ಕಾರ್ಕಳ (ಆ,10): ಇನ್ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ (CA) ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುದೀಪ್ ಕೆ, ಸುಮಾ, ಸುಚಿತಾ ಬಿ ಸಿ, ಅನಘಾ, ಬಿ ಸಿದ್ದಾರ್ಥ್ ಪೈ, ಹೆಗ್ಡೆ ಅನಿರುದ್ಧ್ ರಮೇಶ್, ಅಭಿಷೇಕ್ ಪಿ ಎಸ್, ವಿಂದ್ಯಾ ವಿನಯ್ ಹೆಗಡೆ, ಎಸ್ ಅನುರಾಜ್ ಇವರು ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿ ಎ ಇಂಟರ್ ಮೀಡಿಯೆಟ್ ಗೆ ಅರ್ಹತೆ ಗಳಿಸಿದ್ದಾರೆ.
ಸುದೀಪ್ ಕೆ 261 ಅಂಕ, ಸುಮಾ 250 ಅಂಕ, ಸುಚಿತಾ ಬಿ ಸಿ 223 ಅಂಕ, ಅನಘಾ 219 ಅಂಕ, ಬಿ ಸಿದ್ದಾರ್ಥ್ ಪೈ 214 ಅಂಕ, ಹೆಗ್ಡೆ ಅನಿರುದ್ಧ್ ರಮೇಶ್ 210 ಅಂಕ, ಅಭಿಷೇಕ್ ಪಿ ಎಸ್ 209 ಅಂಕ, ವಿಂದ್ಯಾ ವಿನಯ್ ಹೆಗಡೆ 203 ಅಂಕ, , ಎಸ್ ಅನುರಾಜ್ 200 ಅಂಕವನ್ನು ಗಳಿಸುವ ಮೂಲಕ ಅಮೋಘ ಸಾಧನೆಗೈದಿದ್ದಾರೆ. ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿಯನ್ನೂ ಅತ್ಯಂತ ಕಡಿಮೆ ಶುಲ್ಕದೊಂದಿಗೆ ನುರಿತ ಉಪನ್ಯಾಸಕರಿಂದ ನೀಡಲಾಗುತ್ತಿದೆ. ಸಂಸ್ಥೆಯ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಎಲ್ಲ ಉಪನ್ಯಾಸಕರು ಸಂಯೋಜಕರು ಅಭಿನಂದಿಸಿದ್ದಾರೆ.