ಗಂಗೊಳ್ಳಿ(ಜು,20): ಇಲ್ಲಿನ ಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಕ್ತನ ಮತ್ತು ಹಳೆ ವಿದ್ಯಾರ್ಥಿಗಳು ಇಲ್ಲಿನ ಸರಸ್ವತಿ ವಿದ್ಯಾಲಯದ ರೋಟರಿ ಸಭಾಂಗಣದಲ್ಲಿ ಪ್ರದರ್ಶಿಸಿದ ‘ಮರಣಿ ಮಾಂಟೆ’ ನಾಟಕವು ತನ್ನ ವಿಶೇಷವಾದ ಕಥಾ ವಸ್ತು ಮತ್ತು ಕಥನ ಶೈಲಿಯಿಂದ ಗಮನ ಸೆಳೆದು ಜನ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಸಾವು ಬಾರದಂತೆ ಔಷಧಿ ಕಂಡು ಹುಡುಕಿ ಸಾವಿನ ದೇವತೆಗೆ ಸವಾಲು ಹಾಕುವ ವೈದ್ಯನೊಬ್ಬ ಕೊನೆಯಲ್ಲಿ […]
Month: July 2023
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್: ಪದ ಪ್ರಧಾನ ಸಮಾರಂಭ
ಕುಂದಾಪುರ(ಜುಲೈ 15): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಇದರ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 15 ರಂದು ಬಂಟರೆ ಯಾನೆ ನಾಡವರ ಸಂಕೀರ್ಣದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ನಡೆಯಿತು. ಯೂತ್ ಎಂಪವರ್ಮೆಂಟ್ ಜಿಲ್ಲಾ ಕೋ ಆರ್ಡಿನೆಟರ್ಲ .ರಾಜೀವ್ ಕೋಟ್ಯಾನ್ ಎಂ.ಜೆ.ಎಫ್ ಪದಗ್ರಹಣ ನೆರವೇರಿಸಿದರು. ಲ. ವಸಂತರಾಜ್ ಶೆಟ್ಟಿ ನೂತನ ಅಧ್ಯಕ್ಷರಾಗಿ, ಲ. ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು ಕಾರ್ಯದರ್ಶಿಯಾಗಿ, ಲ.ಸುಕುಮಾರ ಶೆಟ್ಟಿ […]
ಪ್ರೊ.ಎಂ.ಕೆ.ಗವಿಮಠಗೆ ಪಿಎಚ್ಡಿ ಪದವಿ ಪ್ರದಾನ
ಮುಧೋಳ(ಜು,20): ಬಾಗಲಕೋಟ ಬಿವಿವಿ ಸಂಘದ ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ. ಮೃತ್ಯು೦ಜಯ ಕೆ.ಗವಿಮಠ ಅವರಿಗೆ ಬೆಳಗಾವಿ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಪಿಎಚ್ಡಿ ಪದವಿ ನೀಡಿದೆ. ಅವರು ದಾವಣಗೆರೆಯ ಜೈನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಕಲ್ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸದಾನಂದ ಎನ್.ಪಾಟೀಲ ರವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ದಿ ಸ್ಟಡಿ ಆನ್ ರಿಸೆಂಟ್ ಜನರಾಲಿಜೇಷನ್ ಇನ್ ಕಂಟಿನೂಯಸ್ ಹೋಮಯೋಮ್ ರಿಜಮ್ ಮ್ಯಾಪ್ಸ್ ಯೂಸಿಂಗ್ ಬೈ-ಟೋಪೋಲೋಜಿ […]
ಕ್ರಿಯೇಟಿವ್ ಪಿ ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್.ಇ.ಇ.ಟಿ ಮಾಹಿತಿ ಕಾರ್ಯಗಾರ
ಕಾರ್ಕಳ (ಜು,20): ಜುಲೈ 17 ಮತ್ತು ಜುಲೈ 19 ರಂದು ಕ್ರಿಯೇಟಿವ್ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್.ಇ.ಇ.ಟಿ ಮಾಹಿತಿ ಕಾರ್ಯಗಾರವನ್ನು ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಿ.ಎ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೋಫೆಸರ್ ರಾಜ್ ಗಣೇಶ್ ಕಾಮತ್ ಆಗಮಿಸಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್ ಅಕೌಂಟ್ ಕೋರ್ಸ್ ಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಕಾಲೇಜುನಲ್ಲಿ ಒದಗಿಸುವ ಈ ಕೋರ್ಸ್ ನ್ನು […]
ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ (ಜುಲೈ,19): ಬಿ ಎಂ ಸುಕುಮಾರ ಶೆಟ್ಟಿ ಯವರ ಅಧ್ಯಕ್ಷತೆಯ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಣೇಶ್ ಶೆಟ್ಟಿ, ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್, ನೆಂಪು ಇವರು ಕುಂದಾಪ್ರ ಭಾಷೆಯ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಮಹತ್ವದ ಕುರಿತು ಮಾತನಾಡಿದರು. […]
ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ: ಪ್ರಿ ಪ್ಲೇಸ್ಮೆಂಟ್ ತರಬೇತಿ
ಕುಂದಾಪುರ (ಜುಲೈ 19): ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಜುಲೈ13 ರಂದು ಅಂತಿಮ ವರ್ಷದ ಬಿ.ಕಾಂ. ಮತ್ತು ಬಿ.ಬಿ.ಎ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Pharmit ವತಿಯಿಂದ ಕಾಲೇಜಿನಲ್ಲಿ ಪ್ರಿ ಪ್ಲೇಸ್ಮೆಂಟ್ ತರಬೇತಿ ನೆರವೇರಿತು. Pharmit ಸಂಸ್ಥೆಯ ಡೈರೆಕ್ಟರ್ರಾದ ಶ್ರೀ ಸಂದೀಪ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ ಕುಮಾರ್, ಶ್ರೀ ರಜತ್ […]
ಆರ್. ಎನ್. ಶೆಟ್ಟಿ ಪಿ ಯು ಕಾಲೇಜು,ಕುಂದಾಪುರ: ಜೆ.ಸಿ.ಐ ಉಪ್ಪುಂದ ವತಿಯಿಂದ ವ್ಯಕ್ತಿತ್ವ ವಿಕಸನ ತರಬೇತಿ
ಕುಂದಾಪುರ:(ಜು,19): ವೃತ್ತಿಪರ ವಿದ್ಯೆಯಲ್ಲಿ ಪರಿಣತಿಯನ್ನು ಪಡೆದು ತನ್ನ ಬೆಳವಣಿಗೆಯ ಮೂಲಕ ಇತರರ ಯಶಸ್ಸಿಗೂ ಸಹಕಾರಿಯಾಗಬೇಕು. ಈ ರೀತಿಯಲ್ಲಿ ವಿದ್ಯಾರ್ಥಿಗಳು ಎಳೆ ಪ್ರಾಯದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಜೆ.ಸಿ. ಐ ಉಪ್ಪುಂದ ಇದರ ವತಿಯಿಂದ ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆ.ಸಿ ವಲಯ XV ರ ತರಬೇತುದಾರರಾದ ಡಾ. ಜಗದೀಶ್ ಜೋಗಿ ಇವರು ಕರೆ ನೀಡಿದರು. […]
ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು, ಹೆಮ್ಮಾಡಿ : ಪೋಷಕ-ಶಿಕ್ಷಕರ ಸಭೆ
ಹೆಮ್ಮಾಡಿ(ಜು,19): ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ಪ್ರಥಮ ಪೋಷಕ-ಶಿಕ್ಷಕರ ಸಭೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ಮಾತನಾಡಿ ವರ್ಷದ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಬದಲಾದ ಪರೀಕ್ಷಾ ಪದ್ದತಿಯ ಕುರಿತು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಸುನಿಲ್ ರವರು ಸ್ಪರ್ಧಾತ್ಮಕ ಪರೀಕ್ಷೆಗಳ ನೋಂದಾವಣೆಗೆ ವಿದ್ಯಾರ್ಥಿ ದಾಖಲೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಕಾಲೇಜಿನ ಉಪ-ಪ್ರಾಂಶುಪಾಲರಾದ […]
ಸಾಹಿತ್ಯದ ಅರಿವಿನಿಂದ ಬದುಕಿನ ದರ್ಶನ : ಡಾ| ರವಿರಾಜ್ ಶೆಟ್ಟಿ
ಕುಂದಾಪುರ (ಜುಲೈ 17): ಸಾಹಿತ್ಯದ ಓದು ಅರಿವಾಗಿ ಅದು ಬೆಳಕಾದಾಗ ಮಾತ್ರ ಓದಿಗೆ ಬೆಲೆ. ಅದರೊಂದಿಗೆ ಬದುಕಿನ ವಾಸ್ತವವನ್ನು ಅರ್ಥೈಸಿಕೊಂಡು ನಮ್ಮ ಎಲ್ಲೆಗಳನ್ನು ಮೀರುವ ಪ್ರಯತ್ನ ಮಾಡುವ ಅರಿವು ಸಾಹಿತ್ಯದಿಂದ ಮೂಡಿದಾಗ ಬದುಕಿನ ಚಿರಂತನ ದರ್ಶನ ಸಾಧ್ಯ ಎಂದು ಡಾ| ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿಯ ಕನ್ನಡ ಪ್ರಾಧ್ಯಾಪಕ ಡಾ| ರವಿರಾಜ್ ಶೆಟ್ಟಿ ಹೇಳಿದರು. ಇವರು ಇಲ್ಲಿನ ಡಾ| […]
ಡಾI ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶಾಲಾಕ್ಷಿ ಬಿ. ಹೆಗ್ಡೆಯವರ ಸಂಸ್ಮರಣೆ
ಕುಂದಾಪುರ (ಜು, 18) : ಡಾ|ಬಸ್ರೂರು ಭುಜಂಗ ಹೆಗ್ಡೆಯವರ ನೆನಪಿನಲ್ಲಿ ಡಾ|ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜನ್ನು ನಿರ್ಮಿಸಲು ಸ್ಥಳದಾನ ಮಾಡಿದ ಸೌಕೂರು ಸೇರ್ವೆಗಾರ್ ಮನೆತನದ ವಿಶಾಲಾಕ್ಷಿ ಬಿ.ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ ಜುಲೈ .18 ರಂದು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ.ಕೆ .ಉಮೇಶ್ ಶೆಟ್ಟಿ ಸಂಸ್ಮರಣಾ ಮಾತುಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ರವೀನಾ […]