ಕುಂದಾಪುರ ( ಮೇ ,17): ಉಡುಪಿ ಜಿಲ್ಲಾ ಅಮೆಚುರ್ ಅತ್ಲೇಟಿಕ್ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ, ಉಡುಪಿ ಜಿಲ್ಲಾ ಮಟ್ಟದ ಕಿರಿಯರ ಅತ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿ 6 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕದೊಂದಿಗೆ ಒಟ್ಟು 12 ಪದಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.
8 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಭವಿಷ್ಯ – ಬಾಲ್ ಥ್ರೋ ನಲ್ಲಿ ಚಿನ್ನದ ಪದಕ, ಪ್ರಾರ್ಥನಾ ಆರ್ ಶೆಟ್ಟಿ – ಸ್ಟ್ಯಾಂಡಿಂಗ್ ಬೋರ್ಡ್ ಜಂಪ್ ನಲ್ಲಿ ಕಂಚಿನ ಪದಕ, 8 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರತ್ಯುಶ್ ಜಿ ಶೆಟ್ಟಿ- ಬಾಲ್ ಥ್ರೋ ಅಲ್ಲಿ ಬೆಳ್ಳಿಯ ಪದಕ.
10 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅರ್ಥ ಸ್ ಶೆಟ್ಟಿ – 30 ಮೀಟರ್ ಓಟದಲ್ಲಿ ಚಿನ್ನದ ಪದಕ ಹಾಗೂ ಬಾಲ್ ಥ್ರೋ ಅಲ್ಲಿ ಚಿನ್ನದ ಪದಕ.
ಅಮೈರ ಶೋಲಾಪುರ್ – ಬಾಲ್ ಥ್ರೋ ಅಲ್ಲಿ ಕಂಚಿನ ಪದಕ. 10 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ತನಿಶ್ ಯು ಶೆಟ್ಟಿ – ಬಾಲ್ ಥ್ರೋ ಅಲ್ಲಿ ಚಿನ್ನದ ಪದಕ,12 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅನ್ವಿತಾ ಶೆಟ್ಟಿ – ಲಾಂಗ್ ಜಂಪ್ ನಲ್ಲಿ ಬೆಳ್ಳಿಯ ಪದಕ,12 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಸಂಹಿತ್ – ಬಾಲ್ ಥ್ರೋ ಅಲ್ಲಿ ಚಿನ್ನದ ಪದಕ, ಕೃಷಿ ಕುಮಾರ್ ಶೆಟ್ಟಿ – ಬಾಲ್ ಥ್ರೋ ಅಲ್ಲಿ ಕಂಚಿನ ಪದಕ, 14 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಆರಾಧ್ಯ ಸ್ ಶೆಟ್ಟಿ – ಹೈ ಜಂಪ್ ನಲ್ಲಿ ಚಿನ್ನದ ಪದಕ,ಸೋಹನ್ ಹೆಗ್ಡೆ – ಹೈ ಜಂಪ್ ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪ್ರಶಾಂತ್ ಶೆಟ್ಟಿ ವಿಜೇತರಿಗೆ ಅಭಿನಂದನೆ ತಿಳಿಸಿದ್ದಾರೆ.