ತೆಕ್ಕಟ್ಟೆ (ಏ, 24) : ಕೋವಿಡ್ ಕಾರಣದಿಂದಾಗಿ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲ ಆಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶಾಲೆಯ ಮುಖ ನೋಡದೆ ಅದೆಷ್ಟು ಅದೆಷ್ಟು ಅದೆಷ್ಟು ತಿಂಗಳುಗಳು ಕಳೆದು ಹೋಗಿದೆ. ಎಲ್ಲವೂ ಸರಿ ಹೋಗಬಹುದು,ಕೋವಿಡ್ ನಿಯಂತ್ರಣಕ್ಕೆ ಬರಬಹುದು ಅನ್ನುವ ಆಲೋಚನೆ ಯಲ್ಲಿದ್ದ ನಮಗಿಂದು ಕರೋನ ಎರಡನೇ ಅಲೆ ಬೆಚ್ಚಿಬೀಳಿಸಿದೆ.ಅದೆಷ್ಟೋ ಸರಕಾರಿ ಪ್ರಾಥಮಿಕ ಶಾಲೆಗಳು ಕರೋನಾ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗದೆ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಮಂಗಳೂರು ವಿ. ವಿ. ನೂತನ ಕುಲಸಚಿವರಾಗಿ ಡಾ. ಕಿಶೋರ್ ಕುಮಾರ್ ಸಿ. ಕೆ. ನೇಮಕ
ಮಂಗಳೂರು (ಎ. 21): ಮಂಗಳೂರು ವಿ. ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೆಶಕರಾದ ಡಾ. ಕಿಶೋರ್ ಕುಮಾರ್ ಸಿ. ಕೆ. ರವರನ್ನು ಕರ್ನಾಟಕ ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಮಹೇಶ್ ಆರ್. ಹೊರಡಿಸಿದ ಆದೇಶದ ಮೇರೆಗೆ ಮಂಗಳೂರು ವಿ. ವಿ. ಯ ಅವರು ನೂತನ ಕುಲಸಚಿವರಾಗಿ (ಆಡಳಿತ) ನೇಮಕ ಮಾಡಲಾಗಿದೆ. ಪ್ರಭಾರ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪರೀಕ್ಷಾಂಗ ಕುಲಸಚಿವ ಪ್ರೋ. ಪಿ. ಎಲ್. ಧರ್ಮ ರವರು ನೂತನ […]
ರಾಜ್ಯದಾದ್ಯಂತ ನೈಟ್ ಕರ್ಪ್ಯೂ & ವೀಕೆಂಡ್ ಕರ್ಪ್ಯೂ ಜಾರಿ : ಶಾಲಾ ಕಾಲೇಜುಗಳು ಬಂದ್
ಬೆಂಗಳೂರು (ಎ. 20): ಕೋವಿಡ್ ಎರಡನೇ ಅಲೆ ನಿಯಂತ್ರಣ ಮೀರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಪ್ರಿಲ್ 21ರಾತ್ರಿ 9 ಗಂಟೆಯಿಂದ ರಿಂದ ಮೇ 4 ಬೆಳಗ್ಗೆ 6 ಗಂಟೆಯ ವರೆಗೆ ಅನ್ವಯವಾಗುವಂತೆ ನಿಯಂತ್ರಣ ಕ್ರಮಗಳ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಎಪ್ರಿಲ್ 21ರಿಂದ ಪ್ರತಿ ದಿನ ನೈಟ್ ಕರ್ಪ್ಯೂ ಜಾರಿಯಲ್ಲಿರಲಿದ್ದು, ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಪ್ಯೂ ಇರಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ […]
ಎಪ್ರಿಲ್ 18 ಕ್ಕೆ ನಡೆಯ ಬೇಕಿದ್ದ NEET-PG 2021 ಪರೀಕ್ಷೆ ಮುಂದೂಡಿಕೆ
ಬೆಂಗಳೂರು (ಏ, 16) : ವೈದ್ಯಕೀಯ ಕೋರ್ಸ್ಗಳ 2021ನೇ ಸಾಲಿನ ಪ್ರವೇಶಕ್ಕಾಗಿ ಎಪ್ರಿಲ್ 18 ಕ್ಕೆ ನಡೆಯ ಬೇಕಿದ್ದ NEET-PG 2021 ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆ ಯನ್ನು ಕೋವಿಡ್ ಕಾರಣದಿಂದಾಗಿ ಮಂದೂಡಲಾಗಿದೆ . ಮೂಂದುಡಲ್ಪಟ್ಟ ಪರೀಕ್ಷಾ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್.ಟಿ.ಎ.)ಗೆ ಕೇಂದ್ರ ಸರ್ಕಾರ ನೀಡುವ ಸಲಹೆ ಮೇರೆಗೆ ತಿಳಿಸಲಾಗುವುದು.
ಏಪ್ರಿಲ್ 25 ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET)
ಮೈಸೂರು (ಏ, 16): ಮೈಸೂರು ವಿಶ್ವವಿದ್ಯಾನಿಲಯ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.) ಇದೇ ಎಪ್ರಿಲ್ 25 ರ ಭಾನುವಾರದಂದು ನಡೆಯಲಿದೆ. ಈ ಹಿಂದೆ ಏಪ್ರಿಲ್11 ರಂದು ನಡೆಯಬೇಕಿದ್ದ ಕೆ.ಎಸ್.ಇ.ಟಿ. (KSET)ಪರೀಕ್ಷೆಯನ್ನು ಕಾರಣಾಂತರಗಳಿಂದಮುಂದೂಡಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ ನೊಂದಾಯಿತ ಅಭ್ಯರ್ಥಿಗಳು ಈ ಕೆಳಗಿನ ಕೆಸೆಟ್ ವೆಬ್ಸೈಟ್ನ್ನು http://kset.uni-mysore.ac.in ಸಂಪರ್ಕಿಸಲು ತಿಳಿಸಲಾಗಿದೆ.
ಬಂಟಕಲ್ ಕಾಲೇಜು : ವಿದ್ಯಾರ್ಥಿಗಳಿಂದ ಕೋವಿಡ್ ಲಸಿಕಾ ಮಾಹಿತಿ ಅಭಿಯಾನ
ಉಡುಪಿ (ಏ, 15): ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಕೋವಿಡ್ ಲಸಿಕಾ ಮಾಹಿತಿ ಅಭಿಯಾನದಲ್ಲಿ ಪಾಲ್ಗೊಂಡರು. ಸಂಸ್ಥೆಯ ವಿದ್ಯಾರ್ಥಿಗಳು ಬಂಟಿಕಲ್ ಕಾಲೇಜಿನ ಆಸುಪಾಸು, ಹಾಗೂ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ 45ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ತೆಗೆದುಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ವಿವರಿಸಿ, ಅವರುಗಳಲ್ಲಿ ಜಾಗೃತಿಯನ್ನು ಮೂಡಿಸಿ, ಲಸಿಕೆ ಪಡೆಯಲು ಜನರಲ್ಲಿ ಇರುವ […]
ಮೂಡ್ಲಕಟ್ಟೆ ಎಂ ಐ ಟಿ: ಸಂಸ್ಥಾಪಕರ ದಿನಾಚರಣೆ
ಕುಂದಾಪುರ (ಏ, 15): ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸಿದ್ಢಾರ್ಥ ಜೆ ಶೆಟ್ಟಿ ಯವರು ಸಿಬ್ಬಂದಿಗಳ ಜೊತೆ ಕಾಲೇಜಿನ ಸಂಸ್ಥಾಪಕರಾದ ಮಾಜಿ ಸಂಸದ ಐ.ಎಂ ಜಯರಾಮ ಶೆಟ್ಟಿಯವರ ಪುತ್ಹಳಿಗೆ ಹಾರಾರ್ಪಣೆ ಮಾಡಿ ಗೌರವವನ್ನು ಸಲ್ಲಿಸಿದರು. ಸಭಾ ಕಾರ್ಯಕ್ರಮದ ಮೊದಲು ಸಂಸ್ಥಾಪಕರ ಸಾಧನೆ ಮತ್ತು ಸೇವೆಗಳ ಸಾರಾಂಶ ವಿರುವ ವಿಡಿಯೊವನ್ನ ಪ್ರದರ್ಶಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ […]
ಸಾಮಾಜಿಕ ಮೌಲಿಕತೆಯ ಮಹಾನ್ ಪ್ರತಿಪಾದಕ ಅಂಬೇಡ್ಕರ್ : ಚೇತನ್ ಶೆಟ್ಟಿ ಕೋವಾಡಿ
ಕುಂದಾಪುರ(ಏ,14) : ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ ಹಾಗೂ ಪರಿಶಿಷ್ಟ ಜಾತಿ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರ 130 ನೇ ಹಾಗೂ ಡಾ ಬಾಬು ಜಗಜೀವನ್ ರಾಮ್ ರವರ 114ನೇ ಜಯಂತಿ ಆಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತೆ […]
ಮಂಗಳೂರು ವಿ. ವಿ. ಸ್ನಾತಕೋತ್ತರ ಪರೀಕ್ಷೆಯಲ್ಲಿ ಕುಂದಾಪುರದ ಸಂದೇಶ್ ಶೆಟ್ಟಿ ನಾಲ್ಕನೇ ರ್ಯಾಂಕ್
ಮಂಗಳೂರು (ಏ, 13) : ಮಂಗಳೂರು ವಿಶ್ವವಿದ್ಯಾನಿಲಯ 2019-20 ರಲ್ಲಿ ನಡೆಸಿದ ಎಮ್.ಬಿ.ಎ. ಸ್ನಾತಕೋತ್ತರ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಎಸ್.ಡಿ.ಎಮ್. ಉದ್ಯಮಾಡಳಿತ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕುಂದಾಪುರ ಮೂಲದ ಸಂದೇಶ್ ಶೆಟ್ಟಿ ನಾಲ್ಕನೇ ರ್ಯಾಂಕ್ ಪಡೆದಿರುತ್ತಾರೆ.ಇವರು ಕುಂದಾಪುರ ತಾಲೂಕಿನ ಇಡೂರು-ಕುಂಜ್ಞಾಡಿ ಗ್ರಾಮದ ನಿವಾಸಿ ಶ್ರೀಮತಿ ಮುಕಾಂಬು ಮತ್ತು ಪ್ರಭಾಕರ ಶೆಟ್ಟಿಯವರ ಪುತ್ರ.
ಏಪ್ರಿಲ್ 12 ರಂದು ನಡೆಯ ಬೇಕಿದ್ದ ಮಂಗಳೂರು ವಿ. ವಿ. ಪದವಿ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ
ಮಂಗಳೂರು (ಏ, 10) : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರದಿಂದಾಗಿ ಸಾರಿಗೆ ವ್ಯವಸ್ಥೆಯಲ್ಲಾದ ವ್ಯತ್ಯಯದಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಏಪ್ರಿಲ್ 12 ರಂದು ನಿಗದಿಪಡಿಸಿದ್ದ ಎಲ್ಲಾ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ. ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ನಿಗದಿ ಪಡಿಸಿ ಶೀಘ್ರದಲ್ಲಿ ಮುಂದೆ ತಿಳಿಸಲಾಗುವುದು, ಉಳಿದ ಪರೀಕ್ಷೆಗಳು ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ನಡೆಯುತ್ತದೆ ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವರಾದ ಪ್ರೋ. […]