ಕುಂದಾಪುರ(ಮೇ7): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಮಾಂಗಲ್ಯ ಸೂತ್ರ ಮತ್ತು ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಆಯ್ದ ಫಲಾನುಭವಿಗಳಿಗೆ ಚೆಕ್ ವಿತರಿಸುವ ಕಾರ್ಯಕ್ರಮ ಮೇ 06 ರ ಶನಿವಾರ ಸಂಜೆ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಂಘದ ದಶಮ ಸಂಭ್ರಮ ಮಹಾಪೋಷಕರಾದ ಬಿ. ವಿನಯ್ ಕುಮಾರ್ ಶೆಟ್ಟಿ , ಪೋಷಕರಾದ ಉದ್ಯಮಿ ಹೊಂಬಾಡಿ ಮೇಲ್ಮನೆ ಜಗನ್ನಾಥ ಶೆಟ್ಟಿ ಫಲಾನುಭವಿಗಳಿಗೆ ಚಕ್ ವಿತರಿಸಿ ಸಂಘ ನಡೆಸಿಕೊಂಡು ಬಂದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದರು.
ಮಾಂಗಲ್ಯ ಸೂತ್ರ ಯೋಜನೆಯ ಫಲಾನುಭವಿಗಳಾದ ಕಮಲಶಿಲೆಯ ಕುಮಾರಿ ಪೂರ್ಣಿಮಾ ಶೆಟ್ಟಿ, ಯಡಮೊಗೆಯ ಕುಮಾರಿ ಸವಿತಾ ಶೆಟ್ಟಿ, ಸಿದ್ದಾಪುರದ ಕುಮಾರಿ ಉಷಾ ಶೆಟ್ಟಿ ಯವರಿಗೆ ಹಾಗೂ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಶ್ರೀ ಆನಂದ ಶೆಟ್ಟಿ ನಂಚಾರು, ಶ್ರೀ ಕಿರಣ್ ಶೆಟ್ಟಿ ಅಂಪಾರು, ಶ್ರೀ ದಿವಾಕರ ಶೆಟ್ಟಿ ಆಲೂರು,ಶ್ರೀ ರಾಧಾಕೃಷ್ಣ ಶೆಟ್ಟಿ ಯಳೂರು,ಶ್ರೀಮತಿ ಭವಾನಿ ಶೆಟ್ಟಿ ಆಲೂರು, ಕುಮಾರಿರಂಜಿತಾ ಶೆಟ್ಟಿ ಸಿರಿಮಠ,ಶಿವ ಕುಮಾರ್ ಮಂಗಲ್ ಪಾಂಡ್ಯ ರಸ್ತೆ ಕುಂದಾಪುರ ಹಾಗೂ ಶ್ರೀ ವಿಶ್ವನಾಥ ಶೆಟ್ಟಿ ಸಾರ್ಕಲ್ ಕಾವ್ರಾಡಿಯವರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನಿತೀಶ್ ಶೆಟ್ಟಿ ಬಸ್ರೂರು ಹಾಗೂ ಸಂಘದ ಪದಾಧಿಕಾರಿಗಳಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಹರ್ಕೂರು, ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರು, ಶ್ರೀ ಸುಕುಮಾರ್ ಶೆಟ್ಟಿ ಕಮಲಶಿಲೆ, ಶ್ರೀ ಪ್ರಶಾಂತ್ ಕುಮಾರ್ ಶೆಟ್ಟಿ ಶಿರೂರು, ಶ್ರೀ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಉದಯ ಶೆಟ್ಟಿ ಹೊಸಂಗಡಿ, ಮಾಜಿ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ಹೊಸಮಠ, ಸುಕುಮಾರ್ ಶೆಟ್ಟಿ ಹೇರಿಕುದ್ರು, ಶ್ರೀ ರಾಜೀವ ಶೆಟ್ಟಿ ಹೆಂಗವಳ್ಳಿ, ಶ್ರೀ ಪುರಂದರ ಶೆಟ್ಟಿ ಹಿಲಿಯಾಣ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರಸ್ತಾಪಿಸಿ ಸರ್ವರನ್ನು ಸ್ವಾಗತಿಸಿದರು. ಸಂಘದ ಮಾಜಿ ಕೋಶಾಧಿಕಾರಿ ಶ್ರೀ ಮನೋರಾಜ್ ಶೆಟ್ಟಿ ಜಾಂಬೂರು ನಿರೂಪಿಸಿ ವಂದಿಸಿದರು.