ಕೆಲವು ದಿನಗಳಿಂದ ಕರಾವಳಿಯ ಉದ್ದಗಲಕ್ಕೂ ಸೋಷಿಯಲ್ ಮಿಡಿಯಗಳಲ್ಲಿ ಯುವಕನ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ… ಸುದ್ದಿ ವಾಹಿನಿಗಳು ಕೂಡ ಸುದ್ದಿಯಲ್ಲಿ ಹಂಚಿ ಕೊಂಡವು..ಅಷ್ಟೊಂದು ವೈರಲ್ ಆಯ್ತು ಆ ಒಂದು ಹಾಡಿನ ವಿಡಿಯೋ…ಯಾವ ಹಾಡು ಇರಬಹುದು?ಸಿನಿಮಾ ಹಾಡು ಇರಬಹುದು ಅನ್ಕೊಂಡ್ರ !ಹಾಗಂದು ಕೊಂಡ್ರೆ ನಿಮ್ಮ ಊಹೆ ತಪ್ಪು. ಅದೊಂದು ರಾಮನ ಭಜನೆ. ರಾಮ ಮಂತ್ರವ ಜಪಿಸಿ … ಪಾಪವ ಕಳೆಯೋಣ ಎನ್ನುವ ರಾಮ ನಾಮ ಸ್ಮರಣೆಯ ಆ ಹಾಡನ್ನು ಒಟ್ಟಾರೆ 10 […]
Month: April 2021
ಕುಂದಗನ್ನಡದ ಕಂಗ್ಲೀಷ್ ಪದಗಳು
ಕರ್ನಾಟಕದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಕುಂದಗನ್ನಡವು ಒಂದಾಗಿದೆ. ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನ ಜನರು ಅತಿವೇಗದಲ್ಲಿ ಹಾಗೂ ಚುಟುಕಾಗಿ ಪದಗಳನ್ನು ಪೋಣಿಸಿ ಮಾತನಾಡುವ ಭಾಷೆ ಈ ಕುಂದಗನ್ನಡ. ಪ್ರಾದೇಶಿಕತೆಯ ವೈಶಿಷ್ಟತೆಯನ್ನು ಒಳಗೊಂಡಿರುವ ಈ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವುದೇ ಚೆಂದ. ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ವಿವಿಧ ಪದಗಳನ್ನು ಸೇರಿಸಿ ಮಾತನಾಡುವ ಈ ಭಾಷೆ ಅನ್ಯರಿಗೆ ಸ್ವಲ್ಪ ವೈಶಿಷ್ಟಪೂರ್ಣ ಹಾಗೂ ವಿಭಿನ್ನವಾಗಿ ಕಂಡುಬರುವುದು ಸಹಜ. ಹಾಗೆಯೇ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವಾಗ ಈ ಭಾಗದ […]
ಏಪ್ರಿಲ್ 30 ರಂದು ತ್ರಾಸಿಯಲ್ಲಿ ರಕ್ತದಾನ ಶಿಬಿರ
ತ್ರಾಸಿ (ಏ, 29): ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ತೀವ್ರ ಅಭಾವವಿರುವುದರಿಂದಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ರಕ್ತನಿಧಿ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರ, ಉಡುಪಿ ಇವರಸಹಯೋಗದೊಂದಿಗೆ ಏಪ್ರಿಲ್ 30ರ ಶುಕ್ರವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತ್ರಾಸಿಯ ಸಾಕೇತ ವೈದ್ಯಕೀಯ ಪ್ರಯೋಗಾಲಯ ಹಾಗೂ ತಪಾಸಣಾ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.
ನಾಪತ್ತೆಯಾಗಿದ್ದ ಯಕ್ಷಗಾನ ಕಲಾವಿದ ಬೆಂಗಳೂರಿನಲ್ಲಿ ಪತ್ತೆ
ಉಡುಪಿ (ಏ, 29): ಏ. 21ರಂದು ನಾಪತ್ತೆಯಾಗಿದ್ದ ಬಡಗುತಿಟ್ಟಿನ ಹೆಸರಾಂತ ಪೆರ್ಡೂರು ಮೇಳದ ಕಲಾವಿದ ಉದಯ ಹೆಗಡೆ ಕಡಬಾಳ ಇದೀಗ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಉದಯ ಹೆಗಡೆ ಅವರು ಯಕ್ಷಗಾನ ಕಲಾವಿದೆ ಹಾಗೂ ಯಕ್ಷ ಶಿಕ್ಷಕಿಯಾಗಿರುವ ಅಶ್ವಿನಿ ಹೆಗಡೆ ಯವರ ಪತಿ. ಏಪ್ರಿಲ್ 21 ರಂದು ಸಂಜೆ ನಾಪತ್ತೆಯಾದ ಹಿನ್ನಲೆಯಲ್ಲಿ ಪತ್ನಿ ಅಶ್ವಿನಿ ಕೋಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ಕುರಿತು […]
ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಹಸ್ತಚಾಚಲು ಮುಂದಾದ ಜೆಸಿಐ ಕುಂದಾಪುರ ಸಿಟಿ ತಂಡ
ಕುಂದಾಪುರ (ಏ, 28): ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಜೆ.ಸಿ.ಐ. ಸಿಟಿ ಕುಂದಾಪುರದ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಮತ್ತು ಅವರ ಜೆಸಿಐ ಕುಂದಾಪುರ ಸಿಟಿ ತಂಡ ದಾನಿಗಳ ನೆರವಿನಿಂದ ಅಶಕ್ತರಿಗೆ ಸಹಾಯ ಹಸ್ತ ನೀಡಿದ್ದರು. 40 ದಿನಗಳ ಕಾಲ ಸರಿಸುಮಾರು 9,500 ಮಂದಿಗೆ ಊಟ ಕೊಟ್ಟು ಈ ತಂಡ ಮಾನವೀಯತೆ ಮೆರೆದಿದ್ದರು. ಹಾಗೆಯೇ ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ […]
ಪಿಪಿಇ ಕಿಟ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ – ವಿಡಿಯೋ ನೋಡಿ
ಇಂದೋರ್ (ಏ, 27): ಕೊರೋನಾ ಎರಡನೇ ಅಲೆ ದೇಶದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನತೆ ಹಾಕಿಕೊಂಡ ಎಲ್ಲಾ ಯೋಜನೆ ಹಾಗೂ ಯೋಚನೆಗಳು ತಲೆಕೆಳಗಾಗಿದೆ. ಅದರಲ್ಲೂ ಮದುವೆ ಸಮಾರಂಭ ಆಯೋಜಿಸಿದವರು ಹೇಗಾದರೂ ಮಾಡಿ ಹಮ್ಮಿಕೊಂಡ ಕಾರ್ಯ ಸುಸೂತ್ರವಾಗಿ ನಡೆಸ ಬೇಕೆಂದು ಹರ ಸಾಹಸ ಪಡುತ್ತಿದ್ದಾರೆ. ಈ ಎಲ್ಲದರ ನಡುವೆ ಇಲ್ಲೊಂದು ವಿಶೇಷ ಮದುವೆ ನಡೆದಿದೆ. ವಧು- ವರರಿಬ್ಬರು ಪಿಪಿಇ ಕಿಟ್ ಧರಿಸಿ ಮದುವೆಯಾಗಿರುವ ಸಂಗತಿ ಮಧ್ಯಪ್ರದೇಶದ ರತ್ಲಾಂ […]
ಬಿಜೆಪಿ ಯುವಮೋರ್ಚಾ ಕುಂದಾಪುರ : ಯಶಸ್ವಿ ರಕ್ತದಾನ ಶಿಬಿರ
ಕುಂದಾಪುರ (ಏ, 27) : ದೇಶಾದ್ಯಂತ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಮುಂದಿನ 60 ದಿನಗಳ ವೆರೆಗೆ ರಕ್ತದಾನ ಮಾಡಲು ಸಾಧ್ಯವಾಗದಿರುವುದರಿಂದ, ಆ ಸಮಯದಲ್ಲಿ ರಕ್ತದ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಯುವಮೋರ್ಚಾ ಕುಂದಾಪುರ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ರಕ್ತ ನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ಏಪ್ರಿಲ್ 27 ರಂದು ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ […]
ಏಪ್ರಿಲ್ 27 ರಂದು ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕುಂದಾಪುರ (ಏ, 26): ದೇಶದಾದ್ಯಂತ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿರುವ ಹಿನ್ನಲೆಯಲ್ಲಿ ಮುಂದಿನ 60 ದಿನಗಳ ವರೆಗೆ ರಕ್ತದಾನ ಮಾಡಲು ಸಾಧ್ಯವಾಗದಿರುವುದರಿಂದ ಹಾಗೂ ಆ ಸಂಧರ್ಬದಲ್ಲಿ ರಕ್ತದ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ರಕ್ತ ನಿಧಿ ಕೇಂದ್ರ ಕುಂದಾಪುರ, ಇವರ ಸಹಯೋಗದೊಂದಿಗೆ ಎಪ್ರಿಲ್ 27 ರ ಮಂಗಳವಾರ ಸಮಯ ಬೆಳಿಗ್ಗೆ […]
ಕುಂದಾಪುರ ಫ್ಲೆ ಓವರ್ ಏರುವ ಮುನ್ನ – ಗಮನಿಸಿ
ಕುಂದಾಪುರ (ಏ, 26) : ಕುಂದಾಪುರ ಭಾಗದ ಜನತೆಯ ದಶಕಗಳ ಕನಸಾಗಿದ್ದ ಫ್ಲೆ ಓವರ್ ನಲ್ಲಿ ಎಲ್ಲಾ ವಿಧದ ವಾಹನಗಳು ಓಡಾಟ ಪ್ರಾರಂಭಿಸಿದೆ. ಆದರೆ ಕುಂದಾಪುರ ಸಿಟಿಯನ್ನು ನೀವು ಪ್ರವೇಶಿಸಬೇಕಾದರೆ ಮೊದಲೇ ಜಾಗ್ರತೆ ವಹಿಸಬೇಕಾಗುತ್ತದೆ. ಏಕೆಂದರೆ ಒಮ್ಮೆ ನೀವು ಫ್ಲೆ ಓವರ್ ಏರಿದರೆ ಮತ್ತೆ ಇಳಿಯುವುದು ಕುಂದಾಪುರದ ಸಂತೆ ಮಾರುಕಟ್ಟೆ ಅಥವಾ ಸಂಗಮ ಬಳಿ. ಕುಂದಾಪುರ ಸಿಟಿ ಪ್ರವೇಶಿಸಬೇಕಾದರೆ ಉಡುಪಿ ಕಡೆಯಿಂದ ಬರುವವರು ಹಂಗಳೂರುನಲ್ಲಿಯೇ ಅಂದರೆ ದುರ್ಗಾಂಬಾ ಆಫೀಸ್ ಪಕ್ಕದ […]