ಕುಂದಾಪುರ (ಆ, 29): ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ದಿನಕ್ಕೆ ಒಂದು ಗಂಟೆಯಾದರೂ ಆಟದಲ್ಲಿ ತೊಡಗಿಕೊಂಡರೆ ಪಾಠವನ್ನು ಅರ್ಥೈಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಮಿತವಾದ ಆಹಾರ ಪದ್ಧತಿಯೂ ಇದರಿಂದ ರೂಢಿಯಾಗುತ್ತದೆ. ಇವೆಲ್ಲವೂ ಕ್ರೀಡೆಯಿಂದ ಸಾಧ್ಯ ಎಂದು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಸುಕುಮಾರ್ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ […]
Month: August 2024
ಸೆಪ್ಟೆಂಬರ್, 01 ರಂದು ಹೆಮ್ಮಾಡಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹೆಮ್ಮಾಡಿ (ಆ. 30): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ,ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ,ರಕ್ತನಿಧಿ ವಿಭಾಗ ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಹಯೋಗದೊಂದಿಗೆ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ.)ಹೆಮ್ಮಾಡಿ, ಬಗ್ವಾಡಿ ಹೋಬಳಿ ಮೊಗವೀರ ಸ್ತ್ರೀ ಶಕ್ತಿ, ಇತರೆ ಸಹಕಾರಿ ಸಂಘಗಳ ನೌಕರರ ಒಕ್ಕೂಟ(ರಿ.)ಕುಂದಾಪುರ, ಲಯನ್ಸ್ ಕ್ಲಬ್ ನಾವುಂದ, ಮಹಾವಿಷ್ಣು ಯುವಕ ಮಂಡಲ(ರಿ.) ಹರೆಗೋಡು, ಮಾನಸ […]
ಬಿ. ಬಿ. ಹೆಗ್ಡೆ ಕಾಲೇಜು:“ಆತ್ಮವಿಶ್ವಾಸದಿಂದ ಇಂಗ್ಲೀಷ್ ಕಲಿಯಿರಿ” – ವಿಶೇಷ ಕಾರ್ಯಾಗಾರ
ಕುಂದಾಪುರ (ಆ, 28): ಜಾಗತೀಕರಣದ ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಭಾಷೆಯಾಗಿ ಮನ್ನಣೆ ಪಡೆದ ಇಂಗ್ಲೀಷ್ ಭಾಷೆಯ ಹಿಡಿತ ಅನಿವಾರ್ಯ. ಅದರಲ್ಲಿಯೂ ಪದವಿ ಶಿಕ್ಷಣದ ಸಂದರ್ಭದಲ್ಲಿ ಭಾಷಾ ಕೌಶಲ್ಯವನ್ನು ಬೆಳೆಸಿಕೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ಸರ್ವತೋಮುಖ ಯಶಸ್ಸು ಸಾಧ್ಯ ಎಂದು ಉಡುಪಿಯ ಎಮ್.ಜಿ.ಎಮ್. ಸಂಧ್ಯಾ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಯಾಸಿನ್ ಮನ್ನಾ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ […]
ಬ್ಯಾರೀಸ್ ಕಾಲೇಜು ಕೋಡಿ: CA ಫೌಂಡೇಶನ್ ಕೋರ್ಸ್ ಉದ್ಘಾಟನೆ
ಕುಂದಾಪುರ (ಆ, 30): ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಬ್ಯಾರೀಸ್ ಪಿ. ಯು ಕಾಲೇಜು ಕೋಡಿ ಇದರ ಜಂಟಿ ಆಶ್ರಯದಲ್ಲಿ CA ಫೌಂಡೇಶನ್ ಕೋರ್ಸ್ ಉದ್ಘಾಟನೆಯನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಐ.ಸಿ.ಎ.ಐ ಉಡುಪಿ ಶಾಖೆಯ ಲೆಕ್ಕಪರಿಶೋಧಕ ಹಾಗೂ ವ್ಯತ್ತಿಸಲಹೆಗಾರರಾದ CA ವಸಂತ್ ಶಾನುಭೋಗ್ ಕುಂದಾಪುರ ಇವರು CA ಫೌಂಡೇಶನ್ ಕೋರ್ಸ್ ಉದ್ಘಾಟಿಸಿ ವ್ಯಕ್ತಿ ಸ್ವಾರ್ಥಿಯಾಗದೇ ಸಮಾಜಕ್ಕೆ ಸಹಾಯ ಹಸ್ತವಾಗಿರಬೇಕು. ಆತ ತನಗಾಗಿ ಅಲ್ಪವಾದರೂ ತನ್ನ ಕುಟುಂಬಕ್ಕಾಗಿ ಬಹುದೊಡ್ಡ ಗುರಿಯೊಂದನ್ನು ಮುಂದಿರಿಸಿಕೊಂಡು […]
ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ: “ಫ್ರೆಷರ್ಸ್ ಡೇ”
ಕುಂದಾಪುರ (ಆ ,24): ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ “ಫ್ರೆಷರ್ಸ್ ಡೇ” ಕಾರ್ಯಕ್ರಮವನ್ನು ಆಗಸ್ಟ್ 24 ರಂದು ಆಯೋಜಿಸಲಾಗಿತ್ತು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐಎಂಜೆ ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ನ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ, ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದೆ, ಕಾಲೇಜಿನ ಪ್ರಾರ್ಥನೆಯ “ಬದುಕ ಕಲಿಯಲು ಬೇಕು ಬದುಕ ಸವಿಯಲು ಬೇಕು”ಎಂಬ ಸಾಲುಗಳನ್ನು ವಿದ್ಯಾರ್ಥಿಗಳೆಲ್ಲ ಅರ್ಥೈಸಿಕೊಂಡರೆ ಯಶಸ್ಸು […]
ಹಿಂದಿ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ನಾರಾಯಣ ಈ ನಾಯ್ಕ್ ಆಯ್ಕೆ
ಉಡುಪಿ ( ಆ,26): ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಹಿಂದಿ ಉಪನ್ಯಾಸಕರ ಸಂಘದ 2024 -25 ನೇ ಶೈಕ್ಷಣಿಕ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕರಾದ ನಾರಾಯಣ .ಇ . ನಾಯ್ಕ್ ಆಯ್ಕೆ ಆಗಿರುತ್ತಾರೆ. ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಭೋದಕ ಮತ್ತು ಬೋಧಕೇತರ ವರ್ಗ ಅವರನ್ನು ಅಭಿನಂದಿಸಿದೆ.
ಬಿ.ಬಿ. ಹೆಗ್ಡೆ ಕಾಲೇಜು: ಮಧುಮೇಹ ಅರಿವು ಕಾರ್ಯಕ್ರಮ
ಕುಂದಾಪುರ (ಆಗಸ್ಟ್ 24): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ, ಕುಂದಾಪುರ ತಾಲೂಕು ಇವರ ಸಹಯೋಗದೊಂದಿಗೆ ಮಧುಮೇಹ ಅರಿವು ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಿಗ್ ಮೆಡಿಕಲ್ ಸೆಂಟರ್ ಉಡುಪಿ ಸಿಟಿ ಇಲ್ಲಿನ ವೈದ್ಯರಾದ ಡಾ| ಶ್ರುತಿ ಬಲ್ಲಾಳ್ ಕಾರ್ಯಕ್ರಮವನ್ನು ಉದ್ದೇಶಿಸಿ ಇತಿ-ಮಿತಿ ಆಹಾರ ಪದ್ಧತಿ ಹಾಗೂ ದೈನಂದಿನ […]
ಬಿ. ಬಿ. ಹೆಗ್ಡೆ ಕಾಲೇಜು: ‘ಪ್ರೇರಣಾ’ ಪೂರ್ವ ಪರಿಚಯ- “ಶಿಸ್ತು ಮತ್ತು ನಡವಳಿಕೆ”
ಕುಂದಾಪುರ (ಆ,14): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಸಿದ ‘ಪ್ರೇರಣಾ’ ಪೂರ್ವ ಪರಿಚಯ ಕಾರ್ಯಕ್ರಮದಲ್ಲಿ ಹೆಬ್ರಿ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅಮರೇಶ್ ಹೆಗ್ಡೆ ಅವರು “ಶಿಸ್ತು ಮತ್ತು ನಡವಳಿಕೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ […]
ಕರಾಟೆ – ಕುಂದಾಪುರದ ವಿ. ಕೆ. ಆರ್. ಶಾಲೆಯ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ
ಕುಂದಾಪುರ (ಆ ,20) : ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಗಳ ವಿದ್ಯಾರ್ಥಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯ 40ಕೆಜಿ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ವಿ.ಕೆ.ಆರ್. ಪ್ರೌಢ ಶಾಲೆಯ 9ನೇ ತರಗತಿಯ ಚಿರಾಗ್ ಯು. ಪೂಜಾರಿ […]
ಮಾನವೀಯತೆ ಮೆರೆದ ಗೆಳೆಯರ ಬಳಗ ಬೀಜಾಡಿ
ಕೋಟೇಶ್ವರ (ಆ, 24): ಗೆಳೆಯರ ಬಳಗ ಬೀಜಾಡಿ ಇವರ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಕ್ಕಿ ಡಿಪ್ ಹಾಗೂ ಕ್ರಿಕೆಟ್ ಪಂದ್ಯಾಟದಿಂದ ಸಂಗ್ರಹಿಸಿದ 1 ಲಕ್ಷ 12 ಸಾವಿರ ಮೊತ್ತವನ್ನು ಬೀಜಾಡಿ ಗ್ರಾಮದ ಬಡ ಕುಟುಂಬದ ಹುಡುಗಿಯ ವೈದ್ಯಕೀಯ ಚಿಕಿತ್ಸೆಗಾಗಿ ಹುಡುಗಿಯ ಪೋಷಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದೆ. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ,ಗೋಪಾಡಿ ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ,ಮೀನುಗಾರಿಕಾ ಸೊಸೈಟಿಯ ಅಧ್ಯಕ್ಷರಾದ […]