ಕೋಟೇಶ್ವರ(ಸೆ.6): ಮೊಗವೀರ ಯುವ ಸಂಘಟನೆ(ರಿ) ಉಡುಪಿ ಇದರ ಕೋಟೇಶ್ವರ ಘಟಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೇಶ್ವರದ ಸಹಭಾಗಿತ್ವದಲ್ಲಿ ಸೆಪ್ಟೆಂಬರ್,4 ರಂದು ಕೋಟೇಶ್ವರದ ವಿಶ್ವ ಕರ್ಮ ಕಲ್ಯಾಣ ಮಂಟಪದಲ್ಲಿ ಉಚಿತ ಕೊರೋನ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು.217 ಡೋಸ್ ಲಸಿಕೆ ಹಾಕುವ ಮೂಲಕ ಅಭಿಯಾನ ಯಶಸ್ವಿಯಾಯಿತು. ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕರಾದ ಡಾ. ಜಿ. ಶಂಕರ್ ರವರು ಕರೋನ ಸಮಯದಲ್ಲಿ ಆಮ್ಲಜನಕದ ಕೊರತೆ ನೀಗಿಸಲು ಸ್ಪಂದಿಸಿದ ರೀತಿ ಮತ್ತು ಕೋಟೇಶ್ವರ ಸಂಘಟನೆಯ […]
Tag: mogaveera society
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಕೋಟೇಶ್ವರ (ಸೆ. 01) : ಮೊಗವೀರ ಯುವ ಸಂಘಟನೆ (.ರಿ) ಉಡುಪಿ ಜಿಲ್ಲೆ, ಕೋಟೇಶ್ವರ ಘಟಕದ ವತಿಯಿಂದ ಇತಿಹಾಸ ಪ್ರಸಿದ್ದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಸುತ್ತ ಸ್ವಚ್ಚಗೊಳಿಸುವ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕೋಟೇಶ್ವರ ಘಟಕದ ನಿಯೊಜಿತ ಅಧ್ಯಕ್ಷರಾದ ಸುನೀಲ್ ಜಿ ನಾಯ್ಕ್, ಕಾರ್ಯದರ್ಶಿ ಪುಂಡಲೀಕ ಮೊಗವೀರ, ಕೋಶಾಧಿಕಾರಿ ಪ್ರದೀಪ್ ಮೊಗವೀರ, ಮಹಿಳಾ ಸಂಘಟನೆಯ ಅಧ್ಯಕ್ಷರಾದ ಅನುಸೂಯ ಕೆದೂರು ಇವರ ನೇತ್ರತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಘಟಕದ ಸ್ಥಾಪಕಾಧ್ಯಕ್ಷರಾದ […]
ಹರೀಶ್ ಬಂಗೇರ ತಾಯ್ನಾಡಿಗೆ ಆಗಮನ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಬೆಂಗಳೂರು ಏರ್ಪೋರ್ಟ್
ಬೆಂಗಳೂರು (ಆ,18): ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಪಟ್ಟಿದ್ದ ಕುಂದಾಪುರ ಮೂಲದ ಹರೀಶ್ ಬಂಗೇರ ಬೆಂಗಳೂರು ಏರ್ಪೋರ್ಟ್ ತಲುಪಿದ್ದಾರೆ. ಸೌದಿ ದೊರೆಯ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರೆಂದು ಆರೋಪ ಎದುರಿಸಿರುವ ಹರೀಶ್ ನಿರಪರಾಧಿ ಎಂದು ತಿಳಿದ ಮೇಲೆ ಸೌದಿ ಅರೇಬಿಯಾ ಸರಕಾರ ಇವರನ್ನು ಬಿಡುಗಡೆಗೊಳಿಸಿದ್ದು,ಇದೀಗ ಕುಂದಾಪುರ ಪರಿಸರದ ಜನತೆಗೆ ಸಂತೋಷ ತಂದಿದೆ. ಬೆಂಗಳೂರಿಗೆ ಆಗಮಿಸಿದ ಹರೀಶ್ ಬಂಗೇರರನ್ನು ಲೋಕೇಶ್ ಅಂಕದಕಟ್ಟೆ ಮತ್ತು ತಂಡ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಬರಮಾಡಿಕೊಂಡರು.
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ- ಬೈಂದೂರು-ಶಿರೂರು ಘಟಕ : ಸ್ವತಂತ್ರ ದಿನದ ಅಮೃತೋತ್ಸವದ ಸಂಭ್ರಮ
ಬೈಂದೂರು (ಆ, 15) : ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಬೈಂದೂರು-ಶಿರೂರು ಘಟಕದ ಸ್ವತಂತ್ರ ದಿನದ ಅಮೃತೋತ್ಸವದ ಸಂಭ್ರಮವು ಸಂಘಟನೆಯ ಆಡಳಿತ ಕಛೇರಿಯಲ್ಲಿ ಆಗಸ್ಟ್ 15, ರಂದು ಜರುಗಿತು. ಕಾರ್ಯಕ್ರಮದ ಅಂಗವಾಗಿ ಧ್ವಜವಂದನೆ ಹಾಗೂ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಧ್ವಜಾರೋಹಣ ವನ್ನು ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲಾ ಕುಂದರ್ ನೆರವೇರಿಸಿದರು. ಅರಣ್ಯ ಇಲಾಖೆಯು ಪ್ರಾಯೋಜಿಸಿದ ಸಸಿಗಳನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಂಗಾಧರ […]
ಮೊಗವೀರ ಯುವ ಸಂಘಟನೆ( ರಿ) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ: ಕಾವೇರಿ ಮೊಗವೀರ್ತಿ ಯವರಿಗೆನೂತನ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ
ಬೈಂದೂರು (ಆ,15): ಮೊಗವೀರ ಯುವ ಸಂಘಟನೆ( ರಿ) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ವತಿಯಿಂದ ಕಾವೇರಿ ಮೊಗವೀರ್ತಿ ಯವರಿಗೆ ನೂತನ ಮನೆಯನ್ನು ನಿರ್ಮಿಸಿ ಕೊಡುವುದರ ಜೊತೆಗೆ ,ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ಆಗಸ್ಟ್15 ರಂದು ಜರುಗಿತು. ಜಿಲ್ಲಾ ಸಂಘಟನೆ ಯ ಅಧ್ಯಕ್ಷರು ಶಿವರಾಮ್ ಕೋಟ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಕುಂದಾಪುರ ಶಾಖಾ ಅಧ್ಯಕ್ಷರಾದ ಕೆ .ಕೆ ಕಾಂಚನ, ಸತೀಶ್ ನಾಯಕ್ ನಾಡ ಪಡುಕೋಣೆ, […]
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ:75 ನೇ ಸ್ವಾತ್ರಂತ್ರ್ಯ ದಿನಾಚರಣೆ
ಉಡುಪಿ (ಆ,15): ರಾಜ್ಯೋತ್ಸವ ಪುರಸ್ಕ್ರತ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಇದರ ಜಿಲ್ಲಾ ಕಚೇರಿಯಲ್ಲಿ 75 ನೇ ಸ್ವಾತ್ರಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಶಿವರಾಮ ಕೋಟ ನೆರವೇರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸುವರ್ಣ ಹಿರಿಯಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ವತಿಯಿಂದ ಬಡ ಮಹಿಳೆ ಕಾವೇರಿ ಮೊಗವೀರ್ತಿಯವರಿಗೆ ಮನೆ ನಿರ್ಮಾಣ
ಹೆಮ್ಮಾಡಿ (ಆ, 13) : ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ವತಿಯಿಂದ ಬೈಂದೂರು ತಾಲೂಕಿನ ನಾಡ ಗ್ರಾಮದ ಬಡ ಒಂಟಿ ಮಹಿಳೆ ಹೊರ್ನಿ ಮನೆ ಕಾವೇರಿ ಮೊಗವೀರ್ತಿಯವರಿಗೆ ನೂತನ ಮನೆ “ಅಮ್ಮ” ನಿರ್ಮಾಣ ಮಾಡಿ ಆಗಸ್ಟ್,15 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸತ್ಯನಾರಾಯಣ ಪೂಜೆಯೊಂದಿಗೆ ನೂತನ ಗ್ರಹದ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾನವೀಯ ನೆಲೆಯ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ […]
ಮೊಗವೀರ ಯುವ ಸಂಘಟನೆ (ರಿ). ಉಡುಪಿ ಜಿಲ್ಲೆ : ಕೋಟೇಶ್ವರ ಘಟಕದ ನೂತನ ಕಾರ್ಯದರ್ಶಿಯಾಗಿ ಪುಂಡಲೀಕ ಮೊಗವೀರ ತೆಕ್ಕಟ್ಟೆ ಆಯ್ಕೆ
ಕೋಟೇಶ್ವರ (ಜು, 29) : ಮೊಗವೀರ ಯುವ ಸಂಘಟನೆ(ರಿ). ಉಡುಪಿ ಜಿಲ್ಲೆ ಇದರ ಕೋಟೇಶ್ವರ ಘಟಕದ 2021- 2023ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜುಲೈ, 25 ರಂದು ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಕಛೇರಿಯಲ್ಲಿ ನಡೆದಿದ್ದು ಮುಂದಿನ ಎರಡು ವರ್ಷಗಳ ಅವಧಿಗೆ ಕಾರ್ಯದರ್ಶಿಯಾಗಿ ಪುಂಡಲೀಕ ಮೊಗವೀರ ತೆಕ್ಕಟ್ಟೆ ಆಯ್ಕೆಯಾಗಿದ್ದಾರೆ. ಹಲವು ಸ್ವಯಂ ಸೇವಾ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಪುಂಡಲೀಕರವರು ರಕ್ತದಾನ, ಅಶಕ್ತರಿಗೆ ನೆರವು, ಲಾಕ್ಡೌನ್ ಸಂದರ್ಭದಲ್ಲಿನ […]
ಮೊಗವೀರ ಯುವ ಸಂಘಟನೆ (ರಿ). ಉಡುಪಿ ಜಿಲ್ಲೆ : ಕೋಟೇಶ್ವರ ಘಟಕದ 2021- 2023ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಕೋಟೇಶ್ವರ (ಜು, 29) : ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ). ಉಡುಪಿ ಜಿಲ್ಲೆ ಇದರ ಕೋಟೇಶ್ವರ ಘಟಕದ 2021- 2023 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜುಲೈ,25 ರಂದು ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಕಛೇರಿಯಲ್ಲಿ ನಡೆಯಿತು. ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸುನೀಲ್. ಜಿ. ನಾಯ್ಕ್ ಚಾತ್ರಬೆಟ್ಟು, ಗೌರವಾಧ್ಯಧ್ಯಕ್ಷರಾಗಿ ಸೌರಭ ರಾಜೀವ ಮರಕಾಲ ಬೀಜಾಡಿ, ಕಾರ್ಯದರ್ಶಿಯಾಗಿ ಪುಂಡಲೀಕ ಮೊಗವೀರ ತೆಕ್ಕಟ್ಟೆ, […]
ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕದ ಕಛೇರಿಗೆ ಶ್ರೀ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಭೇಟಿ
ಬೈಂದೂರು (ಫೆ – 18) : ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ, ಬೈಂದೂರು – ಶಿರೂರು ಘಟಕದ ಯಡ್ತರೆಯ ಆಡಳಿತ ಕಛೇರಿಗೆ ಫೆಬ್ರವರಿ 17 ರಂದು ಶ್ರೀ ನಿಜಶರಣ ಚೌಡಯ್ಯನವರ ಗುರುಪೀಠ ಶ್ರೀಕ್ಷೇತ್ರ ನರಸೀಪುರದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಭೇಟಿನೀಡಿ, ಸಂಘಟನೆಯ ಸದಸ್ಯರುಗಳಿಗೆ ಆಶೀರ್ವದಿಸಿ,ಮಂತ್ರ ದಕ್ಷತೆ ನೀಡಿದರು. ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕ ಅಧ್ಯಕ್ಷ ರವಿರಾಜ ಚಂದನ್ ಕಳವಾಡಿ, […]










