ಮುಧೋಳ(ಜು,20): ಬಾಗಲಕೋಟ ಬಿವಿವಿ ಸಂಘದ ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ. ಮೃತ್ಯು೦ಜಯ ಕೆ.ಗವಿಮಠ ಅವರಿಗೆ ಬೆಳಗಾವಿ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಪಿಎಚ್ಡಿ ಪದವಿ ನೀಡಿದೆ.
ಅವರು ದಾವಣಗೆರೆಯ ಜೈನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಕಲ್ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸದಾನಂದ ಎನ್.ಪಾಟೀಲ ರವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ದಿ ಸ್ಟಡಿ ಆನ್ ರಿಸೆಂಟ್ ಜನರಾಲಿಜೇಷನ್ ಇನ್ ಕಂಟಿನೂಯಸ್ ಹೋಮಯೋಮ್ ರಿಜಮ್ ಮ್ಯಾಪ್ಸ್ ಯೂಸಿಂಗ್ ಬೈ-ಟೋಪೋಲೋಜಿ ಆಂಡ್ ಪ್ಯೂಜಿ ಟೊಪೋಲೋಜಿಕಲ್ ಸ್ಟೈಸಿಸ್ ಎಂಬ ಸಂಶೋಧನಾ ಮಹಾ ಪ್ರಬ೦ಧಕ್ಕೆ ಪಿಎಚ್ ಡಿ ಪದವಿ ಲಭಿಸಿದೆ.
ಈ ಸಾಧನೆಗೆ ಬಿವಿವಿ ಸಂಘದ ಗೌರವ ಅಧ್ಯಕ್ಷ ಮಹೇಶ ಎನ್.ಅಥಣಿ, ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಸಂಘದ ಕಾಲೇಜುಗಳ ಆಡಳಿತ ಮ೦ಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎನ್. ಗಾಂವಕರ, ಪ್ರಾಚಾರ್ಯ ಪ್ರೊ.ಬಿ.ಆರ್. ಪಾಟೀಲ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.