ಕಾರ್ಕಳ ( ಆ,08): ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇವರ ಆಶ್ರಯದಲ್ಲಿ ನಡೆದ 2024ನೇ ಸಾಲಿನ ಮೈಸೂರು ವಿಭಾಗೀಯ ಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ ರಿದಮಿಕ್ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅನ್ವಿ ಹೆಚ್. ಅಂಚನ್ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ಕಾರ್ಕಳದ ಶ್ರೀ ಹರೀಶ್ ಹಾಗೂ ಶ್ರೀಮತಿ ಶೋಭಾ ದಂಪತಿಯ […]
Month: October 2024
ಕೋಡಿಬ್ಯಾರೀಸ್ ಪದವಿ ಕಾಲೇಜಿನಲ್ಲಿ “ಯುವಶಕ್ತಿಹಾಗೂನಾಯಕತ್ವ” ವಿಶೇಷ ಉಪನ್ಯಾಸ
ಕುಂದಾಪುರ ( ಆ,08): ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ “ಯುವಶಕ್ತಿ ಮತ್ತು ನಾಯಕತ್ವ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಂಡಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಲೇಖಕರೂ, ತಾಳಮದ್ದಲೆ ಅರ್ಥದಾರಿಗಳಾದ ಶ್ರೀ. ಮುಸ್ತಾಕ್ ಹೆನ್ನಾಬೈಲು ಇವರು “ಈ ಜಗತ್ತಿನಲ್ಲಿ ಸರ್ವರೂ ಪ್ರತಿಭಾನ್ವಿತರೇ ಆಗಿ ಜನ್ಮ ತಳೆದರೂ ತಮ್ಮೊಳಗಿನ ಅಂತಸ್ತವಾಗಿರುವ ಪ್ರತಿಭೆಯನ್ನು ಹುಡುಕುಲ್ಲಿ ಅಸಮರ್ಥರಾಗುತ್ತೇವೆ, ಶಿಕ್ಷಣ ಪಡೆಯುವುದರಿಂದ ನಾಯಕರ ಸೃಷ್ಟಿಯಾಗದು. […]
ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ : ಯೋಗಾಸನ ಸ್ಪರ್ಧೆ ಸಾನಿಧ್ಯಗೆ ತೃತೀಯ ಸ್ಥಾನ
ಕಿರಿಮಂಜೇಶ್ವರ (ಅ,05): ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿನಿ ಸಾನಿಧ್ಯ ಎಸ್ ಮೊಗವೀರ ತೃತೀಯ ಸ್ಥಾನ ಗಳಿಸಿ ಉಡುಪಿ ಜಿಲ್ಲೆಗೆ ಹಾಗೆಯೇ ಜನತಾ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾಳೆ. ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಇಸ್ರೋ ಕ್ವಿಜ್ : ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ
ಉಡುಪಿ( ಆ,05): ಹೆಬ್ರಿಯ ಅಮೃತ ಭಾರತಿ ಶಾಲೆಯಲ್ಲಿ ಇಸ್ರೋದವರು ಆಯೋಜಿಸಿದ್ದ ‘ವರ್ಲ್ಡ ಸ್ಪೇಸ್ ವೀಕ್ -2024’ ಕ್ವಿಜ್ನಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಂಬತ್ತನೆಯ ತರಗತಿಯ ವಿದ್ಯಾರ್ಥಿಗಳಾದ ಅರುಷಿ ಮತ್ತು ರೋಹನ್ ಕೆ. ಶಿವರುದ್ರಪ್ಪ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತರನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಬಗ್ವಾಡಿ: ನವರಾತ್ರಿಯ ಪ್ರಯುಕ್ತ ‘ಮನೆಮನದಲ್ಲಿ ಮಹಿಷಾಸುರಮರ್ದಿನಿ’ ಕಾರ್ಯಕ್ರಮ
ಹೆಮ್ಮಾಡಿ ( ಆ, 05): ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ವತಿಯಿಂದ ಶರನ್ನವರಾತ್ರಿಯ ಪ್ರಯುಕ್ತ ‘ಮನೆಮನದಲ್ಲಿ ಮಹಿಷಾಸುರಮರ್ದಿನಿ’ ಎನ್ನುವ ವಿನೂತನ ಧಾರ್ಮಿಕ ಕಾರ್ಯಕ್ರಮಕ್ಕೆ ಅಕ್ಟೋಬರ್, 03 ರಂದು ಚಾಲನೆ ನೀಡಲಾಯಿತು.ಶ್ರೀ ಮಹಿಷಾಸುರಮರ್ದಿನಿ ದೇವಿ ಬಗ್ವಾಡಿ ಗ್ರಾಮದ ಪ್ರತಿ ಮನೆಮನೆಗೆ ತೆರಳುವ ನೂತನ ಧಾರ್ಮಿಕ ಕಾರ್ಯಕ್ರಮವು ಮೊದಲ ನವರಾತ್ರಿಯಂದು ಆರಂಭಗೊಂಡಿದೆ. ನವರಾತ್ರಿಯ ಮಧ್ಯಾಹ್ನದ ಮಹಾಪೂಜೆಯ ಬಳಿಕ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ದೇವಿಯನ್ನು ಅಲಂಕೃತ ಮಂಟಪದಲ್ಲಿರಿಸಿ ತಲೆಯ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಗ್ರಾಮದ ಮನೆಮನೆಗೆ […]
ಮೊಗವೀರ ಯುವ ಸಂಘಟನೆ(ರಿ), ಹೆಮ್ಮಾಡಿ ಘಟಕ : ಡಾ. ಜಿ.ಶಂಕರ್ ರವರ 69 ನೇ ಹುಟ್ಟು ಹಬ್ಬದ ಪ್ರಯುಕ್ತ ಹೊಲಿಕ್ರಾಸ್ ವೃದ್ದಾಶ್ರಮದಲ್ಲಿ ಜನ್ಮ ದಿನಾಚರಣೆ
ತ್ರಾಸಿ (ಆ.05): ಸಮಾಜ ಸೇವಕರು , ಶಿಕ್ಷಣ ಪ್ರೇಮಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಡಾ. ಜಿ.ಶಂಕರ್ ರವರ 69 ನೇ ಹುಟ್ಟು ಹಬ್ಬವನ್ನು ಮೊಗವೀರ ಯುವ ಘಟನೆ(ರಿ.), ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ತ್ರಾಸಿ ಸಮೀಪದ ಹೊಲಿಕ್ರಾಸ್ ವೃದ್ದಾಶ್ರಮದಲ್ಲಿ ಅಕ್ಟೋಬರ್, 05 ರಂದು ಆಚರಿಸಲಾಯಿತು. ಕೇಕ್ ಕತ್ತರಿಸಿ ವ ಸಿಹಿ ಹಂಚುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆ ಯನ್ನು ಮಾಡಲಾಯಿತು. […]
ಸಿ .ಬಿ .ಎಸ್. ಸಿ ಕ್ಲಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ : ಕುಂದಾಪುರ ಟ್ರ್ಯಾಕ್ ಮತ್ತು ಫೀಲ್ಡ್ನ ಆಶಿತ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕುಂದಾಪುರ (ಆ, 03): ಪಿ.ಎಸ್.ಎಸ್.ಇ.ಎಂ.ಆರ್ ಶಾಲೆ ಮತ್ತು ಪಿಯು ಕಾಲೇಜು ದಾವಣಗೆರೆ ಆಯೋಜಿಸಿದಸಿ ಬಿ ಎಸ್. ಸಿ ಕ್ಲಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಕುಂದಾಪುರದ ಪ್ರತಿಷ್ಠಿತ ಕ್ರೀಡಾ ತರಬೇತಿ ಸಂಸ್ಥೆಯಾದ ಕುಂದಾಪುರ ಟ್ರ್ಯಾಕ್ & ಫೀಲ್ಡ್ನ ಅಥ್ಲೀಟ್ ಆಶಿತ್ ಸಂಜಯ್ ಕುಮಾರ್ ಬಾಲಕರ ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ಪಡೆದು ಸಿ. ಬಿ. ಎಸ್. ಸಿ ರಾಷ್ಟ್ರೀಯ ಚಾಂಪಿಯನ್ಶಿಪ್ – 2024 ಗೆ ಅರ್ಹತೆ ಪಡೆದಿದ್ದಾರೆ. ಇವರಿಗೆ ಕುಂದಾಪುರ […]
ಸರಕಾರಿ ಪಿ ಯು ಕಾಲೇಜು ಕುಂದಾಪುರ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಕುಂದಾಪುರ( ಆ,05): ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಬೀಜಾಡಿಯ ಸೀತಾಲಕ್ಮಿ ಮತ್ತು ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆ ಇಲ್ಲಿ ಅಕ್ಟೋಬರ್ ,01 ರಂದು ಉದ್ಘಾಟನೆ ಗೊಂಡಿತು. ರಾಷ್ಟೀಯ ಮಾನವ ಹಕ್ಕುಗಳ ಸಮಿತಿ ಯ ಜನರಲ್ ಸೆಕ್ರೆಟರಿ ಶ್ರೀ ದಿನೇಶ್ ಗಾಣಿಗ ರವರು ಶಿಬಿರ ಉದ್ಘಾಟಿಸಿದರು.ಶ್ರೀ ಲಕ್ಷ್ಮಣ ಟಿ.ನಾಯಕ್ ಅಧ್ಯಕ್ಷರು.ಶಾಲಾಭಿವೃದ್ದಿ ಸಮಿತಿ, ಶ್ರೀ ಶೇಷಗಿರಿ ಗೋಟ, ಗೌರವ ಅಧ್ಯಕ್ಷರು […]
ಸರ್ಕಾರಿ ಪಿ ಯು ಕಾಲೇಜು ಕುಂದಾಪುರ: ಎನ್ ಎಸ್ ಎಸ್ ಶಿಬಿರ- ಶೈಕ್ಷಣಿಕ ಕಾರ್ಯಕ್ರಮ
ಕುಂದಾಪುರ( ಆ,04): ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಶಿಹಮ್ಮಿಕೊಂಡ ವಿಶೇಷ ವಾರ್ಷಿಕ ಶಿಬಿರದಲ್ಲಿ ಬಿರಾರ್ಥಿಗಳಿಗಾಗಿ ಅಕ್ಟೋಬರ್ ,02 ರಂದು ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕುಂದಾಪುರದ ಪ್ರತಿಷ್ಟಿತ ಡಾIಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಮೊಗವೀರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ಮೂಲಭೂತ ಕರ್ತವ್ಯಗಳು ಮತ್ತು ಯುವಜನತೆ”ಎಂಬ ವಿಷಯದ ಕುರಿತಾಗಿ ಮನಮುಟ್ಟುವಂತೆ ಮಾತನಾಡಿದರು. ಮೀನುಗಾರಿಕಾ […]
ಹೆಮ್ಮಾಡಿ ಜನತಾ ಪಿ ಯು ಕಾಲೇಜಿನ ರೋನಿತ್ ಪೂಜಾರಿ ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ ( ಆ ,4): ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ನ್ಯಾಷನಲ್ ಪದವಿಪೂರ್ವ ಕಾಲೇಜು ಬಾರ್ಕೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕರ ಟೆನ್ನಿಸ್ ವಾಲಿಬಾಲ್ ಪಂದ್ಯಾಟದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿ ರೋನಿತ್ ಪೂಜಾರಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.