ಕುಂದಾಪುರ (ಮಾ.12) : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ವಿಸ್ತರಣಾ ಚಟುವಟಿಕೆಯ ಕಾರ್ಯಕ್ರಮವನ್ನು ಮಾರ್ಚ್ 09 ರಂದು ಸರಕಾರಿ ಪ್ರಾಥಮಿಕ ಶಾಲೆ ಚಿಕ್ಕನ್ ಸಾಲ್, ಕುಂದಾಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಥಮಿಕ ಹಂತದ ವಿದ್ಯಾರ್ಥಿಗಳೊಂದಿಗೆ ಬೆರೆತು ಕಂಪ್ಯೂಟರ್ ಮತ್ತು ಅದರ ಕಾರ್ಯಗಳನ್ನು ತಿಳಿಸುವುದರ ಜೊತೆಗೆ ಗಣಕಯಂತ್ರದ ಸರಳವಾದ ಅಪ್ಲಿಕೇಶನ್ ಗಳನ್ನು ಉಪಯೋಗಿಸಿಕೊಂಡು ಚಿತ್ರರಚನೆ ಮತ್ತು ಇಂಗ್ಲೀಷ್ ಅಕ್ಷರಗಳನ್ನು ಹೇಗೆ ಬರೆಯಬಹುದು ಎಂದು ತಿಳಿಸಿಕೊಡುವುದರ ಜೊತೆಗೆ ಆ ಎಲ್ಲಾ ಮಾಹಿತಿಗೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ನಡೆಸಿ,ವಿಜೇತರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು.
ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ. ಎಸ್. ಪಿ. ಪ್ರೇಮ ಕುಮಾರಿ ಮತ್ತು ಶಾಲೆಯ ಸಹಶಿಕ್ಷಕರು ಹಾಗೂ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಹರೀಶ್ ಕಾಂಚನ್, ಶ್ರೀಕಾಂತ್, ಶ್ರೀ ಪ್ರಣಮ್. ಬಿ., ಶ್ರೀಮತಿ ಪವಿತ್ರಾ ಶೆಟ್ಟಿ, ಶ್ರೀಮತಿ ವಿಜಯಶ್ರೀ, ಕು. ಮೇಘಾ ಹಾಗೂ ಕು. ರಶ್ಮಿ ಉಪಸ್ಥಿತರಿದ್ದರು.