ಕುಂದಾಪುರ (ಮೇ 17): ಇಲ್ಲಿನ ಡಾ. ಬಿ .ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಎರಡನೇ ಅವಧಿಗೆ ರಕ್ಷಕ- ಶಿಕ್ಷಕ ಸಭೆಯನ್ನು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಲಾಯಿತು. ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, ವರ್ತಮಾನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಮೇಲೆ ಬಹಳ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ. ರಕ್ಷಕರು, ಪೋಷಕರು ಈ ಕುರಿತು ಗಮನಕೊಡಬೇಕು . ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಹೆತ್ತವರ ಪಾತ್ರ […]
Day: May 22, 2025
ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ : ಕುಂದಗನ್ನಡ ಸಂಘದ ವಿದ್ಯಾರ್ಥಿಗಳಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ (ಮೇ.19): ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘದ ವಿದ್ಯಾರ್ಥಿಗಳು ವಿಸ್ತರಣಾ ಚಟುವಟಿಕೆಯ ಭಾಗವಾಗಿ ಮೂಡುಗಿಳಿಯಾರಿನ ಶ್ರೀ ಸ್ವಾಮಿ ನಂದೀಕೇಶ್ವರ ದೈವಸ್ಥಾನದ ಕೋಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು. ಈ ಸಂದರ್ಭ ದೈವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರಾದ ಸುಭಾಷ್ ಚಂದ್ರ ಶೆಟ್ಟಿ, ಸೇವಾಕರ್ತರಾದ ರತ್ನಾಕರ್ ಶೆಟ್ಟಿ, ಚಂದ್ರ ಪಾಣಾ, ಕಾಲೇಜಿನ ಕುಂದಗನ್ನಡ ಸಂಘದ ಸಂಯೋಜಕಿ ರೇಷ್ಮಾ ಶೆಟ್ಟಿ, ಪ್ರವೀಣ ಪೂಜಾರಿ ಉಪಸ್ಥಿತರಿದ್ದರು.
ಗಂಗೊಳ್ಳಿ : ಸುಶ್ಮಿತಾ ಎಸ್. ಗಾಣಿಗರಿಗೆ ಸನ್ಮಾನ
ಗಂಗೊಳ್ಳಿ(ಮೇ ,22): ವೈಷ್ಣವಿ ಇವೆಂಟ್ಸ್ ಗಂಗೊಳ್ಳಿ, ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ ಮತ್ತು ಬಿಲ್ಲವರ ಹಿತ ರಕ್ಷಣಾ ವೇದಿಕೆ ಗಂಗೊಳ್ಳಿಯ ವತಿಯಿಂದ 2025ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಎಸ್ ಗಾಣಿಗ ಅವರನ್ನು ಗಂಗೊಳ್ಳಿಯ ಶ್ರೀ ಸೀತಾಳಿ ನವದುರ್ಗೆ ದೇವಸ್ಥಾನದ ಆವರಣದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೈಷ್ಣವಿ ಇವೆಂಟ್ಸ್ […]
ಉಡುಪಿ ಜಿಲ್ಲಾ ಮಟ್ಟದ ಅತ್ಲೇಟಿಕ್ಸ್ ಕ್ರೀಡಾಕೂಟ 2025: ಕುಂದಾಪುರ ಟ್ರ್ಯಾಕ್ & ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿ ಕ್ರೀಡಾಪಟುಗಳಿಂದ ಉತ್ತಮ ಸಾಧನೆ
ಕುಂದಾಪುರ ( ಮೇ ,17): ಉಡುಪಿ ಜಿಲ್ಲಾ ಅಮೆಚುರ್ ಅತ್ಲೇಟಿಕ್ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ, ಉಡುಪಿ ಜಿಲ್ಲಾ ಮಟ್ಟದ ಕಿರಿಯರ ಅತ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿ 6 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕದೊಂದಿಗೆ ಒಟ್ಟು 12 ಪದಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ. 8 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಭವಿಷ್ಯ – ಬಾಲ್ ಥ್ರೋ ನಲ್ಲಿ ಚಿನ್ನದ ಪದಕ, ಪ್ರಾರ್ಥನಾ […]
ಹೆಮ್ಮಾಡಿ ಜನತಾ ಪಿ ಯು ಕಾಲೇಜಿನ ಶ್ರದ್ದಾ ಎಸ್ ಮೊಗವೀರ ದ್ವಿತೀಯ ಪಿ.ಯು.ಸಿ.ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್
ಹೆಮ್ಮಾಡಿ (ಮೇ ,15): ಪದವಿಪೂರ್ವ ಶಿಕ್ಷಣ ಮಂಡಳಿಯವರು ಆಯೋಜಿಸಿದ 2ನೇ ಹಂತದ ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರದ್ಧಾ ಎಸ್ ಮೊಗವೀರ 595 /600 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯ ಮಟ್ಟದಲ್ಲಿ 5ನೇ ರ್ಯಾಂಕ್ ಪಡೆದು ಶೈಕ್ಷಣಿಕ ಸಾಧನೆ ಮೆರೆದಿದ್ದಾರೆ. ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.










