Views: 399
ಕುಂದಾಪುರ ( ಮಾ. 31): ಕೊಲ್ಲೂರು ಶ್ರೀಮೂಕಾಂಬಿಕಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ, ಉತ್ತಮ ಕ್ರೀಡಾಪಟು ,ಬೈಂದೂರು ತಾಲೂಕಿನ ಎಳಜಿತ್ ಗ್ರಾಮದ ಯುವತಿ ವಿದ್ಯಾಗೌಡ ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ( BSF) ಆಯ್ಕೆಗೊಂಡಿದ್ದಾರೆ. ಶಿಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದಿರುವ ವಿದ್ಯಾ ಗೌಡ ಸತತ ಪರಿಶ್ರಮದಿಂದ ಭಾರತೀಯ ಸೇನೆ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವುದು ಹೆತ್ತವರಿಗೆ ಕುಟುಂಬಸ್ಥರಿಗೆ ಹಾಗೂ ಊರ ಜನತೆಗೆ ಸಂತಸ ತಂದಿದೆ.