ಗಂಗೊಳ್ಳಿ(ಜು,20): ಇಲ್ಲಿನ ಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಕ್ತನ ಮತ್ತು ಹಳೆ ವಿದ್ಯಾರ್ಥಿಗಳು ಇಲ್ಲಿನ ಸರಸ್ವತಿ ವಿದ್ಯಾಲಯದ ರೋಟರಿ ಸಭಾಂಗಣದಲ್ಲಿ ಪ್ರದರ್ಶಿಸಿದ ‘ಮರಣಿ ಮಾಂಟೆ’ ನಾಟಕವು ತನ್ನ ವಿಶೇಷವಾದ ಕಥಾ ವಸ್ತು ಮತ್ತು ಕಥನ ಶೈಲಿಯಿಂದ ಗಮನ ಸೆಳೆದು ಜನ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಸಾವು ಬಾರದಂತೆ ಔಷಧಿ ಕಂಡು ಹುಡುಕಿ ಸಾವಿನ ದೇವತೆಗೆ ಸವಾಲು ಹಾಕುವ ವೈದ್ಯನೊಬ್ಬ ಕೊನೆಯಲ್ಲಿ ವಿಧಿಯೆದುರು ಸೋಲುವ ವಿಶಿಷ್ಠ ಕಥಾನಕವನ್ನು ಈ ನಾಟಕವು ಹೊಂದಿದೆ. ಶ್ರಾವ್ಯ ಎನ್, ಅಮೀಕ್ಷಾ ಡಿ ನಾಯ್ಕ್, ನಿಶಾ ಬಿ ಪೂಜಾರಿ , ಹೃತಿಕಾ , ದಿಯಾ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸರಸ್ವತಿ ವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿಯವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.