ಮಂಗಳೂರು(ಜ. 29): ಕನ್ನಡ ವೀಕ್ಷಕರ ಮನಸ್ಸಿಗೆ ಲಗ್ಗೆಯಿಡುವ ಕಥೆಗಳನ್ನು ಹೇಳುತ್ತಾ ಬಂದಿರುವ ಪ್ರತಿಷ್ಟಿತ ಕಲರ್ಸ್ ಕನ್ನಡ ಚಾನೆಲ್ ಮತ್ತೆರೆಡು ಹೊಸ ಧಾರಾವಾಹಿಗಳನ್ನು ನಿಮ್ಮ ಮುಂದೆ ತರಲು ಸಜ್ಜಾಗಿದೆ. ‘ವಧು’ ಮತ್ತು ‘ಯಜಮಾನ’ ದೈನಿಕ ಧಾರಾವಾಹಿಗಳು ಜನವರಿ 27ರಂದು ಜೋಡಿ ಕಥೆಗಳಾದ ಡಿವೋರ್ಸ್ ಲಾಯರ್ ಮದುವೆ ಕಥೆ ‘ವಧು’ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಕಾಂಟ್ರಾಕ್ಟ್ ಮದುವೆಯ ಕಥೆ ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಸಂಬಂಧಗಳನ್ನು ಪ್ರೀತಿಸುವ ಹಾಗೂ ಗೌರವಿಸುವ ‘ವಧು’ […]
Month: January 2025
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ 76ನೇ ಗಣರಾಜ್ಯೋತ್ಸವ
ಕುಂದಾಪುರ (ಜ.26): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ. ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಇಂದು ಭಾರತದ 76ನೇ ಗಣರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಸಂಸ್ಥೆಯ ಅಕಾಡೆಮಿಕ್ ಕೋ ಆರ್ಡಿನೇಟರ್ ಆಗಿರುವ ಶ್ರೀಮತಿ ವಿಲ್ಮಾ ಡಿ.ಸಿಲ್ವ, ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೆ […]
ಕಾರ್ಕಳ ಜ್ಞಾನಸುಧಾ : 76ನೇ ಗಣರಾಜ್ಯೋತ್ಸವ ಸಂಭ್ರಮ
ಕಾರ್ಕಳ(ಜ,26) : ಧರ್ಮವನ್ನು ಮೀರಿದ ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವವು ಒಂದು. ನಮ್ಮ ಜವಾಬ್ದಾರಿಯನ್ನು ನೆನಪಿಕೊಂಡು ಪ್ರಜಾಪ್ರಭುತ್ವದ ಘನತೆ-ಗೌರವವನ್ನು ಎತ್ತಿಹಿಡಿಯುವತ್ತ ವಿದ್ಯಾರ್ಥಿಗಳು ಚಿತ್ತಹರಿಸಬೇಕು. ಭವ್ಯ ಭಾರತವನ್ನು ಕಟ್ಟುವಲ್ಲಿ ಪ್ರಾಮಾಣಿಕವಾಗಿ ದುಡಿದು ದೇಶ ಸೇವೆಯ ಧನ್ಯತೆಯನ್ನು ಪಡೆಯಬೇಕು ಎಂದು ಸೌತ್ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ನ ಅಧ್ಯಕ್ಷರಾದ ಶ್ರೀ ಪದ್ಮಪ್ರಸಾದ್ ಜೈನ್ ನೆಲ್ಲಿಕಾರು ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭ ಕಾರ್ಕಳ […]
ಬಿ. ಬಿ. ಹೆಗ್ಡೆ ಕಾಲೇಜು: 76 ನೇ ಗಣರಾಜ್ಯೋತ್ಸವ
ಕುಂದಾಪುರ (ಜ, 26): ದೇಶದ ಅಭಿವೃದ್ಧಿ ಜನರ ಏಕತೆ ಮತ್ತು ದೇಶಾಭಿಮಾನದಿಂದ ಸಾಧ್ಯ. ವಿದ್ಯಾರ್ಥಿಗಳಲ್ಲಿ ಆ ಭಾವನೆ ಮೂಡುವ ಮುಖೇನ ಸದೃಢ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರು ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಫಥ ಸಂಚಲನದ ಗೌರವವನ್ನು ಸ್ವೀಕರಿಸಿ, ಧ್ವಜಾರೋಹಣ ಮಾಡಿ ಮಾತನಾಡಿದರು. ಈ ಸಂದರ್ಭ […]
ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ, ಹೆಮ್ಮಾಡಿ : ನಿರ್ದೇಶಕರಾಗಿ ಲೋಹಿತಾಶ್ವ ಆರ್. ಕುಂದರ್ ಆಯ್ಕೆ
ಹೆಮ್ಮಾಡಿ (ಜ. 27): ಇಲ್ಲಿನ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸಾಮಾನ್ಯ ಸ್ಥಾನಕ್ಕೆ ಜ.26ರಂದು ನಡೆದ ಚುನಾವಣೆಯಲ್ಲಿ ಲೋಹಿತಾಶ್ವ ಆರ್ ಕುಂದರ್ ಬಾಳಿಕೆರೆ ಗೆಲುವು ಸಾಧಿಸಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸಮಾಜ ಸೇವೆ, ಸಹಕಾರ ಹಾಗೂ ಧಾರ್ಮಿಕ ಕ್ಷೇತ್ರದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದಾರೆ. ಹಾಗೆಯೇ ಮೊಗವೀರ […]
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳದಲ್ಲಿ 76 ನೇ ಗಣರಾಜ್ಯೋತ್ಸವ
ಕುಂದಾಪುರ (ಜ,27): ದೇಶದ 76 ನೇ ಗಣರಾಜ್ಯೋತ್ಸವವನ್ನು ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಸಂಭ್ರಮ ಸಡಗರದಿಂದ ನಡೆಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದ ಸಹ ಸಂಸ್ಥಾಪಕರು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ” ಸಂವಿಧಾನವು ಈ ದೇಶದ ಎಲ್ಲ ಜನರಿಗೆ ಸಾಮಾಜಿಕ,ಶೈಕ್ಷಣಿಕ,ಮತ್ತು ಸಮಾನತೆಯ ಹಕ್ಕನ್ನು ನೀಡಿ ಸುಭದ್ರ ಜೀವನ ನಡೆಸುವಲ್ಲಿ ಸಹಕಾರಿಯಾಗಿದೆ. ದೇಶ ಸ್ವಾತಂತ್ರ್ಯಗೊಳ್ಳುವಲ್ಲಿ ಅನೇಕ ಭಾರತೀಯರ ತ್ಯಾಗ ಬಲಿದಾನವಿದೆ ಇವರ ಹೋರಾಟದ ಫಲವೇ ನಾವೆಲ್ಲರೂ ಇಂದು […]
ನಾಗರಿಕ ಸಮಾಜದ ಪ್ರೀತ್ಯಾದರಗಳಿಂದ ಸೈನಿಕರ ಮನೋಬಲ ಹೆಚ್ಚುತ್ತದೆ- ಬೈಂದೂರು ಚಂದ್ರಶೇಖರ ನಾವಡ
ಕುಂದಾಪುರ (ಜ.29): ದೇಶದ ಗಡಿಯಲ್ಲಿ ಎದುರಿನಿಂದ ಶತ್ರುಗಳು, ಆಂತರಿಕವಾಗಿ ಉಗ್ರವಾದಿಗಳ ಜತೆ ಜತೆಯಲ್ಲಿ ಹವಾಮಾನ ವೈಪರೀತ್ಯದ ಕಠಿಣ ಸವಾಲನ್ನು ಎದುರಿಸುವ ಸೈನಿಕರಿಗೆ ನಾಗರಿಕ ಸಮಾಜದ ಆದರ ಮನೋಬಲ ಹೆಚ್ಚಿಸುತ್ತದೆ. ಸರ್ಕಾರದ ಬೆನ್ನೆಲುಬಾಗಿ ನಿಂತಿರುವ ಭಾರತೀಯ ಸೇನೆಯಿಂದಾಗಿ ಸಾಮಾನ್ಯ ನಾಗರಿಕರ ಬದುಕು ನೆಮ್ಮದಿಯುತವಾಗಿದೆ ಮತ್ತು ನಮ್ಮ ಗಣತಂತ್ರ ಯಶಸ್ವಿ ಎನಿಸಿದೆ ಎಂದು ಲೇಖಕ,ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡ ಅಭಿಪ್ರಾಯ ಪಟ್ಟರು. ಅವರು ಬೈಂದೂರು ತಾಲೂಕು ಶಿರೂರಿನ ಜೋಗೂರು ಗ್ರಾಮದಲ್ಲಿ ಸಮರ […]
ಶ್ರೀ ಗಣೇಶ ಮೊಗವೀರರಿಗೆ ಮಂತ್ರಾಲಯ ಮಠದ ಶ್ರೀ ಪರಿಮಳ ಪ್ರಶಸ್ತಿ
ಹೆಮ್ಮಾಡಿ ( ಜ,27): DCX ಸಿಸ್ಟಮ್ಸ್ ಲಿಮಿಟೆಡ್ ಅರ್ಪಿಸುವ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ, ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯದ ಪರಮ ಪೂಜ್ಯ ಪೀಠಾದಿಪತಿಗಳಾದ ಡಾ|| ಪರಮಪೂಜ್ಯ ಶ್ರೀ ಶ್ರೀ ಶ್ರೀ 108ಶ್ರೀಮತ್ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಕೊಡಮಾಡುವ ಪ್ರತಿಷ್ಠಿತ ಶ್ರೀ ಪರಿಮಳ ಪ್ರಶಸ್ತಿ 2025 ಈ ಪ್ರಶಸ್ತಿಗೆ ಹೆಮ್ಮಾಡಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ರೂವಾರಿ,ಶಿಕ್ಷಣ ಕ್ಷೇತ್ರದ ಸಾಧಕ ಶ್ರೀ ಗಣೇಶ್ ಮೊಗವೀರರವರನ್ನು ಆಯ್ಕೆಯಾಗಿದ್ದಾರೆ. ಇದುವರೆಗೆ ಶ್ರೀಯುತರು ಶಿಕ್ಷಣ […]
ಶ್ರೀ ಕುಪ್ಪಣ್ಣ ಹಾಯ್ಗೂಳಿ ಜಟ್ಟಿಗ ಹಾಗೂ ಸಪರಿವಾರ ದೈವಸ್ಥಾನ, ಕಟ್ಟು: ಫೆಬ್ರವರಿ 4ರಿಂದ 06 ತನಕ ವಿವಿಧ ಧಾರ್ಮಿಕ ಕಾರ್ಯಕ್ರಮ
ಹೆಮ್ಮಾಡಿ( ಜ,29): ಇಲ್ಲಿನ ಶ್ರೀ ಕುಪ್ಪಣ್ಣ ಹಾಯ್ಗೂಳಿ ಜಟ್ಟಿಗ ಹಾಗೂ ಸಪರಿವಾರ ದೈವಸ್ಥಾನ ಕಟ್ಟು, ಸುಳ್ಸೆ, ದೇಗುಲದಲ್ಲಿ ಮಹಾ ಘಂಟೆ ಲೋಕಾರ್ಪಣೆ ,ಬ್ರಹ್ಮ ಕುಂಭಾಭಿಷೇಕ ಹಾಗೂ ವಾರ್ಷಿಕ ಹೂವಿನ ಪೂಜಾ ಕಾರ್ಯಕ್ರಮ ಫೆಬ್ರುವರಿ 4ರಿಂದ 06, ತನಕ ನಡೆಯಲಿದೆ. ಫೆ, 4ರ ಮಂಗಳವಾರದಂದು ಮಹಾ ಗಂಟೆಯ ಪುರ ಮೆರವಣಿಗೆಯು ಹೆಮ್ಮಾಡಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದಿಂದ ಮಧ್ಯಾಹ್ನ ಗಂಟೆ 3:30ಕ್ಕೆ ಹೊರಡಲಿರುವುದು. ರಾತ್ರಿ ಗಂಟೆ 7:30 ಕ್ಕೆ ಸರಿಯಾಗಿ ಧಾರ್ಮಿಕ ಸಭಾ […]
ಕೋಡಿ ಬ್ಯಾರೀಸ್ ನಲ್ಲಿ 76 ನೇ ಗಣರಾಜ್ಯೋತ್ಸವ
ಕುಂದಾಪುರ(ಜ.26): ಇಲ್ಲಿನ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 76 ನೇ ಗಣರಾಜ್ಯೋತ್ಸವದ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ F.S.L ಇಂಡಿಯಾದ ಸಹ ಸಂಸ್ಥಾಪಕರು ಮತ್ತು ಅಧ್ಯಕ್ಷರು, ತಂತ್ರಜ್ಞ ಸಲಹೆಗಾರ, ಅನುಭವೀ ಶಿಕ್ಷಣ ತಜ್ಞ ಮತ್ತು ವನ್ಯಜೀವಿ ಸಂರಕ್ಷಕರೂ ಆದ ಶ್ರೀ.ರಾಕೇಶ್ ಎಸ್ ಸೋನ್ಸ್ ರವರು “76 ನೇ ಗಣರಾಜ್ಯೋತ್ಸವದ ದ್ವಜಾರೋಹಣವನ್ನು ನೆರವೇರಿಸಿ, ಸಂವಿಧಾನದ ವಿಧಿವಿಧಾನದ ಮೂಲಕ ನಾವೆಲ್ಲರೂ ಸಾಗಿದರೆ ಸರಿಯಾದ ಜವಾಬ್ದಾರಿಯುತ ಪ್ರಜೆಗಳಾಗಿ ಬೆಳೆಯುವಂತೆ […]










