ಕರ್ನಾಟಕದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಕುಂದಗನ್ನಡವು ಒಂದಾಗಿದೆ. ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನ ಜನರು ಅತಿವೇಗದಲ್ಲಿ ಹಾಗೂ ಚುಟುಕಾಗಿ ಪದಗಳನ್ನು ಪೋಣಿಸಿ ಮಾತನಾಡುವ ಭಾಷೆ ಈ ಕುಂದಗನ್ನಡ. ಪ್ರಾದೇಶಿಕತೆಯ ವೈಶಿಷ್ಟತೆಯನ್ನು ಒಳಗೊಂಡಿರುವ ಈ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವುದೇ ಚೆಂದ. ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ವಿವಿಧ ಪದಗಳನ್ನು ಸೇರಿಸಿ ಮಾತನಾಡುವ ಈ ಭಾಷೆ ಅನ್ಯರಿಗೆ ಸ್ವಲ್ಪ ವೈಶಿಷ್ಟಪೂರ್ಣ ಹಾಗೂ ವಿಭಿನ್ನವಾಗಿ ಕಂಡುಬರುವುದು ಸಹಜ. ಹಾಗೆಯೇ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವಾಗ ಈ ಭಾಗದ […]
Day: April 29, 2021
ಏಪ್ರಿಲ್ 30 ರಂದು ತ್ರಾಸಿಯಲ್ಲಿ ರಕ್ತದಾನ ಶಿಬಿರ
ತ್ರಾಸಿ (ಏ, 29): ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ತೀವ್ರ ಅಭಾವವಿರುವುದರಿಂದಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ರಕ್ತನಿಧಿ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರ, ಉಡುಪಿ ಇವರಸಹಯೋಗದೊಂದಿಗೆ ಏಪ್ರಿಲ್ 30ರ ಶುಕ್ರವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತ್ರಾಸಿಯ ಸಾಕೇತ ವೈದ್ಯಕೀಯ ಪ್ರಯೋಗಾಲಯ ಹಾಗೂ ತಪಾಸಣಾ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.
ನಾಪತ್ತೆಯಾಗಿದ್ದ ಯಕ್ಷಗಾನ ಕಲಾವಿದ ಬೆಂಗಳೂರಿನಲ್ಲಿ ಪತ್ತೆ
ಉಡುಪಿ (ಏ, 29): ಏ. 21ರಂದು ನಾಪತ್ತೆಯಾಗಿದ್ದ ಬಡಗುತಿಟ್ಟಿನ ಹೆಸರಾಂತ ಪೆರ್ಡೂರು ಮೇಳದ ಕಲಾವಿದ ಉದಯ ಹೆಗಡೆ ಕಡಬಾಳ ಇದೀಗ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಉದಯ ಹೆಗಡೆ ಅವರು ಯಕ್ಷಗಾನ ಕಲಾವಿದೆ ಹಾಗೂ ಯಕ್ಷ ಶಿಕ್ಷಕಿಯಾಗಿರುವ ಅಶ್ವಿನಿ ಹೆಗಡೆ ಯವರ ಪತಿ. ಏಪ್ರಿಲ್ 21 ರಂದು ಸಂಜೆ ನಾಪತ್ತೆಯಾದ ಹಿನ್ನಲೆಯಲ್ಲಿ ಪತ್ನಿ ಅಶ್ವಿನಿ ಕೋಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ಕುರಿತು […]