ಕುಂದಾಪುರ( ಜ,02): ಶಿಸ್ತು, ಸಮಯಪಾಲನೆ, ಶ್ರಮದಾನ, ಊಟೋಪಚಾರ, ಶೈಕ್ಷಣಿಕ, ಸಾಂಸ್ಕೃತಿಕ ಈ ಎಲ್ಲಾ ವಿಚಾರಗಳನ್ನು ಸವಿಸ್ತಾರವಾಗಿ ಕಲಿಯುವ ವೇದಿಕೆಯಾದ ಎನ್.ಎಸ್.ಎಸ್. ಗರಡಿಮನೆಯಂತೆ ವಿದ್ಯಾರ್ಥಿಗಳನ್ನು ಪಳಗಿಸುವುದು ಈ ಎನ್.ಎಸ್.ಎಸ್. ವಾರ್ಷಿಕ ಶಿಬಿರದ ವಿಶೇಷತೆ ಎಂದು ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಪ್ರಸಾದ್ ಪಿ. ಬೈಂದೂರು ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ‘ಎನ್.ಎಸ್.ಎಸ್. ಎಂಬ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ವಿದ್ಯಾರ್ಥಿಗಳಿಗೆ ಸೂಕ್ತ ಕಾನೂನು ಮಾಹಿತಿ ಇದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ- ಶ್ರೀ ವಿಶ್ವನಾಥ ಶೆಟ್ಟಿ ಗಂಟಿಹೊಳೆ
ಕುಂದಾಪುರ( ಜ,3): ವಿದ್ಯಾರ್ಥಿಗಳಿಗೆ ಸೂಕ್ತ ಕಾನೂನು ಮಾಹಿತಿ ಇದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಪೂರ್ಣವಾದ ಕಾನೂನಿನ ಅರಿವು ಪಡೆಯಲು ಸಾಧ್ಯವಿಲ್ಲ ಆದರೂ ನಿಯಮಿತ ಕಾನೂನಿನ ಅರಿವು ಕ್ಲಪ್ತ ಸಮಯದಲ್ಲಿ ನೀಡುವುದು ಅವಶ್ಯಕ ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಂದಾಪುರದ ನ್ಯಾಯವಾದಿಗಳಾದ ಶ್ರೀ ವಿಶ್ವನಾಥ ಶೆಟ್ಟಿ ಗಂಟಿಹೊಳೆ ಹೇಳಿದರು. ಇವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ […]
ಡಾ| ಬಿ. ಬಿ.ಹೆಗ್ಡೆ ಕಾಲೇಜು: ಕೆಸರಲ್ಲೊoದಿನ – ಕಂಬಳ ಅಣಕು ಪ್ರದರ್ಶನ
ಕುಂದಾಪುರ( ಜ,03): ವಿದ್ಯಾರ್ಥಿ ಸಮುದಾಯಕ್ಕೆ ನೆಲಪರ ಬದುಕಿನ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಸ.ಹಿ.ಪ್ರಾ. ಶಾಲೆ, ಬವಳಾಡಿಯಲ್ಲಿ ನಡೆದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರೀ ವಿವೇಕಾನಂದ ಯುವಕ ಮಂಡಲ, ಗಂಟಿಹೊಳೆ, ಬವಳಾಡಿ, ಶ್ರೀ ಜಟ್ಟಿಗೇಶ್ವರ ಕಲಾ ಮತ್ತು ಕ್ರೀಡಾ ಸಂಘ, ಬವಳಾಡಿ ಇವರ ಸಹಯೋಗದೊಂದಿಗೆ ‘ಕೆಸರಲ್ಲೊಂದಿನ’ ಮತ್ತು ‘ಕಂಬಳ ಅಣಕು ಪ್ರದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಬಿಜೂರು ಗ್ರಾಮ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಹಿoದಿ ಸಂಘ ಉದ್ಘಾಟನೆ
ಕುಂದಾಪುರ (ಜ,03) : ಆಡಳಿತ ಭಾಷೆಯಾಗಿ ಮಾನ್ಯತೆ ಪಡೆದ ಹಿಂದಿ ಭಾಷೆ ದೇಶದಲ್ಲಷ್ಟೇ ಅಲ್ಲದೇ, ವಿದೇಶಗಳಲ್ಲಿಯೂ ವ್ಯವಹಾರದ ಸಂದರ್ಭದಲ್ಲಿ ಅತಿಮುಖ್ಯ ಭಾಷೆಯಾಗಿ ಬಳಸಲ್ಪಡುತ್ತದೆ. ಹಿಂದಿ ಭಾಷೆಯನ್ನು ಕಲಿಯುವ ಮೂಲಕ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಿ ಎಂದು ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಜಯಶೀಲ ಪೈ ಹೇಳಿದರು. ಇವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಸಂಘ ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭ ಕಾಲೇಜಿನ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: ನಿರ್ಮಲ ನಗರ ಅಭಿಯಾನ
ಕುಂದಾಪುರ:(ಜ,02): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ‘ನಿರ್ಮಲ ನಗರ ಅಭಿಯಾನ’ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉಪ್ಪುಂದದ ಶಾಲೆಬಾಗಿಲಿನಿಂದ ಬಿಜೂರಿನ ಗ್ರಾಮ ಪಂಚಾಯತ್ ವರೆಗೆ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ನಗರವನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವ ಕುರಿತು ಘೋಷವಾಕ್ಯಗಳನ್ನು ಹೇಳುವುದರ ಜೊತೆಗೆ ಎನ್.ಎಸ್.ಎಸ್. ಸ್ವಯಂ ಸೇವಕರು ಸ್ವಚ್ಛತೆಯಲ್ಲಿ ತೊಡಗಿದರು. ಲಯನ್ಸ್ ಕ್ಲಬ್ ನಾವುಂದದ ಕಾರ್ಯದರ್ಶಿ […]
ಗಂಗೊಳ್ಳಿ: ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಗಂಗೊಳ್ಳಿ (ಜ.02): ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ಮತ್ತು ಸಾಹಿತ್ಯ ತಂಗುದಾಣ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯದ ಪದವಿಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಮಹಿಳಾ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ನಮ್ಮ ಅರಿವು’ ಎನ್ನುವ ವಿಷಯದ ಕುರಿತಂತೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪವಿತ್ರ ಎನ್ ಮೊಗೇರಿ ಮತ್ತು ನಿಶಾ ಬಿ ಪೂಜಾರಿ […]
ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ ಜಾಗ್ರತಿ ಕಾರ್ಯಕ್ರಮ
ಕಾರ್ಕಳ( ಜ,02): ಯುವಕರು ಮಾದಕ ವ್ಯಸನಗಳಿಗೆ ದಾಸರಾಗಬಾರದು,ಸಮಾಜದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಬೇಕು ಮತ್ತು ವ್ಯಸನ ಮುಕ್ತ ಜನಾಂಗ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಜಾಗ್ರತರಾಗಿರಬೇಕು. ಗಾಂಜಾ, ಅಫೀಮಿನಂತಹ ಮಾದಕ ದ್ರವ್ಯಗಳು ಭವಿಷ್ಯವನ್ನೇ ನಾಶಪಡಿಸುತ್ತದೆ .ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳೇ ಈ ದಂಧೆಯಲ್ಲಿರುವವರ ಗುರಿಯಾಗಿದ್ದಾರೆ. ಸುಲಭವಾಗಿ ಹಣ ಗಳಿಸುವ ಕಾರ್ಯಕ್ಕೆ ಮನಸ್ಸು ಮಾಡಿ ಸಿಕ್ಕಿ ಬಿದ್ದರೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಯುವಕರು ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕಾರ್ಕಳ ಎಂದು ಕಾರ್ಕಳ ನಗರ […]
ಆರ್. ಎನ್. ಶೆಟ್ಟಿ ಪಿ ಯು ಕಾಲೇಜು: ಭರತನಾಟ್ಯದಲ್ಲಿ ರಾಜ್ಯಮಟ್ಟದ ಸಾಧನೆ
ಕುಂದಾಪುರ( ಜ,01): ಇಲ್ಲಿನ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂರ್ವಿಕಾ ರಾಜ್ಯಮಟ್ಟದ ಕಲೋತ್ಸವ 2022 ಸ್ಪರ್ಧೆಯ ಭರತನಾಟ್ಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನಗಳಿಸಿರುತ್ತಾಳೆ. ಪೂರ್ವಿಕಾಳ ಈ ಕಲಾಸಾಧನೆಗೆ ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ ಯವರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿದ್ದಾರೆ.
ಕ್ರಿಯೇಟಿವ್ ಪಿ.ಯು. ಕಾಲೇಜು ವಾರ್ಷಿಕೋತ್ಸವ ಆವಿರ್ಭವ್ – 2022
ಕಾರ್ಕಳ (ಡಿ. 26); ಕ್ರಿಯೇಟಿವ್ನಂತಹ ವಿದ್ಯಾಸಂಸ್ಥೆಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶ ಕಲ್ಪಿಸುವುದರ ಜೊತೆಗೆ ಪ್ರತಿಭೆಗಳಿಗೆ ಪೂರಕವಾದ ಕಲಿಕಾ ವಾತಾವರಣವನ್ನು ಕಲ್ಪಿಸುವುದು ನಿಜಕ್ಕೂ ಶ್ಲಾಘನೀಯ ಎಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ ಕ್ರಿಯೇಟಿವ್ ಆವಿರ್ಭವ್ -2022 ರ ವಾರ್ಷಿಕೋತ್ಸವದಲ್ಲಿ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಉಚಿತ ಶಿಕ್ಷಣ ವ್ಯವಸ್ಥೆ ʼಕ್ರಿಯೇಟಿವ್ ಹೊಂಗಿರಣʼ […]
ಡಾ|ಬಿ. ಬಿ. ಹೆಗ್ಡೆ ಕಾಲೇಜು: ರೋವರ್ಸ ಮತ್ತು ರೇಂಜರ್ಸ್ ವಾರ್ಷಿಕ ಚಟುವಟಿಕೆ ಉದ್ಘಾಟನೆ
ಕುಂದಾಪುರ(ಡಿ,23): ರೋವರ್ಸ ಮತ್ತು ರೇಂಜರ್ಸ್ ಎನ್ನುವುದು ಹೊರಾಂಗಣ ಕೌಶಲ್ಯ ಆಧಾರಿತ ಮತ್ತು ಸಾಹಸ ಚಟುವಟಿಕೆಗಳ ಆಧಾರಿತ ಘಟಕವಾಗಿದ್ದು, ಕಾನೂನು ಪಾಲಿಸುವ ನಾಗರೀಕರಾಗಲು, ಪ್ರಕೃತಿಯ ರಕ್ಷಣೆ, ಮಾನವೀಯತೆಯ ಸೇವೆ ಮೈಗೂಡಿಸಿಕೊಳ್ಳಲು ರೋವರ್ಸ ಮತ್ತು ರೇಂಜರ್ಸ್ ಘಟಕದಿಂದ ಸಾದ್ಯವಿದೆ ಎಂದು ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಶ್ರೀಮತಿ ಜ್ಯೋತಿ ಆಚಾರ್ಯ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರೋವರ್ಸ […]










