ಕುಂದಾಪುರ(ಫೆ.17): ಅರುಣ್ ಮಧ್ಯಸ್ಥ ಮತ್ತು ಲತಾ ಮಧ್ಯಸ್ಥರ ಪ್ರೀತಿಯ ಕುವರಿ ಕುಂದಾಪುರದ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಈಕೆ ತನ್ನ ಎಳೆಯ ವಯಸ್ಸಿನಲ್ಲಿಯೇ ಮಹತ್ತರವಾದ ಸಾಧನೆಯನ್ನು ಮಾಡಿ ಹಲವರ ಪ್ರಶಂಸೆಗೆ ಪಾತ್ರಲಾಗಿದ್ದಾಳೆ. ಕರಾವಳಿ ಭಾಗದಲ್ಲಿಯ ಹಲವು ಗುರುಗಳಿಂದ ಯೋಗಾಭ್ಯಾಸವನ್ನು ಮಾಡಿರುವುದು ಡಾ. ನವೀನ್ ಕುಮಾರ್, ಕೆ ಆರ್ ವಿಷ್ಣು ಪ್ರಸಾದ್ ಶೆಟ್ಟಿ, ರಂಜಿತ್ ಜಿಡಿ ಹಾಗೂ ಶ್ರೀ ಹರಿ ಅಯ್ಯಂಗಾರ್ ರವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದಾಳೆ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಎಚ್.ಎಮ್.ಎಮ್, ವಿ.ಕೆ.ಆರ್ ಶಾಲೆ: ಶಿಕ್ಷಕ ಪುನಶ್ಚೇತನ ಕಾರ್ಯಾಗಾರ
ಕುಂದಾಪುರ (ಫೆ.15) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಶಿಕ್ಷಕರಿಗಾಗಿ “ಕಲಿಕಾ ನ್ಯೂನ್ಯತೆಯ ಕಾರಣಗಳು” ಎಂಬ ವಿಷಯಾಧಾರಿತ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ ಫೆಬ್ರವರಿ 13, ಮಂಗಳವಾರದಂದು ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಕೇರಳದ, ಕೊಚ್ಚಿನ್ನಲ್ಲಿ ಮಕ್ಕಳ ಮನಶಾಸ್ತ್ರಜ್ಞರು ಮತ್ತು ಹಿರಿಯ ಸಲಹೆಗಾರರಾಗಿರುವ ಡಾ. ಫಿಲಿಪ್ ಜಾನ್ ಆಗಮಿಸಿ, ಮಕ್ಕಳಲ್ಲಿ […]
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆ: ರಾಜ್ಯಮಟ್ಟದ ಚೆಸ್ ನಲ್ಲಿ ಪ್ರಥಮ
ಕುಂದಾಪುರ (ಫೆ.16) : ಚಾಣಾಕ್ಷ ಚೆಸ್ ಸ್ಕೂಲ್, ಶಿವಮೊಗ್ಗ ಮತ್ತು ಮೌಂಟ್ ಕ್ಯಾರಮಲ್ ಸ್ಕೂಲ್ ಮತ್ತು ಶ್ರೀ ಶ್ರೀ ಟ್ರಸ್ಟ್ ಸಹಭಾಗಿತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆ – 2024ರಲ್ಲಿ ಕುಂದಾಪುರದ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೆಟ್ ಭಾಗವಹಿಸಿ ಬಾಲಕರ 7ರ ವಯೋಮಿತಿಯ ವಿಭಾಗದಲ್ಲಿ 7ರಲ್ಲಿ 4 ಪಾಯಿಂಟ್ ಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ . ಇವರನ್ನು […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಮೊಳಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕುಂದಾಪುರ (ಫೆಬ್ರವರಿ 15): ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಳಹಳ್ಳಿಯಲ್ಲಿ ನಡೆಯುತ್ತಿರುವ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ-ಉಡುಪಿ, ಲಯನ್ಸ್ ಕ್ಲಬ್ ಶಿವಶಾಂತಿ ಮೊಳಹಳ್ಳಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಪ್ರಥಮ […]
ಡಾIಬಿ.ಬಿ.ಹೆಗ್ಡೆ ಕಾಲೇಜು: ತರಬೇತಿ ಕಾರ್ಯಕ್ರಮ
ಕುಂದಾಪುರ (ಫೆ.05) : ಇಲ್ಲಿನ ಪ್ರತಿಷ್ಠಿತ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವೃತ್ತಿ ಮಾರ್ಗದರ್ಶನ ವಿಭಾಗವು, ಐಸಿಟಿ ಅಕಾಡೆಮೆಯ ಮತ್ತು ಪೇ ಪಾಲ್ ಇಂಡಿಯಾ ಇದರ ಸಹಯೋಗದೊಂದಿಗೆ 15 ದಿನಗಳ AWS ಸರ್ಟಿಫೈಡ್ ಕ್ಲೌಡ್ ಪ್ರಾಕ್ಟೀಷನರ್ ಕೋರ್ಸ್ ಮತ್ತು ಸಾಫ್ಟ್ ಸ್ಕಿಲ್ಸ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾರೀಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಸುರೇಶ್ ಶೆಟ್ಟಿ ವೈ. ಅವರು […]
ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ. ಕೆ. ಆರ್ ಶಾಲೆಯಲ್ಲಿ ಗ್ರಾಂಡ್ ಪೇರೆಂಟ್ಸ್ ಡೇ
ಕುಂದಾಪುರ (ಫೆ.7): ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ. ಕೆ. ಆರ್ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ, ಎಲ್.ಕೆ.ಜಿ, ಯು. ಕೆ. ಜಿ ಮತ್ತು 2ನೇ ತರಗತಿಯ ವಿದ್ಯಾರ್ಥಿಗಳ ಗ್ರಾಂಡ್ ಪೇರೆಂಟ್ಸ್ ಡೇ ಇತ್ತೀಚೆಗೆ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೋಟೇಶ್ವರದ ಕೆನರಾ ಕಿಡ್ಸ್ ಪ್ರಾಂಶುಪಾಲೆ ಮತ್ತು ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ವಿನಂತಿ ಎಸ್ ಶೆಟ್ಟಿ ಆಗಮಿಸಿ, ಮಕ್ಕಳ ಜೀವನದಲ್ಲಿ ಅಜ್ಜಿ – […]
ಕ್ರಿಯೇಟಿವ್ ಪುಸ್ತಕ ಮನೆಯ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಯೋಜನೆಗೆ ಅಭೂತಪೂರ್ವ ಬೆಂಬಲ
ಕಾರ್ಕಳ(ಫೆ.08): ಇಲ್ಲಿನ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಅಭಿಯಾನ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಸೆಳೆಯಬೇಕು, ಮೊಬೈಲ್ ನ ಬಳಕೆಯನ್ನು ಹಿತಮಿತವಾಗಿ ಮಾಡಬೇಕೆಂಬ ಉದ್ದೇಶವಿರಿಸಿಕೊಂಡು ಕಾರ್ಕಳ, ಉಡುಪಿ, ಪುತ್ತೂರು, ಸುಳ್ಯದ ಶಾಲೆಗಳಿಗೆ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯ ನಡೆಯಿತು. ಸಾಹಿತ್ಯಕ್ಷೇತ್ರ ಓದುಗರ ಬರ ಎದುರಿಸುತ್ತಿದೆ ಎಂಬ ಮಾತಿನ ನಡುವೆಯೂ “ದಿನಕ್ಕೊಂದು ಪುಸ್ತಕ”ವನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ಕಾರ್ಕಳ […]
ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಚಿತ್ರಕಲಾ ಶಿಕ್ಷಕ ರಮೇಶ್ ಹಾಂಡರಿಗೆ ಅಭಿನಂದನೆ
ಕುಂದಾಪುರ( ಫೆ.03): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು, ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ತುಮಕೂರು ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕg ಸಹಪಠ್ಯ ಚಟುವಟಿಕೆಗಳ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. […]
ಈ ಅವಿಸ್ಮರಣೀಯ ದಿನ ಸಾಧಿಸುವ ಛಲ ಇನ್ನಷ್ಟು ಹೆಚ್ಚು ಮಾಡಿದೆ: ಗಾರ್ಗಿ ದೇವಿ
ಕುಂದಾಪುರ(ಫೆ.03): ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಕ್ಷಣ. ಜೀವನದಲ್ಲಿ ಏನಾದರನ್ನು ಸಾಧಿಸುವ ಛಲ ಹೊಂದಿದ್ದೇನೆ. ಆದರೆ ಸಾಧನೆಯ ಪಥದ ಬಾಗಿಲು ನನ್ನ ಜೀವನದಲ್ಲಿ ಬೇಗನೆ ತೆರೆದಿದೆ. ಈ ಮೆರವಣಿಗೆ, ಸನ್ಮಾನ ಎನ್ನುವುದು ನನಗೆ ಸಾಧಿಸುವ ಜವಾಬ್ದಾರಿ ಇನ್ನೂ ಹೆಚ್ಚಾಗಿರಿಸಿದೆ ಎಂದು ರಾಷ್ಟçಮಟ್ಟದ ಕಲೋತ್ಸವದ ಶಾಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿ ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. […]
ಪ್ರವೀಣ್ ಯಕ್ಷಿಮಠ ರವರ ಅಯೋಧ್ಯಾ ಸಂಗ್ರಾಮ ಪುಸ್ತಕ ಅನಾವರಣಗೊಳಿಸಿದ ಪೇಜಾವರ ಶ್ರೀಗಳು
ಕುಂದಾಪುರ (ಫೆ.02): ಪತ್ರಕರ್ತ, ಯುವ ಸಾಹಿತಿ ಪ್ರವೀಣ್ ಯಕ್ಷಿಮಠರವರ ಅಯೋಧ್ಯಾ ಸಂಗ್ರಾಮ’ ಪುಸ್ತಕವನ್ನು ಅಯೋಧ್ಯೆಯ ಪ್ರಭು ಶ್ರೀರಾಮನ ಸನ್ನಿಧಿಯಲ್ಲಿ ಫೆಬ್ರವರಿ 02 ರಂದು ಪೇಜಾವರ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಅನಾವರಣಗೊಳಿಸಿದರು. ಈ ಸಂಧರ್ಭದಲ್ಲಿ ರವೀಂದ್ರ ಹೇರೂರು, ಖ್ಯಾತ ಲೆಕ್ಕಪರಿಶೋಧಕರಾದ ಶ್ರೀ ಜೀವನ್ ಶೆಟ್ಟಿ, ವೇದಮೂರ್ತಿ ಶ್ರೀಆನಂದ ಭಟ್, ಹಾಗೂ ಶ್ರೀ ರಾಘವೇಂದ್ರ ತಂತ್ರಿಗಳು ಹಾಗೂ ಗೋರಕ್ಪುರ ಹಿಂದು ಯುವವಾಹಿನಿಯ ಮಹಾಮಂತ್ರಿ ದೀಪಕ್ ಮಿಶ್ರಾ ಉಪಸ್ಥಿತರಿದ್ದರು. ಅಯೋಧ್ಯಾ ಸಂಗ್ರಾಮ ಪುಸ್ತಕ […]










