ಕಿರುಚಿತ್ರ ಲೋಕದಲ್ಲಿ ದಿನೇ ದಿನೇ ಹೊಸ ಪ್ರತಿಭೆಗಳು ಪರಿಚಯವಾಗುತ್ತಿದೆ. ಆ ಸಾಲಿನಲ್ಲಿ ಈಗ ಕುಂದಾಪುರದ ‘ಇಷ್ಟಾರ್ಥ ಪ್ರೊಡಕ್ಷನ್’ ಎನ್ನುವ ಹೊಸ ತಂಡ ಮೊದಲ ಹೆಜ್ಜೆ ಇಟ್ಟಿದೆ.ನಟನೆಯಿಂದ ನಿರ್ದೇಶನದ ತನಕ ಮೊದಲ ಬಾರಿಗೆ ಹೊಸ ಪ್ರತಿಭೆಗಳು ಸೇರಿಕೊಂಡು ಮಾಡಿರುವ “ಕಲ್ಮಶ” ಎನ್ನುವ ಕಿರುಚಿತ್ರ ಈಗ ಪ್ರೇಕ್ಷಕರ ಮನಗೆದ್ದು ಎಲ್ಲೆಡೆ ಸದ್ದು ಮಾಡುತ್ತಿದೆ.ಗೆಳೆತನದ ನಡುವೆ ಸ್ವಾರ್ಥ ಎಂಬುದು ಬಂದಾಗ ಏನಾಗಬಹುದು ಎಂಬುದನ್ನ ಎಳೆಯಾಗಿ ಇಟ್ಟುಕೊಂಡು ಮಾಡಿರುವ ಚಿತ್ರ, ಪ್ರೇಕ್ಷಕರ ಕುತೂಹಲಕ್ಕೆ ಕೊನೆತನಕ ತಿರುವುಗಳು […]
Tag: general news
ವಾರಾಹಿ ಕಾಲುವೆ ಯೋಜನೆಯ ಅವೈಜ್ಞಾನಿಕ ಕಾಮಗಾರಿಗೆ ದಂಡ ತೆತ್ತ ಅಮಾಯಕ ಯುವಕ
ವಕ್ವಾಡಿ(ಜ.24): ವಕ್ವಾಡಿಯಲ್ಲಿ ನಡೆಯುತ್ತಿರುವ ವಾರಾಹಿ ಕಾಲುವೆ ಯೋಜನೆ, ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆ ತಂದೊಡ್ಡುತ್ತಲೇ ಇದೆ. ಈ ಎಲ್ಲ ಸಮಸ್ಯೆಗಳನ ಕುರಿತು, ಸ್ಥಳಿಯರು, ಗ್ರಾಮ ಪಂಚಾಯತ್ ನೊಂದಿಗೆ ಸೇರಿ ಅನೇಕ ಬಾರಿ ಕಂಪೆನಿ ಯೊಂದಿಗೆ ಸಭೆ ನಡೆಸಿ, ಸಮಸ್ಯೆ ಗಳ ಶೀಘ್ರ ಪರಿಹಾರ ಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಇದೀಗ ಈ ಕಾಮಗಾರಿ ನಡೆಸುತ್ತಿರುವ ಕಂಪೆನಿ ಯ ಔದಾಸಿನ್ಯಕ್ಕೆ ಹಿಡಿದು ಕೈಗನ್ನಡಿಯಂತೆ, ಬೇಕು ಬೇಕಾದಲ್ಲಿ ಹೊಂಡ ತೆರೆದು, […]
ಜ.14 ಮತ್ತು 15 ರಂದು ಶ್ರೀ ಹಾಡಿಗರಡಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ
ನಾಡ(ಜ.12): ಶ್ರೀ ಕ್ಷೇತ್ರ ಹಾಡಿಗರಡಿ ದೈವಸ್ಥಾನ ನಾಡ ಇದರ ಪರಿವಾರ ದೈವಗಳ ವಾರ್ಷಿಕ ಹಾಲುಹಬ್ಬ, ಗೆಂಡಸೇವೆ, ಮಹಾಪೂಜೆ, ದೈವದರ್ಶನ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಇದೇ ಜ.14 ಮತ್ತು 15 ರಂದು ನಡೆಯಲಿದೆ. ಜ.14 ರ ಶುಕ್ರವಾರ ಸಂಜೆ 6 ಗಂಟೆಗೆ ದೈವದರ್ಶನ ಹಾಗೂ ಗೆಂಡಸೇವೆ, 7 ಗಂಟೆಗೆ ಮಹಾ ಅನ್ನಸಂತರ್ಪಣೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿವೇತನ ವಿತರಣೆಇನ್ನಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ಜ.15ರ ಶನಿವಾರಬೆಳಿಗ್ಗೆ ಗಂಟೆ 10-00ಕ್ಕೆ […]
ಆ 90 ದಿನಗಳು ಸಿನಿಮಾದ ಫಸ್ಟ್ ಲುಕ್, ಪೋಸ್ಟರ್, ಟ್ರೈಲರ್ ಮತ್ತು ಹಾಡು ಬಿಡುಗಡೆ
ಬಸ್ರೂರು(ಜ.3): ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ರೊನಾಲ್ಡ್ ಲೋಬೊ ನಿರ್ದೇಶನದ ಕರಾವಳಿಯ ಯುವ ಪ್ರತಿಭೆಗಳನ್ನೊಳಗೊಂಡ ಆ 90 ದಿನಗಳು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್, ಟೈಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಜ.02 ರಂದು ಗುಲ್ವಾಡಿಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ,ನಾಡೋಜ ಡಾ. ಜಿ ಶಂಕರ್ ,ಖ್ಯಾತ ಚಲನಚಿತ್ರ ನಿರ್ದೇಶಕ,-ನಟ ರಿಷಬ್ ಶೆಟ್ಟಿ ,ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ,ಹಿರಿಯ ನ್ಯಾಯವಾದಿ […]
ಕೋಟತಟ್ಟು:ಪೊಲೀಸ್ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗೆ ಪರಿಹಾರಧನ ವಿತರಿಸಿದ ಗ್ರಹ ಸಚಿವ
ಕೋಟ(ಜ.2): ಕೋಟತಟ್ಟು ಗ್ರಾಮದಲ್ಲಿ ಪೊಲೀಸ್ ಲಾಠಿಚಾರ್ಜ್ ಗೊಳಗಾದ ಕೊರಗ ಸಮುದಾಯವರನ್ನು ರಾಜ್ಯ ಗ್ರಹ ಸಚಿವ ಅರಗ ಜ್ಙಾನೇಂದ್ರರವರು ಜ.01 ರಂದು ಭೇಟಿ ಮಾಡಿ ಸಾಂತ್ವನ ಹೇಳಿದರು. ಗಾಯಗೊಂಡವರಿಗೆ ₹2 ಲಕ್ಷ ಪರಿಹಾರ ಘೋಷಿಸಿ, ಪ್ರತಿ ಕುಟುಂಬಕ್ಕೆ ₹50,000 ಪರಿಹಾರ ನೀಡಿದರು. ಪೊಲೀಸ್ ದೌರ್ಜನ್ಯ ಪ್ರಕರಣ ಕುರಿತು ಸಿ.ಓ.ಡಿ ತನಿಖೆ ನಡೆಸಲಾಗುವುದು ಎಂದು ತಿಳಿಸುತ್ತಾ, ಕೊರಗ ಕುಟುಂಬದವರ ವಿವಾಹ ಸಮಾರಂಭದಲ್ಲಿ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು,ಕೊರಗ […]










