ಪ್ರತಿಭೆ ಮತ್ತು ರೂಪ ಭಗವಂತನ ಕೊಡುಗೆ ಎಂದು ಹೇಳುತ್ತಾರೆ. ಕೀರ್ತಿ ಮತ್ತು ಹಣ ಮನುಷ್ಯನ ಸೃಷ್ಟಿ.ಗೆಲುವಿಗೆ ಪ್ರತಿಭೆ ಬೇಕು. ಪ್ರತಿಯೊಂದು ಮಕ್ಕಳಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಕೆಲವರ ಪ್ರತಿಭೆ ಮುಖ್ಯವಾಹಿನಿಗೆ ಬಂದರೆ ಇನ್ನು ಕೆಲವರದು ತೆರೆಮರೆಯಲ್ಲೇ ಇರುತ್ತದೆ. ನಿಜವಾದ ಪ್ರತಿಭಾವಂತರಿಗೆ ಮತ್ತು ಸಾಧಕರಿಗೆ ಪ್ರಚಾರ ಹಾಗೂ ಪ್ರೋತ್ಸಾಹ ಅಗತ್ಯ. ಆ ನಿಟ್ಟಿನಲ್ಲಿ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು. ಪ್ರತಿಭಾವಂತರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿ ಎನ್ನುವ […]
Day: October 28, 2023
ಎಚ್.ಎಂ.ಎಂ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾಲ್ಮೀಕಿ ಜಯಂತಿ
ಕುಂದಾಪುರ (ಆ,28): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ.ಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅಕ್ಟೋಬರ್ 28 ರಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್, ವಿವಿಧ ವಿಭಾಗಗಳ ಮುಖ್ಯಸ್ಥರು ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ದೀಪ ಬೆಳಗಿಸಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನಗೈದರು.
ದತ್ತಾಶ್ರಮ ಆನಗಳ್ಳಿ : ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರ (ಆ.27): ಚೆಸ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವರ್ಣಿತಾ.ವಿ.ಕುಂದರ್ ಹಾಗೂ ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಖಾ ಬಿಜೂರ ಇವರನ್ನುಆನಗಳ್ಳಿ ದತ್ತಾಶ್ರಮ ಹಾಗೂ ಆದಿಶಕ್ತಿ ಮಠದಲ್ಲಿ ದತ್ತಾಶ್ರಮದ ಪ್ರವರ್ತಕರಾದ ಶ್ರೀಮತಿ ಫೆರ್ಮಿನಾ ಸುಭಾಸ್ ಪೂಜಾರಿಯವರು ಸನ್ಮಾನಿಸಿದರು. ಆಯ್ಕೆಯಾದ ಈ ವಿದ್ಯಾರ್ಥಿ ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ನಮ್ಮ ಕುಂದಾಪುರದ ಕೀರ್ತಿಪತಾಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಗಮ್ ಫ್ರೆಂಡ್ಸ್ ನ ಸದಸ್ಯರು, ಮತ್ತು ಗೆಳೆಯರ ಬಳಗ […]
ಗಂಗೊಳ್ಳಿ ಶಾರದೋತ್ಸವದಲ್ಲಿ ಸಂಜಿತ್ ಎಮ್ ದೇವಾಡಿಗರಿಂದ ಸ್ಯಾಕ್ಸೋಫೋನ್ ವಾದನ ಸೇವೆ
ಗಂಗೊಳ್ಳಿ(ಆ,27): ಸೇವಾ ಸಂಘ(ರಿ.) ಗಂಗೊಳ್ಳಿಯ 49 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ವೇದಿಕೆಯಲ್ಲಿ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಹುಮುಖ ಬಾಲ ಪ್ರತಿಭೆ ಸಂಜಿತ್ ಎಮ್ ದೇವಾಡಿಗ ತಮ್ಮ ತಂಡದೊಂದಿಗೆ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ಸಲ್ಲಿಸಿದರು. ಶಾರದೆ ದಯೆ ತೋರಿದೆ, ಡೀ ಡೀ ಆಡ್ಯಾನೇ ರಂಗ , ಆವ ಕುಲವೋ ರಂಗ, ಕಣ್ಣುಗಳೆರಡು ಸಾಲದಮ್ಮ, ಕಮಲದ ಮೊಗದೋಳೆ, ತುಳುವನಾಡ ಧರ್ಮ ತುಡರ್, ಎಂಥ ಅಂದ ಎಂಥ ಚಂದ, ತಂಬೂರಿ ಮೀಟಿದವ […]
ಕ್ರಿಕೆಟ್ : ಕುಂದಾಪುರದ ವಿ. ಕೆ. ಆರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ
ಕುಂದಾಪುರ (ಆ,27): ಇಲ್ಲಿನ ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಮೈಸೂರು ವಿಭಾಗೀಯ ಮಟ್ಟದ ಕ್ರಿಕೆಟ್ ಹಾರ್ಡ್ ಬಾಲ್ ಪಂದ್ಯಾಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 8ನೇ ತರಗತಿ ವಿದ್ಯಾರ್ಥಿನಿ ತ್ರಿಶಾ ಐ ನಾಯಕ್ 14ರ ವಯೋಮಾನದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. 10ನೇ ತರಗತಿಯ ಅಂಶಿತ್ 17ರ ವಯೋಮಾನದ […]
ಯುವ ಬಂಟರ ಸಂಘ: ರಕ್ತದಾನ ಶಿಬಿರ
ಕುಂದಾಪುರ(ಅ21): ಕುಂದಾಪುರ ತಾಲೂಕು ಯುವ ಬಂಟರ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತ ನಿಧಿ ಕೇಂದ್ರ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್, ಡಾ. ಬಿ ಬಿ ಹೆಗ್ಡೆ ಕಾಲೇಜು, ಭಂಡಾಕರ್ಸ್ ಕಾಲೇಜು ಹಾಗೂ ಕೋಟೇಶ್ವರದ ಶ್ರೀ ಕಾಳವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಇಲ್ಲಿನ ಆರ್ ಎನ್ ಶೆಟ್ಟಿ […]
ಡಾIಬಿ.ಬಿ.ಹೆಗ್ಡೆ ಕಾಲೇಜು:ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ(ಆ,27): ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರದಲ್ಲಿ ವಿಸ್ತರಣಾ ಚಟುವಟಿಕೆ ಜರುಗಿತು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಂತ್ರಜ್ಞರಾದ ಶ್ರೀ ವೀರೇಂದ್ರರವರು ವಿದ್ಯಾರ್ಥಿಗಳಿಗೆ ರಕ್ತವನ್ನು ನೀಡಲು ಹೇಗೆ ಸಹಾಯಕರಾಗಬೇಕು ಜೊತೆಗೆ ರಕ್ತ ಸಂಗ್ರಹ, ಪರಿಷ್ಕರಣೆ, ಮತ್ತು ಸಂಗ್ರಹಿಸಿದ ರಕ್ತದ ಪ್ರಕ್ರಿಯೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಸಭಾಪತಿಗಳಾದ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು ಎನ್.ಎಸ್.ಎಸ್ ಘಟಕ: ಹೂವಿನ ಕೋಲು ಪ್ರದರ್ಶನ
ಕುಂದಾಪುರ (ಅ. 24) : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯಕ್ಷಗಾನ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ ಸಾಂಪ್ರದಾಯಿಕ ಹೂವಿನ ಕೋಲು ಪ್ರದರ್ಶನ ನಡೆಯಿತು. ‘ಕೃಷ್ಣಾರ್ಜುನ’ ಪ್ರಸಂಗವನ್ನು ಆಯ್ಕೆ ಮಾಡಿಕೊಂಡು ಅರ್ಜುನನಾಗಿ ಅಂತಿಮ ಬಿ.ಎಸ್ಸಿ.ಯ ಲಕ್ಷ್ಮೀಕಾಂತ್ ಯು. ಶೆಟ್ಟಿ, ಕೃಷ್ಣನಾಗಿ, ದ್ವಿತೀಯ ಬಿ.ಕಾಂ. (ಡಿ)ನ ಪವಿತ್ರ ಪೈ ಅರ್ಥ ಹೇಳಿದರು. ಭಾಗವತಿಕೆಯಲ್ಲಿ ದ್ವಿತೀಯ ಬಿ.ಸಿ.ಎ. (ಎ)ನ ಪೂಜಾ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು: ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ. ಘಟಕದ ವತಿಯಿಂದ ಆರೋಗ್ಯ ಅರಿವು ಕಾರ್ಯಕ್ರಮ
ಕುಂದಾಪುರ (ಅ. 25) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್.ಸಿ.ಸಿ. ಘಟಕ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಮಾಹಿತಿ ಮತ್ತು ಶಿಕ್ಷಣ ವಿಭಾಗ, ಕುಂದಾಪುರ ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ ತಾಲೂಕು ಆರೋಗ್ಯ ಅಧಿಕಾರಿ ಡಾ| […]
ಸರಕಾರಿ ಪಿ ಯು ಕಾಲೇಜು ಹೊಸಂಗಡಿ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಹೆಮ್ಮಾಡಿ(ಅ.27): ಸರಕಾರಿ ಪಿ ಯು ಕಾಲೇಜು ಹೊಸಂಗಡಿ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2023, ಇದರ ಉದ್ಘಾಟನಾ ಕಾರ್ಯಕ್ರಮವು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆಯಲ್ಲಿ ಅಕ್ಟೋಬರ್ 25 ರಂದು ಜರಗಿತು. ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಇದರ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಸಚ್ಚಿದಾನಂದ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.. ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮಾ.ವ್ಯ.ಸೇ.ಸ.ಸಂ.ನಿ. ಮಾನಂಜೆ […]










