ಕುಂದಾಪುರ (ಫೆ.19):ಮೊಗವೀರ ಯುವ ಸಂಘಟನೆ(ರಿ), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಇದರ 2024 ಮತ್ತು 25ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ, ಗೌರವಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕುಂದಾಪುರದ ಮೊಗವೀರ ಭವನದಲ್ಲಿ ಫೆಬ್ರವರಿ 10 ರಂದು ಜರುಗಿತು.
ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ),ಅಂಬಲಪಾಡಿ ಉಡುಪಿ ಇದರ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ರವರು ಕಾರ್ಯಕ್ರಮ ಉದ್ಘಾಟಿಸಿ
ಶುಭ ಹಾರೈಸಿ ಯುವ ಸಮುದಾಯ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಮೊಗವೀರ ಮಹಾಜನ ಸೇವಾ ಸಂಘ(ರಿ.) ಬಗ್ವಾಡಿ ಹೋಬಳಿ ಮಂಬೈ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ, ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್ , ಮಾಜಿ ಅಧ್ಯಕ್ಷರಾದ ಗೋಪಾಲ್ ಪುತ್ರನ್. ಕೆ ಕೆ ಕಾಂಚನ್, ಎಂ.ಎಂ ಸುವರ್ಣ, ಘಟಕದ ಮಾಜಿ ಅಧ್ಯಕ್ಷ ಹಾಗೂ ಮೊಗವೀರ ಮಹಾಜನ ಸೇವಾ ಸಂಘ(ರಿ), ಬಗ್ವಾಡಿ ಹೋಬಳಿ ಮಂಬೈ ಇದರ ಕುಂದಾಪುರ ಶಾಖೆಯ ಕಾರ್ಯದರ್ಶಿ ಪ್ರಭಾಕರ ಸೇನಾಪುರ,ಜಿಲ್ಲಾ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಶಿವರಾಮ ಕೋಟ,ಮಾಜಿ ಅಧ್ಯಕ್ಷ ಸಂಜೀವ ಎಮ್.ಎಸ್, ಸತೀಶ್ .ಎಮ್.ನಾಯ್ಕ್ ,ಜಿಲ್ಲಾ ಸಂಘಟನೆಯ ನಿಯೋಜಿತ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಸ್ತ್ರೀ ಶಕ್ತಿ ಬಗ್ವಾಡಿಯ ಅಧ್ಯಕ್ಷರಾದ ಶ್ಯಾಮಲಾ ಚಂದನ್ , ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾದ ರತ್ನಾ ರಮೇಶ್ ಕುಂದರ್,ಹೆಮ್ಮಾಡಿ ಘಟಕದ ಗೌರವ ಅಧ್ಯಕ್ಷರಾದ ಉಮೇಶ್ ಬಡಾಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಕಾರ್ಯದರ್ಶಿ ಪ್ರವೀಣ್ ಮೊಗವೀರ ಗಂಗೊಳ್ಳಿ ಸ್ವಾಗತಿಸಿದರು. ಘಟಕದ ಸ್ಥಾಪಕ ಅಧ್ಯಕ್ಷ ಹಾಗೂ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮಂಬೈ ಇದರ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಘಟಕದ ಅಧ್ಯಕ್ಷ ಲೋಹಿತಾಶ್ವ ಆರ್. ಕುಂದರ್ ನೂತನ ಅಧ್ಯಕ್ಷರಾದ ದಿನೇಶ್ ಬಿ.ಕಾಂಚನ್ ಬಾಳಿಕೆರೆ ಯವರಿಗೆ ಅಧಿಕಾರ ಹಸ್ತಾಂತರಿಸಿ ಶುಭಹಾರೈಸಿ ಘಟಕದ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು. ಕಾರ್ಯದರ್ಶಿ ಪ್ರವೀಣ್ ಗಂಗೊಳ್ಳಿ ನೂತನ ಕಾರ್ಯದರ್ಶಿ ಜಗದೀಶ್ ನೆಂಪು ರವರಿಗೆ ಘಟಕದ ದಾಖಲೆ ಹಾಗೂ ಕಡತಗಳನ್ನು ಹಸ್ತಾಂತರಿಸಿದರು.
ಜಿಲ್ಲಾ ಸಂಘಟನೆ ಅಧ್ಯಕ್ಷರಾದ ರಾಜೇಂದ್ರ ಸುವರ್ಣ ಹಿರಿಯಡಕ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿದರು.
ಹೆಮ್ಮಾಡಿ ಘಟಕದ ವತಿಯಿಂದ ನಾಡೋಜ ಡಾ.ಜಿ.ಶಂಕರ್ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಮೊಗವೀರ ಮಹಾಜನ ಸೇವಾ ಸಂಘ(ರಿ), ಬಗ್ವಾಡಿ ಹೋಬಳಿ ಮಂಬೈ ,ಕುಂದಾಪುರ ಶಾಖೆ, ಹಾಗೂ ಹೆಮ್ಮಾಡಿ ಘಟಕದ ಪ್ರಮುಖರಿಗೆ ಹಾಗೂ ರಾಷ್ಟ್ರಮಟ್ಟದ ಭರತನಾಟ್ಯ ಕಲಾವಿದೆ ಗಾರ್ಗಿ ದೇವಿಯನ್ನು ಸನ್ಮಾನಿಸಲಾಯಿತು. ಘಟಕದ ಮಾಜಿ ಅಧ್ಯಕ್ಷ ಮಂಜುನಾಥ ನೆಂಪು ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಫೋಕಸ್ ಡಾನ್ಸ್ ಅಕಾಡೆಮಿ ತಲ್ಲೂರು ಇವರಿಂದ ಸಾಂಸ್ಕೃತಿಕ ಕಲಾವೈಭವ ನಡೆಯಿತು.