ಸೊ೦ಟಕ್ಕೆ ಸೆರಗು ಸಿಕ್ಕಿಸಿಕೊಂಡು, ಅತ್ತಿತ್ತ ಗಡಿಬಿಡಿ ಮಾಡಿಕೊಂಡು ಓಡಾಡುತ್ತಿದ್ದ ಆಕೆ ಇತ್ತ ಮನೆಯವರ ಮಾತಿಗೆ ಹೂ ಗುಡುತ್ತಾ, ಮಕ್ಕಳಿಗೆ ಹಾಗೆ ಮಾಡು,ಹೀಗೆ ಮಾಡು ಎಂದು ಮಾರ್ಗಸೂಚಿ ನೀಡುತ್ತಾ ,ಅಡುಗೆ ಕೋಣೆಯಲ್ಲೇ ಇದ್ದು ಮನೆಯವರ ಬೇಕು ಬೇಡಗಳ ದಿನಚರಿಯನ್ನ ಅವಳೇ ಸರಿದೂಗಿಸಿಕೊಂಡು ತನ್ನ ಕೆಲಸ ಮುಂದುವರೆಸುತ್ತಿದ್ದಳು. “ನೀರಿನಲ್ಲಿರೋ ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು ಆದರೆ,ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಿಲ್ಲ”ಎನ್ನೋ ಮಾತಿನ ಅರ್ಥ ತಿಳಿದದ್ದು ಸಂಸಾರಸ್ಥರಾದಾಗಲೇ ..!?ಅವಳೆಂದರೆ,ಮಾಟಗಾತಿಯೋ ! ಜಾದುಗಾರ್ತಿಯೋ ನಾ ಕಾಣೆ, […]
Tag: archana r kundapura
ಕಾಣದ ಜೀವಿಯ ಕಣ್ಣಾಮುಚ್ಚಾಲೆ
ಕಾಣದ ಜೀವಿಯ ಕಣ್ಣಾಮುಚ್ಚಾಲೆ ಭಯವನು ಹೂಡಿ ಆವರಿಸಿಹುದು ಕತ್ತಲೆಅಪರಿಚಿತರ ಅಪರಾಧಕೆ ಬಲಿಯಾಗಿದೆ ಇಡೀ ವಿಶ್ವವೇ!ನಾಳೆಗೆಂದೂ ಕೂಡಿಟ್ಟ ಕನಸೆಲ್ಲಾ ಕುಸಿದು ಮಣ್ಣಾಯಿತೇ?ಬಿಡದ ಅನಿವಾರ್ಯತೆ ಹುಡುಕುತಿದೆ ಪರಿಹಾರಸ್ವಾಭಿಮಾನ ನಲುಗಿ ಕೈಯೊಡ್ಡುತಿರುವಾಗ, ಆಗೋ ತಿರಸ್ಕಾರಆ ಅಸಹಾಯಕತೆಯಲ್ಲೂ ಸೋತು ಬಡತನ ಮತ್ತಷ್ಟು ಅನುಭವಿಸುತಿದೆ ಬಹಿಷ್ಕಾರದಾರಿ ಕಂಗೆಟ್ಟು ದಾರಿದೀಪವನು ಹುಡುಕಾಡುತಿದೆ.ಬಡವಾಯ್ತು ಬದುಕುಆಶಾವಾದವಷ್ಟೇ ಇನ್ನುಳಿದ ಬೆಳಕು-ಕೊರೊನಾ ಕಥೆ. -ಅರ್ಚನಾ .ಆರ್. ಕುಂದಾಪುರ
“ಅದೃಷ್ಟವಂತರಲ್ಲ, ಆಶಾವಾದಿಯಾಗೋಣ”
ಅದೇನೋ ಹತಾಶೆ. ಯಾವುದೂ ಸರಿ ಇಲ್ಲ ಎನ್ನುವ ಭಾವ. ಮರಳಿ ಪ್ರಯತ್ನಿಸಲೂ ಅದೇನೋ ಭಯ .ಪದೇ ಪದೇ ಅದೇ ಕನಸು ಹಳ್ಳ ಹಿಡಿಯುತ್ತಿರುವುದನ್ನು ನೋಡಿ ಕುಸಿದು ಹೋಗಿದ್ದೆ.ಋಣಾತ್ಮಕ ಚಿಂತನೆ ತಲೆ ತುಂಬಾ ತುಂಬಿಕೊಂಡು ಬಿಟ್ಟಿದ್ದವು.ವಿಫಲವಾದ ಯೋಜನೆಯ ನೆನೆದು ಅತ್ತು ಅತ್ತು ಮಂಕಾಗಿಯೇ ಬಿಡುತ್ತಿದ್ದೆ.ಹೊರ ಬರುವ ದಾರಿಯ ಹುಡುಕಾಟ ಮರಳಿ ನನ್ನ ಋಣಾತ್ಮಕ ಚಿಂತನೆಗೆ ದೂಡಿ ಹಾಕುತ್ತಿತ್ತು.ಬದಲಾಗೋ ಆಸೆ ಅಲ್ಲ.ಕಳೆದುಕೊಂಡ ನನ್ನನ್ನು ಹುಡುಕಾಡೋ ಪ್ರಯತ್ನ ಅದಾಗಿತ್ತು.ಒಂದು ಸಣ್ಣ ವಿರಾಮ ತೆಗೆದುಕೊಂಡೆ.ಆ ವಿರಾಮದಲ್ಲಿ […]
ಅ(ಸ)ಬಲೆ
ಆಕೆ ನನ್ನಂತೆ ಕನಸು ಕಂಡಿರಬಹುದಲ್ಲವೇ,ರೆಕ್ಕೆ ಬಿಚ್ಚಿ ಹಾರಾಡೋ ಕನಸು, ಯಾರ ಪರಿವಿಲ್ಲದೇ ಗುನುಗಾಡೋ ಮನಸು ಆಕೆಗೂ ಇದ್ದಿರಬಹುದಲ್ಲವೇ!ಆದರೆ ಇಂದು ಇನ್ನೊಬ್ಬರ ಖುಷಿಯಲಿ ತನ್ನ ಕನಸನ್ನು ಕಾಣುತಿರುವಳಷ್ಟೇ. ಚಿಕ್ಕ ಪುಟ್ಟ ವಿಷಯಕ್ಕೂ ಕೂಗಾಡೋ ನಮ್ಮ ಪರಿಸ್ಥಿತಿಗೆ ,ಕೋಪ ಆಕೆಗೂ ಬರುವುದೇ ಎನ್ನುವುದು ಪ್ರಶ್ನೆ.ನಮ್ಮ ಕೋಪ ಕೂಗಾಡಿ ಕರಗಿದರೆ,ಆಕೆಯ ಕೋಪ ಪಾತ್ರೆಗಳ ಮೇಲೆ ತೀರಿಸಿಕೊಂಡು, ಒಬ್ಬಳೇ ನೀರ್ಜೀವ ವಸ್ತುಗಳ ಮೇಲೆ ಕೋಪ ಹೊರಗೆ ಹಾಕುತ್ತಾಳೆ. ಇನ್ನೂ ಇವಳ ಹಾಗೆ ಮಾಡಬೇಡ, ಹೀಗೆ ಮಾಡಬೇಡ […]
ಬದುಕಿನ ತಲ್ಲಣ
ಬದುಕು ಎಂದರೇನು? ಇದನ್ನುತಿಳಿಯೋ ಪ್ರಯತ್ನ ಹಲವು ಬಾರಿ ಮಾಡಿದ್ದುಂಟು.ಅದೆಷ್ಟೋ ಬಾರಿ ಇನ್ನೊಬ್ಬರ ಇಷ್ಟಕ್ಕೆ , ನಮ್ಮ ಇಷ್ಟ- ಕಷ್ಟ ಬದಲಾಗುತ್ತಿದ್ದಾಗ, ನಾವು ಮಾಡುತಿರುವುದಂತೂ ಪ್ರದರ್ಶನ ಅನ್ನಿಸುವುದಂತೂ ಸತ್ಯ. ಈ ನಾಟಕವೇಕೆ? ಅಂದ ಮಾತ್ರಕೆ ಇವರೆಲ್ಲರ ಮಾತೇಕೆ ಒಪ್ಪಬೇಕು.! ಒಮ್ಮತ ಸೂಚಿಸದೇ ಹೋದರೆ?ಆಗಂತೂ, ಅವರ ಮಾತಿಗೆ, ಅಪವಾದಕ್ಕೆ ಎಲ್ಲಿ ಬಲಿಯಾಗುತ್ತೇವೆನೊ ಎನ್ನುವ ಭಯ, ಅದನ್ನು ಮೀರಿ ಒಬ್ಬಂಟಿಯಾಗಿ ಹೋರಾಡೋ ಮನಸು ಮಾಡಿದಾಗ, ಮುಂದೆ ನಿಲ್ಲೋ ಸವಾಲು ಹಲವಾರು… ನಮ್ಮ ಮಾತೇ ದಿಕ್ಕರಿಸಿರುವೇ..!?, […]
ಬಂಧ ಮುಕ್ತ.. ಇದು ಸ್ವಾವಲಂಬಿ ಬದುಕಿನ ಹುಡುಕಾಟ
ಇದೆಂಥಾ ವಿಪರ್ಯಾಸ ನೋಡಿ. ಓದಿನ್ನು ಮುಗಿಯದೇ ಇದ್ದ ಹುಡುಗಿ, ಊರ ಊಸಾಬರಿ ಅರಿಯದೇ ತನ್ನದೇ ತರಾತುರಿಯಲ್ಲಿದ್ದವಳಿಗೆ, ಪರಿಚಯಸ್ಥರು ಮನೆಯವರ ಮೇಲೆ ಹೇರುತ್ತಿದ್ದದ್ದು ಮದುವೆ ಎಂಬ ‘ಬಂಧನ ‘. ಆಡಿಕೊಳ್ಳೊರ ಬಾಯಿ ಮುಚ್ಚಿಸೋ ಪ್ರಯತ್ನದಲಿ ಹೆತ್ತವರು ಮಗಳ ಮೇಲೆ ಹೊರಿಸುತ್ತಿರೋ ಈ ‘ ಬಂಧನ ‘ ದ ಭಾರದಲಿ ಆಕೆ ಇನ್ನೇಷ್ಟು ನೊಂದು ಬೆಂದು ಬಂಧಿಯಾರಬಹುದು ನೀವೇ ಹೇಳಿ…!?