ಕುಂದಾಪುರ (ಜು,25): ಯಕ್ಷ ಬ್ರಹ್ಮಶ್ರೀ ತಂಡದವರ ಆಶ್ರಯದಲ್ಲಿ ಅಗಸ್ಟ್ 16 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಲಿಗ್ರಾಮ ಮತ್ತು ಸೌಕೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಎರಡನೇ ವರ್ಷದ ಅದ್ದೂರಿ ಯಕ್ಷಗಾನದ ಪ್ರದರ್ಶನದ ನಡೆಯಲಿದೆ .
ಆ ಪ್ರಯುಕ್ತ ಯಕ್ಷಗಾನದ ಕರಪತ್ರ ಮತ್ತು ಬೇಲ್ತೂರು ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗವನ್ನು ಮಾಜಿ ಸಂಸದರು,ಮಾಜಿ ಸಚಿವರು ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ, ಕೆ.ಜಯಪ್ರಕಾಶ್ ಹೆಗ್ಡೆ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಗದ್ದೆ, ಸಂಘಟಕರಾದ ರಾಘವೇಂದ್ರ ಹಾರ್ಮಣ್, ಅಶ್ವಿತ್ ಉಪ್ಪಳ,ಸುಧೀರ್ ನೈಲಾಡಿ ಉಪಸ್ಥಿತರಿದ್ದರು.