ಕಾರ್ಕಳ(ಆ,15): ನಮ್ಮ ದೇಶಕ್ಕೆ ಹಿರಿಯರ ನಿಃಸ್ವಾರ್ಥ, ತ್ಯಾಗ, ದೇಶಪ್ರೇಮದ ಪರಾಕಾಷ್ಠೆಯ ಪರಿಣಾಮ ಇಂದು ಸ್ವತಂತ್ರ ಭಾರತದಲ್ಲಿ ನಾವು ಜೀವಿಸುತ್ತಿದ್ದೇವೆ. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಪೂರ್ವಜರು ಭಾರತವೆಂಬುದು ಶ್ರೇಷ್ಠ ಭಾರತವಾಗಬೇಕೆಂದು ಬಲಿದಾನಗೈದರು. ಇಂತಹ ಅಮೃತಕಾಲವನ್ನು ನಾವು ಸಂಪತ್ತಿನಂತೆ ಕಾಪಾಡಿಕೊಳ್ಳಬೇಕು ಎಂದು ಕಾರ್ಕಳದ ಖ್ಯಾತನ್ಯಾಯವಾದಿ ಶ್ರೀ ಎಂ ಕೆ ವಿಜಯಕುಮಾರ್ ಕರೆ ನೀಡಿದರು. ಅವರು ಕಾರ್ಕಳ ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡುತ್ತ ಇಂತಹ ಭರತ ಭೂಮಿಯಲ್ಲಿ ಜನಿಸಿರುವುದೇ […]
Day: August 15, 2023
ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ: 77ನೇ ಸ್ವಾತಂತ್ರ್ಯ ದಿನಾಚರಣೆ
ಕುಂದಾಪುರ (ಆ, 15) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಘಟಕದಲ್ಲಿ ಆಯೋಜಿಸಿದ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರು ನೆರವೇರಿಸಿದರು. ಶಿಕ್ಷಣದಿಂದ ರಾಷ್ಟ್ರಪ್ರೇಮವನ್ನು ಬೆಳೆಸುವ ಮೂಲಕ ಸಧೃಡ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು. ಈ ಸಂದರ್ಭ ಕಾಲೇಜಿನ ಪಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಶ್ರೀ […]
ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ: ಕಾನೂನು ಅರಿವು ಕಾರ್ಯಕ್ರಮ
ಕುಂದಾಪುರ (ಆ,15): ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು ಮತ್ತು ಪೋಕ್ಸ್ ಕಾಯ್ದೆಯ ಕುರಿತಾಗಿ ಅರಿವು ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸತ್ರ ನ್ಯಾಯಾಲಯದ ಸರ್ಕಾರಿ ವಿಶೇಷ ಅಭಿಯೋಜಕರಾಗಿರುವಂತಹ ಶ್ರೀ ಬಿ ಎಸ್ ಕಾಳವರ್ಕರ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. […]
ಮೊಗವೀರ ಯುವ ಸಂಘಟನೆಯ [ರಿ.] ಉಡುಪಿ ಜಿಲ್ಲೆ,ಹೆಮ್ಮಾಡಿ ಘಟಕ: ಸೈನಿಕರಿಗೆ ಗೌರವಾರ್ಪಣೆ
ಹೆಮ್ಮಾಡಿ(ಆ,15): ಮೊಗವೀರ ಯುವ ಸಂಘಟನೆಯ [ರಿ.] ಉಡುಪಿ ಜಿಲ್ಲೆ,ಹೆಮ್ಮಾಡಿ ಘಟಕ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಉಡುಪಿ ,ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ಸೈನಿಕರಿಗೊಂದು ಗೌರವಾರ್ಪಣೆ ಕಾರ್ಯಕ್ರಮಹಿನ್ನೆಲೆಯಲ್ಲಿ ಹೆಮ್ಮಾಡಿಯ ನಿವ್ರತ್ತ ಯೋಧ ನಾರಾಯಣ ಬಿಲ್ಲವರ ಸ್ವ ಗೃಹಕ್ಕೆ ತೆರಳಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ(ರಿ.), ಕುಂದಾಪುರ ಶಾಖೆಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿ ಯಂಗಡಿ […]
ಡಾ| ಬಿ.ಬಿ.ಹೆಗ್ಡೆ ಕಾಲೇಜು: ಅoತಿಮ ವರ್ಷದ ವಿದ್ಯಾರ್ಥಿಗಳಿಗೆ 8 ದಿನಗಳ ವೃತ್ತಿ ಕೌಶಲ್ಯ ತರಬೇತಿ
ಕುಂದಾಪುರ (ಆ,15): ಐಬಿಎಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರ ಸಹಭಾಗಿತ್ವದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯದ ವಿಶೇಷ ತರಬೇತಿ ಶಿಬಿರ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತ್ರತ್ವದಲ್ಲಿ ಆ.14 ರಂದು ಉದ್ಘಾಟನೆಗೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ, ತರಬೇತಿ ಶಿಬಿರದ ಅಗತ್ಯತೆ ಮತ್ತು ಮಹತ್ವದ ಕುರಿತು ಮಾತನಾಡಿದರು. ಶ್ರೀಮತಿ ಭಾರತಿ ವಸಂತ್, ಮ್ಯಾನೇಜರ್, ಕೆನರಾ ಬ್ಯಾಂಕ್, ಕುಂದಾಪುರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. […]
ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿ :“ವಿಧಾನ ಪರೀಷತ್ ಸದಸ್ಯರಾದ ಶ್ರೀ ಎಸ್.ಎಲ್ ಭೋಜೆಗೌಡರಿಂದ ಧ್ವಜಾರೋಹಣ
ಯಡಾಡಿ-ಮತ್ಯಾಡಿ(ಆ,15): ಇಲ್ಲಿನ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು -ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಎಸ್.ಎಲ್ ಭೋಜೆಗೌಡರು ಆಗಮಿಸಿ, ವಿಶೇಷ ಪಥ ಸಂಚಲನದ ಮೂಲಕ ವೇದಿಕೆಗೆ ಶಾಲಾ ಆಡಳಿತ ಮಂಡಳಿಯ ಸಹಭಾಗಿತ್ವದೊಂದಿಗೆ ಕರೆ ತರಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್. ಎಲ್ ಭೋಜೇಗೌಡರು ಧ್ವಜಾರೋಹಣಗೈದು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ಮುಂದಿನ ಭವ್ಯ […]
ಬೆಂಗಳೂರು: 1000 ನೇ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಕಲಾಕ್ಷೇತ್ರ
ಬೆಂಗಳೂರು (ಆ,15): ಇದೇ ಅಗಸ್ಟ್ 16 ರ ರಾತ್ರಿ 9:30 ಕ್ಕೆ ಸರಿಯಾಗಿ ಸಾಲಿಗ್ರಾಮ ಹಾಗೂ ಸೌಕೂರು ಮೇಳದ ದಿಗ್ಗಜ ಅತಿಥಿ ಕಲಾವಿದರ ಸಮ್ಮಿಲನದಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಬೇಲ್ತೂರು ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗ 1000 ನೇಯ ಪ್ರದರ್ಶನಗೊಳ್ಳಲಿದೆ.. ಮುಖ್ಯ ಅತಿಥಿಯಾಗಿ ಕೆ.ಜಯಪ್ರಕಾಶ್ ಹೆಗ್ಡೆ, ಮತ್ತು ಅನೇಕ ಗಣ್ಯರು ಆಗಮಿಸಿಲಿದ್ದಾರೆ, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಂತಹ ಅಭೂತಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಿ ಎಂದು ಯಕ್ಷ ಬ್ರಹ್ಮಶ್ರೀ ತಂಡದ […]
ಎಚ್. ಎಮ್. ಎಮ್ & ವಿ.ಕೆ. ಆರ್ ಶಾಲೆ: 77ನೇ ಸ್ವಾತಂತ್ರ್ಯೋತ್ಸವ
ಕುಂದಾಪುರ (ಆ,15) : ಶ್ರೀ ಬಿ. ಎಮ್ ಸುಕುಮಾರ ಶೆಟ್ಟಿಯವರ ನೇತೃತ್ವದ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ 77ನೇ ಸ್ವಾತಂತ್ರ್ಯೋತ್ಸವ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ ಪ್ರೌಢಶಾಲಾ ಶಿಕ್ಷಕ ಕೆ. ಪರಮೇಶ್ವರ ಉಡುಪ ಧ್ವಜಾರೋಹಣಗೈದು, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಮಹತ್ವವನ್ನು ಅರುಹಿದರು. ಕಾರ್ಯಕ್ರಮದ ಅಧ್ಯಕ್ಷರೂ, ಸಂಸ್ಥೆಯ ಪ್ರಾಂಶುಪಾಲರೂ ಆದಂತಹ ಡಾ. ಚಿಂತನಾ ರಾಜೇಶ್ ರವರು ವಿದ್ಯಾರ್ಥಿಗಳಿಗೆ […]