ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಬಹಳ ಇತಿಹಾಸವಿದೆ. ಆ ಎಲ್ಲಾ ಇತಿಹಾಸಕ್ಕೆ ಮುಕುಟಪ್ರಯವಾಗಿರುವ ಸ್ಥಳವೇ ಕುಂದಾಪುರ.ಭಾರತಕ್ಕೆ ಹೇಗೆ ಹಿಮಾಲಯವೋ ಅದೇ ರೀತಿಯಲ್ಲಿ ಕುಂದಾಪುರಕ್ಕೆ ನದಿಗಳು. ಮೂಡಣದಲ್ಲಿ ಉಗಮವಾಗುವ ಚಕ್ರ, ಸೌಪರ್ಣಿಕ, ವಾರಾಹಿ, ಕೇದಕ ಹಾಗೂ ಕುಬ್ಜ ಎಂಬ ಈ ಐದು ನದಿಗಳು ಗಂಗೊಳ್ಳಿಯಲ್ಲಿ ಒಂದಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಆ ಸ್ಥಳವೇ ಪಂಚಗಂಗಾವಳಿ. ನದಿಗಳು ಒಂದೆಡೆಯಾದರೆ ದೇವಸ್ಥಾನಗಳು ಇನ್ನೊಂದೆಡೆ. ನೂರಾರು ದೇವಾಲಯಗಳ ಹೊಂದಿರುವ ಕುಂದಾಪುರ ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡೆಯ ವಿನಾಯಕ,ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ, […]
Month: September 2021
ನಾ ಕಂಡಂತೆ ಚಿಂತಕ, ಮಾರ್ಗದರ್ಶಕ ಮತ್ತು ಸಲಹೆಗಾರ ಈಶ್ವರ್ ಸಿ ನಾವುಂದ
ನಿಜ. ಆ ಚಿಂತನೆಗಳು ಬಹಳ ಸೂಕ್ಷ್ಮ ಮತ್ತು ಆಳವಾಗಿದ್ದವು. ಆ ಚಿಂತನೆಗಳ ಒಂದೊಂದು ಪದಗಳನ್ನು ಮಣಿಗಳಂತೆ ಪೋಣಿಸುತ್ತಾ ಹೋದಾಗ ಅದ್ಬುತ ಬರವಣಿಗೆಯಾಗಿ ಹೊರಹೊಮ್ಮತ್ತಿತ್ತು. ಸಾಧನೆ ಮಾಡ ಹೊರಟವರಿಗೆ ಶಕ್ತಿಯಾಗಿ ನಿಲ್ಲುತ್ತಿತ್ತು. ಈ ಬರವಣಿಗೆಯ ಹಿಂದಿರುವ ಕೈ ಬೇರೆ ಯಾರದ್ದು ಅಲ್ಲ. ಇದು ನಮ್ಮ ನಿಮ್ಮೆಲ್ಲರ ನೆಚ್ಚಿನ ಚಿಂತಕ,ಬರಹಗಾರ ಈಶ್ವರ್ ಸಿ ನಾವುಂದರವರದ್ದು. ಯೋಚನೆಗಳು ನನ್ನ ಸಾಧನೆಗಳಾಗಿದ್ದವು ಹಾಗೂ ಶಕ್ತಿಶಾಲಿ ಸಾಧನೆಗಳು ಹೌದು.ಕೆಲವೊಂದು ಸೃಜನಶೀಲ ಕೆಲಸಗಳಿಗೆ ನನ್ನ ಈ ಯೋಚನೆಗಳೇ ಸಾಧನವಾಗಿದ್ದವು. […]
ಗುರು ಮಾತೆ – ಅಕ್ಷರ ಕಲಿಸಿದ ವಿದ್ಯಾ ಸರಸ್ವತಿ : ಸಿಂಗಾರಿ ಅಮ್ಮ ಟೀಚರ್ ನಾವುಂದ
ಗುರು ಎನ್ನುವ ಪರಿಕಲ್ಪನೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಏಕೆಂದರೆ ಒರ್ವ ಗುರು ತಂದೆ-ತಾಯಿಯ ಎರಡು ಪಾತ್ರವನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲವನಾಗಿದ್ದು, ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಭಾವಿಸುವ ,ಪ್ರೀತಿಸುವ ಹಾಗೂ ತನ್ನ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಮತ್ತು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವ ದಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಹಾಕಲು ಶಿಕ್ಷಕರು ಮಾರ್ಗದರ್ಶಕರಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವು ಅಜ್ಞಾನವನ್ನು ಓಡಿಸುವುದೇ ಆಗಿದೆ. ಪ್ರತಿಯೊಬ್ಬರ ಜೀವನದ ಏಳು- ಬೀಳುಗಳಿಗೆ […]
ಓ ಗುಣವಂತನೆ
ಓ ಗುಣವಂತನೆನೀ ಗುಣಗಳ ಖಜಾನೆನೀ ಗುಣಕಾರಿ, ನೀನೇ ಗುಣಾಧಿಕಾರಿನೀ ಸುಗುಣಾಚಾರಿ, ನೀನೇ ಗುಣಗಳ ರೂವಾರಿನೀ ಗುಣವರ್ಧಕ, ನೀನೇ ಗುಣಾತ್ಮಕನೀ ಗುಣವಿಶೇಷ, ನೀನೇ ಗುಣವಾಚಕಗುರಿ ತೋರಿಸುವ ಗುರುವೇನಾ ಹೇಗೇ ಮಾಡಲಿ ನಿನ್ನ ಗುಣಗಾನಓ ಗುಣಮಟ್ಟದ ಉತ್ತುಂಗವೆನಿನಗೆ ಕೋಟಿ ಕೋಟಿ ನಮನ. ಡಾ. ಉಮ್ಮೆ ಸಲ್ಮಾ ಎಂ., ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ :ವನಮಹೋತ್ಸವ ಆಚರಣೆ
ಕುಂದಾಪುರ( ಸೆ.03): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 03 ರಂದು ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದಲ್ಲಿ ಆಚರಿಸಲಾಯಿತು. ಕ್ಲಬ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಲಯಾಧ್ಯಕ್ಷರಾದ ಲ. ಅಶೋಕ್ ಶೆಟ್ಟಿ ಸಂಸಾಡಿ , ನಿಕಟ ಪೂರ್ವ ಅಧ್ಯಕ್ಷರಾದ ಲ.ರತ್ನಾಕರ ಶೆಟ್ಟಿ ಕಂದಾವರ, ಪ್ರಧಾನ ಕಾರ್ಯದರ್ಶಿ ಲ. ಗಿರೀಶ್ ಮೇಸ್ತ, ನಿರ್ದೇಶಕರಾದ ಲ. ಅಂಪಾರು ನಿತ್ಯಾನಂದ ಶೆಟ್ಟಿ, […]
ಸಂತ ಮೇರಿ ಮಹಾವಿದ್ಯಾಲಯ ಶಿರ್ವ: ಸ್ವಚ್ಛ ಸರ್ವೇಕ್ಷಣ ಜನಾಂದೋಲನ -2021
ಶಿರ್ವ(ಸೆ.4): ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛ ಸರ್ವೆಕ್ಷಣ ಗ್ರಾಮೀಣ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಸುಚಿತ್ವ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರ ವ್ಯಾಪಿ ಚಾಲನೆಯಲ್ಲಿರುವ ಈ ಯೋಜನೆಯನ್ನು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಎನ್.ಸಿ.ಸಿ, ಎನ್.ಎಸ್.ಎಸ್, ಹಾಗು ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಚ್ಚತೆ […]
ಗಣೇಶ್ ಗಂಗೊಳ್ಳಿ ಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಸೆ.2): ಕನ್ನಡ ನಾಡಿನ ಖ್ಯಾತ ಜಾನಪದ ಗಾಯಕ, ಜಾನಪದ ಚಿಂತಕ ಹಾಗೂ ಸಂಘಟಕ ಕುಂದಾಪುರ ಮೂಲದ ಗಣೇಶ್ ಗಂಗೊಳ್ಳಿ ಯವರಿಗೆ ತಮಿಳುನಾಡಿನ ಪ್ರತಿಷ್ಠಿತ ಇಂಡಿಯನ್ ಎಂಪೆಯರ್ ವಿಶ್ವ ವಿದ್ಯಾಲಯ ಹಾಗೂ ಯುನಿವರ್ಸಲ್ ಅಕಾಡೆಮಿಕ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಆಗಸ್ಟ್ 28ರಂದು ತಮಿಳುನಾಡಿನ ಹೊಸೂರು ಕ್ಲಾರೇಶ್ವ ಸಭಾಂಗಣದಲ್ಲಿ ಗೌರವ ಡಾಕ್ಟರೇಟ್ ನ್ನು ಪ್ರಧಾನ ಮಾಡಲಾಯಿತು .ಯು ಜಿ ಸಿ ವೈಸ್ ಚೇರ್ಮನ್ ಡಾ.ಕೆ ಪ್ರಭಾಕರ್ , […]
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ : ಮಹಿಳಾ ಸಬಲೀಕರಣದ ಸೈಕಲ್ ಜಾಥಾಕ್ಕೆ ಸ್ವಾಗತ
ಕುಂದಾಪುರ (ಸೆ. 02) : ಕೇರಳದ ಮಲ್ಲಾಪುರಂನಿಂದ ಕಾಶ್ಮೀರದ ತನಕ ಸೈಕಲ್ ಜಾಥಾ ಮೂಲಕ ಮಹಿಳಾ ಸಬಲೀಕರಣದ ಉದ್ದೇಶವನ್ನು ಇಟ್ಟುಕೊಂಡು ಸರಿಸುಮಾರು ಒಂದು ತಿಂಗಳ ಕಾಲಾವಕಾಶದ ಗುರಿಯನ್ನು ಹಾಕಿಕೊಂಡು ಸೈಕಲ್ ಜಾಥಾ ಮೂಲಕ ಹೊರಟ ಕೇರಳದ ವಿದ್ಯಾರ್ಥಿನಿ ತನ್ನ ಮೂವರು ಸಹಪಾಠಿಗಳ ಜೊತೆ ಕುಂದಾಪುರಕ್ಕೆ ತಲುಪಿದಾಗ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಹೂಗುಚ್ಛ ನೀಡಿ ಸ್ವಾಗತಿಸಿ ಬರಮಾಡಿಕೊಂಡರು. ಆಗ ವಿದ್ಯಾರ್ಥಿನಿ ಮಹಿಳಾ […]
ಹ್ರದಯವಂತ, ವಿಭಿನ್ನ ವೇಷಧಾರಿ, ಸಮಾಜ ಸೇವಕ ರವಿ ಜಿ. ಕಟಪಾಡಿ
ಸಹಾಯ ಮತ್ತು ಸಮಾಜ ಸೇವೆಯನ್ನು ಹೀಗೂ ಮಾಡಬಹುದೆಂಬ ಇವರ ವಿಶಿಷ್ಟ ಪರಿಕಲ್ಪನೆಗೆ ಮೊದಲು ನಾವು ಅಭಿನಂದನೆ ಸಲ್ಲಿಸಬೇಕು. ಸಹಾಯವೆಂಬ ಶಬ್ದ ಬಂದಾಗ ಮೊದಲಿಗೆ ನಮಗೆ ಹೊಳೆಯುವುದೇ ಧನಸಹಾಯ. ಯಾರಿಗಾದರೂ ಧನ ಸಹಾಯ ಮಾಡುವುದಾದರೆ ನಮ್ಮಲ್ಲಿ ಹಣವನ್ನು ಕ್ರೋಢಿಕರಿಸಲು ಬೇಕಾದ ಮಾರ್ಗವನ್ನು ಹುಡುಕಬೇಕಾಗುತ್ತದೆ. ನಮ್ಮಲ್ಲಿ ಹಣ ಇಲ್ಲದೆ ಬೇರೆಯವರಿಗೆ ನಾವು ಧನಸಹಾಯ ಮಾಡುವುದಾದರೂ ಹೇಗೆ? ಈ ಪ್ರಶ್ನೆ ಹಲವು ಸಮಾಜ ಸೇವಕರನ್ನು ಕಾಡುತ್ತಿರುತ್ತದೆ. ಜೊತೆಗೆ ಅವರ ಪ್ರಯತ್ನ ನಿರಂತರವಾಗಿರುತ್ತದೆ. ಆ ನಿಟ್ಟಿನಲ್ಲಿ ಧನಸಹಾಯ […]
ಸಂಗಮ್: ಕೋವಿಡ್ ಲಸಿಕಾ ಅಭಿಯಾನ ಶಿಬಿರ
ಕುಂದಾಪುರ (ಸೆ, 02) : ಆರೋಗ್ಯ ಇಲಾಖೆ ಕುಂದಾಪುರ ಹಾಗೂ ಸಂಗಮ್ ಫ್ರೆಂಡ್ಸ್ ಸಂಗಮ್ ಇವರ ಸಹ ಸಹಯೋಗದೊಂದಿಗೆ ಚಿಕ್ಕಮ್ಮನ ಸಾಲು ರಸ್ತೆ ಸಂಗಮ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ ಶಿಬಿರ ಸೆಪ್ಟೆಂಬರ್,02ರಂದು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಗಮ್ ಫ್ರೆಂಡ್ಸ್ ಸಂಗಮ್ ಇದರ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರು, ಕುಂದಾಪುರ ಪುರಸಭೆಯ ಸದಸ್ಯರಾದ ದಿವಾಕರ ಪೂಜಾರಿ ಕಡ್ಗಿ,ಸಂತೋಷ್ ಶೆಟ್ಟಿ, ಹಾಗೂ ಕುಂದಾಪುರ ಭಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ […]










