ಕುಂದಾಪುರ(ಜ.26): ಇಲ್ಲಿನ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 76 ನೇ ಗಣರಾಜ್ಯೋತ್ಸವದ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ F.S.L ಇಂಡಿಯಾದ ಸಹ ಸಂಸ್ಥಾಪಕರು ಮತ್ತು ಅಧ್ಯಕ್ಷರು, ತಂತ್ರಜ್ಞ ಸಲಹೆಗಾರ, ಅನುಭವೀ ಶಿಕ್ಷಣ ತಜ್ಞ ಮತ್ತು ವನ್ಯಜೀವಿ ಸಂರಕ್ಷಕರೂ ಆದ ಶ್ರೀ.ರಾಕೇಶ್ ಎಸ್ ಸೋನ್ಸ್ ರವರು “76 ನೇ ಗಣರಾಜ್ಯೋತ್ಸವದ ದ್ವಜಾರೋಹಣವನ್ನು ನೆರವೇರಿಸಿ, ಸಂವಿಧಾನದ ವಿಧಿವಿಧಾನದ ಮೂಲಕ ನಾವೆಲ್ಲರೂ ಸಾಗಿದರೆ ಸರಿಯಾದ ಜವಾಬ್ದಾರಿಯುತ ಪ್ರಜೆಗಳಾಗಿ ಬೆಳೆಯುವಂತೆ ಮಾಡುತ್ತದೆ. ಹಾಗೆಯೇ ಪರಿಸರದ ಕುರಿತಾಗಿ ತಮ್ಮ ಅನುಭವದ ಅಪೂರ್ವ ವಿವರವನ್ನು ತಿಳಿಸಿದರು”.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶ್ರೀಯುತ ಸಯ್ಯದ್ ಮೊಹಮ್ಮದ್ ಬ್ಯಾರಿಯವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ “ಭಾರತೀಯರೆಲ್ಲರೂ ಒಪ್ಪಿಕೊಳ್ಳುವಂತಹ, ಸಮಾನತೆಯನ್ನು ಸಾರುವಂತಹ ಏಕೈಕ ಗ್ರಂಥವೆಂದರೆ ಅದು ಭಾರತೀಯ ಸಂವಿಧಾನ. ಎಲ್ಲಾ ಧರ್ಮವೂ ದೀಪದಂತೆ, ಅದರ ತಿರುಳು ಬೆಳಕನ್ನು ನೀಡುವುದು. ಪ್ರತಿಯೊಬ್ಬ ಮನುಷ್ಯನು ಭಾರತೀಯ ಸಂವಿಧಾನದ ವಾಸ್ತುಶಿಲ್ಪಿ ಡಾ. ಅಂಬೇಡ್ಕರ್ ರವರು ಪಟ್ಟ ಪರಿಶ್ರಮ, ತ್ಯಾಗ ಮತ್ತು ಅವಿರತ ಶ್ರಮವನ್ನು ನೆನಪಿಟ್ಟುಕೊಳ್ಳಬೇಕು. ಹಾಗೆಯೇ ಸಮಾನತೆ, ಪ್ರೀತಿ, ವಿಶ್ವಾಸ, ಸಹೋದರತ್ವದಿಂದ ಬಾಳಬೇಕು” ಎಂದರು.
ಹುತಾತ್ಮ ವೀರ ಯೋಧರಾದ ಅನೂಪ್ ಪೂಜಾರಿಯವರಿಗೆ ಮೌನ ಪ್ರಾರ್ಥನೆಯನ್ನು ಮಾಡುವ ಮೂಲಕ ಅವರ ತಾಯಿಯಾದ ಶ್ರೀಮತಿ ಚಂದು ಪೂಜಾರ್ತಿಯವರಿಗೆ ಸಾಂತ್ವನದ ಗೌರವವನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳ ರಾಷ್ಟೀಯ ಭಾವೈಕ್ಯತೆಯ ಕವಾಯತು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ನಂತರದಲ್ಲಿ ಬ್ಯಾರೀಸ್ ಶಿಕ್ಷಾ ಸುರಕ್ಷಾ ಫೌಂಡೇಶನ್ ವತಿಯಿಂದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅರ್ಹ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಯಿತು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ. ಕೆ. ಎಂ ಅಬ್ದುಲ್ ರೆಹಮಾನ್ ಬ್ಯಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ. ಆಸೀಫ್ ಬ್ಯಾರಿ, HKM ಬ್ಯಾರಿ ಕನ್ನಡ ಅನುದಾನಿತ ಪ್ರೌಢಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿ ಶ್ರೀಯುತ ಗಣೇಶ್ ಪೂಜಾರಿ, ಸೀನಿಯರ್ ವಿ.ಪಿ, ಬ್ಯುಸಿನೆಸ್ ಡೆವಲಪ್ಮೆಂಟ್ & ಲಿಯೇಸಾನ್, ಲೋಧಾ ಗ್ರೂಪ್, ಮುಂಬೈ ಹಾಗೂ ಬ್ಯಾರೀಸ್ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ಶಾಲಾಭಿವೃದ್ಧಿ ಹಾಗೂ ಸಲಹಾ ಮಂಡಳಿಯವರು, ಊರಿನ ಗಣ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ. ಸಂದೀಪ್ ಶೆಟ್ಟಿ ನಿರೂಪಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಮುಖ್ಯಾಧಿಕಾರಿ ಡಾ. ಪೂರ್ಣಿಮಾ. ಟಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು.