ಹೆಮ್ಮಾಡಿ (ಫೆ.15): ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ರಥ ಫೆಬ್ರವರಿ 15 ರಂದು ಕೊಟೇಶ್ವರದಿಂದ ಭವ್ಯ ಪುರಮೆರವಣಿಗೆಯೊಂದಿಗೆ ಶ್ರೀಕ್ಷೇತ್ರ ಕೊಲ್ಲೂರಿಗೆ ತಲುಪಿತು. 400 ವರ್ಷಗಳ ಬಳಿಕ ನಿರ್ಮಾಣಗೊಂಡ ಈ ರಥವನ್ನು ಮುರ್ಡೆಶ್ವರದ ಉದ್ಯಮಿ ದಿ.ಆರ್.ಎನ್.ಶೆಟ್ಟಿ ಅವರ ಪುತ್ರ ಸುನಿಲ್ ಆರ್.ಶೆಟ್ಟಿ ರವರು ಸೇವಾರೂಪದಲ್ಲಿ ನಿರ್ಮಿಸಿಕೊಟ್ಟಿದ್ದು ಮೂಲ ರಥದ ಮಾದರಿಯಲ್ಲೇ ಕೊಟೇಶ್ವರದ ಪ್ರಸಿದ್ದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ರಥವನ್ನು ನಿರ್ಮಿಸಲಾಗಿದ್ದು, ಫೆ.16ರಂದು ಕೊಲ್ಲೂರಿನಲ್ಲಿ […]
Tag: general news
ಗುಜ್ಜಾಡಿ: ಪ್ರಶಾಂತ್ ಆಚಾರ್ಯರ ಕೈಚಳದಲ್ಲಿ ಮೂಡಿದ ಮಾರಣಕಟ್ಟೆ ಮೇಳದ ರಂಗಸ್ಥಳ
ಗುಜ್ಜಾಡಿ (ಫೆ. 5): ಉದಯೋನ್ಮುಖ ಕಲಾವಿದ ಪ್ರಶಾಂತ್ ಆಚಾರ್ಯ ಗುಜ್ಜಾಡಿ ತಮ್ಮ ಕೈಚಳಕದಿಂದ ಮಾರಣಕಟ್ಟೆ ಮೇಳದ ರಂಗಸ್ಥಳ ಮಾದರಿಯ ಚಿಕ್ಕ ರಂಗಮಂಠಪವನ್ನು ರಚಿಸಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ ಇದರ ಆಡಳಿತ ಮೊಕ್ತೇಸರರಾದ ಸದಾಶಿವ ಶೆಟ್ಟಿ ಯವರ ಮೂಲಕ ಶ್ರೀ ದೇವರ ಸನ್ನಿಧಿಗೆ ಹಸ್ತಾಂತರಿಸಿದರು. ಪ್ರಶಾಂತ್ ಆಚಾರ್ಯ ತೆಂಕಮನೆ ಗುಜ್ಜಾಡಿ , ವೃತ್ತಿಯಲ್ಲಿ ಪ್ಲೈವುಡ್ ,ಅಲ್ಯೂಮಿನಿಯಂ ಹಾಗೂ ಫೈಬರ್ ಡೋರ್ ವರ್ಕ್ ,ರಂಗಸ್ಥಳ ಮಾದರಿಯ ಮಂಟಪ ,ರಬ್ಬರ್ ಮರ,ಬಟ್ಟೆ ,ರೇಡಿಯಂ […]
ನೆಂಪು: ಗುರುವಂದನೆ ಕಾರ್ಯಕ್ರಮ
ವಂಡ್ಸೆ ( ಜ,18): ಸುಮಾರು 22 ವರ್ಷ (2000/01)ರ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆ ನೆಂಪು ವಂಡ್ಸೆಯಲ್ಲಿ ವ್ಯಾಸಂಗ ಮಾಡಿದ ವಿಧ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ಅಧ್ಯಾಪಕರಿಗೆ ಗುರುವಂದನೆ ಸಲ್ಲಿಸಿದ ಅಪರೂಪದ “ಗುರುವಂದನೆ”- ಪುನರ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಚಿತ್ತೂರಿನ ಸಕಲ ಹಾಲ್ ಅಲ್ಲಿ ನೆರವೇರಿತು.
ಹಾಡಿಗರಡಿ ದೈವಸ್ಥಾನ: ಜ.14 ಮತ್ತು15 ರಂದು ವಾರ್ಷಿಕ ಜಾತ್ರಾ ಮಹೋತ್ಸವ
ಮುಳ್ಳಿಕಟ್ಟೆ(ಜ,6): ಶ್ರೀ ಹಾಡಿಗರಡಿ ದೇವಸ್ಥಾನ ನಾಡ ಇದರ ವಾರ್ಷಿಕ ಹಾಲುಹಬ್ಬ ,ಗೆಂಡಸೇವೆ ಇದೇ ಜನವರಿ,14 ಹಾಗೂ 15 ರಂದು ನಡೆಯಲಿದೆ. ಜಾತ್ರಾ ಪ್ರಯುಕ್ತ ಧಾರ್ಮಿಕ ಸಭಾಕಾರ್ಯಕ್ರಮ , ಸಾಂಸ್ಕೃತಿಕ ಕಾರ್ಯಕ್ರಮ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿರುವುದೆಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಜೇಸಿಐ ಕುಂದಾಪುರದ ನೂತನ ಅಧ್ಯಕ್ಷರಾಗಿ ಸುಧಾಕರ್ ಕಾಂಚನ್ ಆಯ್ಕೆ
ಕುಂದಾಪುರ(ಡಿ,23): ಜೇಸಿಐ ಕುಂದಾಪುರದ ನೂತನ ಅಧ್ಯಕ್ಷರಾಗಿ ಸುಧಾಕರ್ ಕಾಂಚನ್ ಹಾಗೂ ಕಾರ್ಯದರ್ಶಿಯಾಗಿ ರಾಕೇಶ್ ಶೆಟ್ಟಿಯ ಆಯ್ಕೆ ಯಾಗಿದ್ದಾರೆ . ನಿಕಟಪೂರ್ವಧ್ಯಕ್ಷರಾಗಿ ಶ್ರೀಮತಿ ನಾಗರತ್ನ ಜಿ ಹೆರ್ಳೆ, ಉಪಾಧ್ಯಕ್ಷರುಗಳಾಗಿ ಪ್ರವೀಣ್ ಎಮ್ , ಶ್ರೀಮತಿ ಶರ್ಮಿಳಾ ಕಾರಂತ್, ಚಂದನ್ ಗೌಡ , ಸುಬ್ರಮಣ್ಯ ಆಚಾರ್ಯ , ಶಶಿಧರ್ ಶೆಟ್ಟಿ , ಜೊತೆ ಕಾರ್ಯದರ್ಶಿಯಾಗಿ ಚೇತನ್ ದೇವಾಡಿಗ , ಕೋಶಾಧಿಕಾರಿಯಾಗಿ ಧನುಷ್ ಕುಮಾರ್, ಜ್ಯೂನಿಯರ್ ಜೇ.ಸಿ ಅಧ್ಯಕ್ಷರಾಗಿ ಸತ್ಯನ್ ಎಸ್ ಕಾಂಚನ್ , […]
ರವಿಚಂದ್ರ ಹೊಸೂರು ರವರಿಗೆ ಪಿ ಹೆಚ್ ಡಿ ಪದವಿ
ಬೈಂದೂರು (ಡಿ,9): ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿನ ನಿರ್ವಹಣಾ ಶಾಸ್ತ್ರ ವಿಭಾಗದ ಉಪನ್ಯಾಸಕರಾಗಿರುವ ಶ್ರೀ ರವಿಚಂದ್ರ ಹೊಸೂರು ಇವರು ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಮಂಡಿಸಿದ “ರೋಲ್ಆಫ್ ಬ್ಯಾಂಕ್ಸ್ ಇನ್ ರೂರಲ್ ಡೆವೆಲಪಮೆಂಟ – ಏ ಸ್ವಡಿ ಇನ್ ಉಡುಪಿ ಡಿಸ್ಟ್ರಿಕ್ಟ್” ಎನ್ನುವ ಸಂಶೋಧನಾ ಮಹಾಪ್ರಬಂದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ ಹೆಚ್ ಡಿ ಪದವಿ ನೀಡಿ ಗೌರವಿಸಿದೆ. ಇವರು ಡಾ.ರೇಣುಕಾ.ಕೆ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಇವರು […]
ಸೇವಾ ಚೇತನ ಟ್ರಸ್ಟ್ ಮೂಡುಬಗೆ: ಮನೆ ಹಸ್ತಾಂತರ ಕಾರ್ಯಕ್ರಮ
ಅoಪಾರು( ನ,15): ಬಡ ಕುಟುಂಬದ ವನಜ ಪೂಜಾರಿ ಇವರು ಮನೆಯನ್ನು ಕಟ್ಟಬೇಕು ಎಂದು ನಿರ್ಧರಿಸಿದ ಆ ಸಮಯದಲ್ಲಿ ತನ್ನ ಗಂಡನನ್ನು ಮಾರಕ ಕ್ಯಾನ್ಸರ್ ಖಾಯಿಲೆಯಿಂದ ಕಳೆದುಕೊಂಡಾಗ ಅವರೊಂದಿಗೆ ಇದ್ದಿದ್ದು ಎಂಡೋಸಲ್ಫನ್ ಪೀಡಿತ ಬುದ್ಧಿಮಾಂದ್ಯ ಮಗ. ಮಗನನ್ನು ಬಿಟ್ಟು ಕೂಲಿಗೂ ಹೋಗಲಾಗದ ಪರಿಸ್ಥಿತಿ. ಇವರ ಮನೆ ನಿರ್ಮಾಣ ಕಾರ್ಯ ಪೂರ್ಣ ಗೊಳಿಸಬೇಕೆಂದು ಅನೇಕರು ಪ್ರಯತ್ನ ಪಟ್ಟರೂ ಕೂಡ ಸಾಧ್ಯವಾಗದಿದ್ದಾಗ ಇವರು ಸಂಪರ್ಕಿಸಿದ್ದು ಸೇವಾ ಚೇತನ ಟ್ರಸ್ಟ್ . ಅವರ ಕಷ್ಟವನ್ನು […]
ಕೋಟೇಶ್ವರ: ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗಂಧದಗುಡಿ ಸಿನೆಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ ಸಾಫ್ಟವೇರ್ ಕಂಪೆನಿಯ ಉದ್ಯೋಗಿ
ಕೋಟೇಶ್ವರ( ನ.13): ಬೆಂಗಳೂರು ಖಾಸಗಿ ಸಾಫ್ಟವೇರ್ ಕಂಪೆನಿಯ ಉದ್ಯೋಗಿ, ಗೋಪಾಡಿ ನಿವಾಸಿ ಸುಶ್ಮಿತಾ ಮೆಂಡನ್ ರವರು ಕನ್ನಡ ಚಿತ್ರರಂಗದ ಮಹಾನ್ ಕಲಾವಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ , ವನ್ಯಜೀವಿ ಸಂಕುಲ,ಪ್ರಾಕೃತಿಕ ವೈಶಿಷ್ಟ್ಯದ ಕುರಿತು ತಿಳಿಸುವ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮ ಕುರಿತು ಸಂದೇಶ ಸಾರುವ ಗಂಧದ ಗುಡಿ ಚಲನಚಿತ್ರ ವೀಕ್ಷಣೆಯನ್ನು ಪಡು ಗೋಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೋಟೇಶ್ವರದ ಭಾರತ್ ಸಿನೆಮಾಸ್ ಚಿತ್ರಮಂದಿರದಲ್ಲಿ […]
ಕುಂದಾ ಸರ್ಕ್ಯುಲೇಟಿಂಗ್ ಲೈಬ್ರರಿ ಮಾಲೀಕ ಶ್ರೀ ರಾಮ ದೇವಾಡಿಗ ನಿಧನ
ಕುಂದಾಪುರ( ನ,7): ಇಲ್ಲಿನ ಭಗವಾನ್ ಬಿಲ್ಡಿಂಗ್ ರಸ್ತೆಯಲ್ಲಿ 1987 ರಿಂದ ಕುಂದಾ ಸರ್ಕ್ಯುಲೇಟಿಂಗ್ ಲೈಬ್ರರಿ ಎನ್ನುವ ಲೈಬ್ರರಿ ನಡೆಸುತ್ತಾ , ನೂರಾರು ಜನರಿಗೆ ಪುಸ್ತಕದ ರುಚಿ ಹತ್ತಿಸಿದ, ಅದರ ಮಾಲೀಕರಾದ ಶ್ರೀ ರಾಮ ದೇವಾಡಿಗರು (58) ನ.07 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮಾಸ್ತಿಕಟ್ಟೆ ಹತ್ತಿರ “ರಾಧಿಕಾ ಡ್ರೆಸ್ ಸೆಂಟರ್” ಅನ್ನುವ ಬಟ್ಟೆ ಅಂಗಡಿ ನಡೆಸಿ ಪ್ರಸಿದ್ಧರಾಗಿದ್ದ ಇವರು ಇತ್ತೀಚೆಗೆ ಹೊಸ ಅಂಗಡಿಗೆ ಸ್ಥಳಾಂತರಗೊಂಡಿದ್ದರು. ಕ್ರೀಡಾಪಟುವೂ ಆಗಿದ್ದ ರಾಮ ದೇವಾಡಿಗರು […]
ಯಡ್ತರೆ: ಕ್ಯಾನ್ಸರ್ ಪೀಡಿತ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವು ಕೋರಿ ಮನವಿ
ಬೈಂದೂರು (ನ,6) : ಇಲ್ಲಿನ ಯಡ್ತರೆಯ ಸಂಜೀವಿನಿ ಎನ್ನುವ ಮಗು ಕ್ಯಾನ್ಸರ್ ಪೀಡಿತೆಯಾಗಿದ್ದು ,ಮಗುವಿನ ಶಸ್ತ್ರ ಚಿಕಿತ್ಸೆಗೆ ಹತ್ತು ಲಕ್ಷಕ್ಕೂ ಮಿಕ್ಕಿ ಅಧಿಕ ಹಣದ ಅವಶ್ಯಕತೆ ಇದ್ದು ,ಮಗುವಿನ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಮಗುವಿನ ಮನೆಯವರಿಗೆ ಕಷ್ಟ ಆಗುತ್ತಿದ್ದು ,ಬಡತನದಲ್ಲಿರುವ ಮಗುವಿನ ಕುಟುಂಬ ದಿಕ್ಕು ತೋಚದಾಗಿದೆ. ಸಹ್ರದಯಿ ದಾನಿಗಳಿಂದ ಸಹಾಯ ಧನ ಕ್ಕಾಗಿ ಮನವಿ ಮಾಡಿದ್ದಾರೆ . ಮಗುವಿನ ಶಸ್ತ್ರ ಚಿಕಿತ್ಸೆಗೆ ಧನ ಸಹಾಯ ಮಾಡಲಿಚ್ಚಿಸುವರು ಕೆಳಗೆ ತಿಳಿಸಿದ […]