ಗಂಗೊಳ್ಳಿ (ಜ,11): “ಕನ್ನಡ ನಾಡು ಕಂಡ ಅತ್ಯದ್ಭುತ ಕವಿ ಕುಮಾರವ್ಯಾಸ. ಕನ್ನಡ ನೆಲದ ಮನೆ ಮನಗಳಲ್ಲಿ ಭಾರತ ಕತೆಯನ್ನು ನೆಲೆಯಾಗುವಂತೆ, ಆಪ್ತವಾಗುವಂತೆ ಮಾಡಿದ ಧೀಮಂತ ಕವಿ. ಮಹಾ ಭಾರತ ಕಥಾ ವಸ್ತುವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿ, ಅದನ್ನು ಕೃಷ್ಣ ಕತೆಯೆಂದು ಸಾರಿದವನು. ಕುವೆಂಪು ಅವರು ಹೇಳುವಂತೆ ಕಲಿಯುಗದಲ್ಲೂ ದ್ವಾಪರವನ್ನು ಕಟ್ಟಿಕೊಟ್ಟವನು. ವ್ಯಾಸ ರಚಿತ ಭಾರತದ ಮುಂದೆ ತಾನು ಕುಮಾರವ್ಯಾಸನೆಂದು ಹೇಳಿಕೊಳ್ಳುವಲ್ಲಿ ನಾರಣಪ್ಪನ ವಿನಯ ಸಂಪನ್ನತೆ ಎದ್ದು ಕಾಣುತ್ತದೆ. ನಾಡಿನ ಮೂಲೆ […]
Month: January 2025
ಎಚ್.ಎಮ್.ಎಮ್ ಶಾಲೆಯ ಆರ್ಯನ್ಗೆ ʼದಿ ಬೆಸ್ಟ್ ಸ್ಟೂಡೆಂಟ್ʼ ಪ್ರಶಸ್ತಿ
ಕುಂದಾಪುರ(ಜ.7):ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ 4ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಕೆ ಪೂಜಾರಿ, ನಿಹೊನ್ಸಿಕಿ ಕರಾಟೆ ಆಂಡ್ ಸ್ಪೋರ್ಟ್ಸ ಫೆಡರೇಶನ್ ನ ವತಿಯಿಂದ ಕರಾಟೆಯಲ್ಲಿ ಕೊಡಮಾಡುವ 2024 ನೇ ಸಾಲಿನ ದಿ ಬೆಸ್ಟ್ ಸ್ಟೂಡೆಂಟ್ʼ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.
ಎಚ್. ಎಮ್. ಎಮ್ ಶಾಲೆಯ ಅವನಿ ಮತ್ತು ಶ್ರೇಯಸ್ ಗೆ ಕಾರಂತ ಬಾಲ ಪುರಸ್ಕಾರ
ಕುಂದಾಪುರ(ಜ.8): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್. ಎಸ್. ರಾವ್ ಮತ್ತು 7ನೇ ತರಗತಿಯ ವಿದ್ಯಾರ್ಥಿನಿ ಅವನಿ ಎ ಶೆಟ್ಟಿಗಾರ್ ತಮ್ಮ ವಿಶಿಷ್ಟ ಸಾಧನೆಗಾಗಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ʼಕಾರಂತ ಬಾಲ […]
ಜಿಲ್ಲಾ ಮಟ್ಟದ ಚಿತ್ರಕಲೆ ಸ್ಪರ್ಧೆ : ಸಂಜಿತ್ ಎಂ ದೇವಾಡಿಗ ದ್ವಿತೀಯ ಸ್ಥಾನ
ಕುಂದಾಪುರ(ಜ.08): ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೈದೆ ಬೆಟ್ಟು ಕೊಕ್ಕರ್ಣೆ, ದುರ್ಗಾ ಆಂಗ್ಲ ಮಾಧ್ಯಮ ಶಾಲೆ ಕೊಕ್ಕರ್ಣೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಚಿತ್ರಕಲೆಯಲ್ಲಿ ಕೊಂಚಾಡಿ ರಾಧಾ ಶೆಣೈ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ ದೇವಾಡಿಗ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಈತ ಚಿತ್ರಕಲಾ ಶಿಕ್ಷಕ, ಸ್ಯಾಕ್ಸೋಫೋನ್ ಕಲಾವಿದ ಮಾಧವ ದೇವಾಡಿಗ ಹಾಗೂ ಗಣಿತ ಉಪನ್ಯಾಸಕಿ ಸಾವಿತ್ರಿ ಎಸ್ […]
ಸರಕಾರಿ ಪಿ. ಯು ಕಾಲೇಜು ನಾವುಂದ : ಸಾವಿತ್ರಿ ಬಾ ಪುಲೆ ಜನ್ಮ ದಿನಾಚರಣೆ
ನಾವುಂದ(ಜ,9): ಸರಕಾರಿ ಪದವಿಪೂರ್ವ ಕಾಲೇಜು ನಾವುಂದ ಇಲ್ಲಿನ ರೇಂಜರ್ಸ್ ಮತ್ತು ರೋವರ್ಸ್ ಘಟಕದ ವತಿಯಿಂದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾ ಪುಲೆ ಇವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಎಂ, ಉಪನ್ಯಾಸಕರಾದ ಶ್ರೀ ಲಕ್ಷ್ಮಿ ಕೆ.ಎಸ್., ಸುಶೀಲಾ, ಸುಮತಿ ಉಡುಪ, ರೇಂಜರ್ ಲೀಡರ್ ಸಾವಿತ್ರಿ ಎಸ್ ಇವರು ಉಪಸ್ಥಿತರಿದ್ದರು.
ಎಚ್. ಎಮ್. ಎಮ್ ಶಾಲೆಯ ಶ್ರೀನಿತ್ಗೆ ಚೆಸ್ನಲ್ಲಿ ಬಹುಮಾನ
ಕುಂದಾಪುರ(ಜ.10): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ 2ನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೇಟ್ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಉಡುಪಿಯ ವತಿಯಿಂದ ಕಾಪುವಿನಲ್ಲಿ ನಡೆದ 25ನೇ ಶ್ರೀ ನಾರಾಯಣ ಗುರು ಟ್ರೋಫಿ- ಓಪನ್ ಆಂಡ್ ಯೇಜ್ ಕ್ಯಾಟಗರಿ ರ್ಯಾಪಿಡ್ ಚೆಸ್ ಟೂರ್ನಮೆಂಟ್-2025, 9ರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ 6 ರೌಂಡ್ಸ್ ಗಳಲ್ಲಿ […]
ತಾಲೂಕು ಮಟ್ಟದ ಗಣಿತ ಪ್ರತಿಭಾ ಪರೀಕ್ಷೆ : ಆಯುಷ್ ಎ.ಮೊಗವೀರ ಪ್ರಥಮ ರ್ಯಾಂಕ್
ಕುಂದಾಪುರ(ಜ,9) : ತಾಲೂಕು ಮಟ್ಟದ ಅಂತರ್ ಶಾಲಾ ಮಟ್ಟದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಕಿರಿಮುಂಜೇಶ್ವರದ ಜನತಾ ಪ್ರಾಥಮಿಕ ಶಾಲೆಯ ಆಯುಷ್ ಎ.ಮೊಗವೀರ ಪ್ರಥಮ ರ್ಯಾಂಕ್ ಪಡೆದಿದ್ದಾನೆ. ಈತ ನಾವುಂದ ಬಾಡಿ ಮನೆ ವೇದಾವತಿ ಮತ್ತು ಅಣ್ಣಪ್ಪ ದಂಪತಿಗಳ ಪುತ್ರ. ವರದಿ: ಈಶ್ವರ ನಾವುoದ
ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆ: ಕರ್ನಾಟಕ ತಂಡ ಪ್ರತಿನಿಧಿಸುತ್ತಿರುವ ಲಾಸ್ಯ ಮಧ್ಯಸ್ಥ
ಕುಂದಾಪುರ ( ಜ.09): ಹೈದರಾಬಾದಿನಲ್ಲಿ ನಡೆಯಲಿರುವ 68ನೇ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಮ್ಮ ಕರಾವಳಿ ಭಾಗದ ಹೆಮ್ಮೆಯ ಯೋಗಪಟು ಲಾಸ್ಯ ಮಧ್ಯಸ್ಥ ಕರ್ನಾಟಕ ತಂಡವನ್ನು ಪ್ರತಿನಿಧಿಲಾಸಲಿದ್ದಾರೆ. ಈಕೆ ಕುಂದಾಪುರದ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ . ವರದಿ: ಈಶ್ವರ ನಾವುoದ
ಗುಜ್ಜಾಡಿ : ನಾಗಮಂಡಲೋತ್ಸವದ ಸುವರ್ಣ ಮಹೋತ್ಸವ- ಮುಹೂರ್ತ, ದರ್ಶನ ಸೇವೆ
ಕುಂದಾಪುರ( ಜ.10): ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ಮಾರ್ಚ್ 30 ಹಾಗೂ 31 ರಂದು ನಾಗ ಮಂಡಲೋತ್ಸವದ ಸುವರ್ಣ ಮಹೋತ್ಸವ ಪ್ರಯುಕ್ತ ನಡೆಯಲಿರುವ ಜೀರ್ಣಾಷ್ಟಬಂಧ ಪುರಸ್ಸರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗ ಮಂಡಲೋತ್ಸವ ಪೂರ್ವಭಾವಿಯಾಗಿ ಮುಹೂರ್ತ, ದರ್ಶನ ಸೇವೆ ಜನವರಿ 08 ರಂದು ಜರುಗಿತು. ಮಾರ್ಚ್ 30 ಹಾಗೂ 31 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ನಾಗಮಂಡಲೋತ್ಸವದ ಸುವರ್ಣ ಮಹೋತ್ಸವದ ಪೂರ್ವಭಾವಿಯಾಗಿ ಈ […]
ಬಿ.ಬಿ. ಹೆಗ್ಡೆಕಾಲೇಜಿನ ಸಚಿನ್ ಆಚಾರ್ ಕುಂಭಾಶಿ ರಾಜ್ಯ ಗಣರಾಜ್ಯೋತ್ಸವ ಪೆರೇಡ್ಗೆ ಆಯ್ಕೆ
ಕುಂದಾಪುರ (ಜ.07): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕ ಕುಂಭಾಶಿಯ ಶ್ರೀಧರ್ ಆಚಾರ್ ಮತ್ತು ಹೇಮಲತಾ ಅವರ ಪುತ್ರನಾದ ಸಚಿನ್ ಆಚಾರ್, ದ್ವಿತೀಯ ಬಿ.ಸಿ.ಎ. (ಬಿ) ಇವರು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ […]










