ಉಡುಪಿ (ಮೇ, 31): ಬoಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 12 ನೇ ವರ್ಷದವಾರ್ಷಿಕೋತ್ಸವವು ಮೇ 29 ರಂದು ಸಂಸ್ಥೆಯ ಆವರಣದಲ್ಲಿ ಜರಗಿತು. ಕುಕ್ಕೆ ಶ್ರೀ ಸುಬ್ರಮಣ್ಯ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಅತ್ಯುತ್ತಮ ಇಂಜಿನಿಯರಿoಗ್ ಶಿಕ್ಷಣ ನೀಡುತ್ತಿರುವ ಕಾಲೇಜನ್ನು ಸ್ಥಾಪಿಸಿದ ಸೋದೆ ಶ್ರೀಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಜೊತೆಗೆ […]
Month: May 2022
ಕೆ.ಪಿ.ಸಿ.ಸಿ ಮೀನುಗಾರರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಯೋಗೇಶ್ ಶಿರೂರು ನೇಮಕ
ಕುಂದಾಪುರ (ಮೇ ,31): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುಸ್ಕ್ರತರು, ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಉಪಾದ್ಯಕ್ಷರಾದ ಯೋಗೇಶ್ ಶಿರೂರು ನೇಮಕಗೊಂಡಿದ್ದಾರೆ . ಇವರನ್ನು ಕೆ.ಪಿ.ಸಿ.ಸಿ ಅದ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಕೆ.ಪಿ.ಸಿ.ಸಿ ಮೀನುಗಾರರ ಘಟಕದ ಅದ್ಯಕ್ಷರಾದ ಮಂಜುನಾಥ್ ಬಿ ಯವರು ಆಯ್ಕೆಮಾಡಿದ್ದಾರೆ .
ಡ್ರಾಮ ಜ್ಯುನಿಯರ್ ಖ್ಯಾತಿಯ ಬಾಲನಟಿ ಕುಂದಾಪುರದ ಕುವರಿ ಸಮೃದ್ಧಿ ಎಸ್ ಮೊಗವೀರ
ನಿಮ್ಮ ಮಕ್ಕಳನ್ನು ಪಠ್ಯದ ಕಲಿಕೆಯ ಪರಿದಿಗೆ ಮಾತ್ರ ಸೀಮಿತಗೊಳಿಸಬೇಡಿ ಎನ್ನುವ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ರವರು ಹೇಳಿದ ಮಾತು ಈಗಿನ ಮಕ್ಕಳ ಪ್ರತಿಭೆ, ಕಲೆ, ಕೌಶಲ್ಯ, ಬುದ್ಧಿವಂತಿಕೆಯನ್ನು ಕಂಡಾಗ ನೂರಕ್ಕೆ ನೂರು ಪ್ರಸ್ತುತ ಅನ್ನಿಸುತ್ತದೆ. ಪ್ರೋತ್ಸಾಹ ಮತ್ತು ಸಹಕಾರ ದೊರೆತರೆ ಉತ್ತಮ ಕಲಾವಿದರಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣವನ್ನು ನಮ್ಮ ಯುವ ಸಮುದಾಯ ಹೊಂದಿದೆ .ಆ ನಿಟ್ಟಿನಲ್ಲಿ ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಡ್ರಾಮ ಜುನಿಯರ್ ಸೀಜನ್ -4 ಖ್ಯಾತಿಯ ಬಾಲಪ್ರತಿಭೆ ಕುಂದಾಪುರದ ಸಮೃದ್ಧಿ […]
ರಾಷ್ಟ್ರೀಯ ಕ್ರೀಡಾ ಕೂಟ: ಕುಂದಾಪುರದ ಪ್ರಶಾಂತ್ ಶೆಟ್ಟಿಗೆ ಎರಡು ಪದಕ
ಕುಂದಾಪುರ (ಮೇ,22): ತಮಿಳುನಾಡಿನ ಕಡಲೂರಿನ ಅಣ್ಣಾ ಸ್ಟೇಡಿಯಂನಲ್ಲಿ ಮೇ 21 ಹಾಗೂ 22 ರಂದು ನೆಡೆದ 41 ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ಕುಂದಾಪುರದ ಪ್ರಶಾಂತ್ ಶೆಟ್ಟಿ ಯವರು 800 ಮೀ ಓಟದ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಟ್ರಿಪಲ್ ಜಂಪ್ ವಿಭಾಗದಲ್ಲಿ ಕಂಚಿನ ಪದಕ ಪಡೆದು ಕರ್ನಾಟಕದ ಹಿರಿಮೆಯನ್ನು ಮುಗಿಲೆತ್ತರಕ್ಕೆ ಏರಿಸಿದ್ದಾರೆ. ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ […]
ಎಸ್.ಎಸ್.ಎಲ್.ಸಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ(ಮೇ.19): ಇಲ್ಲಿನ ಸುಣ್ಣಾರಿಯ ಎಕ್ಸಲೆಂಟ್ ಪ್ರೌಢಶಾಲೆಯು ವಿದ್ಯಾರ್ಥಿಗಳು 2021–22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದ್ದು ಸಂಸ್ಥೆಯ ವಿದ್ಯಾರ್ಥಿಯಾದ ಸಾಗರ್ – 622 ಅಂಕ ಪಡೆಯುವುದರ ಮೂಲಕ ಅತ್ಯುತ್ತಮ ಸಾಧನೆ ತೋರಿದ್ದಾರೆ. ಪರೀಕ್ಷೆ ಬರೆದ 45 ವಿದ್ಯಾರ್ಥಿಗಳಲ್ಲಿ ಕಾರ್ತಿಕ್ ಶೆಟ್ಟಿ 619 ಅದ್ವಿತಾ ಡಿ ಶೆಟ್ಟಿ – 618 ,ಈಶಾನ್ಯ – 617 ಸ್ಪೂರ್ತಿ –616, ಸಂಜನ್ ಕೆ –611, ಶೇರು ಬಹದ್ದೂರ್ – 610, ಬಿ. […]
ಡಾ.ಬಿ.ಬಿ.ಹೆಗ್ಡೆ ಕಾಲೇಜು: ಮಣ್ಣು ಉಳಿಸಿ ಅಭಿಯಾನ
ಕುಂದಾಪುರ(ಮೇ,19): ಮಣ್ಣಿನ ನೈಸರ್ಗಿಕ ಗುಣಲಕ್ಷಣಗಳು ಹಾಗೂ ಸ್ವರೂಪಗಳು ದಿನದಂದ ದಿನಕ್ಕೆ ಕ್ಷೀಣಿಸುತ್ತಿದೆ. ಕ್ರತಕ ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ಅನಗತ್ಯ ವಿಷಪೂರಿತ ತ್ಯಾಜ್ಯದಿಂದಾಗಿ ಮಣ್ಣಿನ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿಯಾದ ವಿಷಯ ಎಂದು ಇಶಾ ಫೌಂಡೆಶನ್ ಕೊಯಮುತ್ತೂರು ಇದರ ಸ್ವಯಂಸೇವಕರಾದ ಬಿ.ಎನ್.ವೆಂಕಟೇಶರವರು ಹೇಳಿದರು. ಅವರು ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್.ಘಟಕ ಹಾಗೂ ಇಶಾ ಫೌಂಡೇಶನ್ ಆಯೋಜಿಸಿದ ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ತನ್ನ ಮೂಲಸತ್ವವನ್ನು ಕಳೆದುಕೊಳ್ಳುತ್ತಿರುವ ಮಣ್ಣನ್ನು ರಕ್ಷಿಸುವುದರ ಜೊತೆಗೆ ಭವಿಷ್ಯದ ದಿನಗಳಲ್ಲಿ ಮಣ್ಣಿನ ಫಲವತ್ತತೆಯನ್ನು ನೈಸರ್ಗಿಕವಾಗಿ […]
ಶಿಕ್ಷಪ್ರಭ ಅಕಾಡೆಮಿ ಕುಂದಾಪುರ: ಸಿಎ, ಸಿಎಸ್ ಆಸಕ್ತ ವಾಣಿಜ್ಯ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪ
ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ತೆಯ ಬಳಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ ಸಿಎಸ್ ಶಿಕ್ಷಣ ತರಬೇತಿ ಸಂಸ್ಥೆಯು ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಾದ ಸಿಎ ಮತ್ತು ಸಿಎಸ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದರ ಮೂಲಕ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಸಂಸ್ಥೆಯಲ್ಲಿ ಸಿಎ ಮತ್ತು ಸಿಎಸ್ ಪರೀಕ್ಷೆಗಳಿಗೆ ಗುಣಮಟ್ಟದ ಬೋಧಕ ಸಿಬ್ಬಂದಿಗಳ […]
ಕೋಡಿ ಬೀಚ್ನಲ್ಲಿ ಹೊಸ ಆಕರ್ಷಣೆ ಕಡಲ ತಡಿಯ ಮಾಲಿನ್ಯ ನಿಯಂತ್ರಣಕ್ಕೆ ಮೀನಿನ ಆಕಾರದ ಕಸದ ತೊಟ್ಟಿ ನಿರ್ಮಾಣ
ಕೋಡಿ(ಮೇ,16): ಕಡಲ ಪರಿಸರ ರಕ್ಷಣೆಗೆ ನಿರಂತರ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವುದರ ಜೊತೆಗೆ ಇತ್ತೀಚೆಗೆ ಆಮೆ ಹಬ್ಬ ವನ್ನು ಬಹಳ ಅರ್ಥಪೂರ್ಣವಾಗಿ ಆಯೋಜಿಸಿದ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡ ಇದೀಗ ಪರಿಸರ ಸಂರಕ್ಷಣೆಗೆ ಇನ್ನೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮತ್ಸೋದ್ಯಮಿ ಶ್ರೀ ಆನಂದ.ಸಿ.ಕುಂದರ್ ರವರ ಪ್ರಾಯೋಜಕತ್ವದ ಗೀತಾನಂದ ಫೌಂಡೇಶನ್(ರಿ) ಕೋಟ ಇವರ ಸಹಯೋಗದಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಕೋಡಿ ಸೀ ವಾಕ್ ಬೀಚ್ನಲ್ಲಿ ಮೀನಿನ ಆಕಾರದ ಕಸದ ತೊಟ್ಟಿಯನ್ನು ರಚನೆ ಮಾಡಿ ಸಮುದ್ರವನ್ನು […]
ಮತ್ತೆ ಅಂಕಣಕ್ಕೆ ಇಳಿದ ಛಲಗಾರ ಸುಷ್ಮಂತ್ ಒಂಟಿ ಕಾಲಲ್ಲೇ ಟೂರ್ನಿ ಆಯೋಜಿಸಿ ಗೆದ್ದ ಸುಷ್ಮಂತ್
ಭಾರತೀಯ ಪ್ರೊ ಕಬ್ಬಡ್ಡಿ ತಂಡದ ಬಾಗಿಲು ಬಡಿದು ಬಂದಿದ್ದ ಸುಷ್ಮಂತ್ ಎನ್ನುವ ಮಲೆನಾಡಿನ ಪ್ರತಿಭೆ ಇನ್ನೇನು ಮುಂಬೈ ತಂಡ ಸೇರಿಯೇ ಬಿಟ್ಟ ಅನ್ನೋವಷ್ಟರಲ್ಲಿ ಆತನ ಜೀವನದಲ್ಲಿ ವಿಧಿ ಬೇರೆಯದೇ ಆಟ ಆಡಿತ್ತು. ಮೂರು ವರ್ಷಗಳ ಹಿಂದೆ ಪ್ರೊ ಕಬಡ್ಡಿ ಉತ್ತುಂಗಕ್ಕೆ ಏರಿದಾಗ ಕಬಡ್ಡಿ ಆಟಗಾರರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ಸಂತಸದ ಮಾತೇ.ಮಲೆನಾಡಿನ ಹೊಸನಗರದ ಹೆದ್ದಾರಿಪುರದ ತೊರೆಗದ್ದೆಯ ಮಧ್ಯಮ ಕುಟುಂಬದ ಹುಡುಗ ಬಾಲ್ಯದಿಂದಲೂ ಕಬ್ಬಡ್ಡಿ ಅಂಕಣದಲ್ಲಿ ಕಳೆದದ್ದೇ ಹೆಚ್ಚು. […]
ಮುಳುಗುವೀರ ಈಶ್ವರ ಮಲ್ಪೆಯವರಿಗೆ ಉಡುಪಿಯ ಕನ್ನಡ, ತುಳು ವೇದಿಕೆಯಿಂದ ಸನ್ಮಾನ
ಮಲ್ಪೆ(ಮೇ,15): ಕನ್ನಡ ಮತ್ತು ತುಳು ಸಾಹಿತ್ಯ ವೇದಿಕೆ, ಉಡುಪಿ ಜಿಲ್ಲೆ ಇದರ ಎರಡನೆಯ ವಾರ್ಷಿಕೋತ್ಸವದ ಪ್ರಯುಕ್ತ ಖ್ಯಾತ ಮುಳುಗುವೀರ ಹಾಗೂ ಸಮಾಜ ಸೇವಕ ಶ್ರೀಯುತ ಈಶ್ವರ ಮಲ್ಪೆ ಇವರನ್ನು ಸನ್ಮಾನಿಸಲಾಯಿತು. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ವೇದಿಕೆಯ ಸದಸ್ಯರೆಲ್ಲರೂ ಪ್ರತಿವರ್ಷ ಹಣವನ್ನು ಒಟ್ಟುಗೂಡಿಸಿ, ಅರ್ಹರಿಗೆ ನೀಡಿ, ಆ ಮೂಲಕ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಬಾರಿ ವೇದಿಕೆಯು ಸ್ಪಂದನ ವಿಶೇಷ ಮಕ್ಕಳ ಶಾಲೆ, […]