ್ಯಾಸ-2023 ವತಿಯಿಂದ ಬೆಂಗಳೂರಿನಲ್ಲಿಆಯೋಜಿಸಲ್ಪಟ್ಟ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸ್ಪರ್ಧೆಗಳ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪರ್ಯಾಯ ಪಾರಿತೋಷಕವನ್ನು ಗಳಿಸಿರುತ್ತಾರೆ. ಕು.ಪೂರ್ವಿಕಾ ಇವರು ವಿದುಷಿ ಪ್ರವಿತ ಮತ್ತು ಅಶೋಕ್ ಕುಮಾರ್ ರವರ ಪುತ್ರಿ. ಪೂರ್ವಿಕಾಳ ಈ ಅಮೋಘ ನೃತ್ಯಸಾಧನೆಯನ್ನು ಮೆಚ್ಚಿ, […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ: ವಾರ್ಷಿಕ ಕ್ರೀಡೋತ್ಸವ
ಬ್ರಹ್ಮಾವರ(ಜು,03): ಕ್ರೀಡೆಯಿಂದ ಕೇವಲ ಮನೋರಂಜನೆ ಮಾತ್ರ ದೊರೆಯಲಾರದು ,ಅವುಗಳಿಂದ ದೈಹಿಕ ಶಕ್ತಿ, ಮಾನಸಿಕ ಶಾಂತಿ ,ವೃದ್ಧಿಯಾಗುವುದು ಎಂಬ ಉದ್ದೇಶ ಹೊಂದಿರುವ ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾರ್ಷಿಕ ಕ್ರೀಡೋತ್ಸವ ಬ್ರಹ್ಮಾವರದ ಸರಕಾರಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಇತ್ತೀಚೆಗೆ ಜರುಗಿತು. ಅತಿಥಿಗಳಾಗಿ ಶ್ರೀ ಮೊಹಮ್ಮದ್ ಆಸಿಫ್ ಜನರಲ್ ಮ್ಯಾನೇಜರ್ ಟವೆಲ್ ಪ್ರಾಜೆಕ್ಟ್ಕಕಂಪೆನಿ ಮಸ್ಕತ್, ಶ್ರೀಮತಿ ಫಾಝಿಯ ಹಾಗೂ ಬಿ ಟಿ ನಾಯಕ್ ನಿವೃತ್ತ ಉಪಪ್ರಾಂಶುಪಾಲರು ಸರಕಾರಿ ಬೋರ್ಡ್ […]
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಲ್ಯಾಣಪುರ – ಉಡುಪಿ: ಕ್ರಿಯೇಟಿವ್ ಸಮಾಗಮ
ಉಡುಪಿ(ಜು,3): ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇವರ ಸಹಭಾಗಿತ್ವದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಲ್ಯಾಣಪುರ ಉಡುಪಿಯಲ್ಲಿ ಜೂ,30 ರ ಶುಕ್ರವಾರದಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ,ಕ್ರೀಡಾ ಸಂಘಟನೆಗಳ ಉದ್ಘಾಟನೆ ನಿಮಿತ್ತ “ಕ್ರಿಯೇಟಿವ್ ಸಮಾಗಮ” ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರುಗಳಲ್ಲಿ ಓರ್ವರಾದ ಶ್ರೀ ಅಶ್ವತ್ ಎಸ್ ಎಲ್ ರವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು. “ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಬಿ ಸಿ ಎ ವಿಭಾಗದಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ (ಜು ,02): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗಳಿಂದ ವಿಸ್ತರಣಾ ಚಟುವಟಿಕೆಯನ್ನು ನಿವೇದಿತಾ ಪ್ರೌಢಶಾಲೆ ಬಸ್ರೂರಿನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗಣಕಯಂತ್ರ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಂಪ್ಯೂಟರ್ ಹೇಗೆ ತನ್ನ ಕಾರ್ಯ ನಿರ್ವಹಿಸುತ್ತದೆ ಮತ್ತು ಕಂಪ್ಯೂರ ನ ಅಗತ್ಯತೆ ಮತ್ತು […]
ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ: ಪ್ರಿ ಪ್ಲೇಸ್ಮೆಂಟ್ ಟಾಕ್
ಕುಂದಾಪುರ (ಜೂನ್ 17): ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಅಂತಿಮ ವರ್ಷದ ಬಿಸಿಎ ಮತ್ತು ಬಿಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Smart Sight Innovations ವತಿಯಿಂದ ಕಾಲೇಜಿನಲ್ಲಿ ಪ್ರಿ ಪ್ಲೇಸ್ಮೆಂಟ್ ಟಾಕ್ ನೆರವೇರಿತು. Smart Sight Innovations ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ರಾಘವೇಂದ್ರ ಆಚಾರ್ಯ, ಶ್ರೀ ಶ್ರೀವತ್ಸ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ […]
ಶ್ರೀ ಮೂಕಾಂಬಿಕಾ ದೇವಳದ ಪಿ.ಯು ಕಾಲೇಜು ಕೊಲ್ಲೂರು:ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸನ್ಮಾನ
ಕೊಲ್ಲೂರು(ಜು,2): ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜಿನಲ್ಲಿ 2022-23ನೇ ಸಾಲಿನ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 42 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ವಹಿಸಿ ವಿದ್ಯಾರ್ಥಿಗಳು ಸೋಲು ಗೆಲವುವನ್ನು ಸಮಾನವಾಗಿ ಸ್ವೀಕರಿಸಿ ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ನಡತೆ ಮೈಗೂಡಿಸಿಕೊಳ್ಳುವುದರ ಜೊತೆಗೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೆಕೆಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ […]
ಸಂತ ಮೇರಿ ಮಹಾವಿದ್ಯಾಲಯ ಶಿರ್ವ: ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆ
ಶಿರ್ವ9 ಜು.02): ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಅಂತಾರಾಷ್ಟ್ರೀಯ ಮಾದಕ ವ್ಯಸನ- ಅಕ್ರಮ ಸಾಗಾಟ ವಿರೋಧಿ ದಿನಾಚರಣೆಯನ್ನು ಏರ್ಪಡಿಸಲಾಯಿತು. ಇಂದಿನ ಜಗತ್ತಿನಲ್ಲಿ ಯುವಕರು ಅಪಾಯಕಾರಿ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ ಮತ್ತು ಇದು ಜೀವಮಾನದ ಶಿಕ್ಷೆಗೆ ಕಾರಣವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸಿದ […]
ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ :ರಕ್ಷಕ –ಶಿಕ್ಷಕ ಸಭೆ
ಕುಂದಾಪುರ(ಜು.1): ಇಲ್ಲಿನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಯ ಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಭೆ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಹಿಸಿಸಿದ್ದರು. ಹಣಕ್ಕಿಂತ ಮಿಗಿಲಾದ ಗುಣವಂತರಾದರೆ ಎಲ್ಲರೂ ನಮ್ಮವರೆ . ಮಕ್ಕಳು ಹಣವಂತರಾಗದೆ ಗುಣವಂತರಾಗಲಿ ಎಂದು ಆಶಿಸಿ ಶಾಲಾ ಗುಣಮಟ್ಟದ ಬಗ್ಗೆ […]
ರೋಟರಿ ಕ್ಲಬ್ ಅಧ್ಯಕ್ಷರಾಗಿ ಎಂ ನಾಗೇಂದ್ರ ಪೈ ಆಯ್ಕೆ
ಗಂಗೊಳ್ಳಿ(ಜೂ,30) : ಗಂಗೊಳ್ಳಿಯ ರೋಟರಿ ಕ್ಲಬ್ ನ 2023 -24 ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿಯ ಖ್ಯಾತ ಉದ್ಯಮಿ ಎಂ ನಾಗೇಂದ್ರ ಪೈ ಆಯ್ಕೆಯಾಗಿರುತ್ತಾರೆ. ವಿವಿಧ ಸಂಘ ಸಂಸ್ಥೆಗಳ ಸಕ್ರಿಯ ಸದಸ್ಯರಾಗಿರುವ ಇವರು ಗಂಗೊಳ್ಳಿ ಭಾಗದಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ : ವಿಶೇಷ ಉಪನ್ಯಾಸ
ಕುಂದಾಪುರ(ಜೂ,29): ದೇಶದಾದ್ಯಂತ ಡ್ರಗ್ಸ್, ಮಧ್ಯಪಾನ, ಧೂಮಪಾನ ಮುಂತಾದ ಮಾದಕ ವ್ಯಸನಗಳಿಂದ ಮುಕ್ತವಾದ ಸ್ವಚ್ಛ ವ್ಯಕ್ತಿತ್ವ, ಸ್ವಚ್ಛ ಕ್ಯಾಂಪಸ್ಗಳ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿ ಯುವ ಜನಾಂಗದ ಪಾತ್ರ ನಿರ್ಣಾಯಕವಾದುದು. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ಮೆದುಳಿನಲ್ಲಿ ಬದಲಾವಣೆ ತಂದು ಅಪರಾಧಿ ಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಧಾಕರ್ […]










