ಮರವಂತೆ(ಜು,18): ರಕ್ತದಾನಿಗಳ ಬಳಗ ಮರವಂತೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ. ), ಉಡುಪಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಜೂನ್ ,16ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ. )ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಶಿಬಿರ ಉದ್ಘಾಟಿಸಿದರು. ಪ್ರಾಥಮಿಕ ಅರೋಗ್ಯ ಕೇಂದ್ರ ಮರವಂತೆ ಇದರ […]
Tag: eshwara navunda
ಯೋಗ ಪಟು ಲಾಸ್ಯ ಮಧ್ಯಸ್ಥಗೆ ಸನ್ಮಾನ
ಕುಂದಾಪುರ(ಫೆ.17): ಅರುಣ್ ಮಧ್ಯಸ್ಥ ಮತ್ತು ಲತಾ ಮಧ್ಯಸ್ಥರ ಪ್ರೀತಿಯ ಕುವರಿ ಕುಂದಾಪುರದ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಈಕೆ ತನ್ನ ಎಳೆಯ ವಯಸ್ಸಿನಲ್ಲಿಯೇ ಮಹತ್ತರವಾದ ಸಾಧನೆಯನ್ನು ಮಾಡಿ ಹಲವರ ಪ್ರಶಂಸೆಗೆ ಪಾತ್ರಲಾಗಿದ್ದಾಳೆ. ಕರಾವಳಿ ಭಾಗದಲ್ಲಿಯ ಹಲವು ಗುರುಗಳಿಂದ ಯೋಗಾಭ್ಯಾಸವನ್ನು ಮಾಡಿರುವುದು ಡಾ. ನವೀನ್ ಕುಮಾರ್, ಕೆ ಆರ್ ವಿಷ್ಣು ಪ್ರಸಾದ್ ಶೆಟ್ಟಿ, ರಂಜಿತ್ ಜಿಡಿ ಹಾಗೂ ಶ್ರೀ ಹರಿ ಅಯ್ಯಂಗಾರ್ ರವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದಾಳೆ […]
ರಕ್ತದ ಆಪತ್ಬಾಂದವ - ಜೀವ ರಕ್ಷಕ ಸತೀಶ್ ಸಾಲ್ಯಾನ್ ಮಣಿಪಾಲ್
ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯಲ್ಲಿ ದೇವರನ್ನು ಕಾಣುವ ವ್ಯಕ್ತಿತ್ವ ಸತೀಶರದ್ದು. ಸತೀಶ್ ಒಬ್ಬ ರಕ್ತದಾನಿ, ರಕ್ತದ ಜೊತೆಗಾರ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಅವರೊಬ್ಬ ಅಪ್ಪಟ ಹೃದಯವಂತ, ಸಂವೇದನಶೀಲ ಮತ್ತು ಮಾನವೀಯತೆ ತುಂಬಿಕೊಂಡಿರುವ ಕರುಣಾಮಯಿ ಮತ್ತು ಮಗುವಿನಂತ ಮನಸ್ಸಿನವರು. ಸತೀಶ್ ಅವರ ಬಳಿ ಬಂದು ಸರ್ ನಿಮ್ಮ ಸಹಾಯವನ್ನು ನಾನು ಜೀವನ ಪರ್ಯಂತ ಮರೆಯುವುದಿಲ್ಲ ಎಂದು ಹೇಳಿದವರು ಅನೇಕರು. ಸಾವಿರಾರು ರೋಗಿಗಳ ಮನೆಯವರು ರಕ್ತದ ಪೂರೈಕೆಯಿಂದ ಸತೀಶರಲ್ಲಿ ಮನವಿ ಮಾಡಿಕೊಂಡಾಗ […]
ಯೋಗ ಕ್ಷೇತ್ರದ ಅಪ್ರತಿಮ ಬಾಲ ಪ್ರತಿಭೆ – ಲಾಸ್ಯ ಮಧ್ಯಸ್ಥ
ಪ್ರತಿಭೆ ಮತ್ತು ರೂಪ ಭಗವಂತನ ಕೊಡುಗೆ ಎಂದು ಹೇಳುತ್ತಾರೆ. ಕೀರ್ತಿ ಮತ್ತು ಹಣ ಮನುಷ್ಯನ ಸೃಷ್ಟಿ.ಗೆಲುವಿಗೆ ಪ್ರತಿಭೆ ಬೇಕು. ಪ್ರತಿಯೊಂದು ಮಕ್ಕಳಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಕೆಲವರ ಪ್ರತಿಭೆ ಮುಖ್ಯವಾಹಿನಿಗೆ ಬಂದರೆ ಇನ್ನು ಕೆಲವರದು ತೆರೆಮರೆಯಲ್ಲೇ ಇರುತ್ತದೆ. ನಿಜವಾದ ಪ್ರತಿಭಾವಂತರಿಗೆ ಮತ್ತು ಸಾಧಕರಿಗೆ ಪ್ರಚಾರ ಹಾಗೂ ಪ್ರೋತ್ಸಾಹ ಅಗತ್ಯ. ಆ ನಿಟ್ಟಿನಲ್ಲಿ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು. ಪ್ರತಿಭಾವಂತರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿ ಎನ್ನುವ […]
ಅ.15 ರಂದು ಬೆಂಗಳೂರಿ ನಲ್ಲಿ ಆಪದ್ಬಾಂಧವ- ಜೀವ ರಕ್ಷಕ ಈಶ್ವರ್ ಮಲ್ಪೆಯವರಿಗೆ ಡಾ.ಎ ಪಿ ಜಿ ಕಲಾಂ ಪ್ರಶಸ್ತಿ ಪ್ರದಾನ
ಕುಕಂದಾಪುರ(ಅ.15): ಕರಾವಳಿಯ ಆಪದ್ಬಾಂಧವ- ಜೀವ ರಕ್ಷಕ ಈಶ್ವರಮಲ್ಪೆ ಯವರು ಅಕ್ಟೋಬರ್ 15 ಬೆಂಗಳೂರಿನಲ್ಲಿ ಅಕ್ಷಯ ಪಾತ್ರೆ ಮಾನವ ಫೌಂಡೇಶನ್ ವತಿಯಿಂದ ಕೊಡಲಾಗುವ ಡಾ. ಎಪಿಜೆ ಕಲಾಂ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಪ್ರಧಾನ ಮಾಡಲಿದ್ದು ಈ ಕಾರ್ಯಕ್ರಮದಲ್ಲಿ ದಿ ಗ್ರೇಟ್ ಕಲಿ ಮಹಿಮಾ ಚೌದ್ರಿ ಬಾಲಿವುಡ್ ಸಿಂಗರ್ ಜಾವೇದ್ ಆಲಿ ಮಿಸ್ ಇಂಡಿಯಾ ಸಿಮ್ರಾನ್ ಅಹುಜಾ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗಣ್ಯ […]
ಯಕ್ಷ ನಕ್ಷತ್ರ ಟ್ರಸ್ಟ್ (ರಿ.) ಕಿರಾಡಿ ಲೋಕಾರ್ಪಣೆ
ಮಂದಾರ್ತಿ(ಜು,13): ಯಕ್ಷರಂಗದ ಬಹು ಬೇಡಿಕೆಯ ಪುಂಡು ವೇಷಧಾರಿ ಕಿರಾಡಿ ಪ್ರಕಾಶ್ ಮೊಗವೀರರ ಸಾರಥ್ಯದಲ್ಲಿ ಯಕ್ಷ ನಕ್ಷತ್ರ ಟ್ರಸ್ಟ್ (ರಿ.) ಕಿರಾಡಿ ಇದರ ಲಾಂಛನವನ್ನು ಜುಲೈ12 ರಂದು ಬೆಳಿಗ್ಗೆ ಮಂದಾರ್ತಿಯ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಿಧ್ಯುಕ್ತವಾಗಿ ಬಿಡುಗಡೆ ಮಾಡುವ ಮೂಲಕ ಯಕ್ಷ ನಕ್ಷತ್ರ ಟ್ರಸ್ಟ್ ಲೋಕಾರ್ಪಣೆಗೊಂಡಿತು. ಶ್ರೀ ಕ್ಷೇತ್ರದ ಆಡಳಿತ ಮುಕ್ತೇಸರರಾದ ಶ್ರೀ ಧನಂಜಯ ಶೆಟ್ಟಿ ಹಾಗೂ ಕಲೋಪಾಸಕರಾದ ಶ್ರೀ ಶಂಬು ತಿಂಗಳಾಯ, ಶ್ರೀಸಂಜೀವ ಪೂಜಾರಿ, ಶ್ರೀ ಅಶೋಕ ಕುಂದರ್ , ಶ್ರೀಪ್ರವೀಣ […]
ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ :ರಕ್ಷಕ –ಶಿಕ್ಷಕ ಸಭೆ
ಕುಂದಾಪುರ(ಜು.1): ಇಲ್ಲಿನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಯ ಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಭೆ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಹಿಸಿಸಿದ್ದರು. ಹಣಕ್ಕಿಂತ ಮಿಗಿಲಾದ ಗುಣವಂತರಾದರೆ ಎಲ್ಲರೂ ನಮ್ಮವರೆ . ಮಕ್ಕಳು ಹಣವಂತರಾಗದೆ ಗುಣವಂತರಾಗಲಿ ಎಂದು ಆಶಿಸಿ ಶಾಲಾ ಗುಣಮಟ್ಟದ ಬಗ್ಗೆ […]
ಮಾಟುಂಗಾ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಡಾ. ಭರತ್ ಕುಮಾರ್ ಪೊಲಿಪು ಆಯ್ಕೆ
ಕುಂದಾಪುರ (ಜೂ,30): ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುಂಬಯಿಯ ಪ್ರತಿಷ್ಠಿತ ಸಂಸ್ಥೆ ಮಾಟುಂಗಾ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಡಾ. ಭರತ್ ಕುಮಾರ್ ಪೊಲಿಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಮುಂಬಯಿಯ ಕನ್ನಡಪರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಮುಂಬಯಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಡಾ.ಭರತ್ ಕುಮಾರ್ ಪೊಲಿಪುರವರು ಗುರುತಿಸಿಕೊಂಡಿದ್ದಾರೆ. ವರದಿ :-ಈಶ್ವರ್ ಸಿ ನಾವುಂದ
ಹೇರೂರು: ಅನಾರೋಗ್ಯ ಪೀಡಿತ ಸುರೇಂದ್ರ ರವರ ಚಿಕಿತ್ಸೆಗೆ ಮನವಿ
ಬೈಂದೂರು ( ಫೆ.07): ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇರೂರು ಗ್ರಾಮದ ನಿವಾಸಿಯಾಗಿರುವ ನೀಲು ಮೊಗವೀರ ಇವರ ಮಗ ಸುರೇಂದ್ರ ರಕ್ತದಲ್ಲಿ ಹೇಮಾ ಪೋಲಿಯ ಎಂಬ ಬ್ಲಡ್ ಸೇಲ್ಸ್ (blood cells ) ಇಲ್ಲದಿರುವ ಕಾಯಿಲೆಗೆ ತುತ್ತಾಗಿದ್ದು, ಈಗಾಗಲೇ ಚಿಕಿತ್ಸೆಗೆ 10 ಲಕ್ಷಕ್ಕಿಂತಲೂ ಹೆಚ್ಚು ವ್ಯಯವಾಗಿದ್ದು , ಆಪರೇಷನ್ ಗೆ 15 ಲಕ್ಷದ ಅಗತ್ಯವಿದ್ದು, ಇಷ್ಟು ಹಣವನ್ನು ಬರಿಸಲು ಕಡು ಬಡತನದಲ್ಲಿರುವ ಕುಟುಂಬಕ್ಕೆ ಸಾಧ್ಯವಾಗದೇ ದಿಕ್ಕು ತೋಚದಾಗಿದ್ದು ಚಿಕಿತ್ಸೆಗೆ ದಾನಿಗಳ ಮೊರೆ […]
ಯಕ್ಷಗಾನ ಯಕ್ಷ ಚೆಲುವೆ ಶರತ್ ಶೆಟ್ಟಿ ತೀರ್ಥಳ್ಳಿ
ಯಕ್ಷಗಾನದಲ್ಲಿ ಸ್ತ್ರೀ ಪಾತ್ರಕ್ಕೆ ವಿಭಿನ್ನ ಮತ್ತು ವಿಶಿಷ್ಟ ವೇಷಭೂಷಣದ ಮೆರಗು ಇರುವುದು ಯಕ್ಷಗಾನ ಪ್ರಿಯರಿಗೆ ತಿಳಿದ ವಿಷಯ. ಸಾಂಪ್ರದಾಯಿಕ ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದು ಕಲಾವಿದರಿಗೆ ಒಂದು ಸವಾಲೇ ಸರಿ. ಸ್ವರದ ಸಮತೋಲನ ತನ್ನದಲ್ಲದ ನಯ ವಿನಯ ವಯ್ಯಾರ ತನ್ನ ಪಾತ್ರದಲ್ಲಿ ತಂದು ಪಾತ್ರಕ್ಕೂ ನ್ಯಾಯ ಒದಗಿಸುತ್ತ ಅಭಿಮಾನಿಗಳನ್ನು ಆಕರ್ಷಿಸುತ್ತ ಯಕ್ಷಗಾನದಲ್ಲಿ ಒಂದು ಭದ್ರವಾದ ಸ್ಥಾನವನ್ನು ಪಡೆಯಲು ಹರಸಾಹಸ ಮಾಡಬೇಕಾಗುತ್ತದೆ. ಪಾತ್ರದ ಒಳಹೊಕ್ಕು ಸ್ತ್ರಿ ವೈಯಾರಗಳಲ್ಲಿ ಹೆಣ್ಣನ್ನೇ ನಾಚಿಸುವ […]










