ಬೈಂದೂರು ( ಆ .01): ನಿವೃತ್ತ ಯೋಧರೂ , ಬರಹಗಾರರೂ ಆಗಿ ಬೈಂದೂರು ಪರಿಸರದಲ್ಲಿ ಖ್ಯಾತರಾಗಿರುವ ಬೈಂದೂರು ಚಂದ್ರಶೇಖರ ನಾವಡರ ಶಿಸ್ತು, ಸ್ನೇಹಪರ ವ್ಯಕ್ತಿತ್ವ, ವೃತ್ತಿಪರತೆ ಸಮಾಜಕ್ಕೆ ಹಾಗೂ ಯುವ ಉದ್ಯೋಗಿಗಳಿಗೆ ಆದರ್ಶವಾಗಬೇಕು. ಶಾಖೆಗೆ ಬರುವ ಗ್ರಾಹಕರನ್ನು ಪ್ರೀತಿಯಿಂದ ಆದರಿಸಿ ಮಾತನಾಡುವ ಅವರ ಗ್ರಾಹಕ ಸ್ನೇಹಿ ನಡವಳಿಕೆ ಅನುಕರಣೀಯ ಎಂದು ಉದ್ಯಮಿ ಶ್ರೀ ರವೀಂದ್ರ ಕಿಣಿ ಶ್ಲಾಘಿಸಿದರು. ಯೂನಿಯನ್ ಬ್ಯಾಂಕ್ ಬೈಂದೂರು ಶಾಖೆಯಲ್ಲಿ ಸೇವೆಯಿಂದ ನಿವೃತ್ತರಾದ ಉದ್ಯೋಗಿ ಶ್ರೀ ಚಂದ್ರಶೇಖರ […]
Year: 2025
ಸೇವಾ ಸಿಂಚನ ಶೈಕ್ಷಣಿಕ ದತ್ತಿನಿಧಿಗೆ ಅರ್ಜಿ ಆಹ್ವಾನ
ಕುಂದಾಪುರ (ಅ. 01): ಸೇವಾ ಸಿಂಚನ ಪ್ರತಿಷ್ಠಾನವು ತನ್ನ ಮೂರನೇ ವರ್ಷದ ಯಶಸ್ವಿ ಸಂಸ್ಥಾಪನಾ ದಿನದ ಸವಿನೆನಪಿನಲ್ಲಿ 2025ರ ಶೈಕ್ಷಣಿಕ ದತ್ತಿನಿಧಿಯನ್ನು ಘೋಷಿಸಿದೆ. ಕುಂದಾಪುರ ತಾಲ್ಲೂಕು ವ್ಯಾಪ್ತಿಯ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 30 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹವನ್ನು ನೀಡಿ ಅವರ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವುದು ಈ ದತ್ತಿನಿಧಿಯ ಮುಖ್ಯ ಉದ್ದೇಶವಾಗಿದೆ. ಈ ದತ್ತಿನಿಧಿಯು ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ಮ […]
ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ
ಕುಂದಾಪುರ (ಸೆ.27): ಶ್ರೀ ಕೃಷ್ಣನ ತತ್ವಗಳು ಅನನ್ಯವಾದುದು. ರಂಗೋಲಿ ಹಾಕುವಲ್ಲಿ ಕೈ ಬೆರಳ ವಿನ್ಯಾಸಗಳಲ್ಲಿ ಕೃಷ್ಣನ ತತ್ವಗಳು ಅಡಗಿವೆ. ಈ ತತ್ವಗಳನ್ನು ಅರ್ಥೈಸಿಕೊಂಡರೆ ಬದುಕು ಅರ್ಥವತ್ತಾಗುತ್ತದೆ ಎಂದು ವಿದ್ವಾಂಸರಾದ ಉಡುಪಿಯ ಶ್ರೀ ಆಯನೂರು ಮಧುಸೂಧನ ಆಚಾರ್ಯ ಹೇಳಿದರು. ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗವು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಭಾ ಕಾರ್ಯಕ್ರಮದ ಮುಖ್ಯ […]
“ಉತ್ತಮ ಶಿಕ್ಷಕ” ರಾಜ್ಯ ಪ್ರಶಸ್ತಿ ಪುರಸ್ಕೃತ “ಚಂದ್ರ ಎನ್ ಬಿಲ್ಲವ”
ಒಬ್ಬ ವ್ಯಕ್ತಿಯ ನಡೆತೆ,ಕೌಶಲ್ಯ,ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದ್ದು ಆ ಹಿನ್ನೆಲೆಯಲ್ಲಿ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು ಎಂದು ಎಪಿಜೆ ಅಬ್ದುಲ್ ಕಲಾಂ ಹೇಳಿರುವ ಮಾತು ಅಕ್ಷರಶ ಸತ್ಯ. ಯಾವೊಬ್ಬ ಮಗನು ಜನ್ಮ ಕೊಟ್ಟ ತಾಯಿಯನ್ನು, ಬಾಳು ಕೊಟ್ಟ ತಂದೆಯನ್ನು ಹಾಗೆಯೇ ಅಕ್ಷರ ಕಲಿಸಿದ ಗುರುಗಳನ್ನು ಎಂದಿಗೂ ಮರೆಯುವುದಿಲ್ಲ. ನಮ್ಮ ಜೀವನದ ದಾರಿಗೆ ಅರ್ಥ ಕಲ್ಪಿಸಿ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳಲು ನಮ್ಮನ್ನು ವಿದ್ಯಾವಂತರಾಗಿಸಿದ ಗುರುಗಳೇ ಶ್ರೇಷ್ಠರು. ತಮ್ಮ ಜ್ಞಾನದ ಭಂಡಾರವನ್ನು […]
ಕುಂದಾಪುರ ಮೂಲದ ಕುಮಾರಿ ನಿಶಾಲಿ ಉಮೇಶ್ ಕುಂದರ್ ರವರಿಗೆ ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025”ಪ್ರಶಸ್ತಿ
ಕುಂದಾಪುರ( ಸೆ.24): ಕುಂದಾಪುರ ಮೂಲದ ಕುಮಾರಿ ನಿಶಾಲಿ ಉಮೇಶ್ ಕುಂದರ್ ರವರು ದೆಹಲಿಯಲ್ಲಿ ಇತ್ತೀಚೆಗೆ ನಡೆದ ದೆಹಲಿಯ ಪ್ರತಿಷ್ಠಿತ ಡಿ ಕೆ ಪೆಜೆನ್ಟ್ ಸಂಸ್ಥೆಯವರು ಆಯೋಜಿಸುವ “ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025” ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಒಟ್ಟು 43 ಸ್ಪರ್ಧಾಳುಗಳನ್ನು ಹಿಂದಿಕ್ಕಿ ,ಸ್ಪರ್ಧೆಯ ಭಾಗವಾಗಿ ಯಕ್ಷಗಾನ ಪಾತ್ರದ ಅಭಿನಯ ಮಾಡಿ ಜೂರಿ ಗಳ ಮನಸೆಳೆದದ್ದು ಸಂತೋಷದ ಸಂಗತಿ. ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಿಶಾಲಿ, […]
ಬಾಸ್ಕೆಟ್ಬಾಲ್ : ಕಾರ್ಕಳ ಜ್ಞಾನಸುಧಾದ ಭುವನ್ ರಾಜ್ಯ ತಂಡಮಟ್ಟಕ್ಕೆ
ಕಾರ್ಕಳ( ಸೆ.23) : ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜು ನಿಟ್ಟೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಭುವನ್ ಎಸ್ ನಾಯಕ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಬಿ.ಬಿ. ಹೆಗ್ಡೆ ಕಾಲೇಜು: ತ್ರಾಸಿ ಬೀಚ್ ಕ್ಲೀನಿಂಗ್
ಕುಂದಾಪುರ (ಸೆ.20): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ತ್ರಾಸಿ ಗ್ರಾಮ ಪಂಚಾಯತ್, ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆ ಗಂಗೊಳ್ಳಿ ಹಾಗೂ ಸಿಬ್ಬಂದಿ ವರ್ಗ, ಸ್ವಚ್ಛ ಕರಾವಳಿ ಮಿಷನ್ ಸದಸ್ಯರು, ಎಸ್.ವಿ. ಪದವಿ ಪೂರ್ವ ಕಾಲೇಜು, ಗಂಗೊಳ್ಳಿ ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ಖಾರ್ವಿ ಆನ್ಲೈನ್ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಯ ಹಾಗೂ ಸ್ವಚ್ಛತಾ ಹೀ […]
ಕ್ರಿಯೇಟಿವ್ ಸ್ಫೂರ್ತಿಮಾತು ಕಾರ್ಯಕ್ರಮ : ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಹಿರಿಮೆಯ ಪಶ್ಚಿಮ ಬಂಗಾಳದ ಶ್ರೀ ಬಾಬರ್ ಅಲಿ ಭಾಗಿ
ಕಾರ್ಕಳ ( ಸೆ. 24): ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ “ಶಿಕ್ಷಣವೇ ಎಲ್ಲಾ” ಶೀರ್ಷಿಕೆಯಡಿಯಲ್ಲಿ ಕ್ರಿಯೇಟಿವ್ ಸ್ಫೂರ್ತಿಮಾತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಶ್ಚಿಮ ಬಂಗಾಳದ ಶಿಕ್ಷಣತಜ್ಞ, ಆನಂದ್ ಶಿಕ್ಷಾನಿಕೇತನ ಸಂಸ್ಥೆಯ ಸ್ಥಾಪಕರಾದ ಶ್ರೀ ಬಾಬರ್ ಅಲಿ ಅವರು ಶೈಕ್ಷಣಿಕ ವಿಚಾರಗಳ ಕುರಿತು ಹೇಳುತ್ತಾ, ತಾನು ಬೆಳೆದು ಬಂದ ಹಾದಿಯ ರೋಚಕತೆಯನ್ನು ವಿವರಿಸಿ ಇತರರಿಗೂ ಸ್ಫೂರ್ತಿಯಾದರು. ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಗಳಿಸಲು ಸಾಧ್ಯ. ಇಂದು ಶ್ರದ್ದೆಯಿಂದ […]
ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಅಗತ್ಯ – ವಸಂತ್ ರಾಮ್ ಆಚಾರ್ಯ
ಕುಂದಾಪುರ (ಸೆ.20): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಪೊಲೀಸ್ ಠಾಣೆ, ಗಂಗೊಳ್ಳಿಗೆ ಭೇಟಿ ನೀಡಿ ಅಲ್ಲಿ ನಡೆದ ವಿವಿಧ ಆಯುಧಗಳ ಪ್ರಾಯೋಗಿಕ ಪ್ರದರ್ಶನದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕರಾವಳಿ ಕಾವಲುಪಡೆಯ ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ರಾಮ್ ಆಚಾರ್ಯ ಅವರು ಪೋಕ್ಸೋ ಕಾಯಿದೆ, ಡ್ರಗ್ಸ್ ನಿಯಂತ್ರಣ ಹಾಗೂ ಸಾಮಾಜಿಕ ಜಾಲತಾಣದ ದುಷ್ಪರಿಣಾಮಗಳ ಬಗ್ಗೆ ಉದಾಹರಣೆಗಳೊಂದಿಗೆ ವಿವರಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳು […]
ಜಂಪ್ ರೋಪಿಂಗ್ ಸ್ಪರ್ಧೆ:ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರಿಯೇಟಿವ್ ನ ವಿದ್ಯಾರ್ಥಿಗಳು
ಕಾರ್ಕಳ( ಸೆ.24): ಜಿಲ್ಲಾಮಟ್ಟದ ಜಂಪ್ ಹಗ್ಗ ಪಂದ್ಯಾವಳಿಯು ಬಾರಕೂರಿನ ರಾಷ್ಟ್ರೀಯ ಪಿಯು ಕಾಲೇಜಿನಲ್ಲಿ ನಡೆಯಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಫಲಿತಾಂಶಗಳೊಂದಿಗೆ ಜಯಗಳಿಸಿದ್ದಾರೆ. ಹುಡುಗಿಯರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಪ್ರಥಮ ಪಿ ಸಿ ಎಂ ಬಿ ವಿಭಾಗದ ವೇದ ಎಂ. ಪಚ್ಚೆನ್ನವರ್ 30 ಸೆಕೆಂಡುಗಳ ವೇಗದ ಜಂಪ್ ರೋಪಿಂಗ್ ಸ್ಪರ್ಧೆಯಲ್ಲಿ ಕಂಚು, 30 ಸೆಕೆಂಡುಗಳ ಡಬಲ್ ಅಂಡರ್ ನಲ್ಲಿ ಪ್ರಥಮ ಪಿ ಸಿ ಎಂ ಬಿ ವಿಭಾಗದ […]










