ಗಂಗೊಳ್ಳಿ (ಸೆ,16): ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ ವತಿಯಿಂದ ಎಸ್ ಎಂ ಗೋಪಾಲಕೃಷ್ಣ ಬೆಳ್ಳಾರೆ ಮತ್ತು ಪೈ ಟೆಕ್ಸ್ ಟೈಲ್ಸ್ ಮತ್ತು ಪೈ ಗಾರ್ಮೆಂಟ್ಸ್ ಗಂಗೊಳ್ಳಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ “ನನ್ನ ಪ್ರೇರಣೆಯ ಶ್ರೀಕೃಷ್ಣ ” ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಹಾಲಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಿವಾನಿ ಬಿ ಶೆಟ್ಟಿ ಮತ್ತು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ […]
Day: September 16, 2021
ಹಾಲಾಡಿ: ಸಮುದಾಯಾಧಾರಿತ ಔದ್ಯೋಗಿಕ ತರಬೇತಿ ಕಾರ್ಯಕ್ರಮ
ಹಾಲಾಡಿ(ಸೆ,16): ಜಿಲ್ಲಾ ವಿಕಲಚೇತನರ ಇಲಾಖೆ ಉಡುಪಿ ಜಿಲ್ಲೆ , ಎಪಿಡಿ ಸಂಸ್ಥೆ ಬೆಳಗಾವಿ, ಗ್ರಾಮ ಪಂಚಾಯತ್ ಹಾಲಾಡಿ ಹಾಗೂ ಗ್ರಾಮ ಪಂಚಾಯತ್ ಹಾರ್ದಳ್ಳಿ-ಮಂಡಳ್ಳಿ ಆಶ್ರಯದಲ್ಲಿ ಸಮುದಾಯಾಧಾರಿತ ಔದ್ಯೋಗಿಕ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸಪ್ಟೆಂಬರ್, 15 ರಂದು ಹಾಲಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಶ್ರೀ ಮಂಜುನಾಥ ಹೆಬ್ಬಾರ್ ರವರು ಮಾತನಾಡಿ ವಿಶೇಷ ಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ […]
ಭಾಗಮಂಡಲ: ರಸ್ತೆ ಕಾಮಗಾರಿ ವಿಳಂಬ- ಶೀಘ್ರ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆಗೆ ಕರೆ
ಭಾಗಮಂಡಲ(ಸೆ,16): ಭಾಗಮಂಡಲ ಹೃದಯಭಾಗದಲ್ಲಿ ಮೇಲ್ಸೇತುವೆಯ ಕೆಲಸಗಳು ನಡೆಯುತ್ತಿದ್ದು ,ಮಳೆಗಾಲ ಪ್ರಾರಂಭವಾದ ಜೂನ್ ತಿಂಗಳಿನಿಂದ ಕೆಲಸ ನಿಂತಿರುತ್ತದೆ. ಭಾಗಮಂಡಲ ಪೇಟೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತುದ್ದು, ಜನರಿಗೆ ಒಂದು ಕಿಲೋಮೀಟರ್ ನಷ್ಟು ದೂರ ನಡೆಯಲು ಕಷ್ಟವಾಗುತ್ತಿದೆ. ಪೇಟೆಯ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸ್ರಷ್ಠಿಯಾಗಿದ್ದು ತುಂಬಾ ಕೆಸರುಮಯವಾಗಿದೆ, ಜನರು ಪೇಟೆಯಲ್ಲಿ ನಡೆಯಲು ಪರ್ಯಾಯ ರಸ್ತೆಯಿಲ್ಲದ ಕಾರಣ ಹೆಂಗಸರು ಮಕ್ಕಳು ಕೆಸರು ಗುಂಡಿಯಲ್ಲಿಯೆ ನಡೆದಾಡುವಂತಹ ಪರಿಸ್ಥಿತಿ ಭಾಗಮಂಡಲದಲ್ಲಿ ಎದ್ದುಕಾಣುತ್ತಿದೆ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ […]
ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತ ನೀತಿ – ಡಾ. ಕರುಣಾಕರ್. ಎ.ಕೋಟೆಗಾರ್
ಕುಂದಾಪುರ (ಸೆ,16): ರಾಷ್ಟ್ರೀಯ ಶಿಕ್ಷಣ ನೀತಿ 2021 – 22 ವಿದ್ಯಾರ್ಥಿ ಕೇಂದ್ರಿತ ನೀತಿಯಾಗಿದ್ದು, ಇದರಲ್ಲಿನ ಪ್ರತಿ ಅಂಶವನ್ನೂ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ರೂಪಿಸಲಾಗಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಆಸಕ್ತಿ-ಕೌಶಲ್ಯ ಆಧಾರಿತ ಕಲಿಕೆ ಹಾಗೂ ದೇಶದ ಮಾನವ ಸಂಪನ್ಮೂಲದ ಸದ್ಬಳಕೆ ನಿಜಾರ್ಥದಲ್ಲಿ ಆಗಲಿದೆ ಎಂದು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಕರುಣಾಕರ ಕೊಟೇಗಾರ್ ಹೇಳಿದರು. ಅವರು ಗುರುವಾರ ಕುಂದಾಪುರದ ಡಾ. […]










