ಕುಂದಾಪುರ( ಜ.10): ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ಮಾರ್ಚ್ 30 ಹಾಗೂ 31 ರಂದು ನಾಗ ಮಂಡಲೋತ್ಸವದ ಸುವರ್ಣ ಮಹೋತ್ಸವ ಪ್ರಯುಕ್ತ ನಡೆಯಲಿರುವ ಜೀರ್ಣಾಷ್ಟಬಂಧ ಪುರಸ್ಸರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗ ಮಂಡಲೋತ್ಸವ ಪೂರ್ವಭಾವಿಯಾಗಿ ಮುಹೂರ್ತ, ದರ್ಶನ ಸೇವೆ ಜನವರಿ 08 ರಂದು ಜರುಗಿತು.
ಮಾರ್ಚ್ 30 ಹಾಗೂ 31 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ನಾಗಮಂಡಲೋತ್ಸವದ ಸುವರ್ಣ ಮಹೋತ್ಸವದ ಪೂರ್ವಭಾವಿಯಾಗಿ ಈ ಸೇವೆಯನ್ನು ಹಮ್ಮಿಕೊಳ್ಳಯಿತು.
ನಾಗಮಂಡಲೋತ್ಸವದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮಾರ್ಚ್ 26 ರಂದು ಜೀರ್ಣಸ್ತ ಬಂದ, ಪುನರ್ ಪ್ರತಿಷ್ಠೆ ಹಾಗೂ ಕಳಸಾಭಿಷೇಕ ನಡೆಯಲಿದ್ದು, ಇದನ್ನು ಶೃಂಗೇರಿ ಶ್ರೀ ಜಗದ್ಗುರು ಭಾರತೀಯ ತೀರ್ಥ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ವಿದುಶೇಖರ ತೀರ್ಥಂಗಳ ರವರು ನೆರವೇರಿಸಲಿದ್ದಾರೆ.
ಪುರೋಹಿತ ರಾಘವೇಂದ್ರ ಅಡಿಗ ಧಾರ್ಮಿಕ ವಿಧಿ ನೆರವೇರಿಸಿದರು. ನಾಗ ದೇವರ ಪಾತ್ರಿ ರವಿರಾಜ್ ಭಟ್ ಅಂಪಾರು ದರ್ಶನ ಸೇವೆ ನಡೆಸಿಕೊಟ್ಟರು. ನಾಗಮಂಡಲೋತ್ಸವದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲಿರುವ ಪ್ರಮುಖರಿಗೆ ಪ್ರಸಾದ ನೀಡಲಾಯಿತು.
ಶ್ರೀ ನಾಗ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ಮೇಸ್ತ, ಗೌರವಾಧ್ಯಕ್ಷ ಸುರೇಶ ಖಾರ್ವಿ, ಕಾರ್ಯದರ್ಶಿ ಶ್ರೀಧರ ಮೇಸ್ತ, ಗುಜ್ಜಾಡಿ ಗ್ರಾಪಂ ಸದಸ್ಯ ಹರೀಶ ಮೇಸ್ತ, ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಅಧ್ಯಕ್ಷ ರಾಮಚಂದ್ರ ಶಿರೂರ್ ಕರ್, ಬೆಣ್ಗೆರೆ ಶ್ರೀ ಸುಬ್ರಹ್ಮಣೇಶ್ವರ ಯುತ್ ಕ್ಲಬ್ ಅಧ್ಯಕ್ಷ ವಿಶ್ವನಾಥ ಮೇಸ್ತ, ಕಾರ್ಯದರ್ಶಿ ರಾಮದಾಸ ಮೇಸ್ತ, ಮಹಿಳಾ ಮಂಡಳಿ ಅಧ್ಯಕ್ಷೆ ಕುಸುಮಾ ಮೇಸ್ತ, ಮೋಹನ ಖಾರ್ವಿ, ಉಮಾನಾಥ ದೇವಾಡಿಗ ಗಂಗೊಳ್ಳಿ, ಚಾರೋಡಿ ಮೇಸ್ತ ಸಮಾಜ ಬಾಂಧವರು, ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.