ಹೆಮ್ಮಾಡಿ(ಆ. 05): ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಡಾ. ಜಿ.ಶಂಕರ್ ರವರ 70ನೇ ಹುಟ್ಟು ಹಬ್ಬವನ್ನು ಮೊಗವೀರ ಯುವ ಘಟನೆ(ರಿ.), ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ತಲ್ಲೂರಿನ ಜಯರಾಣಿ ವೃದ್ಧಾಶ್ರಮದಲ್ಲಿ ಆಕ್ಟೋಬರ್ 05 ರಂದು ಆಚರಿಸಲಾಯಿತು. ಸಿಹಿ ಹಂಚುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು. ವೃದ್ಧಾಶ್ರಮದ ಸಂಯೋಜಕರಾದ ಸಿಸ್ಟರ್ ಸೀಟಾ ರವರು ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ […]
Day: October 6, 2025
ಮಣಿಪಾಲ ಜ್ಞಾನಸುಧಾ: ಎನ್.ಎಸ್.ಎಸ್. ಘಟಕ ಉದ್ಘಾಟನೆ
ಮಣಿಪಾಲ ( ಆ .05): ಶ್ರಮಯೇವ ಜಯತೆ ಎನ್ನುವ ಧ್ಯೇಯ ದೊಂದಿಗೆ ದೇಶದಲ್ಲಿ ಅತೀ ಹೆಚ್ಚು ಸದಸ್ಯರ ಸಂಘಟನೆ ಎನ್. ಎಸ್. ಎಸ್.. ಅಂತಹ ಸುಭದ್ರ ತಳಹದಿಯ ಸಂಘಟನೆ ಸದಸ್ಯರಾಗಿರುವುದೇ ಹೆಮ್ಮೆಯ ವಿಷಯ. ಯುವಜನತೆಗೆ ವಿಧ್ಯಾಭ್ಯಾಸದ ಜೊತೆಗೆ ಸಾಮಾಜಿಕ ಜವಾಬ್ದಾರಿ ಸೇವಮಾನೋಭಾವನೆ ರೂಢಿಸಲು ಸೃಷ್ಟಿಯಾದ ಎನ್.ಎಸ್.ಎಸ್. ಕ್ರಾಂತಿಕಾರಿ ಸಾಧನಾ ಪಥದಲ್ಲಿ ಸಾಗುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುತ್ತಿದೆ ಎಂದು ಕರ್ನಾಟಕ ಸರಕಾರ(ಎನ್.ಎಸ್.ಎಸ್ ಕೋಶ)ದ ನಿಕಟಪೂರ್ವ ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ. […]
ಹೆಮ್ಮಾಡಿ: ಅಗಲಿದ ವಿದ್ಯಾರ್ಥಿಯ ಸಂತಾಪ ಸಭೆ
ಹೆಮ್ಮಾಡಿ( ಆ .05): ಇತ್ತೀಚಿಗೆ ನಿಧನ ಹೊಂದಿದ ಹೆಮ್ಮಾಡಿ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ನಮೇಶನ ಸಂತಾಪ ಸಭೆಯನ್ನು ಕಾಲೇಜಿನ ವತಿಯಿಂದ ಆಯೋಜಿಸಲಾಯಿತು. ಸಭೆಯಲ್ಲಿ ಮೃತ ವಿದ್ಯಾರ್ಥಿಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಮಾಡಲಾಯಿತು. ಮೃತ ವಿದ್ಯಾರ್ಥಿ ತಂದೆ ಲವೇಶ ಮಾತನಾಡಿ ಕಾಲೇಜಿನ ವತಿಯಿಂದ ಸಂತಾಪ ಸಭೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಮಗನನ್ನು ಕಳೆದುಕೊಂಡ ದುಃಖದಲ್ಲಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಲೇಜಿನ ಬಗ್ಗೆ ತಪ್ಪು ಹೇಳಿಕೆ […]
ಅಖಿಲ ಭಾರತ ಮಟ್ಟದ NDA ಮತ್ತು NA-2 ಪರೀಕ್ಷೆಯಲ್ಲಿ ಕ್ರಿಯೇಟಿವ್ ಸಂಸ್ಥೆಯ 14 ವಿದ್ಯಾರ್ಥಿಗಳು ತೇರ್ಗಡೆ
ಕಾರ್ಕಳ ( ಆ .04): ಕೇಂದ್ರ ಲೋಕಸೇವಾ ಆಯೋಗ ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹುದ್ದೆಗೆ ನಡೆದ ಎರಡನೇ ಹಂತದ ಲಿಖಿತ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ 14 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಎಸ್.ಎಸ್.ಬಿ. ( ಸರ್ವಿಸ್ ಸೆಲೆಕ್ಷನ್ ಬೋರ್ಡ್ ) ಸಂದರ್ಶನಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ನಾಗದೇವ ಎಂ.ಜಿ, ಪ್ರಥಮ್ ತಮ್ಮಣ್ಣಗೌಡರ್, ನಿಶಾಂತ್ ಹೊನ್ನಾವರ, ನಮಿತ್ ಕೃಷ್ಣಮೂರ್ತಿ ಹೆಗ್ಡೆ, ಸಂವಿತ್ ಅಮಿತ್ ಗೋಕರ್ಣ, ಸುಕ್ಷಿತ್ ಗಿರೀಶ್ ಗೌಡ, […]
ಬಿ. ಬಿ. ಹೆಗ್ಡೆ ಕಾಲೇಜು: ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ
ಕುಂದಾಪುರ (ಅ.02): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ -1 ಹಾಗೂ 2 ಮತ್ತು ರೋವರ್ಸ್-ರೇಂಜರ್ಸ್, ಘಟಕದ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಅಕ್ಟೋಬರ್ 02ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಜೀವನ […]
ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಿಗೆ ಸನ್ಮಾನ
ಕುಂದಾಪುರ (ಅ.04): ನಿರಂತರ ಕಲಿಕೆ ಸಾಧ್ಯವಾದಾಗ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ. ಅದರಲ್ಲಿಯೂ ಸಂಶೋಧನಾತ್ಮಕ ಕಲಿಕೆಗೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಸಂಸ್ಥೆಯಲ್ಲಿ ಸಂಶೋಧನಾರ್ಥಿಗಳು ಹೆಚ್ಚಾದಷ್ಟು ಸಂಸ್ಥೆಯ ಮೌಲ್ಯ ಹೆಚ್ಚುತ್ತದೆ ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಅವರು ಹೇಳಿದರು ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. […]










