ಕುಂದಾಪುರ (ನ,06): ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಆಶ್ರಯದಲ್ಲಿ ಧಾರವಾಡದ ಆರ್ ಎನ್ ಎಸ್ ಕ್ರೀಡಾಂಗಣದಲ್ಲಿ ನವೆಂಬರ್ 4 ಮತ್ತು 5 ರಂದು ನಡೆದ ಕರ್ನಾಟಕ ಓಪನ್ ನ್ಯಾಷನಲ್ ಅಟ್ಲಾಟೆಕ್ಸ್ ನಲ್ಲಿ ಶಿಕ್ಷಕ ಹಾಗೂ ಕುಂದಾಪುರ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ರೀಡಾ ತರಬೇತಿ ಸಂಸ್ಥೆಯ ತರಬೇತುದಾರರಾದ ಪ್ರಶಾಂತ್ ಶೆಟ್ಟಿಯವರು ಅತ್ಯುತ್ತಮ ಸಾಧನೆಗೈದಿದ್ದಾರೆ
400 ಮೀಟರ್ ಓಟದಲ್ಲಿ ಬೆಳ್ಳಿ ಪದಕ, 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಟ್ರಿಪಲ್ ಜಂಪ್ ನಲ್ಲಿ ಬೆಳ್ಳಿ ಪದಕ ಹಾಗೂ ಲಾಂಗ್ ಜಂಪ್ ನಲ್ಲಿ ಕಂಚಿನ ಪದಕ 4×100 ಮೀಟರ್ ಮಿಶ್ರ ರೀಲೆಯಲ್ಲಿ ಬೆಳ್ಳಿಪದಕ ಪಡೆದು ಸಾಧನೆಗೈದಿದ್ದಾರೆ.
ಕುಂದಾಪುರದ ಓಕ್ ವುಡ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಈಗಾಗಲೇ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.