ಕುಂದಾಪುರ (ಆ,27): ಇಲ್ಲಿನ ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಮೈಸೂರು ವಿಭಾಗೀಯ ಮಟ್ಟದ ಕ್ರಿಕೆಟ್ ಹಾರ್ಡ್ ಬಾಲ್ ಪಂದ್ಯಾಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 8ನೇ ತರಗತಿ ವಿದ್ಯಾರ್ಥಿನಿ ತ್ರಿಶಾ ಐ ನಾಯಕ್ 14ರ ವಯೋಮಾನದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. 10ನೇ ತರಗತಿಯ ಅಂಶಿತ್ 17ರ ವಯೋಮಾನದ […]
Year: 2023
ಯುವ ಬಂಟರ ಸಂಘ: ರಕ್ತದಾನ ಶಿಬಿರ
ಕುಂದಾಪುರ(ಅ21): ಕುಂದಾಪುರ ತಾಲೂಕು ಯುವ ಬಂಟರ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತ ನಿಧಿ ಕೇಂದ್ರ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್, ಡಾ. ಬಿ ಬಿ ಹೆಗ್ಡೆ ಕಾಲೇಜು, ಭಂಡಾಕರ್ಸ್ ಕಾಲೇಜು ಹಾಗೂ ಕೋಟೇಶ್ವರದ ಶ್ರೀ ಕಾಳವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಇಲ್ಲಿನ ಆರ್ ಎನ್ ಶೆಟ್ಟಿ […]
ಡಾIಬಿ.ಬಿ.ಹೆಗ್ಡೆ ಕಾಲೇಜು:ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ(ಆ,27): ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರದಲ್ಲಿ ವಿಸ್ತರಣಾ ಚಟುವಟಿಕೆ ಜರುಗಿತು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಂತ್ರಜ್ಞರಾದ ಶ್ರೀ ವೀರೇಂದ್ರರವರು ವಿದ್ಯಾರ್ಥಿಗಳಿಗೆ ರಕ್ತವನ್ನು ನೀಡಲು ಹೇಗೆ ಸಹಾಯಕರಾಗಬೇಕು ಜೊತೆಗೆ ರಕ್ತ ಸಂಗ್ರಹ, ಪರಿಷ್ಕರಣೆ, ಮತ್ತು ಸಂಗ್ರಹಿಸಿದ ರಕ್ತದ ಪ್ರಕ್ರಿಯೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಸಭಾಪತಿಗಳಾದ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು ಎನ್.ಎಸ್.ಎಸ್ ಘಟಕ: ಹೂವಿನ ಕೋಲು ಪ್ರದರ್ಶನ
ಕುಂದಾಪುರ (ಅ. 24) : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯಕ್ಷಗಾನ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ ಸಾಂಪ್ರದಾಯಿಕ ಹೂವಿನ ಕೋಲು ಪ್ರದರ್ಶನ ನಡೆಯಿತು. ‘ಕೃಷ್ಣಾರ್ಜುನ’ ಪ್ರಸಂಗವನ್ನು ಆಯ್ಕೆ ಮಾಡಿಕೊಂಡು ಅರ್ಜುನನಾಗಿ ಅಂತಿಮ ಬಿ.ಎಸ್ಸಿ.ಯ ಲಕ್ಷ್ಮೀಕಾಂತ್ ಯು. ಶೆಟ್ಟಿ, ಕೃಷ್ಣನಾಗಿ, ದ್ವಿತೀಯ ಬಿ.ಕಾಂ. (ಡಿ)ನ ಪವಿತ್ರ ಪೈ ಅರ್ಥ ಹೇಳಿದರು. ಭಾಗವತಿಕೆಯಲ್ಲಿ ದ್ವಿತೀಯ ಬಿ.ಸಿ.ಎ. (ಎ)ನ ಪೂಜಾ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು: ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ. ಘಟಕದ ವತಿಯಿಂದ ಆರೋಗ್ಯ ಅರಿವು ಕಾರ್ಯಕ್ರಮ
ಕುಂದಾಪುರ (ಅ. 25) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್.ಸಿ.ಸಿ. ಘಟಕ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಮಾಹಿತಿ ಮತ್ತು ಶಿಕ್ಷಣ ವಿಭಾಗ, ಕುಂದಾಪುರ ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ ತಾಲೂಕು ಆರೋಗ್ಯ ಅಧಿಕಾರಿ ಡಾ| […]
ಸರಕಾರಿ ಪಿ ಯು ಕಾಲೇಜು ಹೊಸಂಗಡಿ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಹೆಮ್ಮಾಡಿ(ಅ.27): ಸರಕಾರಿ ಪಿ ಯು ಕಾಲೇಜು ಹೊಸಂಗಡಿ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2023, ಇದರ ಉದ್ಘಾಟನಾ ಕಾರ್ಯಕ್ರಮವು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆಯಲ್ಲಿ ಅಕ್ಟೋಬರ್ 25 ರಂದು ಜರಗಿತು. ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಇದರ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಸಚ್ಚಿದಾನಂದ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.. ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮಾ.ವ್ಯ.ಸೇ.ಸ.ಸಂ.ನಿ. ಮಾನಂಜೆ […]
ನೆಂಪು: ಕ್ರೀಡಾ ಪ್ರತಿಭೆ ಕುಮಾರಿ ಶರಣ್ಯ ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ(ಅ,27): ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಶಾಲಾ ಬಾಲಕಿಯರ ಗುಂಡು ಎಸೆತ ಸ್ಪರ್ಧೆಯಲ್ಲಿ 8.41 ಮೀಟರ್ ದೂರ ಎಸೆದು ದಾಖಲೆ ನಿರ್ಮಿಸುವುದರೊಂದಿಗೆ ಪ್ರಥಮ ಸ್ಥಾನ ಗಳಿಸಿ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ 19.46 ಮೀಟರ್ ದೂರ ಎಸೆದು ದ್ವಿತೀಯ ಸ್ಥಾನ ಪಡೆದು ಎರಡು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಇವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು : ರೋವರ್ಸ್ ಹಾಗೂ ರೇಂಜರ್ಸ್ ಘಟಕದಿಂದ ಸೇವಾ ಶಿಬಿರ
ಕುಂದಾಪುರ (ಅ.26): ಕರಾವಳಿಯ ಪ್ರಸಿದ್ಧ ಕ್ಷೇತ್ರವಾದ ಉಚ್ಚಿಲ ಮಹಾ ಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವದ ಪ್ರಯುಕ್ತ ಕುಂದಾಪುರದ ಡಾ|ಬಿ.ಬಿ ಹೆಗ್ಡೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸ್ವಯಂ ಸೇವಕರಿಂದ ಒಂದು ದಿನದ ಸೇವಾ ಶಿಬಿರವನ್ನು ಅಕ್ಟೋಬರ್ 22ರಂದು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಸ್ವಯಂಸೇವಕರು ಸಕ್ರಿಯವಾಗಿ ಈ ಶಿಬಿರದಲ್ಲಿ ಭಾಗವಹಿಸಿದ್ದರು.ಕಾಲೇಜಿನ ರೋವರ್ಸ್ ಘಟಕದ ಸಂಯೋಜಕರಾದ ಪ್ರವೀಣ್ ಮೊಗವೀರ ಗಂಗೊಳ್ಳಿ, ಶಿಬಿರವನ್ನು ಸಂಯೋಜಿಸಿದರು.ಜಿಲ್ಲಾ ಸ್ಕೌಟ ಮತ್ತು ಗೈಡ್ ಪ್ರಮುಖರಾದ ಶ್ರೀಮತಿ ಸುಮನ ಉಪಸ್ಥಿತರಿದ್ದರು.
ಜೈ ಕುಂದಾಪ್ರ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿ ದಿವ್ಯಾ ಕುಂದಾಪುರ ಆಯ್ಕೆ
ಕುಂದಾಪುರ (ಅ.26): ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ). ಕುಂದಾಪುರ ಸಂಸ್ಥೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿ ಮಹಿಳಾ ಘಟಕದ ನಿರ್ವಾಹಕಿಯಾಗಿ ಈಗ ಪ್ರಧಾನ ಕಾರ್ಯದರ್ಶಿಯಾಗಿ ಮುಂದಿನ ಅವಧಿಗೆ ದಿವ್ಯ ಕುಂದಾಪುರ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪುಂಡಲಿಕ ಮೊಗವೀರ ಹಾಗೂ ಪದಾಧಿಕಾರಿಗಳು ಇವರಿಗೆ ಶುಭ ಹಾರೈಸಿದ್ದಾರೆ.
ಉಚ್ಚಿಲ ದಸರಾ ಮೆರವಣಿಗೆ: ಸಾರ್ವಜನಿಕರ ಗಮನ ಸೆಳೆದ ಮೊಗವೀರ ಯುವ ಸಂಘಟನೆಯ ಟ್ಯಾಬ್ಲೊ
ಉಚ್ಚಿಲ(ಅ.26): ಕರಾವಳಿ ಭಾಗದ ಪ್ರಸಿದ್ಧ ಉಚ್ಚಿಲ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ ಇವರ ರಕ್ತದಾನದ ಮಹತ್ವದ ಕುರಿತಾಗಿ ಜನಜಾಗೃತಿ ಸಾರುವ ಟ್ಯಾಬ್ಲೊ ಸಾರ್ವಜನಿಕರ ಗಮನ ಸೆಳೆದಿದೆ. ಕರಾವಳಿ ಭಾಗದಲ್ಲಿ ರಕ್ತದಾನದ ಕ್ರಾಂತಿಯನ್ನೇ ಮಾಡಿರುವ ನಾಡೋಜ ಡಾ.ಜಿ. ಶಂಕರ್ ರವರ ಮಾರ್ಗದರ್ಶನದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ), ಉಡುಪಿ ಜಿಲ್ಲೆ ಈಗಾಗಲೇ ನಾಡಿನಾದ್ಯಂತ ಹಮ್ಮಿಕೊಂಡಿರುವ ರಕ್ತ ದಾನದ ಕಿರುನೋಟ ಹಾಗೂ ಜಿ.ಶಂಕರ್ ಮಣಿಪಾಲ […]