ಕುಂದಾಪುರ, ಮಾರ್ಚ್ (09) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಜಂಟಿ ಆಶ್ರಯದಲ್ಲಿ ಜೇಸಿಐ ಕುಂದಾಪುರ ಸಿಟಿ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕರನ್ನು ಸನ್ಮಾನಿಸಲಾಯಿತು. ಕುಂದಾಪುರ ಆರಕ್ಷಕ ಠಾಣೆಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಶಾಹೀನಾ, ಪೊಲೀಸ್ ಕಾನ್ಸ್ಟೇಬಲ್ ಆಶ್ರಿತ ದೇವಾಡಿಗ, ವಿದ್ಯಾರ್ಥಿ ಸಾಧಕರಾದ ಸಾಂಸ್ಕೃತಿಕ ಪ್ರತಿಭೆ ಶಬರಿ ಪೂಜಾರಿ, ಶೈಕ್ಷಣಿಕ […]
Month: March 2024
ಡಾ| ಬಿ.ಬಿ. ಹೆಗ್ಡೆ ಕಾಲೇಜು: ‘ಶಿಸ್ತುಬದ್ಧ ಹೂಡಿಕೆ ನಿವೃತ್ತಿ ಬದುಕಿನ ಭದ್ರತೆಯ ಆಸರೆ’- ಸಿಬ್ಬಂದಿ ವಿಕಸನ ಕಾರ್ಯಕ್ರಮ
ಕುಂದಾಪುರ( ಮಾ.12): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಪತ್ತು ಸೃಷ್ಟಿ ಅವಕಾಶಗಳು ಎನ್ನುವ ವಿಷಯದ ಕುರಿತು ಸಿಬ್ಬಂದಿ ವಿಕಸನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎನ್ವಿಸ್ಟ ಫೈನಾನ್ಸಿಯಲ್ ಸರ್ವಿಸ್ ಮಂಗಳೂರು ಇದರ ಸಂಸ್ಥಾಪಕರಾದ ಶ್ರೀ ನಾಗೇಶ್ ಆಚಾರ್ಯರವರು ಸಿಬ್ಬಂದಿಗಳು ತಮ್ಮ ನಿವೃತ್ತಿ ಬದುಕಿನ ಭದ್ರತೆಗೆ ಹಣದ ಸದ್ವಿನಿಯೋಗದ ಜೊತೆಗೆ ಶಿಸ್ತುಬದ್ಧ ರೀತಿಯಲ್ಲಿ ದೀರ್ಘಾವಧಿಯ ಹೂಡಿಕೆ ಮಾಡುವುದು ಅಗತ್ಯ […]
ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಗಣಕ ವಿಜ್ಞಾನ ವಿಭಾಗದ ವತಿಯಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ (ಮಾ.12) : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ವಿಸ್ತರಣಾ ಚಟುವಟಿಕೆಯ ಕಾರ್ಯಕ್ರಮವನ್ನು ಮಾರ್ಚ್ 09 ರಂದು ಸರಕಾರಿ ಪ್ರಾಥಮಿಕ ಶಾಲೆ ಚಿಕ್ಕನ್ ಸಾಲ್, ಕುಂದಾಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಥಮಿಕ ಹಂತದ ವಿದ್ಯಾರ್ಥಿಗಳೊಂದಿಗೆ ಬೆರೆತು ಕಂಪ್ಯೂಟರ್ ಮತ್ತು ಅದರ ಕಾರ್ಯಗಳನ್ನು ತಿಳಿಸುವುದರ ಜೊತೆಗೆ ಗಣಕಯಂತ್ರದ ಸರಳವಾದ ಅಪ್ಲಿಕೇಶನ್ ಗಳನ್ನು ಉಪಯೋಗಿಸಿಕೊಂಡು ಚಿತ್ರರಚನೆ ಮತ್ತು ಇಂಗ್ಲೀಷ್ […]
ಎಚ್. ಎಮ್.ಎಮ್ & ವಿ. ಕೆ .ಆರ್ ಶಾಲೆ:ಶಿಕ್ಷಕ – ಪೋಷಕ ಸಭೆ
ಕುಂದಾಪುರ (ಮಾ 7): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್.ಎಮ್ , ವಿ. ಕೆ. ಆರ್ ಶಾಲೆಗಳಲ್ಲಿಇತ್ತೀಚೆಗೆ ಶಿಕ್ಷಕ – ಪೋಷಕ ಸಭೆಯನ್ನು ಏರ್ಪಡಿಸಲಾಗಿತ್ತು. ಶಾಲೆಯ ವಾರ್ಷಿಕ ಪಠ್ಯ – ಪಠ್ಯೇತರ ಚಟುವಟಿಕೆಯ ಕುರಿತಾಗಿ ಪೋಷಕರಿಗೆ ಮಾಹಿತಿ ನೀಡುವುದಲ್ಲದೇ, ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ತರಗತಿವಾರು ಮ್ಯಾಗಝಿನ್ ನನ್ನು ಬಿಡುಗಡೆಗೊಳಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ಸಂಚಾಲಕರೂ, ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರು ಶಾಲಾ ಸಿಬ್ಬಂದಿಯವರ ಒಗ್ಗಟ್ಟು […]
ಸ್ತ್ರೀ ಶಕ್ತಿ ಬಗ್ವಾಡಿ :ವಿಶ್ವ ಮಹಿಳಾ ದಿನಾಚರಣೆ- ವಿವಿಧ ಕಾರ್ಯಕ್ರಮ
ಹೆಮ್ಮಾಡಿ(ಮಾ.8) : ಸ್ತ್ರೀ ಶಕ್ತಿ ಬಗ್ವಾಡಿ ಹೋಬಳಿಯ ವತಿಯಿಂದದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಗೂ ಸಭಾ ಕಾರ್ಯಕ್ರಮ ಮತ್ತು ಹಿರಿಯ 5 ಮಂದಿ ಸ್ತ್ರೀಯರನ್ನು ಗೌರವಿಸುವ ಕಾರ್ಯಕ್ರಮ ಮಾರ್ಚ್ 08 ರಂದು ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಬಗ್ವಾಡಿಯಲ್ಲಿ ನಡೆಯಿತು. ಸ್ತ್ರೀ ಶಕ್ತಿ ಇದರ ಅಧ್ಯಕ್ಷರಾದ ಶ್ಯಾಮಲಾ ಜಿ ಚಂದನ್ ರವರು ಸಭೆಯ ಅಧ್ಯಕತೆ ವಹಿಸಿದರು, ಮುಖ್ಯ ಅತಿಥಿ ಗಳಾಗಿ ಮೊಗವೀರ ಮಹಾಜನ […]
ಬಂಟಕಲ್ ಇಂಜಿನಿಯರಿ0ಗ್ ಕಾಲೇಜು: ಯಕ್ಷೋತ್ಸವ -2024 ರಲ್ಲಿ ತ್ರತೀಯ ಸ್ಥಾನ
ಉಡುಪಿ(ಮಾ.07): ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ “ಯಕ್ಷಸಿಂಚನ” ಯಕ್ಷಗಾನ ತಂಡವು ದಿನಾಂಕ 23, 24 ಮತ್ತು 25 ಫೆಬ್ರವರಿ 2024 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರು, ಇಲ್ಲಿ ನಡೆದ “ಯಕ್ಷೋತ್ಸವ 2024” ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಬಹುಮಾನಗಳಿಸಿದೆ. ಒಟ್ಟು ಹನ್ನೊಂದು ತಂಡಗಳು ಮೊದಲ ಸುತ್ತಿನಲ್ಲಿ ಭಾಗವಹಿಸಿದ್ದು, ಸ್ವ ಆಯ್ಕೆಯ ಪ್ರಸಂಗವನ್ನು ಆಡಲು ಅವಕಾಶವಿತ್ತು. ಈ ಹನ್ನೊಂದು ತಂಡಗಳಲ್ಲಿ ಒಟ್ಟು ಐದು ತಂಡಗಳು ಎರಡನೇ […]
ಡಾI ಬಿ. ಬಿ ಹೆಗ್ಡೆ ಕಾಲೇಜು : ಪ್ರಾಜೆಕ್ಟ್ ಓರಿಯಂಟೇಶನ್ ಕಾರ್ಯಕ್ರಮ
ಕುಂದಾಪುರ (ಮಾರ್ಚ್ 04): ಕಾಲೇಜಿನ ಗಣಕ ವಿಜ್ಞಾನ ವಿಭಾಗದಿಂದ ಮಾರ್ಚ್ 04 ರಂದು ಅಂತಿಮ ವರ್ಷದ ಬಿಸಿಎ ಹಾಗೂ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Soft Skills Development Centre-MIT, Manipal ವತಿಯಿಂದ ಪ್ರಾಜೆಕ್ಟ್ ಓರಿಯಂಟೇಶನ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಾಫ್ಟ್ ಸ್ಕಿಲ್ಸ್ ಟ್ರೈನರ್ ಶ್ರೀಮತಿ ರಾಜಲಕ್ಷ್ಮೀ, ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವಿಭಾಗದ ಮುಖ್ಯಸ್ಥರಾದ ಶ್ರೀ […]
ಎಚ್. ಎಮ್. ಎಮ್. ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಸಭೆ
ಕುಂದಾಪುರ( ಮಾ.07): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ದಿನಾಂಕ ಮಾರ್ಚ್ 05 ರ ಮಂಗಳವಾರದಂದು ಶಿಕ್ಷಕ ಪೋಷಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಲತಾ ಜಿ. ಭಟ್ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲರು, ಸಭೆಯ ಅಧ್ಯಕ್ಷರೂ ಆಗಿರುವ ಡಾ. ಚಿಂತನಾ ರಾಜೇಶ್ ತರಗತಿಯ ಹಸ್ತಪ್ರತಿಯನ್ನು ಅನಾವರಣಗೊಳಿಸಿ ಪೋಷಕರನ್ನು ಉದ್ದೇಶಿಸಿ ತಮ್ಮ ಮಕ್ಕಳನ್ನು ಸುಸಂಸ್ಕೃತ […]
ಶ್ರೀಮತಿ ಸರಸ್ವತಿ ಬಿ.ಶೆಟ್ಟಿನಿಧನ
ಶ್ರೀಮತಿ ಸರಸ್ವತಿ ಬಿ.ಶೆಟ್ಟಿನಿಧನ (63) ಇಸಾರಮಕ್ಕಿ ಮನೆ ಆವರ್ಸೆ ದಿನಾಂಕ 27/02/2023 ರಂದು ನಿಧನರಾಗಿದ್ದಾರೆ. ಇವರು ಪತಿ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಭಾಸ್ಕರ ಶೆಟ್ಟಿ ಬೆಪ್ಡೆ ಮತ್ತು ಮಗ,ಮಗಳು, ಅಳಿಯ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಎಚ್ ಎಮ್ ಎಮ್, ವಿ ಕೆ ಆರ್ ಶಾಲೆ : ಅಭ್ಯಾಸ ಕೌಶಲ ಮತ್ತು ಸಮಯ ಪಾಲನೆ ಕಾರ್ಯಾಗಾರ
ಕುಂದಾಪುರ (ಫೆ.27) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ “ ಅಭ್ಯಾಸ ಕೌಶಲ ಮತ್ತು ಸಮಯ ಪಾಲನೆ “ ಕುರಿತಾಗಿ ಕಾರ್ಯಾಗಾರ ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ , ಸಂಸ್ಥೆಯ ಅಕಾಡೆಮಿಕ್ ಕೋ ಆರ್ಡಿನೇಟರ್ ವಿಲ್ಮಾ ಡಿ ಸಿಲ್ವಾ ರವರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಉತ್ತಮ ಪರಿಪಾಠಗಳನ್ನು ಬೆಳೆಸಿಕೊಳ್ಳುವುದಲ್ಲದೇ, ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎನ್ನುವುದರ ಕುರಿತಾಗಿ […]










