ಕುಂದಾಪುರ (ಅ,18): ಶ್ರಿ ನಾರಾಯಣ ಗುರು ಯುವಕ ಮಂಡಲ (ರಿ) ಕುಂದಾಪುರ ಆಯೋಜನೆಯ ಅದ್ದೂರಿ ಕುಂದಾಪುರ ದಸರಾ-2021 ರ ಸಂದರ್ಭದಲ್ಲಿ ಉದ್ಯಮಿ ಕೊಡುಗೈದಾನಿ ಡಾ. ಗೋವಿಂದ ಬಾಬು ಪೂಜಾರಿ ಯವರಿಗೆ ಕರಾವಳಿ ಕಾಮಧೇನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ,ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಶ್ರಿನಾಥ ಕಡ್ಗಿಮನೆ, ನಾರಾಯಣ ಗುರು ಟ್ರಸ್ಟ್ ನ ಕಾರ್ಯದರ್ಶಿ ಭಾಸ್ಕರ ವಿಟಲವಾಡಿ,ಬಿಲ್ಲವ […]
Tag: govinda babu poojary
ಶೆಫ್ ಟಾಕ್ ಸಂಸ್ಥೆಯ ಗುಣಮಟ್ಟದ ಸೇವೆಗೆ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ – 2021 ಪ್ರಶಸ್ತಿ
ಬೈಂದೂರು (ಅ, 12) :ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯ ಜೊತೆಗೆ ಉತ್ತಮ ಆದರಾತಿಥ್ಯಕ್ಕೆ ಹೆಸರುವಾಸಿಯಾದ ಡಾ. ಗೋವಿಂದ ಬಾಬು ಪೂಜಾರಿಯವರ ಮಾಲೀಕತ್ವದ ಶೆಫ್ಟಾಕ್ ಸಂಸ್ಥೆಗೆ ಆಲ್ ಇಂಡಿಯಾ ಬಿಸಿನೆಸ್ ಡೆವೆಲಪ್ಮೆಂಟ್ ಅಸೋಸಿಯೇಷನ್ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ -2021 ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ.ಗೋವಿಂದ ಬಾಬು ಪೂಜಾರಿಯವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಸೆ, 25) : ಕೊಡುಗೈ ದಾನಿ ಉದ್ಯಮಿ ,ಶೇಫ್ ಟಾಕ್ ಹಾಸ್ಪಿಟಾಲಿಟಿ ಸಂಸ್ಥೆ ಹಾಗೂ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರಾದ ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಸಮಾಜ ಸೇವಾ ಕ್ಷೇತ್ರದ ಅನನ್ಯ ಕೊಡುಗೆಯನ್ನು ಗುರುತಿಸಿ ಏಶಿಯಾ ವೇದಿಕ್ ಕಲ್ಚರ್ ಫೌಂಡೇಷನ್ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಅನಾರೋಗ್ಯ ಪೀಡಿತ ರಾಜೇಶ್ ಮೊಗವೀರ ರವರಿಗೆ ವೀಲ್ ಚೇರ್ ಹಸ್ತಾಂತರಿಸಿದ ಶ್ರೀ ಗೋವಿಂದ ಬಾಬು ಪೂಜಾರಿ
ನಾವುಂದ (ಸೆ,22): ಕಿಡ್ನಿ ವೈಫಲ್ಯದಿಂದ ದೇಹದ ಬಲ ಕಳೆದುಕೊಂಡಿರುವ ಅರೆಹೊಳೆಯ ಚೌದಿ ಮನೆ ರಾಜೇಶ್ ಮೊಗವೀರ ರವರ ಮನೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಅವರು ಭೇಟಿ ಮಾಡಿ ವೀಲ್ ಚೇರ್ ಹಸ್ತಾಂತರಿಸಿ ಧನ ಸಹಾಯ ಮಾಡಿದರು. ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರು ತಮ್ಮ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮೂಲಕ ಹಲವಾರು ನೊಂದ ಹಾಗೂ ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿರುತ್ತಾರೆ.
ಯುವಕರಲ್ಲಿ ದೇಶಪ್ರೇಮ ಹಾಗೂ ದೇಶ ಸೇವೆಗೆ ಅಣಿಗೊಳಿಸುವುದೇ ನಮ್ಮ ಗುರಿ : ಗೋವಿಂದ ಬಾಬು ಪೂಜಾರಿ
ಬೈಂದೂರು (ಸೆ , 9) : ವೀರ ಯೋಧ ಪ್ರಶಾಂತ್ ದೇವಾಡಿಗರ ಮುಂದಾಳತ್ವದ ನೇಶನ್ ಲವರ್ಸ್ ಬೈಂದೂರು ತಂಡ ಯುವಕರಲ್ಲಿ ದೇಶ ಪ್ರೇಮ ಹಾಗೂ ಕ್ರೀಡಾಸಕ್ತಿಯೊಂದಿಗೆ ಸೈನಿಕ ತರಬೇತಿಯಂತಹ ಅರ್ಥಪೂರ್ಣ ಯೋಜನೆಯನ್ನು ಹಾಕಿಕೊಂಡಿದ್ದು ,ಇವರ ಯೋಜನೆಗೆ ಬೆನ್ನೆಲುಬಾಗಿ ನಿಂತ ದೇಶದ ಪ್ರತಿಷ್ಠಿತ ಆಹಾರ ಮತ್ತು ಆತಿಥ್ಯಕ್ಕೆ ಹೆಸರಾದ ಶೆಫ್ ಟಾಕ್ ಸಂಸ್ಥೆಯ ಮುಖ್ಯಸ್ಥರು ಹಾಗೂ ವರಲಕ್ಷೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಸಂಚಾಲಕರಾಗಿರುವ ಗೋವಿಂದ ಬಾಬು ಪೂಜಾರಿಯವರನ್ನು ಗೌರವಾಧ್ಯಕ್ಷರಾಗಿ ಹಾಗೂ […]
ಶ್ರೀಗೋವಿಂದ ಬಾಬು ಪೂಜಾರಿಯವರಿಗೆ “ಭಾರತ ಗೌರವ ಪ್ರಶಸ್ತಿ”
ಬೆಂಗಳೂರು (ಆ, 27) : ಜನ್ಮಭೂಮಿ ಫೌಂಡೇಷನ್ (ರಿ)ಬೆಂಗಳೂರು ಕೊಡಮಾಡುವ “ಭಾರತ ಗೌರವ ಪ್ರಶಸ್ತಿ”ಗೆ ಉದ್ಯಮಿ, ಸಮಾಜಸೇವಕ ಶ್ರೀ ಗೋವಿಂದ ಬಾಬು ಪೂಜಾರಿ ಆಯ್ಕೆಯಾಗಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಕೊರೊನಾ ವಾರಿಯರ್ಸ್ಗೆ ಆಗಸ್ಟ್ , 29 ರಂದು ಬೆಂಗಳೂರಿನ ಗಾಂಧಿನಗರದ ಆನಂದರಾವ್ ಸರ್ಕಲ್ ಬಳಿಯ ಸ್ಯಾಂಕ್ಟಮ್ ಹೋಟೆಲ್ ನಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು “ಭಾರತ ಗೌರವ ಪ್ರಶಸ್ತಿ”ಯೊಂದಿಗೆ ಸನ್ಮಾನಗೊಳ್ಳಲಿದ್ದಾರೆ. […]
ವರಲಕ್ಷೀ ಚಾರಿಟೇಬಲ್ ಟ್ರಸ್ಟ್(ರಿ) ಉಪ್ಪುಂದ : ಸ್ವಾತಂತ್ಯ್ರೋತ್ಸವ ದಿನದಂದು ಶ್ರೀ ಗೋವಿಂದ ಬಾಬು ಪೂಜಾರಿಯವರಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ
ತ್ರಾಸಿ (ಆ,15): ತ್ರಾಸಿ ಸಮೀಪದ ಕಂಚುಗೋಡು ಭಗತ್ ನಗರದ ಶ್ರೀಮತಿ ಪುಷ್ಪಾ ಉಲ್ಲಾಸ್ ದಂಪತಿಗೆ ಅಗಸ್ಟ್ 15 ರಂದು ನೂತನ ಮನೆಯನ್ನು ಉದ್ಯಮಿ ,ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ತಮ್ಮಕುಟಂಬದ ಸದಸ್ಯರು, ಅಭಿಮಾನಿಗಳು , ಸೇವಾ ಸಂಕಲ್ಪ ಸಂಸ್ಥೆಯ ಸದಸ್ಯರು ಹಾಗೂ ಊರ ಜನತೆಗಳ ಉಪಸ್ಥಿತಿಯಲ್ಲಿ ಶ್ರೀಮತಿ ಪುಷ್ಪಾ ಉಲ್ಲಾಸ್ ದಂಪತಿಗೆ ಮನೆಯ ಕೀ ನೀಡುವುದರ ಮೂಲಕ ಹಸ್ತಾಂತರಿಸಿದರು. ಹಲವು ಬಡ ಕುಟುಂಬಗಳಿಗೆ ಆಶ್ರಯದಾತರಾಗಿರುವ ಶ್ರೀ ಗೋವಿಂದ ಬಾಬು ಪೂಜಾರಿಯವರು ಮಾಧ್ಯಮ […]
ಅಗಸ್ಟ್ 15 ರ ಸ್ವಾತಂತ್ರ ದಿನದಂದು ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸಲಿರುವ ಗೋವಿಂದ ಬಾಬು ಪೂಜಾರಿ
ತ್ರಾಸಿ (ಆ, 12) : ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರ ಜೊತೆಗೆ ಬಡ ವರ್ಗದ ಜನರಿಗೆ ಕಷ್ಟ ಕಾಲದ ಆಪತ್ಬಾಂಧವನಾಗಿದ್ದಾರೆ. ಆಶ್ರಯ ಇಲ್ಲದಿರುವ ಕಡು ಬಡವರಿಗೆ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಮೂರು ಮನೆಗಳನ್ನು ಹಸ್ತಾಂತರಿಸಿದ್ದು , ಇದೀಗ ನಾಲ್ಕನೇ ಮನೆ ಹಸ್ತಾಂತರಕ್ಕೆ ಸಿದ್ದಗೊಳ್ಳುತ್ತಿದೆ. ತ್ರಾಸಿ ಸಮೀಪದ ಕಂಚುಗೋಡು ಭಗತ್ ನಗರದ ಶ್ರೀಮತಿ […]
ಕೊಡುಗೈದಾನಿ, ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಕುಂದಾಪ್ರ ರತ್ನ ಪ್ರಶಸ್ತಿ
ಬೆಂಗಳೂರು (ಆ, 08) : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕಳೆದ ಮೂರು ವರ್ಷಗಳಿಂದಲೂ ಕುಂದಾಪುರ ಭಾಗದ ಜನತೆ ಆಸಾಡಿ ಅಮವಾಸ್ಯೆದಿನದಂದು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿಶೇಷವಾಗಿ ಆಚರಿಸುತ್ತಿದ್ದು ,ಈ ಬಾರಿ ಆಗಸ್ಟ್ 08 ರ ಆಸಾಡಿ ಅಮವಾಸ್ಯೆಯೆಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ ತಂಡದ ನೇತೃತ್ವದಲ್ಲಿ ರಾಜಾಜಿನಗರದ ಕದಂಬ ಸಾಮ್ರಾಟ್ ಸಭಾ ಭವನದಲ್ಲಿ ವೈಭವದಿಂದ ನೆರವೇರಿತು. ಈ ಸಂದರ್ಭದಲ್ಲಿ ಉದ್ಯಮಿ ,ಶೇಫ್ ಟಾಕ್ ಹಾಸ್ಪಿಟಾಲಿಟಿ […]
ಸಂತೆಕಟ್ಟೆ : ಕೃಷ್ಣಾನುಗ್ರಹ ಮಕ್ಕಳ ಅನಾಥಾಶ್ರಮಕ್ಕೆ ಭೇಟಿ ನೀಡಿದ ಶ್ರೀ ಗೋವಿಂದ ಬಾಬು ಪೂಜಾರಿ
ಉಡುಪಿ (ಆ, 5) : ಇಲ್ಲಿನ ಸಂತೆಕಟ್ಟೆಯ “ಕೃಷ್ಣಾನುಗ್ರಹ” ಅನಾಥ ಮಕ್ಕಳ ದತ್ತು ಸ್ವೀಕಾರ ಕೇಂದ್ರಕ್ಕೆ ಕೊಡುಗೈದಾನಿ, ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಇತ್ತೀಚೆಗೆ ತಮ್ಮ ಕುಟುಂಬಿಕರೊಂದಿಗೆ ಭೇಟಿ ನೀಡಿದರು. ಈ ಸಂದರ್ಭ ಕೇಂದ್ರಕ್ಕೆ ಅಗತ್ಯವಿರುವ ಸುಮಾರು ಒಂದು ತಿಂಗಳ ದಿನಸಿ ಸಾಮಾಗ್ರಿ, ಒಂದು ಸಾವಿರ ಪ್ಯಾಂಪರ್ಸ್ ಹಾಗೂ ಮಕ್ಕಳಿಗೆ ತಿಂಡಿ ತಿನಿಸು ವಿತರಿಸಿದರು. ಅನಾಥಾಶ್ರಮದ ಮಕ್ಕಳ ಜೊತೆ ಕೆಲಕಾಲ ಸಮಯ ಕಳೆದ ಗೋವಿಂದ ಬಾಬು ಪೂಜಾರಿಯವರು ಮಕ್ಕಳ […]