ಕಾರ್ಕಳ(ಡಿ .28): ಜ್ಞಾನಸುಧಾ ಕಾರ್ಕಳದ ಆಸ್ತಿಯಾಗಿದ್ದು, ಸಂಸ್ಕಾರ, ಸದ್ವಿಚಾರದ ಅಡಿಪಾಯವನ್ನು ಶಿಕ್ಷಣದ ಜೊತೆಗೆ ನೀಡುತ್ತಿರುವ ಇಲ್ಲಿನ ಕಾರ್ಯ ಶ್ಲಾಘನೀಯ. ಡಾ.ಸುಧಾಕರ್ ಶೆಟ್ಟಿಯವರ ತಂಡದ ಸಂಘಟಿತ ಪ್ರಯತ್ನ ಪ್ರಶಂಸನೀಯ. ವಿದ್ಯಾರ್ಥಿಗಳು ನವಭಾರತವನ್ನು ನಿರ್ಮಿಸುವುದಕ್ಕಾಗಿ ಸಂಕಲ್ಪತೊಡಬೇಕು ಎಂದು ಕ್ಷೇತ್ರದ ಶಾಸಕರಾದ ಶ್ರೀ.ವಿ.ಸುನಿಲ್ ಕುಮಾರ್ ನುಡಿದರು. ಅವರು ಗಣಿತನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಡಿಸೆಂಬರ್ 22, 2024ರಂದು ನಡೆದ ಜ್ಞಾನಸುಧ ಸಂಸ್ಥಾಪಕರ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಳಿಗೆ ಗೌರವ […]
Day: December 28, 2024
ಸಿ.ಎ ಅಂತಿಮ ಪರೀಕ್ಷೆ : ಜ್ಞಾನಸುಧಾ ಹಳೆ ವಿದ್ಯಾರ್ಥಿಗಳ ಸಾಧನೆ
ಕಾರ್ಕಳ(ಡಿ.28) : ಐ.ಸಿ.ಎ.ಐ ನಡೆಸಿದ 2024ರ ನವೆಂಬರ್ – ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿಗಳಾದ, ಕಾರ್ಕಳ ಕಾಬೆಟ್ಟು ನಿವಾಸಿ ವಿಶ್ವನಾಥ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಗಳ ಸುಪುತ್ರನಾದ ಸೋಮನಾಥ್ ವಿ. ಶೆಟ್ಟಿ, ಜಾರ್ಕಳದ ಮೋಹನ್ ಕಿಣಿ ಮತ್ತು ಶುಭಾ ಕಿಣಿ ದಂಪತಿಗಳ ಸುಪುತ್ರಿಯಾದ ಸ್ವಾತಿ ಕಿಣಿ ಮತ್ತು ಬೈಲೂರು ರಮೇಶ್ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ ದಂಪತಿಗಳ ಸುಪುತ್ರಿಯಾದ ರಕ್ಷಾ ಶೆಟ್ಟಿ […]
ಶ್ರೀ ಬಿ.ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮದಿನದ ಸಂಭ್ರಮಾಚರಣೆ
ಕುಂದಾಪುರ (ಡಿ.24) : ಶ್ರೀ ಬಿ. ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮದಿನದ ಸಲುವಾಗಿ ಡಾ| ಬಸ್ರೂರು ಭುಜಂಗ ಹೆಗ್ಡೆ (ಬಿ.ಬಿ.ಹೆಗ್ಡೆ) ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಗೌರವಿಸಲಾಯಿತು. ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ 49ರ ಸಂಭ್ರಮ- ರುಗ್ಮಯಾನ
ಕುಂದಾಪುರ (ಡಿ. 27): ವಿದ್ಯಾರ್ಥಿ ಜೀವನ ಎಂದರೆ ಕೇವಲ ಕಟ್ಟುನಿಟ್ಟಿನ ಜೀವನವಲ್ಲ. ಅಲ್ಲಿ ತಮಾಷೆ, ಸಂತೋಷ, ಗೆಳೆತನದ ಜೊತೆಗೆ ಕಲಿಕೆಯು ಮುಖ್ಯವಾಗಿರುತ್ತದೆ. ನಮಗೆ ಮತ್ತೊಮ್ಮೆ ಶಾಲಾ ಜೀವನ ಸಿಗುವುದಿಲ್ಲ. ನಾವು ಕಲಿತ ಶಾಲೆಗೆ ಮರಳಬೇಕಾದರೆ ಏನಾದರು ಒಂದು ಉತ್ತಮ ಸಾಧನೆ ಮಾಡಿದರೆ ಇಂತಹ ವೇದಿಕೆ ಸಿಗುತ್ತದೆ ಎಂದು ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿಯಾದ, ಸರ್ವೇಯರ್ ಎ.ಡಿ.ಎಲ್.ಆರ್ ಆಫೀಸ್ ಕುಂದಾಪುರ ಶ್ರೀಯುತ ಶಶಾಂಕ್ ಬಿ. ಜೋಗಿ ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ […]
ಹೆಮ್ಮಾಡಿಯ ಜನತಾ ಪಿ ಯು ಕಾಲೇಜಿನ ಸೂರಜ್ ಪೂಜಾರಿ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಕ್ಕೆ ಆಯ್ಕೆ
ಕುಂದಾಪುರ(ಡಿ.28): ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸುವ ರಾಷ್ಟ್ರ ಮಟ್ಟದ ವಾಲಿಬಾಲ್ ಸ್ಪರ್ಧೆಗೆ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿ ಸೂರಜ್ ಪೂಜಾರಿ ರಾಷ್ಟ್ರ ಮಟ್ಟದ ವಾಲಿಬಾಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿಈ ಸ್ಪರ್ಧೆ ನಡೆಯಲಿದ್ದು,ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾನೆ. ಸಾಧಕ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆಗಳೂಂದಿಗೆ,ಶುಭ ಹಾರೈಸಿದ್ದಾರೆ.
ಹೆಮ್ಮಾಡಿ ಜನತಾ ಪಿ ಯು ಕಾಲೇಜಿನ ತನ್ವಿತಾ ವಿ. ಡಾ| ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ
ಕೋಟ(ಡಿ.28): ಡಾ.ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ, ಕೋಟದ ಡಾ| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕೊಡಮಾಡುವ ನಾಲ್ಕನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ವಿಶೇಷ ಸಾಧಕರ ವಿಭಾಗದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ತನ್ವಿತಾ ವಿಶೇಷ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ತನ್ವಿತಾ ಪ್ರೌಢ ಶಿಕ್ಷಣದ ಸಮಯದಲ್ಲಿ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದ […]