ಕುಂದಾಪುರ ( ಮಾ.13 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ , ವಿ.ಕೆ. ಆರ್ ಆಂಗ್ಲ ಮಾಧ್ಯಮ ಶಾಲೆಗಳ 6ನೇ ತರಗತಿ ವಿದ್ಯಾರ್ಥಿನಿ ಅವನಿ ಶೆಟ್ಟಿಗಾರ್ ಫೆ.27 ರಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಆಯೋಜಿಸಲಾದ 2023-24 ನೇ ಸಾಲಿನ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತ ವಿದ್ಯಾರ್ಥಿನಿಯನ್ನು ಸಂಸ್ಥೆಯ […]
Tag: hmm vkr
ಎಚ್. ಎಮ್.ಎಮ್ & ವಿ. ಕೆ .ಆರ್ ಶಾಲೆ:ಶಿಕ್ಷಕ – ಪೋಷಕ ಸಭೆ
ಕುಂದಾಪುರ (ಮಾ 7): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್.ಎಮ್ , ವಿ. ಕೆ. ಆರ್ ಶಾಲೆಗಳಲ್ಲಿಇತ್ತೀಚೆಗೆ ಶಿಕ್ಷಕ – ಪೋಷಕ ಸಭೆಯನ್ನು ಏರ್ಪಡಿಸಲಾಗಿತ್ತು. ಶಾಲೆಯ ವಾರ್ಷಿಕ ಪಠ್ಯ – ಪಠ್ಯೇತರ ಚಟುವಟಿಕೆಯ ಕುರಿತಾಗಿ ಪೋಷಕರಿಗೆ ಮಾಹಿತಿ ನೀಡುವುದಲ್ಲದೇ, ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ತರಗತಿವಾರು ಮ್ಯಾಗಝಿನ್ ನನ್ನು ಬಿಡುಗಡೆಗೊಳಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ಸಂಚಾಲಕರೂ, ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರು ಶಾಲಾ ಸಿಬ್ಬಂದಿಯವರ ಒಗ್ಗಟ್ಟು […]
ಎಚ್. ಎಮ್. ಎಮ್. ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಸಭೆ
ಕುಂದಾಪುರ( ಮಾ.07): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ದಿನಾಂಕ ಮಾರ್ಚ್ 05 ರ ಮಂಗಳವಾರದಂದು ಶಿಕ್ಷಕ ಪೋಷಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಲತಾ ಜಿ. ಭಟ್ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲರು, ಸಭೆಯ ಅಧ್ಯಕ್ಷರೂ ಆಗಿರುವ ಡಾ. ಚಿಂತನಾ ರಾಜೇಶ್ ತರಗತಿಯ ಹಸ್ತಪ್ರತಿಯನ್ನು ಅನಾವರಣಗೊಳಿಸಿ ಪೋಷಕರನ್ನು ಉದ್ದೇಶಿಸಿ ತಮ್ಮ ಮಕ್ಕಳನ್ನು ಸುಸಂಸ್ಕೃತ […]
ಎಚ್ ಎಮ್ ಎಮ್, ವಿ ಕೆ ಆರ್ ಶಾಲೆ : ಅಭ್ಯಾಸ ಕೌಶಲ ಮತ್ತು ಸಮಯ ಪಾಲನೆ ಕಾರ್ಯಾಗಾರ
ಕುಂದಾಪುರ (ಫೆ.27) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ “ ಅಭ್ಯಾಸ ಕೌಶಲ ಮತ್ತು ಸಮಯ ಪಾಲನೆ “ ಕುರಿತಾಗಿ ಕಾರ್ಯಾಗಾರ ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ , ಸಂಸ್ಥೆಯ ಅಕಾಡೆಮಿಕ್ ಕೋ ಆರ್ಡಿನೇಟರ್ ವಿಲ್ಮಾ ಡಿ ಸಿಲ್ವಾ ರವರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಉತ್ತಮ ಪರಿಪಾಠಗಳನ್ನು ಬೆಳೆಸಿಕೊಳ್ಳುವುದಲ್ಲದೇ, ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎನ್ನುವುದರ ಕುರಿತಾಗಿ […]
ಕುಂದಾಪುರ : ಎಚ್.ಎಮ್.ಎಮ್, ವಿ.ಕೆ.ಆರ್ ಶಾಲೆಯಲ್ಲಿ “ಸರಿಗನ್ನಡಂ ಗೆಲ್ಗೆ” ಕಾರ್ಯಾಗಾರ
ಕುಂದಾಪುರ (ಫೆ.22) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಸರಿಗನ್ನಡಂ ಗೆಲ್ಗೆ” ಎಂಬ ವಿಷಯಾಧಾರಿತ ಸಂವಾದ ಕಾರ್ಯಾಗಾರ ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಂಗ ಸಂಸ್ಥೆಯಾಗಿರುವ ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರೇಷ್ಮಾ ಶೆಟ್ಟಿ ಆಗಮಿಸಿ, […]
ಎಚ್. ಎಮ್. ಎಮ್, ವಿ ಕೆ ಆರ್ ಶಾಲೆ: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಂದ ಉಪನ್ಯಾಸ
ಕುಂದಾಪುರ (ಫೆ. 14): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಮತ್ತು ವಿ. ಕೆ ಆರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಫೆಬ್ರವರಿ 12, ಸೋಮವಾರದಂದು 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಮಕ್ಕಳೊಂದಿಗೆ ಮಾತು–ಕತೆ” ಕಾರ್ಯಾಗಾರ ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕವಿ, ವಿದ್ವಾಂಸ, ನಿರ್ದೇಶಕ, ನಾಟಕಕಾರರೂ ಆಗಿರುವ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಆಗಮಿಸಿ, ಮಕ್ಕಳಿಗೆ […]
ಅಬಾಕಸ್ನಲ್ಲಿ ಎಚ್. ಎಮ್. ಎಮ್ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ (ಫೆ,18) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಐಡಿಯಲ್ ಪ್ಲೇ ಅಬಾಕಸ್ ವತಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ 19ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ. ವಿದ್ಯಾರ್ಥಿಗಳಾದ ಶ್ರೇಯಸ್ ಆರ್ ರಾವ್, ಪ್ರಣವ್ ದ್ವಿತೀಯ ಸ್ಥಾನವನ್ನು ಮತ್ತು ಪ್ರಥ್ವಿನ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ […]
ಎಚ್.ಎಮ್.ಎಮ್, ವಿ.ಕೆ.ಆರ್ ಶಾಲೆ: ಶಿಕ್ಷಕ ಪುನಶ್ಚೇತನ ಕಾರ್ಯಾಗಾರ
ಕುಂದಾಪುರ (ಫೆ.15) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಶಿಕ್ಷಕರಿಗಾಗಿ “ಕಲಿಕಾ ನ್ಯೂನ್ಯತೆಯ ಕಾರಣಗಳು” ಎಂಬ ವಿಷಯಾಧಾರಿತ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ ಫೆಬ್ರವರಿ 13, ಮಂಗಳವಾರದಂದು ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಕೇರಳದ, ಕೊಚ್ಚಿನ್ನಲ್ಲಿ ಮಕ್ಕಳ ಮನಶಾಸ್ತ್ರಜ್ಞರು ಮತ್ತು ಹಿರಿಯ ಸಲಹೆಗಾರರಾಗಿರುವ ಡಾ. ಫಿಲಿಪ್ ಜಾನ್ ಆಗಮಿಸಿ, ಮಕ್ಕಳಲ್ಲಿ […]
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆ: ರಾಜ್ಯಮಟ್ಟದ ಚೆಸ್ ನಲ್ಲಿ ಪ್ರಥಮ
ಕುಂದಾಪುರ (ಫೆ.16) : ಚಾಣಾಕ್ಷ ಚೆಸ್ ಸ್ಕೂಲ್, ಶಿವಮೊಗ್ಗ ಮತ್ತು ಮೌಂಟ್ ಕ್ಯಾರಮಲ್ ಸ್ಕೂಲ್ ಮತ್ತು ಶ್ರೀ ಶ್ರೀ ಟ್ರಸ್ಟ್ ಸಹಭಾಗಿತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆ – 2024ರಲ್ಲಿ ಕುಂದಾಪುರದ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೆಟ್ ಭಾಗವಹಿಸಿ ಬಾಲಕರ 7ರ ವಯೋಮಿತಿಯ ವಿಭಾಗದಲ್ಲಿ 7ರಲ್ಲಿ 4 ಪಾಯಿಂಟ್ ಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ . ಇವರನ್ನು […]
ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ. ಕೆ. ಆರ್ ಶಾಲೆಯಲ್ಲಿ ಗ್ರಾಂಡ್ ಪೇರೆಂಟ್ಸ್ ಡೇ
ಕುಂದಾಪುರ (ಫೆ.7): ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ. ಕೆ. ಆರ್ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ, ಎಲ್.ಕೆ.ಜಿ, ಯು. ಕೆ. ಜಿ ಮತ್ತು 2ನೇ ತರಗತಿಯ ವಿದ್ಯಾರ್ಥಿಗಳ ಗ್ರಾಂಡ್ ಪೇರೆಂಟ್ಸ್ ಡೇ ಇತ್ತೀಚೆಗೆ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೋಟೇಶ್ವರದ ಕೆನರಾ ಕಿಡ್ಸ್ ಪ್ರಾಂಶುಪಾಲೆ ಮತ್ತು ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ವಿನಂತಿ ಎಸ್ ಶೆಟ್ಟಿ ಆಗಮಿಸಿ, ಮಕ್ಕಳ ಜೀವನದಲ್ಲಿ ಅಜ್ಜಿ – […]










