ಕುಂದಾಪುರ(ನ.06): ಇಲ್ಲಿನ ಡಾ|ಬಿ.ಬಿ.ಹೆಗ್ಡೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಅಫೆಕ್ಟಿವ್ ಯುಸ್ ಆಫ್ ಡಿಜಿಟಲ್ ಟೂಲ್ಸ್ ಎನ್ನುವ ಅಂತರ್ ತರಗತಿ ಸ್ಪರ್ಧೆಯನ್ನು ಕಾಲೇಜಿನಲ್ಲಿ ನವೆಂಬರ್ 3 ರಂದು ಆಯೋಜಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ.ಉಮೇಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಶುಭಹಾರೈಸಿದರು. ಗಣಕವಿಜ್ಞಾನ ವಿಭಾಗದ ಉಪನ್ಯಾಸಕರಾದ ವಿಲ್ಮಾ ಡಿಸೋಜ ,ಶ್ರೀಕಾಂತ್ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪೂಜಾ ಕುಂದರ್ ತೀರ್ಮಾನಕಾರರಾಗಿ ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥರಾದ ನಂದಾ ರೈ ಕಾರ್ಯಕ್ರಮ ಸಂಯೋಜಿಸಿದರು. ಉಪನ್ಯಾಸಕರಾದ ಹರೀಶ್ .ಬಿ, ಪ್ರವೀಣ್ ಮೊಗವೀರ, ಅವಿತಾ ಕೊರೆಯಾ ಹಾಗೂ ರಜತ್ ಬಂಗೇರ ಉಪಸ್ಥಿತರಿದ್ದರು.
ಪವರ್ ಪಾಂಯಿಟ್ ಪ್ರಸ್ತುತಿಯಲ್ಲಿ ತ್ರತೀಯ ಬಿಬಿಎ ತರಗತಿಯ ಚೇತನ್ ಹಾಗೂ ಜ್ಞಾನೇಶ್ ಪ್ರಥಮ ಸ್ಥಾನ, ದ್ವೀತಿಯ ಬಿಬಿಎ ತರಗತಿಯ ಸುಹಾನಿ ಮತ್ತು ಶ್ರದ್ಧಾ ದ್ವೀತಿಯ ಸ್ಥಾನ ಹಾಗೂ ಪ್ರಥಮ ಬಿಬಿಎ ತರಗತಿಯ ಸುಹಾಸ್ ಹಾಗೂ ಅಕ್ಷಿತಾ ತ್ರತೀಯ ಸ್ಥಾನ ಪಡೆದಿದ್ದಾರೆ.
ಕರಪತ್ರ ತಯಾರಿಕೆ ಸ್ಪರ್ಧೆಯಲ್ಲಿ ದ್ವೀತಿಯ ಬಿಬಿಎ ತರಗತಿಯ ಹರಿಕೃಷ್ಣ ಮತ್ತು ಸುಮಂತ್ ,ಉತ್ತಮ್ ಹಾಗೂ ಧನುಶ್ ಪ್ರಥಮ ಸ್ಥಾನ, ಪ್ರಥಮ ಬಿಬಿಎ ತರಗತಿಯ ಸಚಿನ್(39), ಹಾಗೂ ಪ್ರವೀಣ್ (33) ದ್ವೀತಿಯ ಸ್ಥಾನ,ತ್ರತೀಯ ಬಿಬಿಎ ತರಗತಿಯ ಭರತ್ ಹಾಗೂ ವಿನಯ ತ್ರತೀಯ ಸ್ಥಾನ ಪಡೆದಿದ್ದಾರೆ.