ಹೆಮ್ಮಾಡಿ (ಫೆ.15): ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ರಥ ಫೆಬ್ರವರಿ 15 ರಂದು ಕೊಟೇಶ್ವರದಿಂದ ಭವ್ಯ ಪುರಮೆರವಣಿಗೆಯೊಂದಿಗೆ ಶ್ರೀಕ್ಷೇತ್ರ ಕೊಲ್ಲೂರಿಗೆ ತಲುಪಿತು. 400 ವರ್ಷಗಳ ಬಳಿಕ ನಿರ್ಮಾಣಗೊಂಡ ಈ ರಥವನ್ನು ಮುರ್ಡೆಶ್ವರದ ಉದ್ಯಮಿ ದಿ.ಆರ್.ಎನ್.ಶೆಟ್ಟಿ ಅವರ ಪುತ್ರ ಸುನಿಲ್ ಆರ್.ಶೆಟ್ಟಿ ರವರು ಸೇವಾರೂಪದಲ್ಲಿ ನಿರ್ಮಿಸಿಕೊಟ್ಟಿದ್ದು ಮೂಲ ರಥದ ಮಾದರಿಯಲ್ಲೇ ಕೊಟೇಶ್ವರದ ಪ್ರಸಿದ್ದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ರಥವನ್ನು ನಿರ್ಮಿಸಲಾಗಿದ್ದು, ಫೆ.16ರಂದು ಕೊಲ್ಲೂರಿನಲ್ಲಿ […]
Month: February 2023
ವಿದ್ಯಾರ್ಥಿಗಳು ಸಾಂಸ್ಕೃತಿಕ ಕ್ಷೇತ್ರ ಮತ್ತು ಸಾಹಿತ್ಯದ ಒಲವುಳ್ಳವರಾಗಬೇಕು: ಶ್ರೀ ವಿ.ಸುನೀಲ್ ಕುಮಾರ್
ಕಾರ್ಕಳ ( ಫೆ.11): ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತರಾಗದೇ ಶ್ರೀಮಂತವಾಗಿರುವ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೂ ತಮನ್ನು ತೆರೆದುಕೊಳ್ಳಬೇಕು ಎಂದು ಸಚಿವ ಶ್ರೀ ವಿ.ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳದ ಉಮಿಕ್ಕಳ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆದ “ಪರಶುರಾಮ”ನಾಟಕ ಪ್ರದರ್ಶನ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಸ್.ವಿ.ಟಿ. ವಿದ್ಯಾಸಂಸ್ಥೆಗಳ […]
ಹೆಮ್ಮಾಡಿ: ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆಗೈದ ಜನತಾ ಪಿ .ಯು ಕಾಲೇಜಿನ ವಿದ್ಯಾರ್ಥಿಗಳು
ಹೆಮ್ಮಾಡಿ(ಫೆ.08): ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಪ್ರಾರಂಭದ ಪ್ರಥಮ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದಿದ್ದಾರೆ. ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡುತ್ತಿದೆ, ಜೆಇಇ ಮೈನ್ಸ್ 2023 ಪರೀಕ್ಷೆಯಲ್ಲಿ ಕ್ರಮವಾಗಿ ಸುಮಂತ್ 96 ಪರ್ಸಂಟೈಲ್( 99.12* ಪರ್ಸಂಟೈಲ್ ರಸಾಯನ ಶಾಸ್ತ್ರ) ,ಆಯುಷ್ ಜೆ.ಸಿ 95 […]
ಹೇರೂರು: ಅನಾರೋಗ್ಯ ಪೀಡಿತ ಸುರೇಂದ್ರ ರವರ ಚಿಕಿತ್ಸೆಗೆ ಮನವಿ
ಬೈಂದೂರು ( ಫೆ.07): ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇರೂರು ಗ್ರಾಮದ ನಿವಾಸಿಯಾಗಿರುವ ನೀಲು ಮೊಗವೀರ ಇವರ ಮಗ ಸುರೇಂದ್ರ ರಕ್ತದಲ್ಲಿ ಹೇಮಾ ಪೋಲಿಯ ಎಂಬ ಬ್ಲಡ್ ಸೇಲ್ಸ್ (blood cells ) ಇಲ್ಲದಿರುವ ಕಾಯಿಲೆಗೆ ತುತ್ತಾಗಿದ್ದು, ಈಗಾಗಲೇ ಚಿಕಿತ್ಸೆಗೆ 10 ಲಕ್ಷಕ್ಕಿಂತಲೂ ಹೆಚ್ಚು ವ್ಯಯವಾಗಿದ್ದು , ಆಪರೇಷನ್ ಗೆ 15 ಲಕ್ಷದ ಅಗತ್ಯವಿದ್ದು, ಇಷ್ಟು ಹಣವನ್ನು ಬರಿಸಲು ಕಡು ಬಡತನದಲ್ಲಿರುವ ಕುಟುಂಬಕ್ಕೆ ಸಾಧ್ಯವಾಗದೇ ದಿಕ್ಕು ತೋಚದಾಗಿದ್ದು ಚಿಕಿತ್ಸೆಗೆ ದಾನಿಗಳ ಮೊರೆ […]
ಕ್ರಿಯೇಟಿವ್ ಪಿ ಯು ಕಾಲೇಜು ಕಾರ್ಕಳ :ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ದೀಕ್ಷಾ ಆಚಾರ್ಯ ಹಾಗೂ ಶ್ರಾವ್ಯಾ ಸಿ.ಎಸ್ ಉತ್ತೀರ್ಣ
ಕಾರ್ಕಳ (ಫೆ.06): ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ(ICAI) 2022 ರ ಡಿಸೆಂಬರ್ ನಲ್ಲಿ ನಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು ಕಾಲೇಜಿನ ಹಳೆವಿದ್ಯಾರ್ಥಿಗಳಾದ ದೀಕ್ಷಾ ಆಚಾರ್ಯ ಮತ್ತು ಶ್ರಾವ್ಯಾ ಸಿ.ಎಸ್ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಕ್ರಿಯೇಟಿವ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ಪಿ.ಯು.ಸಿ ಯಿಂದಲೇ ಸಿ.ಎ ಮತ್ತು ಸಿ.ಎಸ್.ಇ.ಇ.ಟಿ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ಹಿಂದೆ […]
ಡಾ| ಬಿ.ಬಿ. ಹೆಗ್ಡೆ ಕಾಲೇಜು – ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ
ಕುಂದಾಪುರ (ಫೆ.06): ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಇಂಡಿಯನ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಇಂಡಿಯನ್ ರೆಡ್ ಕ್ರಾಸ್ ಘಟಕದ ಸಭಾಪತಿಗಳಾದ ಶ್ರೀ ಜಯಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಯುವ ರೆಡ್ ಕ್ರಾಸ್ ಕಾರ್ಯವೈಕರಿಯಲ್ಲಿ ಇಂದಿನ ಯುವ ಪೀಳಿಗೆ ಹೇಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. […]
ದಯಾನಿಧಿ ಬಂಟರ ಬಳಗ ಅಶಕ್ತರ ಪಾಲಿನ ಬೆಳಕು -ಶ್ರೀ ಬಿ ಅಪ್ಪಣ್ಣ ಹೆಗ್ಡೆ
ಕೋಟೇಶ್ವರ (ಫೆ.06): ಬಡತನದಲ್ಲಿ ಹುಟ್ಟಿ, ಬಡತನದ ನೋವುಂಡು, ಅದನ್ನು ಮೆಟ್ಟಿ ನಿಲ್ಲಬೇಕೆಂಬ ಏಕೈಕ ಆಶಯದೊಂದಿಗೆ ಸಿಕ್ಕ ಪ್ರತಿ ಅವಕಾಶಗಳನ್ನು ಬಳಸಿಕೊಂಡು, ಅವಕಾಶ ಇಲ್ಲದಾಗ ಅದನ್ನು ಸೃಷ್ಟಿಸಿಕೊಂಡು ಅವಿರತ ಪ್ರಯತ್ನ ಮಾಡುತ್ತಿರುವಾಗ, ವ್ಯಕ್ತಿ ಓರ್ವ ಮಾರಕ ಕಾಯಿಲೆಗೆ ತುತ್ತಾದಾಗ ಅವನ ಇಡೀ ಸಂಸಾರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಜೀವನವೇ ಕಷ್ಟ ಸಾಧ್ಯವಾಗುತ್ತದೆ. ಅಂತಹ ಸಂಸಾರಕ್ಕೆ ಆಸರೆಯಾಗಿ ನಿಂತು ಅವರ ಅನಾರೋಗ್ಯದ ಬಗ್ಗೆ ಒಂದು ನಿಧಿಯನ್ನು ನೀಡಿ, ಅವರ ಬಾಳನ್ನು ಹಸನಾಗಿಸಲು ಕಂಕಣಬದ್ಧವಾಗಿ […]
ಡಾ.ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಅಮುಕ್ತ್ ವತಿಯಿಂದ ಸನ್ಮಾನ
ಕುಂದಾಪುರ (ಫೆ 06): ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಅಧ್ಯಾಪಕರ ಸಂಘ (ರಿ.) (ಅಮುಕ್ತ್) ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಫೆಬ್ರವರಿ 05 ರ ಆದಿತ್ಯವಾರ ನಡೆಸಿದ 36 ನೆಯ ವಾರ್ಷಿಕ ಸಮ್ಮೇಳನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ ಪುರಸ್ಕೃತರಾದ ಶ್ರೀ ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಅಮುಕ್ತ್ ನ ಪರವಾಗಿ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ನ ನಿರ್ದೇಶಕರಾದ ಡಾ. ಅಪ್ಪಾಜಿಗೌಡ ಸನ್ಮಾನಿಸಿ ಗೌರವಿಸಿದರು. ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ […]
ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಕೊಲ್ಲೂರು: ರಾಷ್ಟ್ರೀಯ ಮತದಾರರ ದಿನಾಚರಣೆ
ಕುಂದಾಪುರ ( ಫೆ,06): ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯಮತದಾರರ ದಿನ ಆಚರಣೆಯನ್ನು ಪ್ರತಿಜ್ಞಾ ವಿಧಿ ಭೋಧಿಸುವುದರ ಮೂಲಕ ಆಚರಿಸಲಾಯಿತು. ಈ ಪ್ರತಿಜ್ಞಾ ವಿಧಿಯನ್ನು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಸಂಗೀತಾ ಶೆಟ್ಟಿ ಬಗ್ವಾಡಿ ಭೋಧಿಸಿ ವಿದ್ಯಾರ್ಥಿಗಳಲ್ಲಿ ಮತಧಾನದ ಪ್ರಾಮುಖ್ಯತೆ ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ.ಬಿ ವಹಿಸಿ ಮತದಾನದ ಹಕ್ಕು […]
ಡಾ| ಬಿ. ಬಿ. ಹೆಗ್ಡೆ ಕಾಲೇಜಿಗೆ ಸಾಫ್ಟ್ ಬಾಲ್ ನಲ್ಲಿ ಬಿ.ಎಂ. ಸುಕುಮಾರ್ ಶೆಟ್ಟಿ ಪರ್ಯಾಯ ಪಾರಿತೋಷಕ ಪ್ರಶಸ್ತಿ
ಕುಂದಾಪುರ (ಫೆ.6): ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವುನಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಫ್ಟ್ ಬಾಲ್ ಪಂದ್ಯಾಟದಲ್ಲಿ ಸಮಗ್ರ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ಬಿ.ಎಂ.ಎಸ್. ಪರ್ಯಾಯ ಪಾರಿತೋಷಕವನ್ನು ಪಡೆದುಕೊಂಡಿದೆ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ , ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ರಂಜಿತ್ ಟಿ.ಎನ್. ತಂಡಕ್ಕೆ […]










