ವಂದೇ ಮಾತರಂ,ಜನಗನಮನ,ಮಾ ತುಜೆ ಸಲಾಮ್ ,ಯೇ ಮೆರೆ ವತನ್ ಕೆ ಲೋಗೊ,ಸಂದೇಸೆ ಆತೆ ಹೆ ಹಮೆ ತಡಪಾತೆ ಹೆ….ಈ ಹಾಡುಗಳನ್ನು ನಾವೆಲ್ಲರೂ ಒಮ್ಮೆಯಾದರೂ ಹಾಡಿದ್ದೆವೆ.ಜೊತೆಗೆ ಸಂದರ್ಭಕ್ಕೆ ಅನುಗುಣವಾಗಿ ಒಂದೆರಡು ಕಂಬನಿ ಕಣ್ಣಂಚಲಿ ಸುರಿಸಿದ್ದೆವೆ. ಈ ಹಾಡುಗಳನ್ನು ಕೇಳುವಾಗ ಅಥವಾ ಹಾಡುವಾಗ ಮೈ ಮನಗಳಲ್ಲಿ ರೋಮಾಂಚನ ಹಾಗೂ ರಾಷ್ಟ್ರಭಕ್ತಿ ಉದ್ದೀಪನಗೊಂಡ ಅನುಭವ ಪ್ರತಿಯೊಬ್ಬ ಭಾರತೀಯನಿಗೂ ಆಗಿರುತ್ತದೆ ಎನ್ನುವುದು ನನ್ನ ಅನಿಸಿಕೆ .ಯಾಕೆಂದರೆ ಈ ಹಾಡುಗಳಲ್ಲಿ ಸ್ವಾತಂತ್ರ್ಯ ಹೋರಾಟದ ಅದೆಷ್ಟೋ ಸಂಗತಿಗಳು ಅಡಗಿದೆ. […]
Month: September 2021
ಶಿಕ್ಷಪ್ರಭಾ ಆಕಾಡೆಮಿ ಕುಂದಾಪುರ : ಸಿ. ಎ. ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ
ಕುಂದಾಪುರ (ಸೆ, 13) : ಕುಂದೇಶ್ವರ ದೇವಸ್ಥಾನ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡಮಿ ಆಫ್ ಕಾಮರ್ಸ್ ಏಜುಕೇಶನ್ (ಸ್ಪೇಸ್) ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳು ಇನ್ಟಿಟ್ಯೂಟ್ ಆಫ್ ಚಾರ್ಟರ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಮತ್ತು ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ ತೋರಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ವಿಲಾಸ್ ಶೆಟ್ಟಿ, ಸಿಎ ಅಂತಿಮ ಪರೀಕ್ಷೆಯಲ್ಲಿ 528 ಅಂಕ ಗಳಿಸುವುದರೊಂದಿಗೆ ಉತ್ತಮ ಅಂಕಗಳೊಂದಿಗೆ ಸಿ.ಎ. […]
ಮಲ್ಪೆ: ಮೀನುಗಾರರ ತುರ್ತು ಆರೋಗ್ಯ ಸೇವೆಗೆ ಕೆಪಿಸಿಸಿ ವತಿಯಿಂದ ಆಂಬುಲೆನ್ಸ್ ಸೇವೆ -ಹಸ್ತಾಂತರ ಕಾರ್ಯಕ್ರಮ
ಮಲ್ಪೆ (ಸೆ,11): ಕೆಪಿಸಿಸಿ ವತಿಯಿಂದ ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರಾದ ಮಲ್ಪೆಯ ಮೀನುಗಾರರ ತುರ್ತು ಆರೋಗ್ಯ ಸೇವೆಗೆ ಆಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು .ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಮಲ್ಪೆಗೆ ಹಿಂದೊಮ್ಮೆ ಆಗಮಿಸಿದಾಗ ಮೀನುಗಾರ ಸಮುದಾಯದವರು ಆಂಬ್ಯುಲೆನ್ಸ್ನ ಬೇಡಿಕೆ ಇಟ್ಟಿದ್ದರು. ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಭವನದ ಮುಂಭಾಗ ಆಂಬುಲೆನ್ಸ್ ನ ಕೀಯನ್ನು ಮಲ್ಪೆಯ ಸಮಾಜ ಸೇವಕ […]
ಆಪತ್ಭಾಂಧವ ಈಶ್ವರ್ ಮಲ್ಪೆ ಕುಟುಂಬಕ್ಕೆ ಸಹ್ರದಯಿ ಯುವಕರಿಂದ ಸಹಾಯ ಧನ ಹಸ್ತಾಂತರ
ಮಲ್ಪೆ (ಸೆ,12): ತನ್ನ ಕೌಟುಂಬಿಕ ಸವಾಲುಗಳ ನಡುವೆಯೂ ಇನ್ನೊಬ್ಬರ ಸಹಾಯಕ್ಕೆ ಸದಾ ಸಿದ್ದರಾಗುವ, ಜೊತೆಗೆ ಅದೆಷ್ಟೋ ಜನರಿಗೆ ಆಪತ್ ಕಾಲದಲ್ಲಿ ಸಹಾಯಹಸ್ತ ಚಾಚಿರುವ ಈಶ್ವರ ಮಲ್ಪೆಯವರ ಕೌಟುಂಬಿಕ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಉಡುಪಿಯ ಸಹೃದಯಿ ಯುವಕರಾದ ಸ್ಯಾನ್ಫೋರ್ಡ್ ಡಿ’ಸೋಜಾ,ಸತ್ಯ ಆಚಾರ್ಯ,ನವೀನ್ ಸಾಲಿಯಾನ್,ಮಿಥುನ್ ಪೂಜಾರಿಯವರ ತಂಡ ಈಶ್ವರ್ ಮಲ್ಪೆ ಯವರ ಮನೆಗೆ ಭೇಟಿ ನೀಡಿ ಇವರ 2 ವಿಕಲ ಚೇತನ ಮಕ್ಕಳ ಚಿಕಿತ್ಸೆಗಾಗಿ 25000 ರೂ, ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಯುವಕರ ತಂಡದ ಸಹಾಯಕ್ಕೆ […]
ಮಾರಣಕಟ್ಟೆ: ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಉದ್ಘಾಟನೆ
ವಂಡ್ಸೆ(ಸೆ,11): ಕರಾವಳಿಯ ಸಾಂಸ್ಕೃತಿಕ ವೈಭವ ಸಾರುವ ಯಕ್ಷಗಾನ ಇಂದು ಜಗತ್ ಪ್ರಸಿದ್ದ ವಾಗಿದ್ದು , ಯಕ್ಷಗಾನ ಕಲಾವಿದರು ಸಂಘಟಿತರಾಗಿ ಹೊಸ ಟ್ರಸ್ಟ್ ಹುಟ್ಟುಹಾಕಿದ್ದು, ಕಲಾವಿದರು ಜೊತೆಗೆ ಕಾರ್ಮಿಕರನ್ನೂ ಸೇರಿಸಿಕೊಂಡಿರುವುದು ಧನಾತ್ಮಕ ಬೆಳವಣಿಗೆ. ಈ ಟ್ರಸ್ಟ್ ಸಮಾಜದೊಂದಿಗೆ ಸೇರಿ ಸೌಹಾರ್ದತೆಗೆ ದಾರಿಯಾಗಬೇಕು ಹಾಗೂ ಕಲಾವಿದರಿಗೆ, ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಅವರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು ಎಂದು ಹೋಟೆಲ್ ಉದ್ಯಮಿ, ಸಹ್ರದಯಿ ಕೃಷ್ಣಮೂರ್ತಿ ಮಂಜ ಹೇಳಿದರು. ಅವರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯ : ಫಿಟ್ ಇಂಡಿಯಾ ಫ್ರೀಡಂ ಓಟ – ಅಭಿಯಾನ
ಶಿರ್ವ (ಸೆ, 11) : ಸದೃಢ ಭಾರತ ನಿರ್ಮಾಣಕ್ಕೆ ದೇಶದಲ್ಲಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು ಎಂಬುದು ಈ ಅಭಿಯಾನದ ಮೂಲ ಉದ್ದೇಶ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ರ ಅಭಿಯಾನಕ್ಕೆ ರಾಷ್ಟ್ರವ್ಯಾಪಿ ಚಾಲನೆ ನೀಡಿದ್ದಾರೆ. ಯುವ ಜನಾಂಗ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳದೇ ಇರುವ […]
ಡಾ. ಬಿ.ಬಿ. ಹೆಗ್ಡೆ ಕಾಲೇಜು : ಕ್ಯಾಂಪಸ್ ವಾಯ್ಸ್ ವಾರ್ತಾ ಸಂಚಿಕೆ ಬಿಡುಗಡೆ
ಕುಂದಾಪುರ (ಸೆ. 10) : ಕುಂದಾಪುರದ ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಅರ್ಧ ವಾರ್ಷಿಕ ವಾರ್ತಾ ಸಂಚಿಕೆಯಾದ ಕ್ಯಾಂಪಸ್ ವಾಯ್ಸ್ ನ್ನು ಸೆಪ್ಟೆಂಬರ್,5 ರಂದು ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕಾಳಾವರದ ಉದಯ್ ಕುಮಾರ್ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಥಗಿತ ಉಂಟಾಗಿದೆ. ಆದರೆ ನಮಗೆ ಸಿಕ್ಕಿದ ದಿನಗಳನ್ನೆ ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಕ್ರೀಡಾ ದಿನಾಚರಣೆ, ಎಥ್ನಿಕ್ ಡೇ ಆಯೋಜಿಸುವುದರ ಜೊತೆಗೆ […]
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರು : ಶಿಕ್ಷಕರ ದಿನಾಚರಣೆ ಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ
ತೆಕ್ಕಟ್ಟೆ (ಸೆ, 10) : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರಿನಲ್ಲಿ ಶಿಕ್ಷಕರ ದಿನಾಚರಣೆ ಯ ಪ್ರಯುಕ್ತ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹೆಸಕುತ್ತೂರು ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಹೆಸಕುತ್ತೂರು ಒಕ್ಕೂಟ ಇವರ ವತಿಯಿಂದ ಗುರುವಂದನಾ ಕಾರ್ಯಕ್ರಮ ಜರುಗಿತು. ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್, ಸಹ ಶಿಕ್ಷಕರಾದ ಸಂಜೀವ ಎಂ, ಜಯಲಕ್ಷ್ಮಿ ಬಿ., ಜಯರಾಮ ಶೆಟ್ಟಿ, ವಿಜಯಾ ಅರ್, ಅಶೋಕ ತೆಕ್ಕಟ್ಟೆ, ವಿಜಯ ಶೆಟ್ಟಿ, ರವೀಂದ್ರ […]
ಕೊಳಲುವಾದನ ಸ್ಪರ್ಧೆ : ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ಪ್ರಥಮ ಸ್ಥಾನ
ಕುಂದಾಪುರ (ಸೆ, 9) : ಮಧ್ಯಪ್ರದೇಶದ ಮೊರೆನಾದ ಶಿವ್ಸ್ ಮ್ಯೂಸಿಕಲ್ ಅಕಾಡೆಮಿ ವತಿಯಿಂದ ನಡೆದ ಆನ್ಲೈನ್ ಕೊಳಲುವಾದನ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೊಳಲುವಾದನದಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಶ್ಯಾಮ್ ಗಂಗೊಳ್ಳಿಯ ಖ್ಯಾತ ಛಾಯಾಗ್ರಾಹಕ ಗಣೇಶ್ ಪಿ. ಪೂಜಾರಿ ಮತ್ತು ಮಾಲತಿ ದಂಪತಿಯ ಪುತ್ರ.
ಹೆಮ್ಮಾಡಿ : ರಿಕ್ಷಾ ನಿಲ್ದಾಣ ಉದ್ಘಾಟಿಸಿ,ಶುಭ ಹಾರೈಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಹೆಮ್ಮಾಡಿ(ಸೆ,7): ಹೆಮ್ಮಾಡಿ ಭಾಗದ ರಿಕ್ಷಾ ಚಾಲಕ ಮಾಲಕರ ಬಹುದಿನದ ಬೇಡಿಕೆಯಾಗಿದ್ದ ರಿಕ್ಷಾ ನಿಲ್ದಾಣವನ್ನು ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿದ್ದು,ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಉದ್ಘಾಟಿಸಿ ಶುಭಹಾರೈಸಿದರು. ರಿಕ್ಷಾ ಚಾಲಕ- ಮಾಲಕರ ಜನ ಪರ ಕಾಳಜಿಯನ್ನು ಪ್ರಶಂಸಿದ ಶಾಸಕರು ರಿಕ್ಷಾ ನಿಲ್ದಾಣಕ್ಕೆ ಇಂಟರ್ಲಾಕ್ ಅಳವಡಿಸಲು ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು, ಪಕ್ಷದ ಕಾರ್ಯಕರ್ತ ಮತ್ತು ರಿಕ್ಷಾ ಚಾಲಕ & ಮಾಲಕರು ಉಪಸ್ಥಿತರಿದ್ದರು.










